ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಹುಕ್ಕೇರಿಯಲ್ಲಿ, ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ವತಿಯಿಂದ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು, ಸಚಿವರಾದ ಶ್ರೀ ಉಮೇಶ ಕತ್ತಿ ಜಿ, ಊರಿನ ಹಿರಿಯರು, ಗಣ್ಯರು ಹಾಗೂ ಅಧಿಕಾರಿಗಳು ಜೊತೆಗೂಡಿ ವಿತರಿಸಿದರು. ಕನ್ನಡ ಹಾಗೂ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ 10 ತರಗತಿಯ ಎಲ್ಲಾ ಅಂಶಗಳನ್ನು ಈ ಪುಸ್ತಕದಲ್ಲಿ ಮುದ್ರಿಸಲಾಗಿದೆ. ಶೈಕ್ಷಣಿಕ ಜಿಲ್ಲೆಯ ಪರಿಣಿತ ಶಿಕ್ಷಕರ ಸಹಕಾರದಲ್ಲಿ ಈ …
Read More »ಎ. 26 ರಿಂದ ಮೇ 4 ರವರೆಗೆ ಮಧ್ಯಾಹ್ನ ನಂತರ ಅಂಗಡಿ ಮುಗ್ಗಟ್ಟುಗಳು ಬಂದ್ ಕೊರೋನಾ ಚೈನ್ ಬ್ರೇಕ್ ಮಾಡುವುದೇ ತಮ್ಮ ಉದ್ಧೇಶ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಕೊರೋನಾ ಎರಡನೇ ಅಲೆ ದಿನೇ ದಿನೇ ಉಲ್ಭಣವಾಗುತ್ತಿದ್ದು, ಇದರ ಹತೋಟಿಗೆ ತರಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಇದಕ್ಕಾಗಿ ಸೋಮವಾರದಿಂದ ಮೇ 4 ರವರೆಗೆ ಸ್ವಯಂ ಪ್ರೇರಿತರಾಗಿ ಮದ್ಯಾಹ್ನ ಅಂಗಡಿಗಳನ್ನು ಬಂದ ಮಾಡಿ ಸಹಕರಿಸುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವ್ಯಾಪಾರಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕೊರೋನಾ ಮಹಾಮಾರಿ ಗೋಕಾಕ ಹಾಗೂ ಅರಭಾವಿ ಮತಕ್ಷೇತ್ರಗಳಲ್ಲಿ ಶರವೇಗದಲ್ಲಿ ಹರಡುತ್ತಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಸೂಚನೆ …
Read More »ಕೊರೊನಾ ನಿಯಮ ಪಾಲನೆಗೆ ಒಂಟೆ ಏರಿ ವಿನೂತನ ಜಾಗೃತಿ ಕಾರ್ಯಕ್ರಮ
ಬೆಳಗಾವಿ: ಕೊರೊನಾ ಎರಡನೇ ಅಲೆ ರಾಜ್ಯದಾದ್ಯಂತ ತೀವ್ರವಾಗಿದ್ದು, ರಾಜ್ಯ ಸರ್ಕಾರ ಸೋಂಕಿನ ನಿಯಂತ್ರಣಕ್ಕಾಗಿ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಈ ನಡುವೆ ಜನರಲ್ಲಿ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಬೆಳಗಾವಿ ಮಹಾನಗರ ಪಾಲಿಗೆ ಅಧಿಕಾರಿಗಳು ಒಂಟೆ ಏರಿ ವಿನೂತನ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಮಹಾನಗರ ಪಾಲಿಕೆ ಮಾರ್ಷಲ್ಗಳು ನಗರದ ಬೀದಿಗಳಲ್ಲಿ ಒಂಟಿ ಏರಿ ಸಂಚರಿಸುವ ಮೂಲಕ ಸಾರ್ವಜನಿಕರಿಗೆ ಮನವಿ ಮಾಡುತ್ತಿದ್ದು, ಕೊರೊನಾ …
Read More »ವಿದ್ಯಾರ್ಥಿಗಳನ್ನ ಹೊರಹಾಕಿದ ಹಾಸ್ಟೆಲ್; ಅನ್ನ-ನೀರಿಗಾಗಿ ವಿವಿ ಸ್ಟೂಡೆಂಟ್ಸ್ ಪರದಾಟ
