ಚಾಮರಾಜನಗರ: ವೀಲಿಂಗ್ ಮಾಡಲು ಹೋಗಿ ಯುವಕ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕಿನ ಬೇಡರಪುರದ ಬಳಿ ನಿನ್ನೆ ನಡೆದಿದೆ. ಚಾಮರಾಜನಗರದ ಗಾಳಿಪುರ ಬಡಾವಣೆಯ ನಿವಾಸಿ 26 ವರ್ಷದ ತಯ್ಯಿಬ್ ಸಾವನ್ನಪ್ಪಿದ ಯುವಕನಾಗಿದ್ದು, ವೀಲಿಂಗ್ ಮಾಡುತ್ತಿದ್ದಾಗ ಕೆಳಕ್ಕೆ ಬಿದ್ದು ತಯ್ಯಿಬ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಇನ್ನು ಬೈಕ್ನಲ್ಲಿದ್ದ ಮತ್ತೊಬ್ಬ ಯುವಕನ ಸ್ಥಿತಿ ಚಿಂತಾಜನಕವಾಗಿದ್ದು, ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ. …
Read More »ಗೋಕಾಕ : ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ 16 ನೇ ಶರಣ ಸಂಸ್ಕøತಿ ಉತ್ಸವದ ಯುವ ಸಮಾವೇಶದಲ್ಲಿ ಐಪಿಎಸ್ ರವಿ ಚಣ್ಣನ್ನವರ ಅವರನ್ನು ಶ್ರೀಮಠದಿಂದ ಸನ್ಮಾನಿಸುತ್ತಿರುವುದು.
ಗೋಕಾಕ: ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ಸಾಧನೆ ಮಾಡುವ ಛಲ ಇರಬೇಕು. ವಿದ್ಯಾರ್ಜನೆಯೇ ನನ್ನ ಕಸಬು ಎಂದು ಐಪಿಎಸ್ ರವಿ ಚಣ್ಣನ್ನವರ ಹೇಳಿದರು. ಸೋಮವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಇಲ್ಲಿನ ಶ್ರೀ ಶೂನ್ಯ ಸಂಪಾದನ ಮಠದ 16 ನೇ ಶರಣ ಸಂಸ್ಕøತಿ ಉತ್ಸವದ ಯುವ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಯುವ ಜನತೆಗೆ ಜ್ಞಾನಾರ್ಜನೆ ಮುಖ್ಯವಾಗಿದೆ ಅದನ್ನು ಕಲಿಯಬೇಕು. ನನಗೆ ಸ್ವಾಮಿ ವಿವೇಕಾನಂದ, ಚಂದ್ರಶೇಖರ ಆಝಾದ, ಭಗತ್‍ಸಿಂಗ್ ಅವರ …
Read More »ಎಫ್‌ಡಿಎ: 2.49 ಲಕ್ಷ ಅಭ್ಯರ್ಥಿಗಳು ಹಾಜರು, ವಿಜ್ಞಾನ ವಿಷಯದ ಪ್ರಶ್ನೆಗಳೇ ಹೆಚ್ಚು!
ಬೆಂಗಳೂರು: ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ನೇಮಕಾತಿ ಪರೀಕ್ಷೆಯು ಭಾನುವಾರ ರಾಜ್ಯದಾದ್ಯಂತ 1,057 ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆಯಿತು. ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಈ ಪರೀಕ್ಷೆಯನ್ನು 2.49 ಲಕ್ಷ ಅಭ್ಯರ್ಥಿಗಳು ಬರೆದರು. ‘ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಗಣನೆಗೆ ತೆಗೆದುಕೊಂಡರೆ ಶೇ 66ರಷ್ಟು, ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡವರನ್ನು ಮಾತ್ರ ಪರಿಗಣಿಸಿದರೆ ಶೇ 92ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದಾರೆ. 2.68 ಲಕ್ಷ ಅಭ್ಯರ್ಥಿಗಳು ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದರು’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ. …
Read More »6.80 ಲಕ್ಷ ರೂಪಾಯಿ ಮೌಲ್ಯದ ಖೋಟಾನೋಟು ವಶಕ್ಕೆ
