Breaking News

ರಾಜ್ಯ

ಚಿಕ್ಕೋಡಿಯಲ್ಲಿ ಅರ್ಥಪೂರ್ಣವಾಗಿ ಜರುಗಿದ ಜಿಲ್ಲಾ ‌ಮಟ್ಟದ ಶಿಕ್ಷಕರ ದಿನಾಚರಣೆ

ಚಿಕ್ಕೋಡಿಯಲ್ಲಿ ಅರ್ಥಪೂರ್ಣವಾಗಿ ಜರುಗಿದ ಜಿಲ್ಲಾ ‌ಮಟ್ಟದ ಶಿಕ್ಷಕರ ದಿನಾಚರಣೆ ಚಿಕ್ಕೋಡಿ-“ಗ್ರಾಮೀಣ ಪ್ರದೇಶದಲ್ಲಿಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ತಾಲ್ಲೂಕಿನ ವಾಳಕಿ, ಖಡಕಲಾಟ, ಜನವಾಡ, ಹಿರೇಕೋಡಿ ಹಾಗೂ ಕಮತೇನಹಟ್ಟಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಲಾಗಿದ್ದು, ಪ್ರತಿ ಶಾಲೆಯಲ್ಲಿ 2 ಕೊಠಡಿ ನಿರ್ಮಾಣಕ್ಕೆ ತಲಾ 25 ಲಕ್ಷ ಅನುದಾನ ಮಂಜೂರಾಗಿದೆ” ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು. ಪಟ್ಟಣದ ಪರಟಿ ನಾಗಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಹಾಗೂ …

Read More »

ಶಿಕ್ಷಕರ ವೃತ್ತಿ, ಕೇವಲ ಉದ್ಯೋಗವಲ್ಲ; ಅದು ಪವಿತ್ರ ಧರ್ಮ

ಶಿಕ್ಷಕರ ವೃತ್ತಿ, ಕೇವಲ ಉದ್ಯೋಗವಲ್ಲ; ಅದು ಪವಿತ್ರ ಧರ್ಮ, ಸಮಾಜದ ಭವಿಷ್ಯ ಕಟ್ಟುವ ಮಹಾಯಜ್ಞ. ಒಬ್ಬ ವೈದ್ಯನು ರೋಗಿಯನ್ನು ಚಿಕಿತ್ಸೆ ಕೊಡುತ್ತಾನೆ, ವಕೀಲನು ನ್ಯಾಯ ಕೊಡಿಸುತ್ತಾನೆ, ಆದರೆ ಒಬ್ಬ ಶಿಕ್ಷಕನು ಒಳ್ಳೆಯ ವೈದ್ಯ, ಒಳ್ಳೆಯ ವಕೀಲ, ಒಳ್ಳೆಯ ನಾಯಕ, ಒಳ್ಳೆಯ ನಾಗರಿಕನನ್ನು ತಯಾರು ಮಾಡುತ್ತಾನೆ. ಶಿಕ್ಷಕರು ಜ್ಞಾನವನ್ನಷ್ಟೇ ಅಲ್ಲ, ಮೌಲ್ಯಗಳು, ಶಿಸ್ತು, ಮಾನವೀಯತೆ, ಹಾಗೂ ಜೀವನದ ನೈಜ ಅರ್ಥವನ್ನು ಬೋಧಿಸುತ್ತಾರೆ ಎಂದು ಯಡೂರಿನ ಶ್ರೀ ಸಿದ್ದಲಿಂಗಶಿವಾಚಾರ್ಯ ವೇದಗಮ ಸಂಸ್ಕೃತಿ ಶಾಲೆಯ …

Read More »