ಚಿತ್ರದುರ್ಗ: ಸಮಾಜ ಕಲ್ಯಾಣ ಇಲಾಖೆಯ ಯಡವಟ್ಟಿನಿಂದಾಗಿ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳು ಕಳೆದೆರಡು ದಿನಗಳಿಂದ ಅನ್ನ ನೀರಿಗಾಗಿ ಪರದಾಡುತ್ತಿರುವ ಘಟನೆ ಚಿತ್ರದುರ್ಗ ನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ನಲ್ಲಿ ನಡೆದಿದೆ. ಕೊರೊನಾ ಕಾರಣ ಹೇಳಿ ಆರೋಗ್ಯ ಇಲಾಖೆ ಏಕಾ ಏಕಿ ಹಾಸ್ಟೆಲ್ ಬಂದ್ ಮಾಡಿದ್ದು.. ಹಾಸ್ಟೆಲ್ ಸಿಬ್ಬಂದಿ ವಿದ್ಯಾರ್ಥಿಗಳ ಬಟ್ಟೆ ಲಗೇಜನ್ನು ಹೊರಹಾಕಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ದಾವಣಗೆರೆ ವಿಶ್ವವಿದ್ಯಾನಿಲಯದ ಬಿ. ಎಡ್ ಎಕ್ಸಾಮ್ ಹಿನ್ನಲೆ ಹಾಸ್ಟೆಲ್ನಲ್ಲಿ ಪರೀಕ್ಷಾ ಸಿದ್ಧತೆ ನಡೆಸಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸಂಕಷ್ಟ …
Read More »ಮಾಜಿ ಸಚಿವ ಆರ್.ವಿ. ದೇಶಪಾಂಡೆಗೆ ಕೊರೊನಾ ಸೋಂಕು ದೃಢ
ಕಾರವಾರ: ಮಾಜಿ ಸಚಿವ ಆರ್.ವಿ. ದೇಶಪಾಂಡೆಗೆ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ದೇಶಪಾಂಡೆ ಅವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಮಗೆ ಕೊರೊನಾ ಸೋಂಕು ಬಂದಿರುವ ಬಗ್ಗೆ ಪ್ರಕಟಿಸಿರುವ ದೇಶಪಾಂಡೆ ಅವರು ತನ್ನ ಸಂಪರ್ಕಕ್ಕೆ ಬಂದವರು ಪರೀಕ್ಷಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೂ ಕೊರೊನಾ ತಗುಲಿದ್ದು ಇಂದು …
Read More »ವಲಸೆ ಕಾರ್ಮಿಕರು ಮರಳಿ ಹೋಗದಂತೆ ಸರ್ಕಾರ ಮನವಿ
ಬೆಂಗಳೂರು,ಏ.23- ಕೋವಿಡ್ ನಿಯಂತ್ರಣಕ್ಕಾಗಿ ದೇಶಾದ್ಯಂತ್ ಲಾಕ್‍ಡೌನ್ ಜಾರಿಗೊಳಿಸುವ ಯಾವುದೇ ಯೋಜನೆ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲದೇ ಇರುವುದರಿಂದ ಕಾರ್ಮಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಕಾರ್ಮಿಕ ಇಲಾಖೆ ಮನವಿ ಮಾಡಿದೆ. ಒಂದೆಡೆ ಪೊಲೀಸರು ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಅಂಗಡಿಗಳನ್ನು ಮುಚ್ಚಿಸಿಕೊಂಡು ಬರುತ್ತಿದ್ದಾರೆ. ಮಾಲೀಕರು ವ್ಯವಹಾರ ನಡೆಸದೇ ಇರುವುದರಿಂದ ಕಾರ್ಮಿಕರಿಗೆ ವೇತನ, ಕಟ್ಟಡದ ಬಾಡಿಗೆ, ವಿದ್ಯುತ್ ಹಾಗೂ ನೀರಿನ ಬಿಲ್ ಸೇರಿದಂತೆ ಇತರ ವೆಚ್ಚಗಳನ್ನು ಭರಿಸಲು ಪರದಾಡುವ ಸ್ಥಿತಿಯಲ್ಲಿದೆ. ವಾಸ್ತವತೆ ಕಣ್ಣೆದುರಿಗೇ …
Read More »ಮತ್ತೆ ಲಾಕ್‍ಡೌನ್ ಮಾಡಿದ್ರೆ ದುರಂತ ಆಗತ್ತೆ; ದುಡ್ಡಿಲ್ಲದೇ ನೋವು ತೋಡಿಕೊಂಡ ಹಿರಿಯ ನಟ
