ಧಾರವಾಡ: ಜಿಲ್ಲೆಯ ಜನರಿಗೆ ತಪ್ಪು ಮಾಹಿತಿ ನೀಡಿದ ಆರೋಪ ಹಿನ್ನೆಲೆಯಲ್ಲಿ ಎಐಸಿಸಿ ಸದಸ್ಯ ದೀಪಕ್‌ಗೆ ಧಾರವಾಡ ಡಿಸಿ ನೋಟಿಸ್ ಜಾರಿ ಮಾಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಆಕ್ಸಿಜನ್, ಬೆಡ್, ವೆಂಟಿಲೇಟ್, ICU ಬೆಡ್ ಇಲ್ಲವೆಂದು ದೀಪಕ್ ವಿಡಿಯೋ ಮಾಡಿದ್ದರು. ಆದರೆ ಧಾರವಾಡ ಜಿಲ್ಲೆಯಲ್ಲಿ 80 ಐಸಿಯು ಬೆಡ್, 103 ವೆಂಟಿಲೇಟರ್, 545 ಆಕ್ಸಿಜನ್ ಬೆಡ್ ಖಾಲಿ ಇವೆ. ಹೀಗಾಗಿ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದೀಪಕ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಎಐಸಿಸಿ …
Read More »ಚಿಕ್ಕೋಡಿ ಪಟ್ಟಣದ ಜ್ಯೋತಿ ಬಜಾರ್ ಸೀಲ್ ಮಾಡಿಸಿದ ಅಧಿಕಾರಿ ಅಪೂರ್ವ ಬೀದ್ರಿ
ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಒಡೆತನದ ಜ್ಯೋತಿ ಬಜಾರ್ ಅನ್ನು ಚಿಕ್ಕೋಡಿ ಪುರಸಭೆ ಮುಖ್ಯಾಧಿಕಾರಿ ಅಪೂರ್ವ ಬೀದ್ರಿ (KAS) ಅವರ ನೇತ್ರತ್ವದಲ್ಲಿ ದಾಳಿ ಮಾಡಿ ಜ್ಯೋತಿ ಬಜಾರ್ ಸೀಲ್ ಮಾಡಿಸಿದ ಅಧಿಕಾರಿ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿರುವ ಜ್ಯೋತಿ ಬಜಾರ್ ಕೊರೊನಾ ನಿಯಮ ಗಾಳಿಗೆ ತೊರಿ ವ್ಯಾಪಾರ ನಡೆಸುತ್ತಿರುವ ಆರೋಪದ ಅಡಿ ಸೀಲ್ ಮಾಡಿಸಿದ ಅಧಿಕಾರಿ ಯಾಕೆ ಅಂಗಡಿ ತಗೆದಿದ್ದೀರಿ ಎಂದು ಜ್ಯೋತಿ ಬಜಾರ್ ಸಿಬ್ಬಂಧಿಗೆ …
Read More »ರಾಜ್ಯದಲ್ಲಿಂದು 35024 ಪಾಸಿಟಿವ್ ಪ್ರಕರಣ, 270 ಜನರ ಸಾವು
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿಯೇ ಸಾಗಿದ್ದು, ಇಂದು ಕೂಡ 30 ಸಾವಿರ ಗಡಿ ದಾಡಿದೆ. ಇಂದು ( ಗುರುವಾರ) ಸಂಜೆ ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳ ( ದಿನಾಂಕ:28.04.2021, 00:00 ರಿಂದ 23:59 ) ಅವಧಿಯಲ್ಲಿ ಬರೋಬ್ಬರಿ 35024 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು …
Read More »ಆರ್‌ಎಸ್‌ಎಸ್‌ನಿಂದ ಕೋವಿಡ್ ನೆರವು ಕೇಂದ್ರ ಸ್ಥಾಪನೆ..!