ಬೆಳಗಾವಿಯ ರಾಜಾ…ಚವ್ಹಾಟಗಲ್ಲಿಯ ಗಣೇಶನ ದರ್ಶನ ಪಡೆದ ಹೆಸ್ಕಾಂ ಅಧಿಕಾರಿಗಳು

ಬೆಳಗಾವಿಯ ರಾಜಾ…ಚವ್ಹಾಟಗಲ್ಲಿಯ ಗಣೇಶನ ದರ್ಶನ ಪಡೆದ ಹೆಸ್ಕಾಂ ಅಧಿಕಾರಿಗಳು ಬೆಳಗಾವಿಯ ರಾಜಾ…ಚವ್ಹಾಟಗಲ್ಲಿಯ ಗಣೇಶ ದರ್ಶನ ಪಡೆದ ಹೆಸ್ಕಾಂ ಅಧಿಕಾರಿಗಳು ಗಣೇಶೋತ್ಸವ ಯಶಸ್ವಿಗೆ ಸಹಕಾರ ಮಂಡಳಿದ ವತಿಯಿಂದ ಅಧಿಕಾರಿಗಳ ಸನ್ಮಾನ ಹೆಸ್ಕಾಂ ಅಧಿಕಾರಿಗಳು ಇಂದು ಬೆಳಗಾವಿಯ ರಾಜಾ ಚವ್ಹಾಟ ಗಲ್ಲಿಯ ಶ್ರೀ ಗಣೇಶನ ದರ್ಶನ ಪಡೆದುಕೊಂಡರು. ಬೆಳಗಾವಿಯ ರಾಜಾ ಚವ್ಹಾಟಗಲ್ಲಿ ಗಣಪತಿಯ ದರ್ಶನವನ್ನು ಇಂದು ಹೆಸ್ಕಾಂ ಎಇಇ ಅಶ್ವೀನ್ ಶಿಂಧೆ, ಮನೋಹರ್ ಸುತಾರ್ ಮತ್ತು ಭಜಂತ್ರಿ ಅವರು ಭೇಟಿ ನೀಡಿ ಗಣೇಶನ …

Read More »

ಬೆಳಗಾವಿ ಉಪನ್ಯಾಸಕಿ ಜ್ಯೋತಿಗೆ ಒಲಿದು ಬಂದ ರಾಜ್ಯಮಟ್ಟದ ಅತ್ಯುತ್ತಮ ಉಪನ್ಯಾಸಕಿ ಪ್ರಶಸ್ತಿ 

ಬೆಳಗಾವಿ: ಬೆಳಗಾವಿಯ ಶಹಾಪುರದ ಚಿಂತಾಮಣರಾವ್ ಪದವಿಪೂರ್ವ ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕಿ ಜ್ಯೋತಿ ಸಿ.ಎಂ. ಅವರಿಗೆ ಇಂದು ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಉತ್ತಮ ಉಪನ್ಯಾಸಕಿ ಪ್ರಶಸ್ತಿ ಪ್ರದಾನ ಮಾಡಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ನಿಮಿತ್ತ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳು …

Read More »

ಇವಿಎಂ ಬಗ್ಗೆ ನಿಮಗೆ ಸಂಶಯ ಇದ್ದಲ್ಲಿ ಅಸೆಂಬ್ಲಿ ವಿಸರ್ಜಿಸಿ ಚುನಾವಣೆ ಎದುರಿಸಿ: ಮಾಜಿ ಸಚಿವ ಎಸ್. ಸುರೇಶ್

ಬೆಂಗಳೂರು: 2023 ಮೇ ತಿಂಗಳಿನಲ್ಲಿ ಇವಿಎಂ ಮೂಲಕ ಚುನಾಯಿತವಾದ ಕಾಂಗ್ರೆಸ್​​ನ ಈ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇವಿಎಂ ಬಗ್ಗೆ ನಿಮಗೆ ಸಂಶಯ ಇದ್ದಲ್ಲಿ ನೀವು ಅಸೆಂಬ್ಲಿ ವಿಸರ್ಜಿಸಿ ಚುನಾವಣೆಗೆ ಹೋಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ಅವರು ಸವಾಲು ಹಾಕಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಗೆದ್ದಾಗಲೆಲ್ಲ ಚೆನ್ನಾಗಿದೆ. ಗೆಲ್ಲದೇ ಇದ್ದಾಗ ಇವಿಎಂ ಎಂಬ ಧೋರಣೆಯು ಅತ್ಯಂತ ಹಳೆಯ …

