Breaking News

ರಾಜ್ಯ

ತಾಲೂಕಿನ ಎಲ್ಲಾ ಪೆಟ್ರೋಲ್ ಪಂಪ್ ಮಾಲೀಕರಿಗೆ ಹಾಗೂ ಸಿಬ್ಬಂದಿಗಳಿಗೆ ಸತೀಶ್ ಶುಗರ್ಸ್ ವತಿಯಿಂದ ಮಾಸ್ಕ್, ಸ್ಯಾನಿಟೈಸರ್ ಹ್ಯಾಂಡ್ ಗ್ಲೌಸ್ ವಿತರಿಸಿದ ರಾಹುಲ್ ಜಾರಕಿಹೊಳಿ

ಗೋಕಾಕ: ತಾಲೂಕಿನ ಎಲ್ಲಾ ಪೆಟ್ರೋಲ್ ಪಂಪ್ ಮಾಲೀಕರಿಗೆ ಹಾಗೂ ಸಿಬ್ಬಂದಿಗಳಿಗೆ ಸತೀಶ್ ಶುಗರ್ಸ್ ವತಿಯಿಂದ ಮಾಸ್ಕ್, ಸ್ಯಾನಿಟೈಸರ್ ಹಾಗೂ ಹ್ಯಾಂಡ್ ಗ್ಲೌಸ್ ಗಳನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಮಂಗಳವಾರ ವಿತರಿಸಿದರು. ಜಿಲ್ಲೆಯಲ್ಲಿ ಕೊರೋನಾ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆ ಜನರ ರಕ್ಷಣೆಗಾಗಿ ರಾಹುಲ್ ಅವರು ಮಾಸ್ಕ್, ಸ್ಯಾನಿಟೈಸರ್ ವಿತರಿಸಿ, ಕೊರೋನಾ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮೀಣ ಜನತೆ ಸ್ವಚ್ಛತೆಗೆ ಆಧ್ಯತೆ ನೀಡಬೇಕು. ಈ ಹೆಮ್ಮಾರಿ ಸೋಂಕನ್ನು ಕಟ್ಟಿಹಾಕಲು ಸಾಮಾಜಿಕ ಅನಿರ್ವಾಯ ಎಂದರು. …

Read More »

ಯುವತಿಯರೊಂದಿಗೆ ಯುವಕರು ಕೆಆರ್‌ಎಸ್‌ ಹಿನ್ನೀರಿನಲ್ಲಿ ಮೋಜು-ಮಸ್ತಿ

ಮಂಡ್ಯ: ಲಾಕ್‍ಡೌನ್ ಅನ್ನು ಲೆಕ್ಕಿಸದೆ ಯುವಕರು ಕೆಆರ್‌ಎಸ್‌ ಹಿನ್ನೀರಿನಲ್ಲಿ ಯುವತಿಯರೊಂದಿಗೆ ಪಾರ್ಟಿ ನಡೆಸಲು ಬಂದಿದ್ದು, ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.   ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಹಿನ್ನೀರಿನಲ್ಲಿ ಮೈಸೂರು ಮೂಲದ ಯುವಕರು-ಯುವತಿಯರನ್ನು ಕರೆದುಕೊಂಡು ಮೋಜು-ಮಸ್ತಿ ಮಾಡಲು ಬಂದಿದ್ದಾರೆ. ಈ ವೇಳೆ ಇದನ್ನು ಕಂಡ ಸ್ಥಳೀಯರು ಇದನ್ನು ಪ್ರಶ್ನೆ ಮಾಡಿದ್ದಾರೆ. ಆಗ ಯುವಕರು ಸ್ಥಳೀಯರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಬಳಿಕ ಸ್ಥಳೀಯರು ಕೆಆರ್‍ಎಸ್ ಪೊಲೀಸ್ ಠಾಣೆಗೆ ಈ ಬಗ್ಗೆ …

Read More »

