Breaking News

ರಾಜ್ಯ

ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ: ಗ್ರಾಹಕರಿಗೆ SBI ಗಿಫ್ಟ್‌

ಮಾರ್ಚ್ 31, 2021ರ ವರೆಗೂ ಗೃಹ ಸಾಲದ ಮೇಲಿನ ಪರಿಷ್ಕರಣಾ ಶುಲ್ಕ ಕಡಿತಗೊಳಿಸಿರುವ ಸ್ಟೇಟ್ ಬ್ಯಾಂಕ್, ವಾರ್ಷಿಕ 6.8% ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಿದೆ. ಸಾಮಾನ್ಯ ಗೃಹ ಸಾಲ, ಸರ್ಕಾರೀ ನೌಕರರಿಗೆ ಗೃಹ ಸಾಲ, ಸೇನೆಯ ಸಿಬ್ಬಂದಿಗೆ ಶೌರ್ಯ ಗೃಹ ಸಾಲ, ಚಾಲ್ತಿ ಗ್ರಾಹಕರಿಗೆ ಟಾಪ್‌-ಅಪ್ ಸಾಲ, ಮ್ಯಾಕ್ಸಿಗೇನ್, ಸ್ಮಾರ್ಟ್ ಹೌಸ್, ಫ್ಲೆಕ್ಸಿ‌ಪೇ ಹಾಗೂ ಮಹಿಳೆಯರಿಗೆ ಹರ್‌ಘರ್‌ ಯೋಜನೆಗಳ ಮೂಲಕ ಸಾಲ ಕೊಡುವ ವ್ಯವಸ್ಥೆಯನ್ನು ಎಸ್‌ಬಿಐ ಇಟ್ಟುಕೊಂಡಿದೆ. ಗೃಹ …

Read More »

ಚೀನದಿಂದ ಸೈಬರ್‌ ದಾಳಿ ಯತ್ನ: ನಿಗಾ ಅನಿವಾರ್ಯ

ಭಾರತದ ನಿರಂತರ ಒತ್ತಡ ಮತ್ತು ಪರಿಣಾಮಕಾರಿ ರಾಜತಾಂತ್ರಿಕ ನಡೆಗಳಿಗೆ ಮಣಿದಿದ್ದ ಚೀನ ಸರಕಾರ ಲಡಾಖ್‌ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ನಿಯೋಜಿಸಿದ್ದ ತನ್ನ ಸೇನಾ ತುಕಡಿಗಳನ್ನು ವಾಪಸು ಕರೆಸಿ ಕೊಳ್ಳುವ ಮೂಲಕ ಗಡಿಯಲ್ಲಿ ಸೃಷ್ಟಿಯಾಗಿದ್ದ ಸಂಘರ್ಷದ ವಾತಾವರ ಣವನ್ನು ತಿಳಿಗೊಳಿಸಿತ್ತು. ಇದರಿಂದಾಗಿ ಗಡಿಯಲ್ಲಿ 10 ತಿಂಗಳುಗಳಿಂದ ಇದ್ದ ಸಮರ ಭೀತಿ ದೂರವಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ಇದರ ನಡುವೆ ಚೀನ ಹ್ಯಾಕರ್‌ಗಳು ದೇಶದ ವಿದ್ಯುತ್‌ ವಿತರಣ ಜಾಲದ ಮೇಲೆ ಸೈಬರ್‌ …

Read More »

ಸಿಲಿಂಡರ್ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್!

ತುಮಕೂರು : ಈಗಾಗಲೇ ಸಿಲಿಂಡರ್ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಅಡುಗೆ ಅನಿಲ ಸಿಲಿಂಡರ್ ತೂಕದಲ್ಲಿ ಮೋಸ ನಡೆಯುತ್ತಿದ್ದು, ತೂಕ ಪರೀಕ್ಷಿಸಿ ಪಡೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶಿರಾ ತಾಲೂಕಿನಲ್ಲಿ ಹಾಡಹಾಗಲೇ ಕಡಿಮೆ ತೂಕದ ಅಡುಗೆ ಅನಿಲ ಪೂರೈಸುತ್ತಿರುವುದನ್ನು ಖುದ್ದು ಗ್ರಾಹಕರೇ ಪತ್ತೆ ಹಚ್ಚಿದ್ದಾರೆ. ಕಡಿಮೆ ತೂಕ ಹೊಂದಿದ್ದ ಅಡುಗೆ ಅನಿಲ ಸಿಲಿಂಡರ್ ಗಳೊಂದಿಗೆ ಗ್ರಾಹಕರು ಪ್ರತಿಭಟನೆ ನಡೆಸಿದ್ದಾರೆ. ಶಿರಾ ನಗರದ ಸಿಲಿಂಡರ್ ವಿತರಕರಿಂದ ಗ್ರಾಹಕರಿಗೆ …

