ಬೆಂಗಳೂರು : ತಾಯಿ – ಮಗಳು ಸ್ನಾನ ಮಾಡುವಾಗ ವಿಡಿಯೋ ಚಿತ್ರೀಕರಿಸುತ್ತಿದ್ದ ಎಂಬ ಆರೋಪದ ಮೇರೆಗೆ ಆರೋಪಿಯೊಬ್ಬನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ. ಚೆನ್ನಸಂದ್ರ ನಿವಾಸಿ ಮೊಯಿನುದ್ದೀನ್ (24) ಬಂಧಿತ ಆರೋಪಿ. ಅಪ್ರಾಪ್ತ ಮಗಳೊಂದಿಗೆ ತಾಯಿ ಸ್ನಾನ ಮಾಡುತ್ತಿದ್ದಾಗ ಬಾತ್ ರೂಮ್‌ನ ಕಿಟಕಿಯಿಂದ ಆರೋಪಿ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿಯುತ್ತಿದ್ದ. ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರುದಾರರ …
Read More »ಕೆನರಾ ಬ್ಯಾಂಕ್ ಕಳ್ಳತನ ಕೇಸ್: ಕಳ್ಳತನವಾಗಿದ್ದು 58.97 ಕೆ.ಜಿ. ಚಿನ್ನಾಭರಣ ಅಲ್ಲಾ. 40.7 ಕೆ.ಜಿ.
ಕೆನರಾ ಬ್ಯಾಂಕ್ ಕಳ್ಳತನ ಕೇಸ್: ಕಳ್ಳತನವಾಗಿದ್ದು 58.97 ಕೆ.ಜಿ. ಚಿನ್ನಾಭರಣ ಅಲ್ಲಾ. 40.7 ಕೆ.ಜಿ. ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಬ್ಯಾಂಕಿನ ಹಿಂದಿನ ಹಿರಿಯ ವ್ಯವಸ್ಥಾಪಕ, ರೈಲ್ವೆ ಇಲಾಖೆ ಮೂವರು ನೌಕರರು, ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಹಾಗೂ ವಿವಿಧ ಖಾಸಗಿ ಕಂಪನಿಗಳ ನೌಕರರು, ಲಾರಿ ಚಾಲಕ, ವಾಚ್‌ಮನ್, ಎಲೆಕ್ನಿಷಿಯನ್ ಸೇರಿದಂತೆ 15 ಆರೋಪಿಗಳನ್ನು ವಿಜಯಪುರ ಜಿಲ್ಲಾ …
Read More »ಹಿರೇಕೊಡಿ ಗ್ರಾ.ಪಂ. ಸೀಜ್ ಟ್ರೇಜರಿ ಒಡೆದ ಪ್ರಕರಣ ಸದಸ್ಯೆ ಅನೀತಾ ವಿಕ್ರಮ ಬನಗೆ ನೇತೃತ್ವದಲ್ಲಿ ಪ್ರತಿಭಟನೆ
ಹಿರೇಕೊಡಿ ಗ್ರಾ.ಪಂ. ಸೀಜ್ ಟ್ರೇಜರಿ ಒಡೆದ ಪ್ರಕರಣ ಸದಸ್ಯೆ ಅನೀತಾ ವಿಕ್ರಮ ಬನಗೆ ನೇತೃತ್ವದಲ್ಲಿ ಪ್ರತಿಭಟನೆ ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮ ಪಂಚಾಯತನಲ್ಲಿ ಇತ್ತಿಚಿಗೆ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಆಗಿನ ತಾ.ಪಂನ ಕಾರ್ಯನಿರ್ವಾಹಕ ಅಧಿಕಾರಿ ಕಾದ್ರೋಳಿಯವರ ನೇತೃತ್ವದಲ್ಲಿ ದಾಖಲೆಗಳನ್ನು ಒಳಗೊಂಡ ಟೇಜರಿಯನ್ನು ಸೀಜ್ ಮಾಡಲಾಗಿತ್ತು. ಆದ್ರೆ ಇವತ್ತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಇಲ್ಲದೆ ಟೇಜರಿಯ ಸೀಜ್ ಒಡೆದಿರುವುದನ್ನು ಖಂಡಿಸಿ ಸದಸ್ಯೆ ಅನೀತಾ ವಿಕ್ರಮ ಬನಗೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. …
Read More »ಧರ್ಮ, ಜಾತಿಯ ಭೇದಗಳಿಲ್ಲದೇ ಎಲ್ಲರೂ ಸಮಾನರಾಗಿ, ಸಾಮರಸ್ಯದಿಂದ ಬಾಳಬೇಕು- ಮಹಾಪೌರ ಜ್ಯೋತಿ ಪಾಟೀಲ.