ಬೆಂಗಳೂರು: ಖೋಟಾನೋಟು ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರನ್ನು ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಪೊಲಿಸರು ಬಂಧಿಸಿದ್ದಾರೆ. ಬಂಧಿತರನ್ನು ಶಿವ, ನಾಗೇಂದ್ರ, ಪ್ರಕಾಶ್ ಹಾಗೂ ಲಕ್ಷ್ಮಣ ಎಂದು ಗುರುತಿಸಲಾಗಿದೆ. ಇವರು ಸ್ವಿಫ್ಟ್ ಕಾರಿನಲ್ಲಿ ಲಕ್ಷಾಂತರ ರೂ ಖೋಟಾನೋಟು ಸಾಗಾಟ ಮಾಡುತ್ತಿದ್ದರು. ಬಂಧಿತ ಆರೋಪಿಗಳಿಂದ 6.80 ಲಕ್ಷ ರೂ ಮೌಲ್ಯದ 2000 ರೂ ಮುಖಬೆಲೆಯ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
Read More »ಬಜೆಟ್ ವಿಚಾರದಲ್ಲಿ ಭಾರೀ ಟ್ರೋಲ್ ಆದ ಪ್ರಭಾಸ್ ನಟನೆಯ ಸಲಾರ್ ಸಿನಿಮಾ
ಪ್ರಭಾಸ್ ನಟನೆಯ ಸಲಾರ್ ಸಿನಿಮಾ 2022ರ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ಪ್ರಭಾಸ ಸಿನಿಮಾ ಕೆರಿಯರ್ನಲ್ಲಿ ಚಿತ್ರ ಮತ್ತೊಂದು ದೊಡ್ಡ ಬ್ರೇಕ್ ನೀಡಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಬಜೆಟ್ ವಿಚಾರಕ್ಕೆ ಸಲಾರ್ ಸಿನಿಮಾ ತುಂಬಾನೇ ದೊಡ್ಡ ಮಟ್ಟಕ್ಕೆ ಟ್ರೋಲ್ ಆಗುತ್ತಿದೆ. ಸಲಾರ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿದೆ. ಇದೇ ಮೊದಲ ಬಾರಿಗೆ ಪ್ರಶಾಂತ್ ನೀಲ್ ಟಾಲಿವುಡ್ಗೆ ಕಾಲಿಡುತ್ತಿದ್ದಾರೆ. …
Read More »ಪ್ರಧಾನಿ ಮೋದಿ ಪಡೆದುಕೊಂಡ ʼಕೊರೊನಾʼ ಲಸಿಕೆ ಯಾವುದು ಗೊತ್ತಾ.?
ಕಳೆದ ವರ್ಷದ ಆರಂಭದಲ್ಲಿ ವಿಶ್ವದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್, ಭಾರತದಲ್ಲಿ ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಇದೀಗ ಕೊರೊನಾ ಕಡಿಮೆಯಾಗುತ್ತಿರುವ ಮಧ್ಯೆ ಮತ್ತೆ ಎರಡನೇ ಅಲೆ ಕಾಣಿಸಿಕೊಂಡಿದೆ ಎಂಬ ವರದಿಗಳು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಭಾರತದಲ್ಲಿ ಭಾರತ್ ಬಯೋಟೆಕ್ ʼಕೋವ್ಯಾಕ್ಸಿನ್ʼ ಎಂಬ ಕೊರೊನಾ ಲಸಿಕೆ ತಯಾರಿಸಿದ್ದರೆ ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್ ʼಕೋವಿಶೀಲ್ಡ್ʼ ಎಂಬ ಲಸಿಕೆಯನ್ನು ತಯಾರಿಸಿದೆ. ಈ ಎರಡೂ ಲಸಿಕೆಗಳನ್ನು ಈಗಾಗಲೇ ನೀಡಲಾಗುತ್ತಿದ್ದು, ಮೊದಲ …
Read More »ಯಾರಿಗೂ ವಂಚನೆ ಮಾಡಿಲ್ಲ – ಐ ವಿಲ್ ಕಮ್ ಬ್ಯಾಕ್ ಅಗೈನ್ – ಬಿ.ಆರ್ ಶೆಟ್ಟಿ
ಉಡುಪಿ ಮಾರ್ಚ್ 1: ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಎನ್‌ಎಂಸಿ ಆರೋಗ್ಯ ಸೇವಾ ಸಂಸ್ಥೆಯ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೂಲದ ಉದ್ಯಮಿ ಬಿ.ಆರ್. ಶೆಟ್ಟಿ ಅವರು ವಿಶ್ವದೆಲ್ಲೆಡೆ ಹೊಂದಿರುವ ಆಸ್ತಿ ಮುಟ್ಟುಗೋಲಿಗೆ ಬ್ರಿಟನ್‌ನ ಕೋರ್ಟ್ ಆದೇಶ ನೀಡಿದ ನಂತರ ಮೊದಲ ಬಾರಿಗೆ ಬಿ.ಆರ್ ಶೆಟ್ಟಿ ಮಾಧ್ಯಮಗಳ ಮುಂದೆ ಬಂದಿದ್ದು, ಜನರ ಆಶಿರ್ವಾದದಿಂದ ನಾನು ಎಲ್ಲಾ ಸಮಸ್ಯೆಗಳಿಂದ ಹೊರ ಬರುತ್ತೆನೆ ಎಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ವ್ಯವಹಾರದಲ್ಲಿ ನಾನು ಕೆಲವು …