Read More »

ದಾಖಲೆ ಪ್ರಮಾಣಕ್ಕೇರಿದ ಬಿಟ್‌ ಕಾಯಿನ್‌ ಮೌಲ್ಯ

ದಶಕಗಳ ಹಿಂದಷ್ಟೇ ಚಾಲ್ತಿಗೆ ಬಂದಿರುವ ಬಿಟ್‌ ಕಾಯಿನ್‌ (ಕ್ರಿಪ್ಟೋ ಕರೆನ್ಸಿ) ಮೌಲ್ಯ ಕೆಲವು ದಿನಗಳ ಹಿಂದೆ 38 ಲಕ್ಷ ರೂ. ದಾಟಿದೆ. ಈ ಬೆನ್ನಲ್ಲೇ ಬಿಟ್‌ ಕಾಯಿನ್‌ಗಳಿಗೆ ಬೇಡಿಕೆಯೂ ವಿಪರೀತವಾಗಿ ಹೆಚ್ಚಾಗಿದೆ. ಹೀಗಾಗಿ ಇಡೀ ಜಗತ್ತೇ ಈ ಬಿಟ್‌ ಕಾಯಿನ್‌ಗಳ ಹಿಂದೆ ಬಿದ್ದಿರುವಾಗ ಇವೂ ಸಾಮಾನ್ಯ ಹಣದಂತೆಯೇ ವ್ಯವಹಾರಗಳಲ್ಲಿ ಚಾಲ್ತಿಗೆ ಬರಲು ಹೆಚ್ಚು ಸಮಯವಿಲ್ಲ ಎಂಬುದು ಹೂಡಿಕೆದಾರರ ಲೆಕ್ಕಾಚಾರವಾಗಿದೆ. ಬಿಟ್‌ ಕಾಯಿನ್‌ಗಳಿಗೆ ಅದೃಷ್ಟ ಖುಲಾಯಿಸಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಇದರತ್ತ ಆಕರ್ಷಿತರಾಗಿದ್ದಾರೆ. …

Read More »

ರೈತ ನಾಶವಾದರೆ ದೇಶವೂ ನಾಶ: ನೀರಾವರಿ ತಜ್ಞ ಪ್ರೊ.ಸಿ. ನರಸಿಂಹಪ್ಪ

ದಾವಣಗೆರೆ: ರೈತರು ನಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ನೀಡಿ ಎಂದು ಕೇಳಬೇಕಿತ್ತು. ಆದರೆ ಅದನ್ನು ಕೇಳದೆ ಕನಿಷ್ಠ ಇಷ್ಟು ಸಿಗದೇ ಹೋದರೆ ಕೃಷಿಕರಾಗಿಯೂ ಉಳಿಯುವುದಿಲ್ಲ. ಹಾಗಾಗಿ ಕನಿಷ್ಠ ಬೆಂಬಲ ಬೆಲೆಯನ್ನಾದರೂ ನೀಡಿ ಎಂದು ರೈತರು ಕೇಳುತ್ತಿದ್ದಾರೆ. ರೈತ ನಾಶವಾದರೆ ದೇಶ ನಾಶವಾಗುತ್ತದೆ. ರೈತತನವನ್ನು ಕಳೆದುಕೊಂಡರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಕೃಷಿ ಮತ್ತು ನೀರಾವರಿ ತಜ್ಞ ಪ್ರೊ.ಸಿ. ನರಸಿಂಹಪ್ಪ ಎಚ್ಚರಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ನಡೆದ ‘ನೂತನ …

