Breaking News

ರಾಜ್ಯ

ಗಗನಯಾತ್ರಿ ಶುಭಾಂಶು ಶುಕ್ಲಾ ಈ ದಿನ ಭೂಮಿಗೆ ವಾಪಸ್

ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಹಾಗೂ ಆಕ್ಸಿಯಮ್ 4 ನ ನಾಲ್ವರೂ ಗಗನಯಾತ್ರಿಗಳು ಭೂಮಿಗೆ ಹಿಂದಿರುಗಲು ದಿನಾಂಕ ನಿಗದಿಯಾಗಿದೆ ಎಂದು ವರದಿಗಳು ಆಗಿವೆ. ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ ನಿಂದ ಜು. 14 ಕ್ಕೆ ನಾಲ್ವರೂ ಭೂಮಿಗೆ ಬಂದು ಇಳಿಯಲಿದ್ದಾರೆಂದು ಆಕ್ಸಿಯಮ್ ಸ್ಪೇಸ್ ಮಾಹಿತಿ ನೀಡಿದೆ. ಈ ಕುರಿತು ಆಕ್ಸಿಯಮ್ ತನ್ನ ಅಧಿಕೃತ ಎಕ್ಸ್ ಖಾತೆಯಿ ಮೂಲಕ ಸಂದೇಶ ಹಂಚಿಕೊಂಡಿದೆ,ಇದಕ್ಕೂ ಮುನ್ನ ಜು. 10 ರಂದು ಹಿಂದಿರುಗುವ ನಿರೀಕ್ಷೆಯಿತ್ತು. ಆದರೆ ಬಳಿಕ …

Read More »

ರಾಜ್ಯದಲ್ಲಿ ಯೋಧರೊಬ್ಬರು ಹೃದಯಾಘಾತದಿಂದ ಸಾವು

ರಾಜ್ಯದಲ್ಲಿ ಹೃದಯಾಘಾತದಿಂದ ಸಾವಿನ ಸರಣಿ ಮುಂದುವರೆದಿದೆ. ರಸ್ತೆ ಬಳಿ ನಡೆದು ಹೋಗುತ್ತಿದ್ದ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇಬ್ರಾಹಿಂ ದೇವಲಾಪುರ (37) ಮೃತ ಯೋಧ. ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಅನಗೋಳ ಬಜಾರ್ ನಲ್ಲಿ ಇದ್ದಕ್ಕಿದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಹೃದಯಾಘಾತದಿಂದ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಣ್ಣ ವಯಸ್ಸಿನವರೂ ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಗಿದೆ.

Read More »

ನರ್ಸಿಂಗ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ವಿದ್ಯಾರ್ಥಿಗಳ ಭವಿಷ್ಯ ಹಾಗೂ ಪೋಷಕರ ಮೇಲಿನ ಹೊರೆಯನ್ನು ತಪ್ಪಿಸುವ ಸಲುವಾಗಿ ನರ್ಸಿಂಗ್‌ ಕೋರ್ಸ್‌ ಶುಲ್ಕವನ್ನು ಈ ವರ್ಷ ಹೆಚ್ಚಿಸುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.   ಬೆಂಗಳೂರಿನ ವಿಕಾಸಸೌಧದಲ್ಲಿ ಗುರುವಾರ ನಡೆದ ನರ್ಸಿಂಗ್ ಕಾಲೇಜುಗಳ ಸಂಘದೊಂದಿಗಿನ ಸಭೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ ಸಚಿವರು, ಆರ್ಥಿಕವಾಗಿ ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ನಮ್ಮ ಸರ್ಕಾರ ಕ್ರಮ …

Read More »

ಇನ್ಮುಂದೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಬಸ್

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಮತ್ತೊಂದು ಯೋಜನೆ ಘೋಷಣೆ ಮಾಡಿದೆ. ಇನ್ಮುಂದೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಸರ್ಕಾರಿ ಶಾಲಾ ಮಕ್ಕಳ ಭವಿಷ್ಯ ಉಜ್ವಲಕ್ಕೆ ಸರ್ಕಾರ ಬದ್ಧವಾಗಿದೆ. ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್ ಕೆಜಿಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ. ಈ ಮೂಲಕ …

Read More »

ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದಿನ ಚುನಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು: ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದಿನ ಚುನಾವಣೆ ‌ನಡೆಯುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಈ ಕುರಿತು ನಗರದಲ್ಲಿಂದು ಮಾತನಾಡಿದ ಅವರು, ಎಲ್ಲವೂ ನಿನ್ನೆಗೆ ಮುಗಿದು‌ ಹೋಯ್ತಲ್ಲ?. ಸುಪ್ರೀಂ ಕೋರ್ಟ್​ನಿಂದಲೇ ಜಡ್ಜ್ ಮೆಂಟ್ ಬಂದಿದೆ. ಇನ್ನು ಅದರ ಬಗ್ಗೆ ಮಾತನಾಡೋದೇನಿದೆ?. ಕ್ಲಿಯರ್ ಆಗಿದೆ. 2028ರವರೆಗೆ ನಾನೇ ಸಿಎಂ ಅಂದಿದ್ದಾರೆ. 2028ರ ನಂತರವೂ ಅವರೇ ಲೀಡ್ ಮಾಡ್ತಾರೆ. ಅವರೇ ಸಿಎಂ ಆಗ್ತಾರೆ ಅಂತ ಹೇಳಲ್ಲ. ಸಿದ್ದರಾಮಯ್ಯ ರಾಜಕೀಯದಲ್ಲಿ ಇರುತ್ತಾರೆ. ಅವರ ನೇತೃತ್ವದಲ್ಲೇ ಚುನಾವಣೆ …

Read More »

ಶ್ರೀ ಅಂಜನಾ ಮಹಿಳಾ ಮಂಡಳದಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ , ಬ್ಯಾಗ್‌ ಪುಸ್ತಕ ವಿತರಣೆ

ಶ್ರೀ ಅಂಜನಾ ಮಹಿಳಾ ಮಂಡಳದಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ , ಬ್ಯಾಗ್‌ ಪುಸ್ತಕ ವಿತರಣೆ ಬೆಳಗಾವಿ: ಇಲ್ಲಿನ ಆಂಜನೇಯ ನಗರದಲ್ಲಿ ಶ್ರೀ ಅಂಜನಾ ಮಹಿಳಾ ಮಂಡಳ ವತಿಯಿಂದ “ಗುರುಪೌರ್ಣಿಮಾ ” ನಿಮಿತ್ಯ ಗುರುವಂದನಾ ಹಾಗೂ ಸ.ಕ.ಹಿ. ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ , ಬ್ಯಾಗ್‌ ಹಾಗೂ ಪೆನ್ನು, ಪೇನ್ಸಿಲ್‌ ವಿತರಿಸಲಾಯಿತು. ಬಳಿಕ, ಶ್ರೀ ಅಂಜನಾ ಮಹಿಳಾ ಮಂಡಳದಿಂದ ಸಸಿ ನೇಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ …

Read More »

ಸಾಲ ಪಡೆದಿದ್ದು ಅಣ್ಣ ಚಾಕು ಇರಿಸಿಕೊಂಡಿರೋದು ತಮ್ಮಾ… ಹಾಡಹಗಲೆರ ಚಾಕು ಇರಿತದಿಂದ ಬೆಚ್ಚಿಬಿದ್ದ ಸ್ಥಳೀಯರು

ಸಾಲ ಪಡೆದಿದ್ದು ಅಣ್ಣ ಚಾಕು ಇರಿಸಿಕೊಂಡಿರೋದು ತಮ್ಮಾ… ಹಾಡಹಗಲೆರ ಚಾಕು ಇರಿತದಿಂದ ಬೆಚ್ಚಿಬಿದ್ದ ಸ್ಥಳೀಯರು ಕೊಟ್ಟ ಸಾಲದ ಹಣ ಕೇಳಲು ಹೋಗಿ ಸಾಲ ಪಡೆದಕೊಂಡವಮ್ನು ಸಿಗದಿದ್ದ ಸಮಯದಲ್ಲಿ ಹಣ ಪಡೆದ ತಮ್ಮಣೊಂದಿಗೆ ಕಿರಿಕಾಗಿ ಆತನಿಗೆ ಸಾಲ ನೀಡಿದ ಯುವಕ ಚಾಕು ಇರಿದು ಪರಾರಿಯಾದ ಘಟನೆ ಧಾರವಾಡದಲ್ಲಿಂದು ಹಾಡಹಲೇ ನಡೆದಿದ್ದು, ಚಾಕು ಇರಿತದಿಂದ ಸ್ಥಳೀಯರು ಬೆಚ್ಚಿಬಿದಿದ್ದಾರೆ. ಧಾರವಾಡ ನಗರದ ಕಂಠಿಗಲ್ಲಿಯಲ್ಲಿ ಈ ದುರ್ಘಟನೆ ನಡೆದಿದೆ. ಕಂಠಿಗಲ್ಲಿಯ ನಿವಾಸಿ ರಾಘವೇಂದ್ರ ಗಾಯಕವಾಡ (25) …