Read More »

ನಾಳೆ ಹಿಂದೂ ಮಹಾ ಮಂಡಳ ಗಣಪತಿ ಮೆರವಣಿಗೆ: ಶಿವಮೊಗ್ಗ ನಗರ ಕೇಸರಿಮಯ

ಶಿವಮೊಗ್ಗ : ರಾಜ್ಯದಲ್ಲಿಯೇ ಹೆಸರುವಾಸಿಯಾಗಿರುವ ಶಿವಮೊಗ್ಗದ ಹಿಂದೂ ಮಹಾಮಂಡಲದ ಗಣಪತಿಯ ರಾಜಬೀದಿ ಉತ್ಸವ ನಾಳೆ ನಡೆಯಲಿದೆ. ಗಣೇಶ ಚತುರ್ಥಿ ನಂತರ 11 ದಿನಕ್ಕೆ ಬರುವ ಅನಂತ ಚತುರ್ಥಿಯಂದು ಗಣೇಶನ ರಾಜಬೀದಿ ಉತ್ಸವ ನಡೆಯುವುದು ವಾಡಿಕೆ. ಇದರಿಂದಾಗಿ ನಾಳೆಯ ರಾಜಬೀದಿ ಉತ್ಸವಕ್ಕೆ ಹಿಂದೂ ಕೇಸರಿ ಅಲಂಕಾರ ಸಮಿತಿಯವರು ಶಿವಮೊಗ್ಗ ನಗರವನ್ನು ಸಂಪೂರ್ಣ ಕೇಸರಿಮಯ ಮಾಡಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯು 1 ಸಾವಿರ ಸಿಬ್ಬಂದಿಯನ್ನ ನಿಯೋಜಿಸಿದೆ. ಸಮುದ್ರ ಮಂಥನದ ಅಲಂಕಾರ : ಹಿಂದೂ ಕೇಸರಿ ಅಲಂಕಾರ …

Read More »

ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸಂಬಂಧ ಸಿಎಂ ಕಾರಿನ ಮೇಲೆ ದಾಖಲಾದ ಪ್ರಕರಣ ಸಂಬಂಧ ದಂಡ ಪಾವತಿ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಶೇ.50 ರಷ್ಟು ದಂಡ ಪಾವತಿಗೆ ಸರ್ಕಾರ ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಸವಾರರು ದಂಡ ಕಟ್ಟುವಲ್ಲಿ ನಿರತರಾಗಿದ್ದಾರೆ. ಇದುವರೆಗೂ 40 ಕೋಟಿಗಿಂತ ಹೆಚ್ಚು ದಂಡ ಪಾವತಿಸಿದ್ದಾರೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕಾರಿನ ಮೇಲಿನ ಪ್ರಕರಣಗಳ ಸಂಬಂಧ ಕೂಡ ದಂಡ ಪಾವತಿಯಾಗಿದೆ. ಸಿಎಂ ಕಾರಿನ ಮೇಲೆ 7 ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುವ ಇನೋವಾ-ಕ್ರಿಸ್ಟಾ ಕಾರು 2024ರಿಂದ ಈವರೆಗೂ ಏಳು ಸಂಚಾರ ನಿಯಮಗಳ ಉಲ್ಲಂಘಿಸಿವೆ. …

Read More »

