ಬೆಂಗಳೂರು: ಕೋವಿಡ್ ಮಹಾಮಾರಿಗೆ ಬಲಿಯಾದವರ ಅಂತ್ಯ ಸಂಸ್ಕಾರಕ್ಕೆ ಆಯಂಬುಲೆನ್ಸ್ ಹಾಗೂ ಚಿತಾಗಾರದ ಸಿಬ್ಬಂದಿಗಳು ಹಣ ಪೀಕುತ್ತಿರುವ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಬಿಬಿಎಂಪಿಯವರೇ ಮಾಡಬೇಕು. ಆದರೆ, ಈ ನಿಮಯ ಗಾಳಿಗೆ ತೂರಿರುವ ಕೆಲವರು, ಕೋವಿಡ್‍ನಿಂದ ಬಲಿಯಾದವರ ಶವಗಳ ಮೇಲೆ ಹಣದ ದಂಧೆಗೆ ಇಳಿದಿವೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದೀಗ ಸ್ವತಃ ಕನ್ನಡದ ನಟ ನವರಸ ನಾಯಕ ಜಗ್ಗೇಶ್ …
Read More »ಖಾಸಗಿ ಆಸ್ಪತ್ರೆಗಳಿಗೆ ₹600, ರಾಜ್ಯಗಳಿಗೆ ₹400, ಕೇಂದ್ರಕ್ಕೆ 150 ರೂಪಾಯಿಗೆ ಕೊರೊನಾ ಲಸಿಕೆ ಮಾರಾಟ: ಸೀರಮ್ ಸ್ಪಷ್ಟನೆ
ನವದೆಹಲಿ: ಕೋವಿಶೀಲ್ಡ್ ಕೊರೊನಾ ವೈರಸ್ ಲಸಿಕೆಯ ಮುಕ್ತ ಮಾರುಕಟ್ಟೆ ಬೆಲೆ ನಿಗದಿ ಕುರಿತು ಟೀಕೆಗೆ ಸೀರಮ್ ಸಂಸ್ಥೆ ಶನಿವಾರ ಪ್ರತಿಕ್ರಿಯಿಸಿದ್ದು, ‘ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ ಗೆ ₹600 ಮಾರಾಟ ಮಾಡಲಾಗುವುದು, ರಾಜ್ಯಗಳಿಗೆ ₹400 ಮತ್ತು ಕೇಂದ್ರಕ್ಕೆ 150 ರೂಪಾಯಿಗೆ ನೀಡಲಾಗುವುದು’ ಎಂದಿದ್ದಾರೆ. ತಯಾರಕರು ‘ಭಾರತದೊಂದಿಗೆ ಲಸಿಕೆಯ ಜಾಗತಿಕ ಬೆಲೆಗಳ ನಡುವೆ ಮಾಡಲಾದ ನಿಖರವಲ್ಲದ ಹೋಲಿಕೆ’ಯಾಗಿದೆ. ಪ್ರಸ್ತುತ ದೇಶದಲ್ಲಿ ಬಳಸಲಾಗುತ್ತಿರುವ ಎರಡು ಲಸಿಕೆಗಳಲ್ಲಿ ಒಂದಾದ ಕೋವಿಶೀಲ್ಡ್, ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ …
Read More »BIG BREAKING: ಬೆಳಗ್ಗೆ 11 ಗಂಟೆಗೆ ಮೋದಿ ಭಾಷಣ, ದೇಶಾದ್ಯಂತ ಲಾಕ್ ಡೌನ್ ಜಾರಿ ಸಾಧ್ಯತೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ‘ಮನ್ ಕಿ ಬಾತ್’ ನಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ಬಿತ್ತರವಾಗಲಿದೆ. ದೇಶದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಏರಿಕೆಯಾಗುತ್ತಿದ್ದು, ಅನೇಕ ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರಿದೆ. ಹೀಗಾಗಿ ಕೆಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ನಂತಹ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಹಲವೆಡೆ ಲಾಕ್ಡೌನ್ ಮಾದರಿಯ ನಿರ್ಬಂಧ ಹೇರಲಾಗಿದೆ. ಕೊರೋನಾಗೆ ಲಾಕ್ಡೌನ್ …
Read More »ಭಾರತಕ್ಕೆ ಅಮೆರಿಕ ಮಿತ್ರದ್ರೋಹ!
