Breaking News

ರಾಜ್ಯ

ಪತ್ನಿಯಿಂದಲೇ ಸುಪಾರಿ ಹತ್ಯೆ;ಪತ್ನಿ ಸೇರಿ ಇಬ್ಬರ ಬಂಧನ

ಬೆಂಗಳೂರು, : ಆತನ ದೇಹ ರೈಲ್ವೇ ಹಳಿಯ ಮೇಲೆ ಛಿದ್ರವಾಗಿತ್ತು. ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಅಂತಲೇ ಪೊಲೀಸರು ಭಾವಿಸಿದ್ದರು. ಆದರೆ, ಕುತ್ತಿಗೆ ಮೇಲಿನ ಗುರುತು ಕೊಲೆಯ ಬಗ್ಗೆ ಸಣ್ಣ ಅನುಮಾನ ಮೂಡಿಸಿತ್ತು. ಅದು ರೈಲ್ವೇ ಪೊಲೀಸರ ತನಿಖೆಯಲ್ಲಿ ನಿಜವಾಗಿದೆ. ಕೊಲೆ ಹಂತಕರನ್ನು ಕೇವಲ 24 ತಾಸಿನಲ್ಲಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯಾಗಿದ್ದು ಕೆ.ಆರ್.ಪುರಂ ನಿವಾಸಿ ಲೋಕನಾಥ್ . ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವುದು ಮೃತನ ಪತ್ನಿ ಯಶೋಧಾ, ವಿಜಿನಾಪುರದ …

Read More »

ಜಿಯೋದಿಂದ ಎರಡು ಹೊಸ ಸಬ್‌ಸೀ ಕೇಬಲ್ ವ್ಯವಸ್ಥೆ ಯೋಜನೆ

ಮುಂಬೈ, : ಭಾರತದ ಮುಂಚೂಣಿ 4ಜಿ ಮತ್ತು ಮೊಬೈಲ್ ಬ್ರಾಡ್‌ಬ್ಯಾಂಡ್ ಡಿಜಿಟಲ್ ಸೇವಾ ಪೂರೈಕೆದಾರ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ. (ಜಿಯೋ), ಭಾರತವನ್ನು ಕೇಂದ್ರವಾಗಿಟ್ಟುಕೊಂಡು ಅತಿ ದೊಡ್ಡ ಅಂತಾರಾಷ್ಟ್ರೀಯ ಜಲಾಂತರ್ಗಾಮಿ (ಸಬ್‌ಮೆರಿನ್) ಕೇಬಲ್ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ವಿವಿಧ ಪ್ರಮುಖ ಜಾಗತಿಕ ಪಾಲುದಾರರು ಮತ್ತು ವಿಶ್ವದರ್ಜೆಯ ಜಲಾಂತರ್ಗಾಮಿ ಕೇಬಲ್ ಪೂರೈಕೆದಾರ ಸಬ್‌ಕಾಮ್ ಸಹಯೋಗದೊಂದಿಗೆ ಜಿಯೋ ಪ್ರಸ್ತುತ ಪ್ರದೇಶದೆಲ್ಲೆಡೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಡೇಟಾ ಬೇಡಿಕೆಗೆ ಬೆಂಬಲ ಒದಗಿಸುವ ನಿಟ್ಟಿನಲ್ಲಿ ಮುಂದಿನ ತಲೆಮಾರಿನ …

Read More »

ಲಾಕ್​ಡೌನ್​ ನಿರ್ಧಾರವನ್ನು ಜಿಲ್ಲಾಧಿಕಾರಿಗಳಿಗೆ ಬಿಟ್ಟ ಪ್ರಧಾನಿ ಮೋದಿ

ನವದೆಹಲಿ: ಕರೊನಾ ವೈರಸ್​ ಬಿಕ್ಕಟ್ಟು ಹಿನ್ನೆಲೆಯಲ್ಲಿ 9 ರಾಜ್ಯಗಳ ಸಿಎಂ, 46 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿ, ಲಾಕ್​ಡೌನ್​ ನಿರ್ಧಾರವನ್ನು ಜಿಲ್ಲಾಧಿಕಾರಿಗಳಿಗೆ ಬಿಟ್ಟರು. ಕರೊನಾ ನಿಯಂತ್ರಿಸಲು ಎಲ್ಲರು ಒಗ್ಗಟಾಗಿ ಕೆಲಸ ಮಾಡಬೇಕು. ಕರೊನಾ ವಾರಿಯರ್ಸ್​ಗೆ ಸ್ಫೂರ್ತಿ ತುಂಬಿರಿ. ನಿಮ್ಮ ಸ್ಫೂರ್ತಿದಾಯಕ ಮಾತುಗಳಿಂದ ವಾರಿಯರ್ಸ್​ಗೆ ವಿಶ್ವಾಸ ಹೆಚ್ಚುತ್ತದೆ. ಕರೊನಾ ನಿಯಂತ್ರಿಸಲು ಯಾವುದೇ ಮಾರ್ಗವಿದ್ದರೂ ಅದನ್ನು ಅಳವಡಿಸಿಕೊಳ್ಳಿ ಎಂದು ಪ್ರಧಾನಿ …