ಬೆಂಗಳೂರಲ್ಲಿ ಜೂನ್ 7ರಿಂದ ಬಿಎಂಟಿಸಿ ಬಸ್ ಸಂಚಾರ

ಬೆಂಗಳೂರು, ಮೇ 31; ಬೆಂಗಳೂರು ಜನರ ಜೀವನಾಡಿ ಬಿಎಂಟಿಸಿ ಬಸ್ ಸಂಚಾರ ಆರಂಭಿಸಲಿದೆ. ಸದ್ಯ ಜಾರಿಯಲ್ಲಿರುವ ಲಾಕ್‌ಡೌನ್ ಜೂನ್ 7ರ ಸೋಮವಾರ ಬೆಳಗ್ಗೆ 6ಕ್ಕೆ ಮುಕ್ತಾಯಗೊಳ್ಳಲಿದ್ದು, ಮುಂದುವರೆಸುವ ಕುರಿತು ಸರ್ಕಾರ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಜೂನ್ 7ರ ಬಳಿಕ ಲಾಕ್‌ಡೌನ್ ವಿಸ್ತರಣೆಯಾದರೂ ಹಲವು ವಿನಾಯಿತಿ ಸಿಗುವ ಸಾಧ್ಯತೆ ಇದೆ. ಆದ್ದರಿಂದ ಜನದಟ್ಟಣೆ ಹೆಚ್ಚಿರುವ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲು ಬಿಎಂಟಿಸಿ ಮುಂದಾಗಿದೆ. ಈ ಕುರಿತು ನೌಕರರಿಗೂ ನಿರ್ದೇಶನ ನೀಡಲಾಗಿದೆ. …

Read More »

5 ಜಿ ನೆಟ್ವರ್ಕ್ ಸ್ಥಾಪನೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ನಟಿ ಜುಹಿ ಚಾವ್ಲಾ

ನವದೆಹಲಿ : ಈಗಾಗಲೇ ದೇಶದ ಎಲ್ಲೆಡೆ 4 ಜಿ ವೈರ್ಲೆಸ್ ನೆಟ್ವರ್ಕ್ ಪ್ರಚಲಿತದಲ್ಲಿದೆ. ಆದರೆ ಇದನ್ನು ಇನ್ನೂ ಉತ್ತಮಗೊಳಿಸುವ ಹಿನ್ನೆಲೆಯಲ್ಲಿ 5ಜಿ ನೆಟ್ವರ್ಕ್ ಗಳನ್ನು ತರುವ ಸಂಶೋಧನೆಗಳು ಹಾಗೂ ಪ್ರಯೋಗಗಳು ನಡೆಯುತ್ತವೆ. 5 ಜಿ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಸ್ಥಾಪನೆ ಮಾಡುವುದರ ವಿರುದ್ಧ ಅನೇಕ ಪರಿಸರವಾದಿಗಳು ಧ್ವನಿ ಎತ್ತಿದ್ದರು ಮತ್ತು ಇದನ್ನು ವಿರೋಧಿಸಿದ್ದರು. ಇದೀಗ ಇದರ ವಿರುದ್ಧ ಬಾಲಿವುಡ್ ಖ್ಯಾತ ನಟಿ ಪರಿಸರವಾದಿ ಜುಹಿ ಚಾವ್ಲಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 5 …

Read More »

46 ವರ್ಷ ವಯಸ್ಸಿನ ಅಂಧ ವ್ಯಕ್ತಿ​​​ ಮೌಂಟ್ ಎವರೆಸ್ಟ್ ಪರ್ವತ ಏರಿದ್ದಾರೆ.

ಝಾಂಗ್ ಹೋಂಗ್ ಎಂಬ 46 ವರ್ಷ ವಯಸ್ಸಿನ ಅಂಧ ವ್ಯಕ್ತಿ​​​ ಮೌಂಟ್ ಎವರೆಸ್ಟ್ ಪರ್ವತ ಏರಿದ್ದಾರೆ. ಚೀನಾ ಮೂಲದ ಇವರು ನೇಪಾಳ ಕಡೆಯಿಂದ ಪರ್ವತ ಹತ್ತಿ ದಾಖಲೆ ಬರೆದಿದ್ದಾರೆ. ಇಡೀ ಏಷ್ಯಾದಲ್ಲೇ ಮೌಂಟ್ ಎವರೆಸ್ಟ್ ಏರಿದ ಮೊದಲ ಅಂಧ ಅನ್ನೋ ಬಿರುದು ಪಡೆದಿದ್ದು, ವಿಶ್ವದಲ್ಲಿ ಮೌಂಟ್ ಎವರೆಸ್ಟ್ ಏರಿದ 3ನೇ ಅಂಧ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಝಾಂಗ್ ಹೋಂಗ್​​​, ಗಟ್ಟಿ ಮನಸ್ಸೊಂದಿದ್ರೆ ನಿನ್ ಕೈಲಿ ಆಗಲ್ಲ ಅನ್ನೋ ವಿಚಾರವನ್ನು …

