Breaking News

ರಾಜ್ಯ

‘ಲಸಿಕೆ ಪಡೆಯುವ ಮೊದಲು ರಕ್ತದಾನ ಮಾಡಿ ಪ್ಲೀಸ್’: ಶಿರಸಿ ವೈದ್ಯೆಯ ಜಾಗೃತಿ ಅಭಿಯಾನ

ಶಿರಸಿ: ಕೇಂದ್ರ ಸರಕಾರ ಕೋವಿಡ್ 19ರ ನಿಯಂತ್ರಣದ ಹಿನ್ನೆಲೆಯಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ನಿರೋಧಕ ಲಸಿಕೆ ಪಡೆದುಕೊಳ್ಳಲು ಮುಕ್ತ ಅವಕಾಶ ಪ್ರಕಟಿಸಿದೆ. ಸರಕಾರಗಳಿಂದ ಕೋವಿಡ್ ನಿಯಂತ್ರಣಕ್ಕೆ ಇದು ಅತ್ಯಂತ ಮಹತ್ವದ ನಡಯಾಗಿದೆ. ಈ ನಡೆಯ ಬೆನ್ನಲ್ಲೇ ಶಿರಸಿಯ ವೈದ್ಯೆಯೊಬ್ಬರು ಲಸಿಕೆ ಹಾಕಿಸಿಕೊಳ್ಳುವ ಮೊದಲು ಅರ್ಹ ದಾನಿಗಳು ‘ರಕ್ತದಾನ ಮಾಡಿ ಪ್ಲೀಸ್’ ಎಂಬ ವಿನೂತನ ಜಾಗೃತಿ ಅಭಿಯಾನವನ್ನೂ ಆರಂಭಿಸಿದ್ದಾರೆ. ಏನಿದು ಅಡಚಣೆ? ಕೋವಿಡ್ ನಿರೋಧಕ ಲಸಿಕೆ …

Read More »

ಬೆಳಗಾವಿ ಆಕ್ಸಿಜನ್ ಪ್ಲಾಂಟ್‌’ ಗೆ ಭೇಟಿ ನೀಡಿದ ಸತೀಶ್ ಜಾರಕಿಹೊಳಿ

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಕಾಕತಿಯಲ್ಲಿರುವ ಬೆಳಗಾವಿ ಆಕ್ಸಿಜನ್ ಪ್ಲಾಂಟ್‌’ ಗೆ ಭೇಟಿ ನೀಡಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಪ್ಲಾಂಟ್ ನಲ್ಲಿನ ಆಕ್ಸಿಜನ್ ಸಿಲಿಂಡರ್ ಗಳ ಸಂಗ್ರಹಣೆ ಹಾಗೂ ಸಾಮರ್ಥ್ಯದ ಬಗ್ಗೆ ಪರಿಶೀಲನೆ ನಡೆಸಿ ಪ್ಲಾಂಟ್ ಗೆ ಆಕ್ಸಿಜನ್ ಸರಬರಾಜು ಮಾಡುವ ಮೂಲಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಹಾಯಕ ಔಷಧ ನಿಯಂತ್ರಕ ರಘುರಾಮ್ ಅವರೊಂದಿಗೆ ಚರ್ಚೆ ನಡೆಸಿದ ಅವರು ಕಾರ್ಖಾನೆಯಲ್ಲಿ ಅಗತ್ಯ ಪ್ರಮಾಣದ …

Read More »

