Breaking News

ರಾಜ್ಯ

ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಖಾತೆಯಿಂದ ಗೊತ್ತೇ ಆಗದೆ ಹಣ ಕಡಿತ -ಪರೋಕ್ಷ ಸುಲಿಗೆ ಎಂದು ಆಕ್ರೋಶ

ಬ್ಯಾಂಕುಗಳು ಗ್ರಾಹಕರಿಗೆ ಪರೋಕ್ಷವಾಗಿ ಸುಲಿಗೆ ಮಾಡುತ್ತಿವೆ. ಸದ್ದೇ ಇಲ್ಲದೆ ಗ್ರಾಹಕರು ತಮ್ಮ ಖಾತೆಯಿಂದ ಹಣ ಕಳೆದುಕೊಳ್ಳುತ್ತಿದ್ದಾರೆ. ಬ್ಯಾಂಕುಗಳ ನಿಯಮಗಳಲ್ಲಿ ಅನೇಕ ಬದಲಾವಣೆಗಳಾಗಿದ್ದರೂ ಈ ಬಗ್ಗೆ ಬಹುತೇಕ ಗ್ರಾಹಕರಿಗೆ ಗೊತ್ತೇ ಇರಲ್ಲ. ಅನೇಕ ರೀತಿಯ ಶುಲ್ಕ ಮತ್ತು ಫೈನ್ ಗಳನ್ನು ಬ್ಯಾಂಕುಗಳು ವಿಧಿಸುತ್ತಿವೆ. ಬಹುತೇಕ ಗ್ರಾಹಕರಿಗೆ ಇದರ ಬಗ್ಗೆ ಮಾಹಿತಿಯೂ ಇರುವುದಿಲ್ಲ. ಖಾತೆಯಲ್ಲಿ ಹಣವಿಲ್ಲದ ಸಂದರ್ಭದಲ್ಲಿ ಅಥವಾ ನಿಗದಿತ ಮೊತ್ತ ಇಲ್ಲದಿದ್ದಾಗ ನೀವು ಹಣ ಪಾವತಿಗೆ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿದರೆ …

Read More »

BPL, APL ಕಾರ್ಡ್ ಬೇಕಾದವರಿಗೆ ಗುಡ್ ನ್ಯೂಸ್: ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಆಹ್ವಾನ

ಯಾದಗಿರಿ: ಸ್ಥಗಿತಗೊಂಡಿರುವ ಹೊಸ ಆನ್‌ಲೈನ್ ಪಡಿತರ ಚೀಟಿಗಳ ಸ್ವೀಕಾರ ಕಾರ್ಯವನ್ನು ಪುನರಾಂಭಿಸಿದ್ದು, ಆಹಾರ ಇಲಾಖೆ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಹೊಸ ಆದ್ಯತಾ( ಬಿ.ಪಿ.ಎಲ್ ) ಮತ್ತು ಆದ್ಯತೇತರ(ಎ.ಪಿ.ಎಲ್) ಪಡಿತರ ಚೀಟಿಗಳಿಗೆ ಆಹಾರ ಇಲಾಖೆಯ ತಂತ್ರಾಂಶದಲ್ಲಿ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ತಿಳಿಸಿದ್ದಾರೆ.

Read More »

ಜೀವಂತ ಇರುವ ವ್ಯಕ್ತಿಯನ್ನು ಪೋಸ್ಟ್ ಮಾರ್ಟಮ್ ಗೆ ಕಳಿಸಿದ ಆಸ್ಪತ್ರೆ ಸಿಬ್ಬಂದಿ

ಬಾಗಲಕೋಟೆ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಭಾವಿಸಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಮರಣೋತ್ತರ ಪರೀಕ್ಷೆಗಾಗಿ ಜೀವಂತ ವ್ಯಕ್ತಿಯನ್ನೇ ಕಳುಹಿಸಿರುವ ಎಡವಟ್ಟು ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಶಂಕರ್ ಗೊಂಬಿ ಎಂಬ 27 ವರ್ಷದ ವ್ಯಕ್ತಿಗೆ ಕಾರು ಅಪಘಾತದಲ್ಲಿ ತಲೆಗೆ ಗಂಭೀರವಾದ ಗಾಯವಾಗಿತ್ತು. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ವೆಂಟಿಲೇಟರ್ ಅಳವಡಿಸಿ ಶಂಕರ್ ಅವರನ್ನು ಮಹಾಲಿಂಗಪುರ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದ್ದರು. ಮಾರ್ಗ ಮಧ್ಯೆಯೇ ಶಂಕರ್ ಮೃತಪಟ್ಟಿದ್ದಾರೆ ಎಂದು …

Read More »

ಲಂಚ ಪಡೆದು ಸಿಕ್ಕಿಬಿದ್ದಿದ್ದ ದೇವೇಂದ್ರಪ್ಪ ಅವರ ಆಪ್ತರಿಗೆ ಎಸಿಬಿ ಶಾಕ್..!