ಕೊರೊನಾ ವೈರಸ್ ಎರಡನೇ ಅಲೆಗೆ ಭಾರತದಲ್ಲಿ ಹೆಣಗಳು ಉರುಳುತ್ತಿವೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಪರಿಸ್ಥಿತಿಯಂತೂ ಕೈ ಮೀರಿ ಹೋಗುತ್ತಿದೆ. ಹಾಗಾಗಿ ಅಲ್ಲಿ ಲಾಕ್‍ಡೌನ್ ಜಾರಿ ಮಾಡಲಾಗಿದೆ. ಏ.14ರಿಂದ 15 ದಿನಗಳ ಲಾಕ್‍ಡೌನ್ ಜಾರಿಯಲ್ಲಿದೆ. ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಅನೇಕ ಕಲಾವಿದರ ಜೀವನಕ್ಕೆ ತೊಂದರೆ ಆಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ತುಂಬ ಕಷ್ಟದ ದಿನಗಳು ಬರಲಿವೆ ಎಂದು ಹಿರಿಯ ನಟ ಆಯುಬ್ ಖಾನ್ ಹೇಳಿದ್ದಾರೆ. ಸಿನಿಮಾ …
Read More »ಸಾಯಬೇಕೋ ಅಥವಾ ವ್ಯಾಪಾರ ಮಾಡಬೇಕೋ ನೀವು ತೀರ್ಮಾನ ಮಾಡಿ: ವ್ಯಾಪಾರಸ್ಥರಿಗೆ ಸಚಿವ ಈಶ್ವರಪ್ಪ
ಶಿವಮೊಗ್ಗ: “ಸಾಯಬೇಕೋ, ವ್ಯಾಪಾರ ಮಾಡಬೇಕೋ ವ್ಯಾಪಾರಸ್ಥರೇ ತೀರ್ಮಾನ ಮಾಡಬೇಕು. ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ವ್ಯಕ್ತಿ ತಾನು ಬದುಕಿದ್ದರೆ ತಾನೆ ನಾಳೆ ವ್ಯಾಪಾರ ಮಾಡಬಹುದು. ಕೋವಿಡ್ ಬಂದು ಆಸ್ಪತ್ರೆಗೆ ಹೋಗಿ ಏನು ಚಿಕಿತ್ಸೆ ಸಿಗದೆ ಸತ್ತರೆ ಅದು ಒಳ್ಳೆಯದಾ? ವ್ಯಾಪಾರ ನಿಲ್ಲಿಸಿ ಹೆಂಡತಿ ಮಕ್ಕಳೊಂದಿಗೆ ಮೂರ್ನಾಲ್ಕು ದಿನ ಸಂತೋಷವಾಗಿ ಇರುವುದು ಒಳ್ಳೆಯದಾ ಯೋಚನೆ ಮಾಡಿ” ಇದು ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ವ್ಯಾಪಾರಸ್ಥರಿಗೆ ನೀಡಿದ ಸಲಹೆಗಳು. ಶಿವಮೊಗ್ಗದಲ್ಲಿ …
Read More »ರಾಜ್ಯದ ಕೋವಿಡ್ ಸ್ಥಿತಿಗತಿ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದ ಸಿಎಂ ಬಿಎಸ್ ವೈ
ಬೆಂಗಳೂರು: ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಹಾಗೂ ನಿರ್ವಹಣೆಯ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಭೆ ನಡೆಸಿದರು. ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಧಾನಿ ಮೋದಿಯವರಿಗೆ ಮಾಹಿತಿ ನೀಡಿದರು. ಆರೋಗ್ಯ ಸಚಿವ ಡಾ. ಸುಧಾಕರ್, ಗೃಹ ಸಚಿವ ಬಸವರಾಜ …
Read More »ಯುವಕರ ಜೊತೆ ಪ್ರೇಯಸಿಯ ಚಾಟಿಂಗ್ ನೋಡಿ ಪ್ರಿಯಕರ ಮಾಡಿದ್ದೇನು ಗೊತ್ತಾ..?
ಮೈಸೂರು: ಪ್ರೇಯಸಿಯ ನಡತೆ ಪ್ರಶ್ನಿಸಿ ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಹರ್ಷ ರಸ್ತೆಯಲ್ಲಿ ನಡೆದಿದೆ. ನಂಜನಗೂಡಿನ ಶ್ರೀರಾಂಪುರದ 26 ವರ್ಷದ ಯುವತಿ ಪ್ರಿಯಕರನಿಂದ ಹಲ್ಲೆಗೊಳಗಾದ ಯುವತಿ. ಹೆಚ್.ಡಿ. ಕೋಟೆ ತಾಲೂಕಿನ ಅಂತರಸಂತೆಯ ನಿವಾಸಿ ರಮೇಶ್ ಎಂಬಾತನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಮೈಸೂರಿನ ಖಾಸಗಿ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಾಗೂ ರಮೇಶ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆಕೆಗೆ ಬರುತ್ತಿದ್ದ ಮೆಸೇಜ್ಗಳನ್ನು ತನ್ನ …
Read More »
Laxmi News 24×7