ಕಾರವಾರ : ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಆದ್ರೇ.. ಈ ನಿಯಮ ಮೀರಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ, ಮಾಸ್ಕ್ ಧರಿಸದೇ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೊರೋನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿ, ಸಾರ್ವಜನಿಕರು ಕಿಡಿಕಾರಿದ್ದಾರೆ. ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ನಿನ್ನೆಯ ಭಾನುವಾರದಂದು ಸಿದ್ದಾಪುರದಲ್ಲಿ ನಡೆದಂತ ಆಪ್ತರ ಮದುವೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದರು. …
Read More »ತಾಲೂಕು, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಚುನಾವಣೆ ಮುಂದೂಡಲು ಶಿಫಾರಸ್ಸು
ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯಲಿರುವ ಎಲ್ಲ ಚುನಾವಣೆಗಳನ್ನೂ ಮುಂದೂಡುವಂತೆ ಚುನಾವಣೆ ಆಯೋಗಕ್ಕೆ ರಾಜ್ಯ ಸರಕಾರ ಶಿಫಾರಸ್ಸು ಮಾಡಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವಿಷಯ ತಿಳಿಸಿದ್ದಾರೆ. ಮುಂದಿನ 14 ದಿನ ಜನತಾ ಕರ್ಫ್ಯೂ ಜಾರಿಯಾಗಲಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲವನ್ನೂ ಬಂದ್ ಮಾಡಲಾಗುವುದು. ಪರಿಸ್ಥಿತಿ ಸುಧಾರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು. ತಾಲೂಕು, ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ …
Read More »ರಾಜ್ಯದಲ್ಲಿ ಇಂದಿನಿಂದ ಭಾರೀ ಮಳೆಯಾಗುವ ಸಾಧ್ಯತೆ
ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಐದು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಬೀಸುತ್ತಿರುವುದರಿಂದ ರಾಜ್ಯದಲ್ಲಿ ಈಗಾಗಲೇ ಹಲವೆಡೆ ಮಳೆಯಾಗುತ್ತಿದೆ. ಇದೇ ರೀತಿ ಇನ್ನೂ 5 ದಿನಗಳ ಕಾಲ ಮಳೆ ಮುಂದುವರಿಯಲಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಏ. 29, 30 ರಂದು ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು …
Read More »ಗದಗ: ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ ಆಕಸ್ಮಿಕ ಬೆಂಕಿ: ತಪ್ಪಿದ ಅನಾಹುತ
ಗದಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ನಗರದ ಬ್ಯಾಂಕ್ ರೋಡ್‌ನಲ್ಲಿರುವ ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ ಬೆಂಕಿ ಹೊತ್ತಿಕೊಂಡಿರುವ ಘಟನೆ ರವಿವಾರ ನಡೆದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ರವಿವಾರ ರಾತ್ರಿ 9.15ರ ಸುಮಾರಿಗೆ ಭಾರತ್ ಗ್ಯಾಸ್ ಏಜೆನ್ಸಿ ಸಮೀಪದ ವಿದ್ಯುತ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು, ಹೆಸ್ಕಾಂ ಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಹೆಸ್ಕಾಂ ಸಿಬ್ಬಂದಿ ಸರಿಪಡಿಸಲು ಪ್ರಯತ್ನಿಸಿದರು. ಈ ವೇಳೆ ಆಕಸ್ಮಿಕವಾಗಿ ಗ್ಯಾಸ್ …
Read More »ಪಶ್ಚಿಮ ಬಂಗಾಳ ಚುನಾವಣೆ: ಏಳನೇ ಹಂತದ ಮತದಾನ, ಸಿಎಂ ತವರು ಕ್ಷೇತ್ರ ಭಬಾನಿಪುರ ಮೇಲೆ ಎಲ್ಲರ ಚಿತ್ತ
ಕೋಲ್ಕತ್ತ: ದೇಶದಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವ ಮಧ್ಯೆ, ಪಶ್ಚಿಮ ಬಂಗಾಳದ ಐದು ಜಿಲ್ಲೆಗಳ 34 ಕ್ಷೇತ್ರಗಳಲ್ಲಿ 7ನೇ ಹಂತದ ವಿಧಾನಸಭಾ ಚುನಾವಣೆಯ ಮತದಾನ ಸೋಮವಾರ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಯಿತು. ಪಶ್ಚಿಮ ಬಂಗಾಳ ಚುನಾವಣೆಯ ಈ ಹಂತದಲ್ಲಿ 37 ಮಹಿಳೆಯರು ಸೇರಿದಂತೆ ಒಟ್ಟು 268 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಏಳನೇ ಹಂತವು ದಕ್ಷಿಣ ದಿನಾಜ್‌ಪುರದ ಆರು, ಮಾಲ್ಡಾದಲ್ಲಿ ಆರು, ಮುರ್ಷಿದಾಬಾದ್‌ನಲ್ಲಿ ಒಂಬತ್ತು, ಪಶ್ಚಿಮ ಬರ್ಧಮಾನ್‌ನಲ್ಲಿ ಒಂಭತ್ತು ಮತ್ತು ಕೋಲ್ಕತ್ತಾದ ನಾಲ್ಕು ಕ್ಷೇತ್ರಗಳಲ್ಲಿ …
Read More »ಚೆನ್ನೈ ಅದ್ಭುತ ಆಟ, ಆರ್‌ಸಿಬಿಯ ಕೆಟ್ಟ ದಿನಗಳಲ್ಲಿ ಇದೂ ಒಂದು: ಕಿಚ್ಚ
ಬೆಂಗಳೂರು: ಐಪಿಎಲ್‍ನ ಹೈ ವೋಲ್ಟೇಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದ್ದು, ಜಡೇಜಾ ಮ್ಯಾಜಿಕ್‍ನಿಂದಾಗಿ 69 ರನ್ ಗಳಿಂದ ಚೆನ್ನೈ ಭರ್ಜರಿ ಜಯ ಸಾಧಿಸಿದೆ. ಈ ಬಗ್ಗೆ ನಟ ಕಿಚ್ಚ ಸುದೀಪ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ವೆಲ್ ಪ್ಲೇಯ್ಡ್ ಚೆನ್ನೈ ಸೂಪರ್ ಕಿಂಗ್ಸ್, ಇಲ್ಲಿಂದ ಇನ್ನೂ ಹೆಚ್ಚು ಆಸಕ್ತಿದಾಕವಾಗಿದೆ. ಅಲ್ಲದೆ ಆರ್ ಸಿಬಿಯ …
Read More »ವೀಕೆಂಡ್ ಕರ್ಫ್ಯೂ ಅಂತ್ಯ – ಬೆಂಗಳೂರು ತೊರೆಯುತ್ತಿರುವ ಜನ
ಬೆಂಗಳೂರು: 57 ಗಂಟೆಗಳ ವೀಕೆಂಡ್ ಕರ್ಫ್ಯೂ ಅಂತ್ಯವಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಮಹಾ ವಲಸೆ ಆರಂಭವಾಗಿದೆ. ನಗರದ ಎಲ್ಲ ಫ್ಲೈ ಓವರ್ ಗಳಿಗೆ ಹಾಕಲಾಗಿದೆ ಬ್ಯಾರಿಕೇಡ್ ಗಳನ್ನು ತೆಗೆಯಲಾಗಿದೆ. ಇಂದು ಬೆಳ್ಳಂ ಬೆಳಗ್ಗೆ ಲಗೇಜು ಸಮೇತ ಬಸ್ ನಿಲ್ದಾಣಗಳಿಗೆ ಆಗಮಿಸುತ್ತಿರುವ ಜನರು ತವರಿನತ್ತ ಮುಖ ಮಾಡುತ್ತಿದ್ದಾರೆ. ಸಿಕ್ಕ ಬಸ್ ಗಳನ್ನು ಹತ್ತಿಕೊಂಡು ಮೊದಲು ಊರು ಸೇರಿಕೊಳ್ಳಬೇಕೆಂಬ ಅವಸರದಲ್ಲಿದ್ದಾರೆ. ಸರ್ಕಾರ ಬಿಎಂಟಿಸಿ ಬಸ್ ಗಳಲ್ಲಿ ಶೇ.50 ರಷ್ಟು ಮಾತ್ರ ಪ್ರಯಾಣಿಕರನ್ನ ಕರೆದುಕೊಂಡು ಹೋಗುವಂತೆ …