ಧರ್ಮ, ಜಾತಿಯ ಭೇದಗಳಿಲ್ಲದೇ ಎಲ್ಲರೂ ಸಮಾನರಾಗಿ, ಸಾಮರಸ್ಯದಿಂದ ಬಾಳಬೇಕು- ಮಹಾಪೌರ ಜ್ಯೋತಿ ಪಾಟೀಲ. ಸಮಾಜದಲ್ಲಿ ವಿವಿಧ ಸಮುದಾಯಗಳ ಜನರು ಇರುವದರಿಂದ ಯಾವುದೇ ರೀತಿಯ ಧರ್ಮ, ಜಾತಿ, ಮತ, ಪಂಥಗಳ ಭೇದವಿಲ್ಲದೇ ಎಲ್ಲರೂ ಸಮಾನರಾಗಿ, ಸಾಮರಸ್ಯದಿಂದ ಬಾಳಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಜ್ಯೋತಿ ವಿನಯ ಪಾಟೀಲ ಹೇಳಿದರು. ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಶಿವಶರಣ ಶ್ರೀ …
Read More »ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ರಾಮದುರ್ಗ ತಾಲ್ಲೂಕಿನ ಬಗೋಜಿಕೊಪ್ಪ ಗ್ರಾಮದ ಶ್ರೀ ಮರುತೇಶ್ವರ ದೇವಸ್ಥಾನದ ಆವರಣದಲ್ಲಿ
ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲ್ಲೂಕಿನ ಬಗೋಜಿಕೊಪ್ಪ ಗ್ರಾಮದ ಶ್ರೀ ಮರುತೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ …
Read More »ಇಪಿಎಫ್ ಅಕೌಂಟ್ಗಳಿಗೆ ವಾರ್ಷಿಕ ಬಡ್ಡಿ ಈ ವಾರವೇ ಜಮೆ? ಹಣ ಬಂದಿದೆಯಾ ಪರಿಶೀಲಿಸುವ ವಿಧಾನಗಳು
ನವದೆಹಲಿ, ಜುಲೈ 11: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್ಒ (EPFO) ಕಳೆದ ವರ್ಷದ ಬಡ್ಡಿ ಹಣವನ್ನು ಎಲ್ಲಾ ಸಕ್ರಿಯ ಅಕೌಂಟ್ಗಳಿಗೂ ಜಮೆ ಮಾಡಿದೆ. 2024-25ರ ಹಣಕಾಸು ವರ್ಷಕ್ಕೆ ಇಪಿಎಫ್ ಹಣಕ್ಕೆ ಸರ್ಕಾರ ಶೇ. 8.25ರಷ್ಟು ವಾರ್ಷಿಕ ಬಡ್ಡಿಯನ್ನು ಪ್ರಕಟಿಸಿದೆ. ಇದೇ ಮಂಗಳವಾರದಂದು ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಮಾತನಾಡಿ, ಈ ವಾರದೊಳಗೆ ಬಡ್ಡಿಹಣವನ್ನು ಎಲ್ಲಾ ಅಕೌಂಟ್ಗಳಿಗೆ ಹಾಕಲಾಗುವುದು ಎಂದು ಹೇಳಿದ್ದರು. ಅವರ ಪ್ರಕಾರ, ಬಹುತೇಕ ಎಲ್ಲಾ ಇಪಿಎಫ್ ಖಾತೆಗಳಿಗೆ ಬಡ್ಡಿ …
Read More »ಮಹಿಳೆಯರೇ ಎಚ್ಚರ: ಬಿರಿಯಾನಿ ಎಲೆ ಅಂತ ನೀಲಗಿರಿ ಎಲೆ, ಪಪ್ಪಾಯಿ ಬೀಜ ಮಿಶ್ರಿತ ಕಾಳು ಮೆಣಸು ಮಾರಾಟ!