Read More »

ಸ್ಮಶಾನದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಯುವ ಮುಖಂಡ ಆನಂದ ಪಾಟೀಲ

ಮಹಾಲಿಂಗಪುರ : ಸಮೀಪದ ರನ್ನಬೆಳಗಲಿ ಪಟ್ಟಣದ ಯುವ ಕಾಂಗ್ರೆಸ್ ಮುಖಂಡ ತಮ್ಮ 26ನೇ ವರ್ಷದ ಹುಟ್ಟು ಹಬ್ಬವನ್ನು ಮೂಢನಂಬಿಕೆಯನ್ನು ಹೋಗಲಾಡಿಸಬೇಕು ಎಂಬ ಒಂದು ಸಣ್ಣ ಪ್ರಯತ್ನವಾಗಿ ಸ್ಮಶಾನದಲ್ಲಿ (ರುದ್ರ ಭೂಮಿ) ಸರಳವಾಗಿ ಆಚರಿಸಿಕೊಂಡು ಗಮನ ಸೆಳೆದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ ಅವರ ಮೂಢನಂಬಿಕೆ ವಿರುದ್ಧ ಹಲವಾರು ಕಾರ್ಯಕ್ರಮಗಳನ್ನು ನೋಡಿ ತಾವು ಸಹ ತಮ್ಮ ಹುಟ್ಟುಹಬ್ಬ ಆಚರಣೆಯ ಮೂಲಕ ಮೂಢನಂಬಿಕೆಗೆ ಕಡಿವಾಣ ಹಾಕಬಹುದೆಂದು ತಿಳಿದು ತಮ್ಮ 26 ನೇ ವರ್ಷದ …

Read More »

ನಾಲ್ಕು ದಿನಗಳಲ್ಲಿ ಉಪ ಚುನಾವಣೆ ಘೋಷಣೆ, ನಾಲ್ಕರಲ್ಲೂ ಗೆಲುವು ನಮ್ಮದೇ: ಬಿಎಸ್‌ವೈ

ಶಿವಮೊಗ್ಗ: ನಾಲ್ಕು ದಿನಗಳಲ್ಲಿ ಉಪ ಚುನಾವಣೆ ಘೋಷಣೆಯಾಗಲಿದೆ. ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಮಸ್ಕಿ, ಬಸವ ಕಲ್ಯಾಣ, ಸಿಂಧಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಉಪ ಚುನಾವಣೆಗೆ ಪಕ್ಷದ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಚುನಾವಣೆ ಘೋಷಣೆಯಾದ ತಕ್ಷಣ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು. ಮಾರ್ಚ್ 8ರಂದು ಬಜೆಟ್ ಮಂಡಿಸಿದ ನಂತರ ಚುನಾವಣಾ ಪ್ರಚಾರ ಆರಂಭಿಸುವೆ ಎಂದರು. …

Read More »

ಆರ್ಡರ್ ಮಾಡಿದ್ದು ಆಯಪಲ್‌ ಐಫೋನ್, ಬಂದಿದ್ದು ಆಯಪಲ್‌ ಜ್ಯೂಸ್!; ಬುಕ್ ಮಾಡಿದ ಮಹಿಳೆಗೆ ಶಾಕ್..!

ಈಗ ಆಫ್‌ಲೈನ್‌ಗಿಂತ ಆನ್‌ಲೈನ್ ನೆಚ್ಚಿಕೊಂಡವರೇ ಹೆಚ್ಚು. ಏಕೆಂದು ಇದು ಬಹಳ ಸುಲಭ ಹಾಗೂ ಕುಳಿತಲ್ಲೇ ಎಲ್ಲ ಕೆಲಸವೂ ಆಗುತ್ತದೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ ಫೋನಿಗೆ ಬದಲಾಗಿ ಕಲ್ಲು, ಇಟ್ಟಿಗೆ ಹಾಗೂ ಬದಲಿ ವಸ್ತುಗಳು ಬಂದಿರುವ ನಿದರ್ಶನಗಳು ಸಾಕಷ್ಟಿವೆ. ಗ್ರಾಹಕರು ಆರ್ಡರ್ ಮಾಡುವುದೇ ಒಂದಾದರೆ, ಅವರಿಗೆ ಬರೋದು ಇನ್ನೊಂದು. ಆದರೂ ಕೂಡ ಆನ್‌ಲೈನ್ ಶಾಪಿಂಗ್ ಮಾಡುವುದು ಕಡಿಮೆಯಾಗಿಲ್ಲ. ಚೀನಾದ ಮಹಿಳೆಯೊಬ್ಬಳು ಆನ್‌ಲೈನ್ನಲ್ಲಿ ಲಕ್ಷಾಂತರ ರೂ. ಕೊಟ್ಟು ಆರ್ಡರ್ ಮಾಡಿದ ವಸ್ತುವಿನ ಬದಲು …