Read More »ಕೇಂದ್ರ ಸರ್ಕಾರದಿಂದ ನೌಕರರಿಗೆ ಭರ್ಜರಿ ಗುಡ್ ನ್ಯೂಸ್
ನವದೆಹಲಿ : ವೇತನ ಸಂಹಿತೆ ಮಸೂದೆಯ ವ್ಯಾಪ್ತಿಯ ಅಡಿಯಲ್ಲಿ ಕೆಲಸದ ಸಮಯ, ವೇತನ ರಚನೆ, ಟೇಕ್-ಹೋಮ್ ವೇತನ, ಭವಿಷ್ಯ ನಿಧಿ ಮತ್ತು ಗ್ರಾಚ್ಯುಯಿಟಿಗೆ ಸಂಬಂಧಿಸಿದ ಹಲವಾರು ಬದಲಾವಣೆಗಳನ್ನು ಸರ್ಕಾರಿ ನೌಕರರಿಗೆ ಜಾರಿಗೆಗೊಳಿಸಿದೆ. ವೇತನ ಮಸೂದೆ 2019 ರ ಮಸೂದೆ /ಸಂಹಿತೆಯನ್ನು 2019 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಸರ್ಕಾರವು ಹೊಸ ಕಾರ್ಮಿಕ ಸಂಹಿತೆಯಲ್ಲಿ ನಿಯಮಗಳ ಅನುಷ್ಠಾನವನ್ನು ಏಪ್ರಿಲ್ 1 ರಿಂದ ಜಾರಿಗೆ ತರಲು ಬಯಸಿದರೂ ಮುಂದೂಡಿತು, ಇದರಿಂದ ರಾಜ್ಯಗಳು ವೇತನ ನಿಯಮ …
Read More »ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ : ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯ ನಡುವೆಯೂ ಏಪ್ರಿಲ್ 28ರಿಂದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿತ್ತು. ಆದ್ರೇ ಕೊರೋನಾ ಸೋಂಕಿನ 2ನೇ ಅಲೆಯ ಹೆಚ್ಚಳದ ಹಿನ್ನಲೆಯಲ್ಲಿ, ಇದೀಗ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷಾ ದಿನಾಂಕವನ್ನು ಮುಂದೂಡಿಕೆ ಮಾಡಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ. ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ …
Read More »ದೇಶಾದ್ಯಂತ ಹಬ್ಬಿರುವ ಕೋರೋನಾ ವೈರಸ್ ಪ್ರಖರತೆ ಕಳೆದ ಬಾರಿಗಿಂತ ನಾಲ್ಕು ಪಟ್ಟು ಹೆಚ್ಚು: ಅಶೋಕ ಪೂಜಾರಿ
ಗೋಕಾಕ: ದೇಶಾದ್ಯಂತ ಹಬ್ಬಿರುವ ಕೋರೋನಾ ವೈರಸ್ ಪ್ರಖರತೆ ಕಳೆದ ಬಾರಿಗಿಂತ ನಾಲ್ಕು ಪಟ್ಟು ಹೆಚ್ಚು ತೀಕ್ಷಣತೆಯನ್ನು ಹೊಂದಿರುವ ಈ ಸಂದರ್ಭದಲ್ಲಿ ಸರಕಾರದ ನಿಷ್ಕ್ರೀಯತೆಯಿಂದ ಉಂಟಾಗಿರುವ ಆಕ್ಸಿಜನ್ ಕೊರತೆ ಹಾಗೂ ರೆಮಿಡಿಸಿಯರ್ ಇಂಜಕ್ಷನಗಳ ಅಭಾವದಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಿನಿತ್ಯ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ಕೂಡಲೇ ಆಕ್ಸಿಜನ್ ಪೂರೈಕೆ ಹಾಗೂ ಜೀವರಕ್ಷಕ ರೆಮಿಡಿಸಿವಿಯರ್ ಇಂಜಕ್ಷನಗಳ ಲಭ್ಯತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಅಧ್ಯಕ್ಷ …
Read More »
Laxmi News 24×7