ರಾಯಚೂರು, ಜುಲೈ 11: ರಾಯಚೂರು (Raichur) ಜಿಲ್ಲೆಯ ಮಾನ್ವಿ ಪಟ್ಟಣದ ಇಸ್ಲಾಂ ನಗರದಲ್ಲಿನ ಪಾಳು ಬಿದ್ದ ಮನೆಯೊಂದರ ಬಳಿ ಈ ಕಲಬೆರಕೆ ಮಸಾಲೆ (Masala) ಪದಾರ್ಥಗಳನ್ನು ತಯಾರಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಒಟ್ಟು 846 ಕೆಜಿ ಕಲಬೆರಿಕೆ ಮಸಾಲೆ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳು ದನಿಯಾ ಕಾಳು, ಮೆಣಸಿನ ಕಾಳು, ಬಿರಿಯಾನಿ ಎಲೆ, ಚಿಕನ್ ಮಸಾಲೆ, ಸಾಂಬರ್ ಮಸಾಲೆಯನ್ನು ಕೆಮಿಕಲ್ ಬಳಸಿ ತಯಾರು ಮಾಡುತ್ತಿದ್ದರು. …
Read More »ಮಲ್ಲೇಶ್ವರಂ ಸ್ಫೋಟ ಪ್ರಕರಣದ ಆರೋಪಿಯನ್ನ ಬಂಧಿಸಿರುವ ತಮಿಳುನಾಡು ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ; ಕಮಿಷನರ್
ಬೆಂಗಳೂರು : 2013 ರಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದ ಪ್ರಕರಣದ ಪ್ರಮುಖ ಆರೋಪಿ ಅಬೂಬಕ್ಕರ್ ಸಿದ್ದಿಕಿ (60)ಯನ್ನ ಬಂಧಿಸಿರುವ ತಮಿಳುನಾಡು ಪೊಲೀಸರನ್ನ ರಾಜ್ಯ ಭಯೋತ್ಪಾದಕ ನಿಗ್ರಹ ದಳ (ಎಟಿಸಿ) ಅಧಿಕಾರಿಗಳು ಭೇಟಿಯಾಗಿ ಮಾಹಿತಿ ಕಲೆ ಹಾಕಿದ್ದಾರೆ. ತಮಿಳುನಾಡು ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ಅವರ ವಿಚಾರಣೆಯ ಬಳಿಕ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ತಮಿಳುನಾಡು …
Read More »ವಿಟಮಿನ್ ಡ್ರಾಪ್ ಸೇವಿಸಿದ ಅಂಗನವಾಡಿಯ 13 ಮಕ್ಕಳು ಅಸ್ವಸ್ಥ
ವಿಟಮಿನ್ ಡ್ರಾಪ್ ಸೇವಿಸಿದ ಅಂಗನವಾಡಿಯ 13 ಮಕ್ಕಳು ಅಸ್ವಸ್ಥ ಶಿವಮೊಗ್ಗ: ಅಂಗನವಾಡಿಯಲ್ಲಿ ಮಕ್ಕಳ ಬೆಳವಣಿಗೆಗೆ ಎಂದು ನೀಡಿದ್ದ ವಿಟಮಿನ್ ಡ್ರಾಪ್ ಸೇವಿಸಿದ 13 ಮಕ್ಕಳು ಅಸ್ವಸ್ಥರಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಹಿರೇಸಾನಿ ಗ್ರಾಮದ ಅಂಗನವಾಡಿ ಮಕ್ಕಳಿಗೆ ಗುರುವಾರ ವಿಟಮಿನ್ ಡ್ರಾಪ್ ಅನ್ನು ನೀಡಲಾಗಿದೆ. ಈ ಡ್ರಾಪ್ ಸೇವಿಸಿದ ಮಕ್ಕಳು ಮನೆಗೆ ತೆರಳಿದ ಬಳಿಕ ವಾಂತಿ ಮತ್ತು ಹೊಟ್ಟೆ …
Read More »ಆಧುನಿಕತೆಯ ಭರಾಟೆಯಲ್ಲಿ ಕಣ್ಮರೆಯತ್ತ ಸಾಗಿದೆ ಹಗಲುವೇಷ ಕಲೆ
ಹಾವೇರಿ: ಜಾನಪದ ಸೊಗಡಿನ ಕಲೆಗಳಲ್ಲಿ ಒಂದಾದ ಹಗಲುವೇಷವನ್ನು ಅಲೆಮಾರಿ ಬುಡುಗ ಜಂಗಮ ಸಮುದಾಯದವರು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. ತಲೆತಲಾಂತರದಿಂದ ಈ ಸಮುದಾಯ ಹಗಲುವೇಷ ಹಾಕಿಕೊಂಡು ಕಲೆ ಪ್ರದರ್ಶನ ಮಾಡುತ್ತದೆ. ಐದು ಜನರ ತಂಡ ಹಾರ್ಮೋನಿಯಂ, ತಬಲಾ ಮತ್ತು ಗಾಯಕನೊಂದಿಗೆ ರಾಮಾಯಣ ಮತ್ತು ಮಹಾಭಾರತ ಸೇರಿದಂತೆ ಪೌರಾಣಿಕ ಪಾತ್ರಗಳನ್ನು ಹಾಕಿಕೊಂಡು ಮನೆ ಮನೆಗೆ ತೆರಳುತ್ತದೆ. ಸುಮಾರು ಮೂರು ದಿನಗಳ ಕಾಲ ವಿವಿಧ ಪಾತ್ರಗಳನ್ನು ಧರಿಸಿ ಜನರನ್ನು ರಂಜಿಸುವ ತಂಡ ಮೂರನೆಯ ದಿನ ಜನರು …
Read More »
Laxmi News 24×7