Read More »

ಕೆನರಾ ಬ್ಯಾಂಕ್ ಕಳ್ಳತನ: ಮತ್ತೆ 12 ಜನರನ್ನು ಬಂಧಿಸಿ 39 ಕೆಜಿ ಬಂಗಾರ ಹಾಗೂ 1.16 ಕೋಟಿ ನಗದು ವಶಕ್ಕೆ

ಕೆನರಾ ಬ್ಯಾಂಕ್ ಕಳ್ಳತನ: ಮತ್ತೆ 12 ಜನರನ್ನು ಬಂಧಿಸಿ 39 ಕೆಜಿ ಬಂಗಾರ ಹಾಗೂ 1.16 ಕೋಟಿ ನಗದು ವಶಕ್ಕೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಕೆನರಾ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಮತ್ತೇ 12 ಜನರು ಬಂಧಿಸಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಚೇತನಕುಮಾರ ರಾಥೋಡ ತಿಳಿಸಿದರು. ವಿಜಯಪುರ ನಗರದಲ್ಲಿ ಸುದ್ದಿಗೋಷ್ಢಿಯಲ್ಲಿ ಮಾತನಾಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಜನರನ್ನು ಬಂಧಿಸಿ 10.75 ಕೋಟಿ …

Read More »

ಗೋವಾ ಅಪಘಾತದಲ್ಲಿ ಖಾನಾಪೂರದ ಯುವಕ ಸಾವು

ಗೋವಾ ಅಪಘಾತದಲ್ಲಿ ಖಾನಾಪೂರದ ಯುವಕ ಸಾವು ಗೋವಾದ ಫೋಂಡಾದಲ್ಲಿ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಜನರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಮೃತರಲ್ಲಿ ಓರ್ವ ಯುವಕ ಖಾನಾಪೂರ ತಾಲೂಕಿನವನಾಗಿದ್ದಾನೆ. ಗುರುವಾರ ಮಧ್ಯಾನ್ಹ ಫೋಂಡಾ ಬೆತೋಡಾ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಖಾನಾಪೂರ ತಾಲೂಕಿನ ಯುವಕ ಆದಿತ್ಯ ದೇಸಾಯಿ (22) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜೊತೆಗಿದ್ದ ಯುವಕ ಯೋಗೇಶ್ ಪಾಟೀಲ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ …

Read More »

ಜ್ಞಾನದ ಬೆಳಕನ್ನು ನೀಡುವವನೆ ಗುರು: ಅಥಣಿ ಪ್ರಭು ಚನ್ನಬಸವ ಮಹಾಸ್ವಾಮಿ

ಜ್ಞಾನದ ಬೆಳಕನ್ನು ನೀಡುವವನೆ ಗುರು: ಅಥಣಿ ಪ್ರಭು ಚನ್ನಬಸವ ಮಹಾಸ್ವಾಮಿ ಜೀವನದ ಪ್ರತಿ ಹೆಜ್ಜೆ ಹೆಜ್ಜೆಗೂ ನಮ್ಮನ್ನು ತೀಡುತ್ತ, ಮನದ ಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕನ್ನು ನೀಡುವವನೆ ನಿಜವಾದ ಗುರು ಎಂದು ಧಾರವಾಡ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ಗುರುವಾರ ಇಲ್ಲಿನ ಶಿವಬಸವ ನಗರದ ಪ್ರಭುದೇವ ಸಭಾಗ್ರಹದಲ್ಲಿ ನಾಗನೂರು ರುದ್ರಾಕ್ಷಿ ಮಠ ಹಾಗೂ ಪ್ರಭುದೇವ ಪ್ರತಿಷ್ಠಾನ ಮಾತೃ ಮಂಡಳಿಯ ಸಹಯೋಗದಲ್ಲಿ ಗುರುಪೂರ್ಣಿಮೆಯ ನಿಮಿತ್ತ ಜರುಗಿದ ಗುರುವಂದನೆ …

Read More »