Read More »

ಹಳೇ ದ್ವೇಷ: ಸ್ನೇಹಿತನಿಂದಲೇ ಚಾಕು ಇರಿತ, ಇಬ್ಬರಿಗೆ ಗಂಭೀರ ಗಾಯ

ಮಳವಳ್ಳಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಇಬ್ಬರು ಸ್ನೇಹಿತರ ಮೇಲೆ ಚೂರಿಯಿಂದ ದಾಳಿ ನಡೆಸಿ ಇರಿದು ಪರಾರಿಯಾಗಿರುವ ಘಟನೆ ಪಟ್ಟಣದ ಗಂಗಾಮತ ಬೀದಿಯಲ್ಲಿ ನಡೆದಿದೆ. ಚೂರಿಯಿಂದ ಇರಿತಕ್ಕೊಳಗಾದ ಭರತ್ (೨೦) ಹಾಗೂ ಲೋಹಿತ್ (೨೦) ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರ ಸ್ನೇಹಿತನಾದ ಮಧು ಅಲಿಯಾಸ್ ಮಾದಿ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾದ ಯುವಕ. ಭಾನುವಾರ ರಾತ್ರಿ ೮ ಗಂಟೆ ಸಮಯದಲ್ಲಿ ಭರತ್ ಗಂಗಾಮತ ಬೀದಿಯಲ್ಲಿದ್ದ …

Read More »

ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ ದರ ದಾಖಲೆಯ ಶೇ. 10.49ಕ್ಕೆ ಏರಿಕೆ

ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರವು(WPI) ಏಪ್ರಿ‌ ತಿಂಗಳಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಶೇಕಡಾ 10.49ರಷ್ಟು ತಲುಪಿದೆ. ಕಚ್ಚಾ ತೈಲ ದರ ಏರಿಕೆ ಹಾಗೂ ಉತ್ಪಾದನಾ ಸಾಮಗ್ರಿಗಳ ಬೆಲೆ ಏರಿಕೆಯು ಸಗಟು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣವಾಗಿದೆ. 2021ರ ಮಾರ್ಚ್​ನಲ್ಲಿ ಸಗಣಟು ಹಣದುಬ್ಬರ ಶೇಕಡಾ 7.39 ರಷ್ಟಿತ್ತು. ಒಂದು ವರ್ಷದ ಹಿಂದೆ ಶೇ (-) 1.57 ಇತ್ತು. ಆದರೆ ಈ 2021ರ ಏಪ್ರಿಲ್​ನಲ್ಲಿ ಸತತ ನಾಲ್ಕನೇ ಬಾರಿಗೆ WPI ಹಣದುಬ್ಬರ …

Read More »

ಮೆಕ್ಸಿಕೋದ ಆಯಂಡ್ರಿಯಾ ಮೆಝಾಗೆ 2020ರ ವಿಶ್ವಸುಂದರಿ ಪಟ್ಟ

ಫ್ಲೋರಿಡಾ: ಮೆಕ್ಸಿಕೋದ ಆಯಂಡ್ರಿಯಾ ಮೆಝಾ (26) ಅವರು 2020ರ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಅಂತಿಮ ಸುತ್ತಿನಲ್ಲಿದ್ದ ಬ್ರೆಜಿಲ್‌ನ ಜ್ಯೂಲಿಯಾ ಗಾಮ (28), ಪೆರು ದೇಶದ ಜೆನಿಕ್‌ ಮೆಸಿಟಾ (27) ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ. ರವಿವಾರ ರಾತ್ರಿ ನಡೆದ 69ನೇ ವಿಶ್ವಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಅವರು, 74 ದೇಶಗಳ ಸುಂದರಿಯರನ್ನು ಹಿಂದಿಕ್ಕಿ ಅಗ್ರಪಟ್ಟವನ್ನು ತಮ್ಮದಾಗಿಸಿಕೊಂಡರು. 2019ರ ವಿಶ್ವಸುಂದರಿ ದಕ್ಷಿಣ ಆಫ್ರಿಕಾದ ಜೊಜಿಬಿನಿ ಟುನ್ಸಿ ಅವರು, ವಿಶ್ವಸುಂದರಿ …

Read More »