Read More »

ಪತಿಯನ್ನು ಹೋಮಕುಂಡದಲ್ಲಿ ಹಾಕಿ ಕೊಲೆ ಮಾಡಿದ್ದ ಪತ್ನಿ; ಬೆಚ್ಚಿಬೀಳಿಸಿದ್ದ ಹತ್ಯೆ ಪ್ರಕರಣದ ತೀರ್ಪು ಮುಂದೂಡಿಕೆ

ಉಡುಪಿ: ಪುತ್ರ ಹಾಗೂ ಪ್ರಿಯಕರನ ಜೊತೆಗೂಡಿ ಪತಿಯನ್ನು ಹೋಮಕುಂಡದಲ್ಲಿ ಹಾಕಿ ಸುಟ್ಟು ಕೊಲೆ ಮಾಡಿದ್ದ ಪ್ರಕರಣ ಇದೀಗ ಮತ್ತೆ ಸದ್ದು ಮಾಡಲಾರಂಭಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪನ್ನು ನ್ಯಾಯಾಲಯ ಮುಂದೂಡಿದ್ದು, ಸದ್ಯದಲ್ಲೇ ತೀರ್ಪು ಹೊರಬೀಳುವ ಸಾಧ್ಯತೆ ಇರುವುದರಿಂದ ಕುತೂಹಲ ಮೂಡಿಸಿದೆ. ಅನಿವಾಸಿ ಉದ್ಯಮಿ ಭಾಸ್ಕರ ಶೆಟ್ಟಿಯನ್ನು ಕೊಲೆ ಮಾಡಿದ್ದ ಪತ್ನಿ ರಾಜೇಶ್ವರಿ ಶೆಟ್ಟಿ, ಪ್ರಿಯಕರ ನಿರಂಜನ್​ ಭಟ್​, ಪುತ್ರ ನವನೀತ್ ಶೆಟ್ಟಿ ಪ್ರಮುಖ ಆರೋಪಿಗಳು. 2016ರ ಜುಲೈ ತಿಂಗಳಲ್ಲಿ ಈ …

Read More »

ಸಚಿವ ಪ್ರಭು ಚವ್ಹಾಣ್ ವಿತರಿಸುತ್ತಿರುವ ಆಹಾರ ತಿನ್ನಲಿಕ್ಕೆ ಬಾರದಂತಿದೆ: ಅಲೆಮಾರಿ ಜನಾಂಗದ ಮಹಿಳೆಯರ ಆರೋಪ

ಬೀದರ್, ಮೇ 31: ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ವಿತರಿಸುತ್ತಿರುವ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಅಲೆಮಾರಿ ಜನಾಂಗದ ಮಹಿಳೆಯರು ಆರೋಪಿಸಿದ್ದಾರೆ. ಔರಾದ ಪಟ್ಟಣದ ಹೊರವಲಯದಲ್ಲಿರುವ ಅಲೆಮಾರಿ ಜನಾಂಗದವರು ವಾಸಿಸುವ ಗುಡಿಸಲುಗಳಿಗೆ ಕೆಲವು ಸಂಘಟನೆಯ ಪದಾಧಿಕಾರಿಗಳು ಹೋಗಿ ತಮ್ಮ ವತಿಯಿಂದ ಉಚಿತವಾಗಿ ಆಹಾರಗಳನ್ನು ಹಂಚುವ ಸಂದರ್ಭದಲ್ಲಿ ಅಲೆಮಾರಿ ಜನಾಂಗದ ಮಹಿಳೆಯರು, ನಿಮ್ಮ ಆಹಾರ ಚೆನ್ನಾಗಿದೆ, …

Read More »

ಲಾಕ್ ಡೌನ್ ಇದ್ದಷ್ಟು ದಿನ ಮಾತ್ರ ಯಡಿಯೂರಪ್ಪ ಮುಖ್ಯಮಂತ್ರಿ!