ಹುಬ್ಬಳ್ಳಿ: ಪರಸ್ಪರ ಸಹಕಾರದಿಂದ ಮಾತ್ರ ಕೊರೊನಾ ಎರಡನೇ ಅಲೆಯನ್ನು ಎದುರಿಸಲು ಸಾಧ್ಯ ಎಂದು ಆರ್‍ಎಸ್‍ಎಸ್ ಹಿರಿಯ ಪ್ರಚಾರಕ ರಾಷ್ಟ್ರೀಯ ವ್ಯವಸ್ಥಾ ಪ್ರಮುಖ ಮಂಗೇಶ ಬೇಂಡೆ ಹೇಳಿದರು. ಸೇವಾ ಭಾರತಿ ಟ್ರಸ್ಟ್ ಹಾಗೂ ನೆರವು ಸಹಯೋಗದಲ್ಲಿ ಇಲ್ಲಿನ ಕಿಮ್ಸ್ ಎದುರು ಸ್ಥಾಪಿಸಲಾದ ಕೊರೊನಾ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊರೊನಾ ವಿಚಾರದಲ್ಲಿ ಭಾರತವನ್ನು ಇತರೆ ರಾಷ್ಟ್ರಗಳ ಜೊತೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಅಮೆರಿಕ, ಇಂಗ್ಲೆಂಡ್ ಗೆ ಹೋಲಿಸಿದರೆ ಭಾರತ ಕೊರೊನಾ …
Read More »ವೈದ್ಯಾಧಿಕಾರಿಗಳ ನೇಮಕಾತಿ ಕನಿಷ್ಟ ವಯೋಮಿತಿ ಹೆಚ್ಚಳ: ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು: ವೈದ್ಯಾಧಿಕಾರಿಗಳ ನೇಮಕಾತಿಗೆ ಕನಿಷ್ಠ ವಯೋಮಿತಿಯನ್ನು 21 ರಿಂದ 26 ವರ್‌ಷಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಜಾರಿಗೆ ತಂದ ನಿಯಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಅಲ್ಲದೇ, ಅರ್ಜಿದಾರರು ಹೈಕೋರ್ಟ್ ಗೆ ಮೊರೆ ಹೋಗುವ ಮೊದಲು ಸರ್ಕಾರದ ನಿಯಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ)ಯ ಕ್ರಮ ಸರಿ ಇದೆ ಎಂದೂ ಸಹ ಹೈಕೋರ್ಟ್ ಹೇಳಿದೆ. ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ ಸೇವೆಗಳು (ಹಿರಿಯ ವೈದ್ಯಾಧಿಕಾರಿಗಳು/ಪರಿಣಿತರು, …
Read More »ಸಂತಸ ಮೂಡಿಸಿದ ಲಾಕ್ ಡೌನ್: 22 ವರ್ಷಗಳ ನಂತರ ಮನೆಗೆ ಮಗ ಬಂದ!
ಹಾಸನ: ಕೋವಿಡ್ ನಿಯಂತ್ರಿಸಲು ವಿಧಿಸಲಾಗಿರುವ ಲಾಕ್ ಡೌನ್ ಬಹಳಷ್ಟು ಜನರ ನೆಮ್ಮದಿಗೆಡಿಸಿದೆ. ಕೆಲಸ ಕಾರ್ಯವಿಲ್ಲದೆ ದಿನದೂಡುವುದೇ ಕಷ್ಟವಾಗಿದೆ. ಆದರೆ ಇಲ್ಲೊಂದು ಮನೆಯಲ್ಲಿ ಲಾಕ್ ಡೌನ್ ಸಂತಸಕ್ಕೆ ಕಾರಣವಾಗಿದೆ. ಮನೆ ಬಿಟ್ಟು ಹೋಗಿದ್ದ ಮಗ 22 ವರ್ಷಗಳ ನಂತರ ಮನೆಗೆ ವಾಪಸ್ಸಾಗಿದ್ದು ಹೆತ್ತವರಲ್ಲಿ ಸಂತಸ ಮೂಡಿಸಿದೆ. ಹಾಸನ ತಾಲೂಕು ಶಾಂತಿಗ್ರಾಮ ಹೋಬಳಿ ಹೊಂಗರೆ ಗ್ರಾಮದ ರಾಜೇಗೌಡ ಮತ್ತು ಅಕ್ಕಯ್ಯಮ್ಮ ದಂಪತಿ ಪುತ್ರ ಶೇಖರ್ (38) ಮನೆಗೆ ವಾಪಸ್ಸಾದವ. ಈತ, 18 …
Read More »ಇಂದು ಮದುವೆಯಾಗಬೇಕಿದ್ದ ಮದುಮಗ ಕೊರೊನಾಗೆ ಬಲಿ!
ಚಿಕ್ಕಮಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಅಬ್ಬರ ಹೆಚ್ಚಳವಾಗುತ್ತಿದ್ದು, ಇಂದು ಹಸೆಮಣೆ ಏರಬೇಕಾಗಿದ್ದ ಯುವಕನೋರ್ವ ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದೇವರಕೊಡಿಗೆಯಲ್ಲಿ ಇಂದು ಮದುವೆಯಾಗಬೇಕಿದ್ದ 32 ವರ್ಷದ ಪೃಥ್ವಿರಾಜ್ ಎಂಬ ಯುವಕ ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. 10 ದಿನಗಳ ಹಿಂದೆ ಬೆಂಗಳೂರಿನಿಂದ ಮನೆಗೆ ಬಂದಿದ್ದ ಪೃಥ್ವಿರಾಜ್ ಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. …
Read More »ಗೋವಾ ರಾಜ್ಯ ಸರ್ಕಾರ ಗುರುವಾರ ಸಂಜೆಯಿಂದಲಾಕ್‍ಡೌನ್ ಘೋಷಿಸಿದೆ.
