Breaking News

ರಾಜ್ಯ

ರಷ್ಯಾದ ಸ್ಪುಟ್ನಿಕ್ ಕೊರೋನಾ ಲಸಿಕೆ ಇನ್ನು ಮುಂದೆ ಧಾರವಾಡದಲ್ಲೇ ತಯಾರಾಗಲಿದೆ!

ಧಾರವಾಡ : ಕೊರೋನಾ ತನ್ನ ಅಟ್ಟಹಾಸ ಪ್ರದರ್ಶನ ಮಾಡುತ್ತಿರೊ ಹಿನ್ನೆಲೆ‌ ಜನರಿಗೆ ಸಂಜೀವಿನಿಯಾದದ್ದು ಕೋವಿಡ್ ಲಸಿಕೆ. ಈ ಲಸಿಕೆ ಪಡೆಯಲು ಜನರು ನಾಮುಂದು ತಾಮುಂದು ಎನ್ನುತ್ತಿದ್ದಾರೆ. ಅದರಲ್ಲಿಯೂ ರಷ್ಯಾ ಮೂಲದ ಸ್ಪುಟ್ನಿಕ್ ವ್ಯಾಕ್ಸಿನ್ ಗೆ ಎಲ್ಲಿಲ್ಲದ ಬೇಡಿಕೆ‌ ಇದೆ. ಆದ್ರೆ ಈ ಸ್ಪುಟ್ನಿಕ್ ಲಸಿಕೆ ಇನ್ನೂ ಮುಂದೆ‌ ಧಾರವಾಡದ ಕೈಗಾರಿಕೆಯೊಂದರಲ್ಲಿ ತಯಾರಾಗಲ ಸಜ್ಜಾಗಿದೆ. ಇದರಿಂದ ವಿದ್ಯಾಕಾಶಿ ಧಾರವಾಡ ಹಿರಿಮೆ ಹೆಚ್ಚುದಂತಾಗಿದೆ. ಹೌದು ಧಾರವಾಡದ ಬೇಲೂರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಶಿಲ್ಪಾ ಬಯೋಲಾಜಿಕಲ್ಸ್ …

Read More »

300 ಮಂದಿಯ ಅಂತ್ಯಕ್ರಿಯೆ ನಡೆಸಿದ್ದ ಅಧಿಕಾರಿ ಕೋವಿಡ್ ನಿಂದ ಸಾವು

ಹರಿಯಾಣ : ಹರಿಯಾಣದ ಹಿಸಾರ್‌ನಲ್ಲೊಂದು ಮನಮಿಡಿಯುವ ಘಟನೆ ನಡೆದಿದೆ. ಕಳೆದ ವರ್ಷ ಕೊರೊನಾ ಶುರುವಾದಾಗಿನಿಂದ ಇಲ್ಲಿಯವರೆಗೆ 300 ಕೊರೊನಾ ಪೀಡಿತರ ಶವದಹನಕ್ಕೆ ನೆರವಾಗಿದ್ದ, ಅಂತಿಮ ಕ್ರಿಯೆಗಳನ್ನು ವಿಧಿವತ್ತಾಗಿ ನಡೆಸಿದ್ದ ಹಿಸಾರ್‌ ನಗರಪಾಲಿಕೆ ಅಧಿಕಾರಿಯೊಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅದೂ ಸೋಂಕಿದೆ ಎಂದು ಗೊತ್ತಾಗಿ ಎರಡೇ ದಿನಗಳಲ್ಲಿ! 43 ವರ್ಷದ ಪ್ರವೀಣಕುಮಾರ್‌; ಸೋಮವಾರ ರಾತ್ರಿ ಆಮ್ಲಜನಕ ಪ್ರಮಾಣ ತೀವ್ರ ಇಳಿಕೆಯಾಗಿದ್ದರಿಂದ ಅಸು ನೀ ಗಿ ದ್ದಾ ರೆ. ಅವರನ್ನು ಕಳೆದವರ್ಷ ಶವಸಂಸ್ಕಾರ ತಂಡದ ಮುಖ್ಯಸ್ಥರನ್ನಾಗಿ ಹಿಸಾರ್‌ ನಗರಪಾಲಿಕೆ ನೇಮಿಸಿತ್ತು. …

Read More »

ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 130 ಕ್ವಿಂಟಾಲ್ ಅಕ್ಕಿ ಪೊಲೀಸರ ವಶಕ್ಕೆ