ಭಾರತದಲ್ಲಿ ಕೊರೋನಾ ಸಂಖ್ಯೆ ಮಿಂಚಿನ ವೇಗದಲ್ಲಿ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಆಕ್ಸಿಜನ್ ಸಿಗದೇ ಜನ ಪರದಾಡ್ತಿದ್ದಾರೆ. ಮತ್ತೊಂದ್ಕಡೆ ಲಸಿಕೆ ಉತ್ಪಾದಿಸಲು ಬೇಕಾದ ಕಚ್ಚಾ ವಸ್ತುಗಳ ಕೊರತೆ ಎದುರಾಗಿದೆ. ಇಂಥಾ ಹೊತ್ತಲ್ಲಿ ಭಾರತ ಅಮೆರಿಕದ ಬಳಿ ಸಹಾಯ ಯಾಚಿಸಿದ್ದು, ಅಮೆರಿಕ ಉಲ್ಟಾ ಹೊಡೆದಿದೆ. ಅಮೆರಿಕ ಲಸಿಕೆಯಲ್ಲಿ ಬಳಸಲಾಗುವ ಕಚ್ಚಾ ವಸ್ತುಗಳ ರಫ್ತಿನ ಮೇಲೆ ನಿರ್ಬಂಧ ವಿಧಿಸಿದೆ. ಹೀಗಾಗಿ ಈ ನಿರ್ಬಂಧವನ್ನು ಸಡಿಲಗೊಳಿಸಿ ಭಾರತಕ್ಕೆ ಲಸಿಕೆಗೆ ಬೇಕಾಗುವ ಕಚ್ಚಾವಸ್ತುಗಳನ್ನು …
Read More »ಬೆಡ್ ಸಿಗದೇ ಬೆಂಗಳೂರಿನ ಸ್ವಾಬ್ ಕಲೆಕ್ಟರ್ ದಾರುಣ ಸಾವು
ಬೆಂಗಳೂರು (ಏ. 24): ಕೊರೋನಾ ಎರಡನೇ ಅಲೆ ತಜ್ಞರು ಅಂದಾಜಿಸಿದ್ದಕ್ಕಿಂತ ಸಾಕಷ್ಟು ಕ್ರೂರವಾಗಿದೆ. ಸೋಂಕಿನ ಹರಡುವಿಕೆ ಅಂದಾಜಿಗೆ ಸಿಗದಾಗಿದ್ದು, ದಿನನಿತ್ಯ ಸಾವಿರಾರು ಜನರು ಸೋಂಕಿನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ದೇಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಕೂಡ ಎದುರಾಗಿದೆ. ಜನರ ರಕ್ಷಣೆ ಮಾಡಬೇಕಾದ ವೈದ್ಯರು ಸೇರಿದಂತೆ ಅನೇಕ ಕೊರೋನಾ ವಾರಿಯರ್ಗಳು ಸೋಂಕಿನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ. ಸಿಲಿಕಾನ್ ಸಿಟಿಯಲ್ಲಿ ಸ್ವಾಬ್ ಕಲೆಕ್ಟರ್ರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮರ್ಸಿಟೌನ್ ಗೀತಾ …
Read More »ಅಕಾಲಿಕ ಆಲಿಕಲ್ಲು ಮಳೆಗೆ ಬೆಳೆ ನಾಶ; ರೈತರಲ್ಲಿ ಹೆಚ್ಚಿದ ಆತಂಕ
ಚಿಕ್ಕಬಳ್ಳಾಪುರ: ಜಿಲ್ಲೆಯ ರೈತರು ಎರಡು ಸಾವಿರ ಅಡಿಗಳ ಪಾತಾಳದಿಂದ ನೀರು ತೆಗೆದು, ತರಕಾರಿ ಹಾಗೂ ಹಣ್ಣು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಹಗಲು ರಾತ್ರಿ ಕಷ್ಟ ಪಟ್ಟು ಬೆಳೆದ ಬೆಳೆಗಳನ್ನು ಇನ್ನೇನು