ಮಗನ ಸಾವಿನ ಬಗ್ಗೆ ಪ್ರಶ್ನಿಸಿದ್ದಕ್ಕೆ ಕೇಸು ಹಾಕುದಾಗಿ ಬೆದರಿಸಿದ ಖಾಸಗಿ ಆಸ್ಪತ್ರೆ

ಬೆಂಗಳೂರು: ಜ್ವರ ಎಂದು ನಗರದ ಖಾಸಗಿ ಆಸ್ಪತ್ರೆಗೆ ಸೇರಿದ ಒಬ್ಬ ಯುವಕ ಇಂದು ಮೃತಪಟ್ಟಿದ್ದಾನೆ. ಆತನ ಮರಣದ ಕುರಿತು ಆಸ್ಪತ್ರೆಯೊಂದಿಗೆ ವಿಚಾರಿಸಿದ ಯುವಕನ ಪೋಷಕರಿಗೆ ಆಸ್ಪತ್ರೆ ಸಿಬ್ಬಂದಿ ನಿಮ್ಮ ಮಗನ ಸಾವಿನ ಬಗ್ಗೆ ಕೇಳಿದರೆ ನಿಮ್ಮ ಮೇಲೆ ಕೇಸು ಹಾಕುದಾಗಿ ಬೆದರಿಕೆ ಹಾಕಿದ್ದಾರೆ. ಕೇಂದ್ರದ ಮಾಜಿ ಅಧಿಕಾರಿಯಾಗಿದ್ದ ದಿವಾಕರ್ ಕೋರೆ ಅವರ ಮಗ ಅಲೋಕ್ ಜ್ವರ ಎಂದು ಅತ್ತಿಬೆಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ. ನಂತರ ಆತನಿಗೆ ಕೊರೊನಾ ಪಾಸಿಟಿವ್ ಆಗಿತ್ತು. …

Read More »

ವರನಟ ಡಾ.ರಾಜ್‍ಕುಮಾರ್ 92ನೇ ಜನ್ಮದಿನ ಸಂಭ್ರಮಾಚರಣೆಯನ್ನು ರಾಜ್ ಅವರ ಮೂವರು ಮಕ್ಕಳು ಒಂದೊಂದು ರೀತಿಯಾಗಿ ವಿಶೇಷವಾಗಿ ಆಚರಿಸುವ ಮೂಲಕವಾಗಿ ತಂದೆಗೆ ಪ್ರೀತಿಯನ್ನು ತೋರಿಸಿದ್ದಾರೆ.

ಬೆಂಗಳೂರು: ವರನಟ ಡಾ.ರಾಜ್‍ಕುಮಾರ್ 92ನೇ ಜನ್ಮದಿನ ಸಂಭ್ರಮಾಚರಣೆಯನ್ನು ರಾಜ್ ಅವರ ಮೂವರು ಮಕ್ಕಳು ಒಂದೊಂದು ರೀತಿಯಾಗಿ ವಿಶೇಷವಾಗಿ ಆಚರಿಸುವ ಮೂಲಕವಾಗಿ ತಂದೆಗೆ ಪ್ರೀತಿಯನ್ನು ತೋರಿಸಿದ್ದಾರೆ. ನಟನೆ ಸರಳತೆ, ವ್ಯಕ್ತಿತ್ವದ ಮೂಲಕವಾಗಿ ಅಪಾರ ಸಂಖ್ಯೆ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ರಾಜ್‍ಕುಮಾರ್ ಅವರಿಗೆ ಅವರು ಮಕ್ಕಳು ದೊಡ್ಡ ಅಭಿಮಾನಿಗಳಾಗಿದ್ದಾರೆ. ತಾವು ಮಾಡುವ ಯಾವುದೇ ಕೆಲಸಗಳಿಗೆ ರಾಜ್‍ಮಕ್ಕಳು ತಮ್ಮ ತಂದೆಯನ್ನು ನೆನೆಯುತ್ತಾರೆ. ನಾವು ನಮ್ಮ ತಂದೆಗೆ ದೊಡ್ಡ ಅಭಿಮಾನಿಗಳು ಎಂದು ಆಗಾಗ ಹೇಳುತ್ತಿರುತ್ತಾರೆ. ರಾಜ್‍ಕುಮಾರ್ ಅವರ …

Read More »