ಕಲಬುರಗಿ: ಕರ್ನಾಟಕ ಸರ್ಕಾರದಿಂದ ಪಡಿತರ ಕಾರ್ಡ್ ದಾರರಿಗೆ ಹಂಚಿಕೆ ಆಗಬೇಕಾಗಿದ್ದ ಅಕ್ಕಿ ಕಾಳಸಂತೆಯಲ್ಲಿ ಮಹಾರಾಷ್ಟ್ರದ ಪಾಲಾಗುತ್ತಿರುವಾಗ ಜಿಲ್ಲೆಯ ಅಫಜಲಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪುರದ ಗುಲಾಬಚಂದ್ ರಾಠೋಡ ಎಂಬುವವರು ಈ ಅಕ್ಕಿ ಸಾಗಿಸುತ್ತಿದ್ದರು. ಅಫಜಲಪುರ ತಾಲೂಕಿನ ಬಳ್ಳೂರ್ಗಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರ ತಪಾಸಣೆ ವೇಳೆ ಈ ಅಕ್ರಮ ಪತ್ತೆಯಾಗಿದೆ. ಅಂದಾಜು 130 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಇದರ ಒಟ್ಟು ಮೌಲ್ಯ 2, 86,600 …

Read More »

ಬ್ಲಾಕ್​ ಫಂಗಸ್​ ಸೋಂಕಿತರ ಚಿಕಿತ್ಸೆಗೆ ಔಷಧಿ ಅಭಾವವಿದೆ: ಡಿಸಿಎಂ ಲಕ್ಷ್ಮಣ ಸವದಿ

ಡಿಸಿಗಳ ಜೊತೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳಿಗೆ ಕೊರೊನಾ ನಿಯಂತ್ರಣದ ಜವಾಬ್ದಾರಿ ನೀಡಿದ್ದಾರೆ. ಪ್ರಧಾನಿ ಮೋದಿ ಸಂವಾದದ ವಿಚಾರವಾಗಿ ರಾಯಚೂರಿನಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಪರಿಸ್ಥಿತಿ ನಿಯಂತ್ರಣದ ಬಗ್ಗೆ ಪ್ರಧಾನಿ ಮೋದಿ ನೀಡಿದ ಎಲ್ಲಾ ಸೂಚನೆ ಪಾಲಿಸುತ್ತೇವೆ ಎಂದು ಹೇಳಿದ್ರು. ಕೊರೊನಾ ನಿಯಂತ್ರಣಕ್ಕಾಗಿ ರಾಯಚೂರಿನಲ್ಲಿ ಕಠಿಣ ಲಾಕ್​ಡೌನ್​ನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದೇವೆ. ಮೂರು ದಿನ ಕಠಿಣ ಲಾಕ್​ಡೌನ್​ ಹಾಗೂ ಒಂದು …

Read More »

ಬೆಳಗಾವಿಯಲ್ಲಿ 2118 ಜನರಿಗೆ ಸೋಂಕು ಪತ್ತೆಯಾಗಿದ್ದರೆ 5 ಜನರು ಸಾವಿಗೀಡಾಗಿದ್ದಾರೆ

ಬೆಂಗಳೂರು – ರಾಜ್ಯದಲ್ಲಿ ಮಂಗಳವಾರ 30 ಸಾವಿರ ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದರೆ, 58 ಸಾವಿರ ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 525 ಜನರು ಇಂದು ಒಂದೇ ದಿನ ಸಾವಿಗೀಡಾಗಿದ್ದಾರೆ. ಪಾಸಿಟಿವಿಟ್ ರೇಟ್ 32.50. ಸಾವಿನ ಪ್ರಮಾಣ 1.73. ಬೆಂಗಳೂರಿನಲ್ಲಿ ಇಂದು 8676 ಜನರಿಗೆ ಸೋಂಕು ಪತ್ತೆಯಾಗಿದ್ದರೆ 298 ಜನರು ಸಾವಿಗೀಡಾಗಿದ್ದಾರೆ. ಬೆಳಗಾವಿಯಲ್ಲಿ 2118 ಜನರಿಗೆ ಸೋಂಕು ಪತ್ತೆಯಾಗಿದ್ದರೆ 5 ಜನರು ಸಾವಿಗೀಡಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ  …

Read More »

ಗೋಕಾಕ: ನಗರದ ಉಪ್ಪಾರ ಓಣಿಯಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತಿಯನ್ನು ಶ್ರೀ ಭಗೀರಥ ಮಹಾರಾಜರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು

ಗೋಕಾಕ: ನಗರದ ಉಪ್ಪಾರ ಓಣಿಯ ಶ್ರೀ ಯಲ್ಲಮ್ಮದೇವಿ ದೇವಸ್ಥಾನದ ಆವರಣದಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತಿಯನ್ನು ಶ್ರೀ ಭಗೀರಥ ಮಹಾರಾಜರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.     ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಉಪಾಧ್ಯಕ್ಷ ಎಲ್.ಎನ್.ಬೂದಿಗೊಪ್ಪ, ಮುಖಂಡರಾದ ಮಾಯಪ್ಪ ತಹಶೀಲದಾರ, ಅಡಿವೆಪ್ಪ ಕಿತ್ತೂರ, ಸದಾಶಿವ ಗುದಗಗೋಳ, ಶಂಕರ ಧರೆನ್ನವರ, ವಿಷ್ಣು ಲಾತೂರ, ಕುಶಾಲ ಗುಡೆನ್ನವರ, ಕರೆಪ್ಪ ಬಡೆಪ್ಪಗೋಳ, ಮಾರುತಿ ಜಡೆನ್ನವರ, ಜಗದೀಶ ಶಿಂಗಳಾಪೂರ, ಪರಶುರಾಮ ಖಾನಪ್ಪನವರ, …

Read More »

ಗ್ರಾಮೀಣರಿಗೆ ಆಘಾತ ತಂದ ಕೋವಿಡ್ ಸೋಂಕು

ಗುಳೇದಗುಡ್ಡ: ತಾಲೂಕಿನಲ್ಲಿ ಕೊರೊನಾ ತೀವ್ರಗತಿಯಲ್ಲಿ ಹರಡುತ್ತಿದ್ದು, ಗುಳೇ ಹೋಗಿಬಂದವರಿಗೆ ಹಾಗೂ ಮೃತಪಟ್ಟವರ ಮನೆಗೆ ಸಾಂತ್ವನ ಹೇಳಲು ಹೋದವರಿಗೆ ಕೊರೊನಾ ವಕ್ಕರಿಸಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲೂ ಕೊರೊನಾ ವಕ್ರದೃಷ್ಟಿ ಬೀರಿದೆ. ಕಳೆದ ಎರಡು ತಿಂಗಳು ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಕೊರೊನಾ ಕೇಸ್‌ಗಳಿಲ್ಲದೇ ಸ್ವತ್ಛಂದವಾಗಿದ್ದವು. ಆದರೆ, ಏಪ್ರಿಲ್‌ ಮೊದಲ ವಾರದಿಂದ ಕೊರೊನಾದಿಂದ ಪ್ರತಿ ಗ್ರಾಮದಲ್ಲಿಯೂ ಈಗ ಕೊರೊನಾ ರೋಗಿಗಳು ಕಂಡುಬರುತ್ತಿದ್ದಾರೆ. ಗುಳೇದಗುಡ್ಡ ತಾಲೂಕಿನಲ್ಲಿ ಒಟ್ಟು 35 ಗ್ರಾಮಗಳಿದ್ದು, ಎರಡು ಪ್ರಾಥಮಿಕ ಆರೋಗ್ಯ …

Read More »