ಅತ್ತೆಯ ಒಡವೆ ಅಳಿಯ ದಾನ ಮಾಡಿದಂತೆ ಪ್ರಧಾನಿ ನಡೆ: ದಿನೇಶ್ ಗುಂಡೂರಾವ್

ಬೆಂಗಳೂರು, : ಅತ್ತೆ ಒಡವೆಯನ್ನು ಅಳಿಯ ದಾನ ಕೊಟ್ಟ ಮಾದರಿಯಲ್ಲಿಯೇ ಪ್ರಚಾರಕ್ಕಾಗಿ ಕೋವಿಡ್ ಲಸಿಕೆಯನ್ನು ವಿದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟೀಕಿಸಿದರು. ಸೋಮವಾರ ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಆಸೆಗೆ ನಮ್ಮ ಲಸಿಕೆಯನ್ನು ವಿದೇಶಕ್ಕೆ ದಾನ ಮಾಡಿದ್ದಾರೆ. ಇದು ಅತ್ತೆ ಒಡವೆಯನ್ನು ಅಳಿಯ ದಾನ ಕೊಟ್ಟಂತೆ ಆಗಿದೆ ಎಂದರು. ವಿದೇಶಗಳಲ್ಲೂ ಕೋವಿಡ್ ಲಸಿಕೆ …

Read More »

ವಿಜಯಪುರದ ಬಿಜೆಪಿ ರೆಬೆಲ್ ಶಾಸಕ ಯತ್ನಾಳ್ ಬಿಎಸ್ ವೈ ವಿರುದ್ಧ ಮತ್ತೆ ವೈಲೆಂಟ್

ವಿಜಯಪುರ: ಹೆಮ್ಮಾರಿ ಕೊರೊನಾ ರಾಜ್ಯವನ್ನೇ ಹಿಂಡಿ ಹಿಪ್ಪೆ ಮಾಡುತ್ತಿರುವ ಬೆನ್ನಲ್ಲೆ ಮತ್ತೆ ರಾಜಕೀಯ ಗುದ್ದಾಟ ಶುರುವಾಗಿದೆ. ವಿಜಯಪುರದ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ವೈಲೆಂಟ್ ಆಗಿದ್ದು, ಎಂದಿನಂತೆ ಸಿಎಂ ಬಿಎಸ್ ವೈ ವಿರುದ್ಧ ಕಿಡಿಕಾರಿದ್ದಾರೆ. (ಸೋಮವಾರ) ಆರೋಗ್ಯ ಸಚಿವರ ಭೇಟಿ ಬಳಿಕ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ವಿಚಾರದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಾರ್ಯ ನಮಗೆ ತೃಪ್ತಿ ತಂದಿಲ್ಲ ಎಂದು ನೇರವಾಗಿ ಆರೋಪಿಸಿದ್ದಾರೆ. ರಾಜ್ಯದಲ್ಲಿ …

Read More »

ʼಲಾಕ್​ ಡೌನ್ʼ​ ವಿಸ್ತರಣೆ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ಸಚಿವ ಮುರುಗೇಶ್​ ನಿರಾಣಿ

ರಾಜ್ಯದಲ್ಲಿ ಲಾಕ್​ಡೌನ್​ ಆದೇಶದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಹೀಗಾಗಿ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಲಾಕ್​ಡೌನ್​​ ಆದೇಶವನ್ನ ಮುಂದುವರಿಸಲಿದ್ಯಾ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ. ಇದೇ ವಿಚಾರವಾಗಿ ಕಲಬುರಗಿಯಲ್ಲಿ ಮಾತನಾಡಿದ ಸಚಿವ ಮುರುಗೇಶ್​ ನಿರಾಣಿ ಲಾಕ್​ಡೌನ್​ ಮುಂದುವರಿಕೆ ಬಗ್ಗೆ ಸೂಚನೆ ನೀಡಿದ್ರು. ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಇಳಿಕೆ ಕಂಡುಬರ್ತಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕನ್ನ …

Read More »

ಗೋಕಾಕದಲ್ಲಿ ಭೀಕರ ಸರಣಿ ಅಪಘಾತ: ಮೂವರಿಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

ಗೋಕಾಕ: ನಗರದ ಬ್ಯಾಳಿಕಾಟಾ ಬಳಿ ಸೋಮವಾರ ಸಂಜೆ ಭೀಕರ ಸರಣಿ ಅಪಘಾತ ಸಂಭವಿಸಿ, ಮೂವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ನಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಗರದ ಕಡೆ ಆಗಮಿಸುತ್ತಿದ್ದ ಇಂಡಿಕಾ ಕಾರ್, ಇಲ್ಲಿನ ನಾಕಾ 1 ರಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಆಟೊ ರಿಕ್ಷಾಗೆ ಡಿಕ್ಕಿ …

Read More »