ಕಟಾವು ಮಾಡಿ ಅದರಿಂದ ಆದಾಯ ಗಳಿಸಬಹುದು ಎಂದು ಆಸೆ ಇಟ್ಟುಕೊಂಡಿದ್ದರು. ಆದರೆ ಅಷ್ಟರಲ್ಲಿ ಶುಕ್ರವಾರ ಸಂಜೆ ಸುರಿದ ಆಲಿಕಲ್ಲು ಮಳೆಗೆ ಎಲ್ಲವೂ ಮಣ್ಣು ಪಾಲಾಗಿವೆ. ಮತ್ತೊಂದೆಡೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕಟ್ಟಿದ್ದ ಪಾಲಿ ಹೌಸ್ಗಳು ಅಸ್ತವ್ಯಸ್ತವಾಗಿವೆ. ಕೊರೊನಾ …
Read More »ನಟ ಮಂಡ್ಯ ರಮೇಶ್ಗೆ ಎಸ್ಐ ಪುಟ್ಟರಾಜು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೈಸೂರು: ವಾರಾಂತ್ಯದ ಕರ್ಫ್ಯೂ ನಿಯಮ ಉಲ್ಲಂಘಿಸಿ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ ಬಳಿ ಕಾರಿನಲ್ಲಿ ತೆರಳುತ್ತಿದ್ದ ಪ್ರಸಿದ್ಧ ನಟ ಮಂಡ್ಯ ರಮೇಶ್ಗೆ ಎಸ್ಐ ಪುಟ್ಟರಾಜು ಕರ್ಫ್ಯೂ ನಿಯಮ ಉಲ್ಲಂಘಿಸದಂತೆ ಬುದ್ಧಿವಾದ ಹೇಳಿದ್ದಾರೆ. ಅಲ್ಲದೇ ಮೈಸೂರಿನ ಗ್ರಾಮೀಣ ಪ್ರದೇಶಗಳಲ್ಲೂ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ಜನರಿಗೆ ಪೊಲೀಸರು ತಡೆ ಒಡ್ಡಿದ್ದಾರೆ. ಕುಂಟು ನೆಪ ಹೇಳಿ ತಿರುಗಾಡುವವರನ್ನು ಖಾಕಿ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆಯಲ್ಲಿ ಸಬ್ ಇನ್ಸಪೆಕ್ಟರ್ ಪುಟ್ಟರಾಜು ಮತ್ತು ಇತರ …
Read More »ಮುಸ್ಲಿಂ ಯುವಕರ ತಂಡದಿಂದ ಕೊವಿಡ್ಗೆ ಬಲಿಯಾದವರ ಉಚಿತ ಅಂತ್ಯಸಂಸ್ಕಾರ; ತುಮಕೂರಿನಲ್ಲೊಂದು ಮಾನವೀಯ ಕಾರ್ಯ
ತುಮಕೂರು: ಕೊವಿಡ್ ಸೋಂಕು ಎಲ್ಲರನ್ನೂ ಭಾವನಾತ್ಮಕವಾಗಿ, ಮಾನಸಿಕವಾಗಿ ಒಗ್ಗೂಡಿಸುತ್ತಿದೆ. ಮನುಷ್ಯರೆಲ್ಲರೂ ಒಂದೇ ಎಂಬ ಭಾವವನ್ನು ಎಲ್ಲರ ಮನಸ್ಸಿನಲ್ಲಿಯೂ ಮೂಡಿಸುತ್ತಿದೆ. ಕೊವಿಡ್ನಿಂದ ಉಂಟಾದ ಸಮಸ್ಯೆಯನ್ನು ಪರಿಹರಿಸಲು ಮುಸ್ಲಿಂ ಯುವಕರ ತಂಡವೊಂದು ನಡೆಸುತ್ತಿರುವ ಮಾನವೀಯ ಕಾರ್ಯಕ್ಕೆ ತುಮಕೂರು ಸಾಕ್ಷಿಯಾಗುತ್ತಿದೆ. ನಿನ್ನೆಯಿಂದ ಜಿಲ್ಲೆಯ ಮಧುಗಿರಿಯ ಎಂಟು ಮುಸ್ಲಿಂ ಯುವಕರ ತಂಡವೊಂದು ಸ್ವಯಂ ಪ್ರೇರಿತರಾಗಿ ತಾಲ್ಲೂಕು ಆಸ್ಪತ್ರೆ, ವಿವಿಧ ಖಾಸಗಿ ಆಸ್ಪತ್ರೆ ಗಳಲ್ಲಿ ಕೊವಿಡ್ನಿಂದ ಮೃತಪಟ್ಟ ಶರೀರವನ್ನು ಆಯಾ ಗ್ರಾಮಗಳಲ್ಲಿ ಅವರ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಿಕೊಡುತ್ತಿದೆ. …