ವೈದ್ಯರನ್ನೇ ಕಂಗೆಡಿಸಿದ ಮಾರಣಾಂತಿಕ Covid 2ನೇ ಅಲೆ.ಈವರೆಗೆ ಸಾವನ್ನಪ್ಪಿರುವ ವೈದ್ಯರೆಷ್ಟು

ಕೋವಿಡ್ ಒಂದನೇ ಮತ್ತು ಎರಡನೇ ಅಲೆಗೆ ದೇಶದಲ್ಲಿನ ಜನರು ತತ್ತರಿಸಿ ಹೋಗಿದ್ದು, ಎರಡನೇ ಅಲೆಯಲ್ಲಿ ಮಧ್ಯವಯಸ್ಕರು, ಯುವಕರು ಸಾವಿಗೀಡಾಗುತ್ತಿರುವುದು ಮತ್ತಷ್ಟು ಗಾಬರಿಗೆ ಕಾರಣವಾಗಿದೆ. ಈ ಮಾರಣಾಂತಿಕ ಕೋವಿಡ್ ಸೋಂಕು ಜನಸಾಮಾನ್ಯರಷ್ಟೇ ವೈದ್ಯರನ್ನು ಕಂಗೆಡಿಸಿದೆ ಎಂಬುದಕ್ಕೆ ಈ ವರದಿ ಸಾಕ್ಷಿ. ದೆಹಲಿಯ ಗುರು ತೇಜ್ ಬಹದ್ದೂರ್ ಆಸ್ಪತ್ರೆಯ ಕಿರಿಯ ರೆಸಿಡೆಂಟ್ ಡಾಕ್ಟರ್ ಅನಾಸ್ ಮುಜಾಹಿದ್(26ವರ್ಷ) ಕೋವಿಡ್ ನಿರ್ವಹಣೆಯ ತಜ್ಞರಾಗಿದ್ದರು. ಆದರೆ ಕೋವಿಡ್ ಪಾಸಿಟಿವ್ ಬಂದ ಗಂಟೆಯೊಳಗೆ ಡಾ.ಅನಾಸ್ ಕೊನೆಯುಸಿರೆಳೆದಿದ್ದರು. ಈ ವರ್ಷದ …

Read More »

ಗವಿಮಠದ ಕೋವಿಡ್ ಆಸ್ಪತ್ರೆಯಲ್ಲಿ ಗವಿಶ್ರೀಗಳಿಂದ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ

ಕೊಪ್ಪಳ: ನಾಡಿನ ಪ್ರಸಿದ್ದ ಕೊಪ್ಪಳದ ಶ್ರೀ ಗವಿಮಠದ ಕೋವಿಡ್ ಆಸ್ಪತ್ರೆಯಲ್ಲಿ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು‌ ಸೋಂಕಿತರಿದ್ದು ಅವರ ಆರೈಕೆ ಬಗ್ಗೆ ಹೆಚ್ಚು‌ ಗಮನ ಹರಿಸಿರುವ ಶ್ರೀಗಳು, ನಿಮಗೆ ಏನೂ ಆಗಲ್ಲ. ಧೈರ್ಯವಾಗಿರಿ. ನಿಮ್ಮನ್ನು ಪ್ರತಿ ದಿನವೂ ವೈದ್ಯರು ಚಿಕಿತ್ಸೆ ನೀಡುವ ಮೂಲಕ ನಿಮ್ಮ ಆರೋಗ್ಯದ ಹೆಚ್ಚು‌ ನಿಗಾ ಇರಿಸಿದ್ದಾರೆ. ನಿಮಗೆ ಏನೇ ಸಮಸ್ಯೆಯಾದರೂ …

Read More »

ರಾಜ್ಯದಲ್ಲಿ ಲಾಕ್​ಡೌನ್​ ವಿಸ್ತರಿಸದೇ ಹೋದಲ್ಲಿ ಅನಾಹುತ ಕಾದಿದೆ: ಮಾಜಿ ಸಿಎಂ ಹೆಚ್​ಡಿಕೆ

ರಾಜ್ಯದಲ್ಲಿ ಸದ್ಯ ಲಾಕ್​ಡೌನ್​ ವಿಸ್ತರಣೆಯದ್ದೇ ಚರ್ಚೆ. ಟ್ವಿಟರ್​ನಲ್ಲಿ ಸದಾ ಲಾಕ್​ಡೌನ್​ ವಿಸ್ತರಣೆಯ ಆಗ್ರಹ ಮಾಡುತ್ತಿದ್ದ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಇದೀಗ ಮತ್ತೆ ತಮ್ಮ ಹೇಳಿಕೆಯನ್ನ ಪುನರುಚ್ಛರಿಸಿದ್ದಾರೆ. ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಲಾಕ್​ಡೌನ್​ ವಿಸ್ತರಣೆ ಮಾಡದೇ ಹೋದಲ್ಲಿ ದೊಡ್ಡ ಅನಾಹುತವೇ ಕಾದಿದೆ ಎಂದು ಹೇಳಿದ್ರು. ರಾಜ್ಯದ ಸದ್ಯದ ಪರಿಸ್ಥಿತಿಯನ್ನ ನೋಡ್ತಿದ್ರೆ ಲಾಕ್​ಡೌನ್​ ವಿಸ್ತರಣೆ ಮಾಡದೇ ಬೇರೆ ವಿಧಿ ಇಲ್ಲ ಎಂದೆನಿಸುತ್ತಿದೆ. ಹೀಗಾಗಿ ಜನರ ಜೀವದ ಜೊತೆ ಆಟವಾಡಬೇಡಿ. …

Read More »