ನಿಯಮ ಉಲ್ಲಂಘಿಸಿದರೆ ಲಾಠಿ ಚಾರ್ಜ್

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಪೂರ್ಣ ಬಂದ್ ವಾತಾವರಣ ನಿರ್ಮಾಣವಾಗಿದೆ. ರಾತ್ರಿ 9ಗಂಟೆಯಿಂದ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಇರಲಿದೆ. ಇದೀಗ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ 6ರಿಂದ 10ಗಂಟೆಯವರೆಗೆ ನೀಡಿದ್ದ ಸಮಯ ಮುಗಿದಿದ್ದು, ದಿನಸಿ, ತರಕಾರಿ ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದಾರೆ. ಮನೆಯಿಂದ ಯಾರೊಬ್ಬರು ಹೊರಬರದಂತೆ ಎಚ್ಚರಿಕೆ ನಿದಲಾಗಿದೆ. ಅನಗತ್ಯವಾಗಿ ಜನರು ಓಡಾಟ ನಡೆಸಿದರೆ ಲಾಠಿ …

Read More »

ಮೋದಿಗೆ ಕೈ ಮುಗಿದು ಮನವಿ ಮಾಡಿದ ಸಿಎಂ! ಏಕೆ ಈ ರೀತಿ ಮಾಡಿದರು?

ನವದೆಹಲಿ : ಮಹಾಮಾರಿಯ ಅಟ್ಟಹಾಸ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗುತ್ತಿದೆ. ಹೀಗಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿಗೆ ಕೈ ಮುಗಿದು ಮನವಿ ಮಾಡಿದ್ದಾರೆ. ಕೇಜ್ರಿವಾಲ್ ಅವರು ಕೊರೊನಾ ಹೆಚ್ಚಾಗಿರುವ ಹತ್ತು ರಾಜ್ಯಗಳ ಸಭೆಯಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಪ್ರಧಾನಿಯಲ್ಲಿ ಮನವಿ ಮಾಡಿದ್ದಾರೆ. ದೆಹಲಿ ಪರಿಸ್ಥಿತಿ ನೋಡಿ, ನನಗೆ ನಿದ್ದೆ ಬರುತ್ತಿಲ್ಲ. ಒಂದೊಂದು ಸಾವು ನನ್ನನ್ನು ಕಾಡುತ್ತಿದೆ ಎಂದು ಗದ್ಗದಿತರಾಗಿ ಹೇಳಿದ್ದಾರೆ. ದೆಹಲಿಯಲ್ಲಿ ಆಕ್ಸಿಜನ್ ತಯಾರಿಸುವ ಘಟಕ …

Read More »

ಚಿಕಿತ್ಸೆಗೆ 4,816 ಹಾಸಿಗೆಗಳ ವ್ಯವಸ್ಥೆ: ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು: ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊರಡಿಸಿರುವ ಹಲವು ಕಠಿಣ ನಿಯಮಗಳನ್ನು ಒಳಗೊಂಡ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಧಿಕಾರಿಗಳಿಗೆ ಸೂಚನೆ ನೀಡಿದರು. ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 3,035 ಸಾಮಾನ್ಯ ಬೆಡ್‌ಗಳು, 1,263 ಆಕ್ಸಿಜೆನ್ ಬೆಡ್‌ಗಳು, 243 ಹೈಪ್ರೆಷರ್ ಬೆಡ್‌ಗಳು, 135 ಐಸಿಯು ಬೆಡ್‌ಗಳು, 140 …

Read More »

ಸರ್ಕಾರಿ ನೌಕರರಿಗೆ ಮಾಸ್ಕ್ ಕಡ್ಡಾಯ : ಡಿಸಿ

ಚಿಕ್ಕೋಡಿ : ಕೊರೊನಾ ಎರಡನೆ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಇಲ್ಲದೇ ಹೋದರೆ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇಂದಿನಿಂದಲೇ ಎಲ್ಲ ಸರ್ಕಾರಿ ನೌಕರರು ಮಾಸ್ಕ್ ಧರಿಸುವಂತೆ ಆದೇಶ ಹೊರಡಿಸಲಾಗುತ್ತದೆ ಎಂದು ಜಿಲ್ಲಾ ಧಿಕಾರಿ ಡಾ| ಕೆ.ಹರೀಶ ಕುಮಾರ ಹೇಳಿದರು. ಪಟ್ಟಣದ ಮಿನಿವಿಧಾನಸೌಧದಲ್ಲಿ ಚಿಕ್ಕೋಡಿ ಉಪವಿಭಾಗದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊರೊನಾ ಎರಡನೆ ಅಲೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ …

Read More »

ಮೇ ಮಧ್ಯದಲ್ಲಿ ದೇಶದಲ್ಲಿ ದಿನದಲ್ಲಿ 5 ಸಾವಿರ ಜನ ಕೊರೋನಾಗೆ ಬಲಿಯಾಗಲಿದ್ದಾರೆ : ಶಾಕಿಂಗ್ ವರದಿ ನೀಡಿದ ಅಧ್ಯಯನ

ನವದೆಹಲಿ : ಕೊರೊನಾ ವೈರಸ್ ಪ್ರೇರಿತ ಸಾವುಗಳ ಭಾರತದ ದೈನಂದಿನ ಸಂಖ್ಯೆ ಮೇ ಮಧ್ಯಭಾಗದಲ್ಲಿ 5,600 ಕ್ಕೆ ಏರಬಹುದು ಎಂದು ಅಮೆರಿಕದ ಅಧ್ಯಯನವು ಎಚ್ಚರಿಸಿದೆ. ಇದರರ್ಥ ಏಪ್ರಿಲ್ ಮತ್ತು ಆಗಸ್ಟ್ ನಡುವೆ ದೇಶದಲ್ಲಿ ಸುಮಾರು ಮೂರು ಲಕ್ಷ ಜನರು ಕೋವಿಡ್-19 ಗೆ ಪ್ರಾಣ ಕಳೆದುಕೊಳ್ಳಬಹುದು. COVID-19 projections’ ಎಂಬ ಶೀರ್ಷಿಕೆಯ ಈ ಅಧ್ಯಯನವನ್ನು ವಾಷಿಂಗ್ಟನ್ ವಿಶ್ವವಿದ್ಯಾಲಯದ ಆರೋಗ್ಯ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಸಂಸ್ಥೆ (ಐಎಚ್ ಎಂಇ) ನಡೆಸಿತು. ಈ ವರ್ಷದ …

Read More »

ಮೊನ್ನೆ ಬಸ್ ನಿಂದ‌ ಇಳಿಸಿ ಕೇಸ್ ಹಾಕಿಸಿದ್ರಿ! ಇವತ್ತು ನೋಡಿದ್ರೆ ನೀವೇ ಮಾಸ್ಕ್ ಹಾಕಿಲ್ಲ.

ಉಡುಪಿ ಡಿಸಿ ಅವರು ಉತ್ತರಿಸಲೇ ಬೇಕು… ಮೆಹಂದಿಯಲ್ಲಿ ಭಾಗವಹಿಸಿ, ಮಾಸ್ಕ್ ಹಾಕದೇ‌ ಇರೋ ವ್ಯಕ್ತಿ ನೀವೇ ಆಗಿದ್ದರೆ… ಖಂಡನೀಯ!! ಮದುವೆಗೆ ಮಾತ್ರ ಅವಕಾಶ, ಮೆಹಂದಿಗೆ ಇಲ್ಲ ಈ‌ ನಿಯಮ ಜನ ಸಾಮಾನ್ಯರಿಗೆ ಮಾತ್ರವಾ? ಅದೂ ಅಲ್ಲದೆ ಮೊನ್ನೆ ಬಸ್ ನಿಂದ‌ ಇಳಿಸಿ ಕೇಸ್ ಹಾಕಿಸಿದ್ರಿ! ಇವತ್ತು ನೋಡಿದ್ರೆ ನೀವೇ ಮಾಸ್ಕ್ ಹಾಕಿಲ್ಲ… ತಪ್ಪಲ್ವಾ ಸರ್… ನಾವು ಇಂಥ ತಪ್ಪು ಮಾಡೋದಿಲ್ಲ ಅಂಥಲ್ಲಾ.. ಆದರೆ ನೀವೇ ಮಾಡಿದ್ರೆ ಹೇಗೆ? ಬಡವರಿಗೊಂದು ನ್ಯಾಯ, …

Read More »