ಪಣಜಿ: ಕೊರೊನಾ ಸೋಂಕು ತಡೆಯಲು ಗೋವಾ ರಾಜ್ಯ ಸರ್ಕಾರ ಗುರುವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆ ವರೆಗೆ ಮೂರು ದಿನಗಳ ಕಾಲ ಲಾಕ್‍ಡೌನ್ ಘೋಷಿಸಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಲಾಕ್‍ಡೌನ್ ಸಂದರ್ಭದಲ್ಲಿ ಅಗತ್ಯ ಸೇವೆಗಳು ಕೈಗಾರಿಕೆಗಳನ್ನು ಸ್ಥಗಿತಗೊಳಿಸಲಾಗುವುದಿಲ್ಲ. ಸೋಂಕಿನ ಸರಪಳಿಯನ್ನು ಕತ್ತರಿಸಲು ಗುರುವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆಯ ವರೆಗೆ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಅಗತ್ಯ ಸೇವೆಗಳು ಎಂದಿನಂತೆಯೇ ಇರಲಿವೆ ಎಂದರು. ಆದರೆ ವಾರದ ಸಂತೆ ನಡೆಸಲು ಅವಕಾಶ …
Read More »ಮಾಜಿ ಸಚಿವ, ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಗನ್ ಮ್ಯಾನ್ ಕೊರೋನಾದಿಂದಾಗಿ ಸಾವಿಗೀಡಾಗಿದ್ದಾರೆ.
ಬೆಂಗಳೂರು – ಮಾಜಿ ಸಚಿವ, ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಗನ್ ಮ್ಯಾನ್ ಕೊರೋನಾದಿಂದಾಗಿ ಸಾವಿಗೀಡಾಗಿದ್ದಾರೆ. ರಮೇಶ ಎನ್ನುವ 45 ವರ್ಷದ ವ್ಯಕ್ತಿ ಕೊರೋನಾದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ರಮೇಶ್ ಬೆಂಗಳೂರಿನವರೇ ಆಗಿದ್ದು, ಸತೀಶ್ ಜಾರಕಿಹೊಳಿ ಈ ಹಿಂದೆ ಜವಳಿ ಸಚಿವರಾಗಿದ್ದಾಗಿನಿಂದಲೂ ಅವರ ಜೊತೆಗಿದ್ದರು.3 ದಿನದ ಹಿಂದೆ ರಮೇಶ ಅವರಿಗೆ ಕೊರೋನಾ ಸೊಂಕು ದೃಢಪಟ್ಟಿತ್ತು. ನಂತರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮಧ್ಯಾಹ್ನ 2 …
Read More »ಅಕ್ಕಿ ಕೇಳಿದ ವ್ಯಕ್ತಿಗೆ ಸತ್ತರೆ ಒಳ್ಳೆಯದು ಎಂದ ಆಹಾರ ಸಚಿವ ಉಮೇಶ ಕತ್ತಿ, ಒದ್ದು ಹೊರಹಾಕಿ ಎಂದ ಎಚ್ಡಿಕೆ
ಬೆಂಗಳೂರು – ಅಕ್ಕಿ ಕೇಳಿದ ವ್ಯಕ್ತಿಗೆ ಸತ್ತರೆ ಒಳ್ಳೆಯದು ಎಂದ ಆಹಾರ ಸಚಿವ ಉಮೇಶ ಕತ್ತಿ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕಿಡಿ ಹೊತ್ತಿಸಿದೆ. ಉಮೇಶ ಕತ್ತಿಯನ್ನು ಒದ್ದು ಹೊರ ಹಾಕಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರೆ, ತಕ್ಷಣ ರಾಜಿನಾಮೆ ಪಡೆಯಿರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಉಮೇಶ ಕತ್ತಿ ಹೇಳಿಕೆಗೆ ವಿಷಾದಿಸುತ್ತೇನೆ ಎಂದಿದ್ದಾರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಉಮೇಶ ಕತ್ತಿ ಹೇಳಿಕೆ ಮತ್ತು ಅದಕ್ಕೆ ಸಮರ್ಥನೆ ತೀವ್ರ ವಿವಾದಕ್ಕೆ …
Read More »
Laxmi News 24×7