Read More »

ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಗುಡ್ ನ್ಯೂಸ್: ಅಂಗನವಾಡಿಯಿಂದ ಮನೆ ಬಾಗಿಲಿಗೆ ಆಹಾರ

ಕೊರೋನಾ ಕಾರಣದಿಂದಾಗಿ ಅಂಗನವಾಡಿ ಕೇಂದ್ರಗಳ ಮೂಲಕ ಸೌಲಭ್ಯ ಪಡೆಯುತ್ತಿದ್ದವರಿಗೆ ತೊಂದರೆ ಉಂಟಾಗಿದೆ. ಮಕ್ಕಳು, ಬಾಣಂತಿಯರು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರವನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಶಸ್ವಿಯಾಗಿ ಕೈಗೊಂಡಿದೆ. ದಾವಣಗೆರೆ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಅಂಗನವಾಡಿ ಫಲಾನುಭವಿಗಳ ಮನೆಗೆ ಪೌಷ್ಟಿಕ ಆಹಾರವನ್ನು ಪೂರೈಕೆ ಮಾಡುತ್ತಿದ್ದಾರೆ. ಕೊರೊನಾ ಕಾರಣದಿಂದ ಅಂಗನವಾಡಿ ಕೇಂದ್ರಗಳು ಮುಚ್ಚಿದ್ದವು. ಇದರಿಂದ ಫಲಾನುಭವಿಗಳಿಗೆ ಸೌಲಭ್ಯ ಸಿಗದಂತಾಗಿತ್ತು. ಇದನ್ನು …

Read More »

ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ಪ್ರಯಾಣಕ್ಕೆ ಮಾ. 31 ರವರೆಗೆ ಅವಕಾಶ

ಕಲಬುರಗಿ: ಪದವಿ ಹಾಗೂ ಇತರ ವರ್ಗದ ವಿದ್ಯಾರ್ಥಿಗಳಿಗೆ 2020-21ನೇ ಶೈಕ್ಷಣಿಕ ವರ್ಷದ ಚಟುವಟಿಕೆ ಪ್ರಾರಂಭವಾಗಿವೆ. ಎಲ್ಲಾ ವರ್ಗದ ಶಾಲಾ/ಕಾಲೇಜು ವಿದ್ಯಾರ್ಥಿಗಳು ಕಳೆದ ವರ್ಷದ ಹಳೆಯ (2019-20) ಬಸ್ ಪಾಸ್ ಮತ್ತು ಪ್ರಸ್ತುತ ಸಾಲಿನಲ್ಲಿ ಶಾಲಾ/ಕಾಲೇಜುಗಳಿಗೆ ಪಾವತಿಸಿರುವ ರಶೀದಿ ತೋರಿಸಿ ಸಂಸ್ಥೆಯ ಬಸ್ ಗಳಲ್ಲಿ ಸಂಬಂಧಪಟ್ಟ ಮಾರ್ಗದಲ್ಲಿ ಅಥವಾ ಹೊಸ ವಿಳಾಸದಲ್ಲಿರುವ ಶಾಲಾ/ಕಾಲೇಜುಗಳಿಗೆ ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್‍ಗಳಲ್ಲಿ 2021ರ ಮಾರ್ಚ್ 31 ರವರೆಗೆ ಉಚಿತವಾಗಿ ಪ್ರಯಾಣಿಸಲು …

Read More »