ವಿಜಯಪುರ, ಮೇ 31: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ವಿರುದ್ದ ಕಿಡಿಕಾರುವಲ್ಲಿ ವಿರೋಧ ಪಕ್ಷದವರೂ ನಾಚಿಸುವಂತೆ ಮಂಚೂಣಿಯಲ್ಲಿ ಬರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಎಂ ವಿರುದ್ದ ಗುಡುಗಿದ್ದಾರೆ.   ಈಗಿರುವ ಲಾಕ್ ಡೌನ್ ಎಲ್ಲಾ ವೇಸ್ಟ್, ಜೂನ್ ಏಳರ ನಂತರ ಲಾಕ್ ಡೌನ್ ವಿಸ್ತರಿಸಬಾರದು ಎಂದು ಅಭಿಪ್ರಾಯ ಪಟ್ಟಿರುವ ಯತ್ನಾಳ್, ಲಾಕ್ ಡೌನ್ ಇದ್ದರೆ ಮಾತ್ರ ಯಡಿಯೂರಪ್ಪನವರ ಸಿಎಂ ಕುರ್ಚಿ ಭದ್ರ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. …

Read More »

ಸಿಎಂ ಬದಲಾವಣೆ ವಿಚಾರಗಳು ಏಕೆ ಹುಟ್ಟಿಕೊಳ್ಳುತ್ತಿವೆಯೋ ನನಗೆ ಗೊತ್ತಾಗುತ್ತಿಲ್ಲ ; ಜಗದೀಶ ಶೆಟ್ಟರ್

ಧಾರವಾಡ: ಸಿಎಂ ಬದಲಾವಣೆ ವಿಚಾರವಾಗಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಜಾಣತನದ ಉತ್ತರ ನೀಡಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಾಕಾರಣದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆಗಾಗ ಸಿಎಂ ಬದಲಾವಣೆ ವಿಚಾರಗಳು ಏಕೆ ಹುಟ್ಟಿಕೊಳ್ಳುತ್ತಿವೆಯೋ ನನಗೆ ಗೊತ್ತಾಗುತ್ತಿಲ್ಲ. ರೇಣುಕಾಚಾರ್ಯ ಅವರ ಸಹಿ ಸಂಗ್ರಹದ ವಿಚಾರ ನನಗೆ ಗೊತ್ತಿಲ್ಲ. ಈ ಎಲ್ಲ ವಿಚಾರವಾಗಿ ಯಾವ ವೇದಿಕೆಯಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ. ಇದು ವೇದಿಕೆಯಲ್ಲ ಎಂಬ ಉತ್ತರ …

Read More »

ಸಚಿವ ಪ್ರಭು ಚವ್ಹಾಣ್ ವಿರುದ್ಧ ಕಳಪೆ ಗುಣಮಟ್ಟದ ಆಹಾರ ವಿತರಣೆ ಆರೋಪ

ಬೀದರ್, ಮೇ 31: ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ವಿತರಿಸುತ್ತಿರುವ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿದೆ. ಆಹಾರವನ್ನು ಮಕ್ಕಳು ಮುಟ್ಟುತ್ತಿಲ್ಲ, ನಾವು ಸಹ ತಿನ್ನುತ್ತಿಲ್ಲ. ಅದು ತಿನ್ನುವುದಕ್ಕೆ ಬಾರದಂತಿದೆ ಎಂಬ ಔರಾದ್ ಪಟ್ಟಣದ ಅಲೆಮಾರಿ ಜನಾಂಗದ ಮಹಿಳೆಯರು ಆರೋಪಿಸಿದ್ದಾರೆ. ಔರಾದ ಪಟ್ಟಣದ ಹೊರವಲಯದಲ್ಲಿರುವ ಅಲೆಮಾರಿ ಜನಾಂಗದವರು ವಾಸಿಸುವ ಗುಡಿಸಲುಗಳಿಗೆ ಕೆಲವು ಸಂಘಟನೆಯ ಪದಾಧಿಕಾರಿಗಳು ಹೋಗಿ ತಮ್ಮ ವತಿಯಿಂದ ಉಚಿತವಾಗಿ ಆಹಾರಗಳನ್ನು ಹಂಚುವ‌ ಸಂದರ್ಭದಲ್ಲಿ …

Read More »