Read More »ಬನವಾಸಿಯ ಸೊಬಗನೊಮ್ಮೆ ನೋಡಿ ಬನ್ನಿ
ಗಂಧದಗುಡಿ ಎಂದೇ ಕರೆಯಲ್ಪಡುತ್ತಿದ್ದ ಕರ್ನಾಟಕದಲ್ಲಿ ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿವೆ. ಅದೇ ರೀತಿ ಕದಂಬ ರಾಜ್ಯವನ್ನು ಕರ್ನಾಟಕದ ಮೊದಲ ರಾಜ್ಯವೆಂದು, ಕದಂಬರನ್ನು ಮೊದಲ ಕನ್ನಡಿಗ ರಾಜರೆಂದು ಹೇಳಲಾಗುತ್ತದೆ. ಮಯೂರ ವರ್ಮ ಕದಂಬ ರಾಜ್ಯದ ಸಂಸ್ಥಾಪಕನಾಗಿದ್ದು, ಈತನ ರಾಜಧಾನಿ ಬನವಾಸಿಯಾಗಿತ್ತು. ಬನವಾಸಿ ಶಿರಸಿಯಿಂದ ಸೊರಬಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಸುಮಾರು 30 ಕಿಲೋ ಮೀಟರ್ ದೂರದಲ್ಲಿದೆ. ಅಶೋಕ ಚಕ್ರವರ್ತಿ ಬೌದ್ಧ ಧರ್ಮ ಪ್ರಸಾರಕ್ಕೆ ಕಳುಹಿಸಿದ್ದ ಬೌದ್ಧಭಿಕ್ಷು ಒಬ್ಬರು ಇಲ್ಲಿಗೆ ಭೇಟಿ ನೀಡಿದ್ದರೆಂದು ಮಹಾವಂಶ …
Read More »100 ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಆಕ್ರೋಶ ಜಾಥಾ
ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಮತ್ತು ಜನ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದೆ ಎಂದುಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಅಮರನಾಥ್ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ವಿಭಾಗದ ಪದಾಧಿಕಾರಿಗಳೊಂದಿಗೆ ಜನಧ್ವನಿ ಹೋರಾಟದ ಅಂಗವಾಗಿ ಆಯೋಜಿಸಿದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಚುನಾವಣಾ ಪ್ರಣಾಳಿಕೆಯ ವಾಗ್ಧಾನಗಳನ್ನು ಈಡೇರಿಸ ಬೇಕೆಂದು ಆಗ್ರಹಿಸಿ ಪ್ರಸಕ್ತ ಸಾಲಿನಲ್ಲಿ ರಾಜ್ಯದ 100 ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ …
Read More »ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರುಳುಗಾರಿಕೆ.
ಕರೋಣದಿಂದಾಗಿ ಈ ಭಾರಿ ಜನರು ಜೀವ ಕಳೆದುಕೊಂಡು ಜೀವನ ನರಕಯಾತನೆ ಅನುಭವಿಸುತ್ತಿದ್ದಾರೆ..ಮನೆ ಮಾಡಿಕೊಳ್ಳಲು ಮರಳು ಸಿಗದಂತಾ ಪರಿಸ್ಥಿತಿ ನಿರ್ಮಾಣವಾಗಿದೆ…ಆದ್ರೆ ಕೆಲವರು ಇದನ್ನೆ ಸದ್ಬಳಿಕೆ ಮಾಡಿಕೊಂಡು ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದಾರೆ.ಹೌದು ಅಕ್ರಮವಾಗಿ ಕೃತಕ ಮರಳು ತಯಾರಿಕೆಗಳನ್ನು ಮಾಡಿಕೊಂಡು ಜನರ ಫಲವತ್ತಾದ ಜಮೀನುಗಳನ್ನ ನಾಶಮಾಡುತ್ತಿರುವ ದೃಶ್ಯ ಕಂಡು ಬರೋದು ಬಾಗಲಕೋಟ ಜಿಲ್ಲೆಯ ಜಮಖಂಡಿ ಹಾಗೂ ರಬಕವಿ ಬನಹಟ್ಟಿ ತಾಲೂಕಿನಾದ್ಯತ ನಡೆದಿದೆ.ಬನಹಟ್ಟಿ ತಾಲೂಕಿನ ಬಂಡಿಗಣ್ಣಿ ಕ್ರಾಸ್ ಹತ್ತಿರ ಪ್ರಕಾಶ್ ಜಂಬಗಿ ಎಂಬಾತ ಹೊರವಲಯದ …
Read More »
Laxmi News 24×7