ಬೆಂಗಳೂರು, ಮಾ.2- ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದು ಸೇವೆಯಿಂದ ಅಮಾನತುಗೊಂಡಿರುವ ಬಿಬಿಎಂಪಿ ನಗರ ಯೋಜನೆ ವಿಭಾಗದ ಸಹಾಯಕ ಅಭಿಯಂತರ ದೇವೇಂದ್ರಪ್ಪ ಅವರ ಆಪ್ತರ ಮನೆ ಮೇಲಿನ ದಾಳಿಯನ್ನು ಎಸಿಬಿ ಮುಂದುವರೆಸಿದೆ. ದೇವೇಂದ್ರಪ್ಪ ಅವರ ಆಪ್ತ ಶ್ರೀನಿವಾಸ ಮೂರ್ತಿ ಅವರ ಅಲಸೂರು ಗುಪ್ತ ಲೇ ಔಟ್‍ನಲ್ಲಿರುವ ನಿವಾಸದ ಮೇಲೆ ಹಾಗೂ ದೇವೇಂದ್ರಪ್ಪ ಅವರ ಅಮೃತನಗರದ ಸಿ ಸೆಕ್ಟರ್ ಮನೆ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಿಬಿಎಂಪಿ …

Read More »

ಶೌರ್ಯ ಪ್ರಶಸ್ತಿ ಪುರಸ್ಕೃತರ ಗೌರವಧನ ಹೆಚ್ಚಳ : ಸಿಎಂ ಘೋಷಣೆ

ಬೆಂಗಳೂರು,ಮಾ.2- ಪರಮ ವೀರಚಕ್ರ, ಅಶೋಕಚಕ್ರ ಸೇರಿದಂತೆ ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ನೀಡಲಾಗುವ ಗೌರವಧನವನ್ನು ಹೆಚ್ಚಳ ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದರು. 1971ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದಲ್ಲಿ ದೇಶ ವಿಜಯಗಳಿಸಿದ ಸ್ಮರಣಾರ್ಥ ಇಂದು ವಿಧಾನಸೌಧ ಮುಂಭಾಗ ಆಯೋಜಿಸಿದ್ದ 50ನೇ ಸ್ವರ್ಣಿಂ ವಿಜಯ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪರಮವೀರ ಚಕ್ರ, ಅಶೋಕ ಚಕ್ರ ಪ್ರಶಸ್ತಿ ಪುರಸ್ಕøತರಿಗೆ ನೀಡಲಾಗುತ್ತಿದ್ದ 25 ಲಕ್ಷ ರೂ.ಗಳಿಂದ ಒಂದು ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ …

Read More »

15 ದಿನದಲ್ಲಿ ಹುಲಿ, ಚಿರತೆ ಸಾಫಾರಿಗೂ ಅವಕಾಶ: ಶಾಸಕ ಸತೀಶ ಜಾರಕಿಹೊಳಿ

  ಬೆಳಗಾವಿ: ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ  ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬೆಳಗಾವಿಯ ರಾಣಿ ಚನ್ನಮ್ಮ ಮೃಗಾಲಯದಿಂದ  ಪ್ರವಾಸೋದ್ಯಮ ಇಲಾಖೆ ಮಹತ್ವ ಬರಲಿದೆ   ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಭೂತರಾಮನಹಟ್ಟಿ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮೈಸೂರು ಮಾದರಿಯಲ್ಲಿ ಬೆಳಗಾವಿಯ ಮೃಗಾಲಯಕ್ಕೆ ಒತ್ತು ನೀಡಲಾಗುವುದು. ಇದರಿಂದ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮೂರು ರಾಜ್ಯಗಳ ಸಂಪರ್ಕಕೊಂಡಿಯಾಗಲಿದೆ. ಅದರಲ್ಲಿಯೂ ಉತ್ತರ ಕರ್ನಾಟಕ ಜನತೆ ಮೈಸೂರಿಗೆ …

Read More »

ವೇಶ್ಯಾವಾಟಿಕೆ ಅಡ್ಡೆಗೆ ದಾಳಿ

ಮಂಗಳೂರು,ಮಾ.01(ಹಿ.ಸ): ನಗರ ದ ಹೊರ ವಲಯದ ಸುರತ್ಕಲ್ ನಲ್ಲಿ ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ನಡೆಸಿದ ಮಂಗಳೂರು ಪೊಲೀಸರು ಬೆಂಗಳೂರಿನ ಯುವತಿಯನ್ನು ರಕ್ಷಿಸಿದ್ದಾರೆ. ಈ ಯುವತಿಯನ್ನು ಇಟ್ಟುಕೊಂಡು ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಪೊಲೀಸರು ದಾಳಿ ನಡೆಸಿ ಯುವತಿಯನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿದ್ದಾರೆ. ಮಂಗಳೂರು ತಾಲೂಕು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಗ್ರಾಮದ BASF ಫ್ಯಾಕ್ಟರಿಯ ಎದುರುಗಡೆಯ ಫೆರಾವೊ ಕಾಂಪ್ಲೇಕ್ಸ್ ನಲ್ಲಿರುವ ಫೆರಾವೊ ಲಾಡ್ಜಿಂಗ್ & ಬೋರ್ಡಿಂಗ್ …