Read More »ತೊದಲು ನುಡಿಯಲ್ಲೇ ಲೋಕಜ್ಞಾನ ತೆರೆದಿಡುವ ಮಗು; ಎರಡೂವರೆ ವರ್ಷದ ಬಾಲಕಿ ಜ್ಞಾಪಕ ಶಕ್ತಿಗೆ ಬೆರಗಾದ ಬಾಗಲಕೋಟೆ ಮಂದಿ
ಬಾಗಲಕೋಟೆ: ಮಕ್ಕಳಿರಲವ್ವ ಮನೆ ತುಂಬ, ಕೂಸು ಕಂದಯ್ಯ ಒಳ ಹೊರಗಾ ಆಡಿದರ ಬೀಸಣಿಕೆ ಗಾಳಿ ಸುಳಿದಾವ ಎಂಬ ಮಾತು ಇದೆ. ಮಕ್ಕಳಿದ್ದ ಮನೆಯಲ್ಲಿ ಪ್ರತಿದಿನವೂ ಸಂಭ್ರಮ, ಅವುಗಳ ತೊದಲು ನುಡಿ ತುಂಟಾಟ ನೋಡುವುದೇ ಅಂದ ಎಂಬುವುದು ಇದರ ಅರ್ಥ. ಇದಕ್ಕೆ ಪುಷ್ಠಿ ನೀಡುವಂತೆ ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ಓರ್ವ ಅಸಾಮಾನ್ಯ ಬಾಲಕಿ ಇದ್ದು, ಆಕೆಯ ಹೆಸರು ಸಮನ್ವಿತಾ ಕರಕಟ್ಟಿ. ವಯಸ್ಸು ಕೇವಲ ಎರಡುವರೆ ವರ್ಷ,ಆದರೆ ಈಕೆಯ ಸಾಧನೆ ಮಾತ್ರ …
Read More »ಮುಂಗಡ ಹಣ ವಾಪಸ್ ನೀಡಲು ಕಲ್ಯಾಣ ಮಂಟಪ ಮಾಲೀಕರಿಂದ ನಕಾರ
ಚಿಕ್ಕಮಗಳೂರು: ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳಿಗೆ ಕಠಿಣ ನಿಯಮವನ್ನು ಹೇರಲಾಗಿದೆ. ಸಾವಿರಾರು ಜನರನ್ನ ಸೇರಿಸಿ ಮದುವೆ ಮಾಡಬೇಕು ಎಂದು ಆಸೆಪಟ್ಟವರು ಇದೀಗ 50 ಮಂದಿಯನ್ನ ಸೇರಿಸಿ ಮದುವೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಅನಿವಾರ್ಯವಾಗಿ ದೊಡ್ದ ದೊಡ್ಡ ಹಾಲ್ಗಳಲ್ಲಿ ಬುಕ್ ಮಾಡಿದ ಮದುವೆಗಳೇಲ್ಲ ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಮಾಡಲು ನಿರ್ಧರಿಸಲಾಗಿದೆ. ಆದರೆ ಕನ್ಷೆಷನ್ ಹಾಲ್ಗಳಿಗೆ ಮುಂಗಡವಾಗಿ ಕಟ್ಟಿದ ಹಣವನ್ನ ಮಾತ್ರ ಕೇಳಬೇಡಿ ಎಂದು ಮಾಲೀಕರು ಹೇಳುತ್ತಿದ್ದಾರೆ. ಹೀಗಾಗಿ ಕುಟುಂಬಸ್ಥರಲ್ಲಿ …
Read More »
Laxmi News 24×7