Read More »

ಹಣ ನೀಡದಕ್ಕಾಗಿ ಸ್ಕೆಚ್:ಮುಬಾರಕ್ ಬೆಳಗಾವಿ ಜೈಲು ಪಾಲಾಗುತ್ತಾನೆ

ನೆಲಮಂಗಲ (ಫೆಬ್ರವರಿ 28): ಒಂದು ಕಾಲದಲ್ಲಿ ಬಾಯ್ ಬಾಯ್ ಅಂತಿದ್ದ ಇಬ್ಬರು ಸ್ನೇಹಿತರ ನಡುವೆ ಶುರುವಾಯಿತು ವೈಮನಸ್ಸು ಶುರುವಾಗಿ ದ್ವೇಷ ಕಟ್ಟಿಕೊಂಡು ಮಚ್ಚು ಮಸಿಯುತ್ತಿದ್ದಾರೆ, ಕೊಲೆ ಪ್ರಕರಣದ ಅಪರಾದಿ ಗ್ರಾಮ ಪಂಚಾಯ್ತಿ ಸದಸ್ಯನ ಹತ್ಯೆಗೆ ಜೈಲಿನಲ್ಲಿದ್ದುಕೊಂಡು ಸಂಚು ರೂಪಿಸಿದ್ದಾನೆ. ಪ್ಲಾನ್ ಎಲ್ಲಾ ರೆಡಿಯಾಗಿ ಇನ್ನೇನು ಅಂದುಕೊಂಡಂತೆ ಮುಗಿಸಬೇಕು ಎನ್ನೋವಷ್ಟರಲ್ಲಿ ಕೂದಲೆಳೆ ಅಂತರದಲ್ಲಿ ಸ್ಕೆಚ್ ಮಿಸ್ ಆಗಿ ಹೋಯ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕಣೇಗೌಡಣಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ …

Read More »

ಎಸ್‌ಎಸ್‌ ಎಲ್ ಸಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ: ಸಚಿವ ಎಸ್ . ಸುರೇಶ್ ಕುಮಾರ್

ಧಾರವಾಡ : ಜೂನ್ 21 ರಿಂದ ಜುಲೈ 5 ರವರೆಗೆ ಎಸ್‌ಎಸ್‌ ಎಲ್ ಸಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ . ಸುರೇಶ್ ಕುಮಾರ್ ಈಗಾಗಲೇ ತಿಳಿಸಿದ್ದರು. ಇದೀಗ ಮತ್ತೆ ಅದರ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ಒಂದು ತಿಂಗಳ ಹಿಂದೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು . ವೇಳಾಪಟ್ಟಿಗೆ ಯಾರಿಂದಲೂ ಆಕ್ಷೇಪಣೆ ಬಂದಿಲ್ಲ . ಹೀಗಾಗಿ ಜೂನ್ 21 ರಿಂದ ಪರೀಕ್ಷೆ ನಡೆಯುತ್ತದೆ …

Read More »

ತೈಲ ದರವನ್ನು ಜಿಎಸ್‍ಟಿ ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ ರಾಜ್ಯ ಸರ್ಕಾರಗಳು ಒಪ್ಪುತ್ತಿಲ್ಲ: ಪ್ರಹ್ಲಾದ್ ಜೋಶಿ

ಜಿಲ್ಲೆಯ ಪ್ರಸಿದ್ಧ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಪ್ರಲ್ಹಾದ ಜೋಶಿ ಭೇಟಿ ನೀಡಿ ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ಪರಿವಾರ ದೇವಸ್ಥಾನಕ್ಕೆ ಸಮೇತ ಭೇಟಿ ನೀಡಿದ ಸಚಿವರು 2019 ಚುನಾವಣೆ ನಂತರ ದೇವರ ದರ್ಶನಕ್ಕೆ ಬಂದಿರಲಿಲ್ಲ. ಹಾಗಾಗಿ ಈಗ ಕುಟುಂಬ ಸಮೇತ ದೇವರ ದರ್ಶನಕ್ಕೆ ಬಂದಿದ್ದೇನೆ ಎಂದರು. ಜಿಲ್ಲೆಯ ಪ್ರಸಿದ್ಧ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಪ್ರಲ್ಹಾದ ಜೋಶಿ ಭೇಟಿ ನೀಡಿ ನಂತರ ಮಾತನಾಡಿದರು. ಪರಿವಾರ ದೇವಸ್ಥಾನಕ್ಕೆ ಸಮೇತ ಭೇಟಿ ನೀಡಿದ …

Read More »