*ನಾಳೆ ವಿಜಯಪುರ ಜಿಲ್ಲೆಗೆ ನಾಡದೊರೆ: ಹಲವು ಸಮಸ್ಯೆಗಳಿಗೆ ನೀಡುವವರೇ ಪರಿಹಾರ?*

 ಉತ್ತರ ಕರ್ನಾಟಕದ ಜೀವನದಿ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದ್ದು, ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಾಳೆ ಬಾಗಿನ ಅರ್ಪಿಸಲಿದ್ದಾರೆ. ಈ ಮಧ್ಯೆ, ಹಲವಾರು ಸಂಘಟನೆಗಳು ವಿವಿಧ ವಿಷಯಗಳ ಕುರಿತು ಮನವಿ ಸಲ್ಲಿಸಲು ಸಿಎಂ ಅವರನ್ನು ಭೇಟಿ ಮಾಡಲು ಸಿದ್ಧತೆ ನಡೆಸುತ್ತಿವೆ. ಈ ಕುರಿತುವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಆಲಮಟ್ಟಿ ಜಲಾಶಯದ ಒಳಹರಿವು ಸ್ಥಿರವಾಗಿ ಮುಂದುವರೆದಿದೆ. ಇದರಿಂದಾಗಿ ಆಲಮಟ್ಟಿ ಜಲಾಶಯ ಭರ್ತಿಯಾಗಿದೆ. …

Read More »

ತಾಯಿ ಪಿಂಚಣಿ ಹಣಕ್ಕಾಗಿ ಸಹೋದರರ ಜಗಳ; ಅಣ್ಣನ ಕೊಲೆಯಲ್ಲಿ ಅಂತ್ಯ

ಚಿಕ್ಕಬಳ್ಳಾಪುರ: ವೃದ್ಧ ತಾಯಿಗೆ ಬರುತ್ತಿದ್ದ ಪಿಂಚಣಿ ಹಣ ಹಂಚಿಕೆ ವಿಚಾರಕ್ಕೆ ಮೂವರು ಸಹೋದರರ ನಡುವೆ ಜಗಳವಾಗಿದ್ದು, ವಿಕೋಪಕ್ಕೆ ತಿರುಗಿ ಅಣ್ಣನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ. ನರಸಿಂಹಮೂರ್ತಿ (45) ಕೊಲೆಯಾದ ಸಹೋದರ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮೇಳ್ಯ ಗ್ರಾಮದಲ್ಲಿ ಘಟನೆ ನಡೆದಿದ್ದು, ಕೊಲೆ ಆರೋಪಿಗಳಾದ ರಾಮಾಂಜಿ (39) ಮತ್ತು ಗಂಗಾಧರಪ್ಪ (39) ಎಂಬವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಗೌರಿಬಿದನೂರು ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆಯಾದ …

Read More »

ಮಳೆ ಅಬ್ಬರಕ್ಕೆ ನಲುಗಿದ ಅನ್ನದಾತ

ಹಾವೇರಿ: ಭಾರಿ ಮಳೆಯಿಂದ ಜಿಲ್ಲೆಯ ಹಲವೆಡೆ ಬೆಳೆಗಳೆಲ್ಲ ರೋಗಕ್ಕೆ ತುತ್ತಾಗಿದ್ದು, ಬೇಸತ್ತ ರೈತನೋರ್ವ ಹತ್ತಿ ಬೆಳೆಯನ್ನು ಟ್ರ್ಯಾಕ್ಟರ್ ರೂಟರ್​​​ ಹೊಡೆದು ನಾಶ ಮಾಡಿದ್ದಾರೆ. ಈ ವರುಷ ಉತ್ತಮ ಮುಂಗಾರು ಪೂರ್ವ ಮಳೆ ಆಗಿರುವ ಹಿನ್ನೆಲೆಯಲ್ಲಿ, ರೈತರು ಹೆಚ್ಚಿನ ಬೆಳೆ ಬಿತ್ತನೆ ಮಾಡಿದ್ದರು. ಆದರೆ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಬೆಳೆಗಳು ನಾಶವಾಗಿವೆ. ಗೋವಿನಜೋಳ, ಹತ್ತಿ, ಸೋಯಾಬಿನ್​, ಶೇಂಗಾ ಬೆಳೆಗಳಿಗೆ ಹಲವು ರೋಗಗಳು ಕಾಣಿಸಿಕೊಂಡಿವೆ. ಕೆಂಪುರೋಗ, ಬೂದಿರೋಗ ಸೇರಿದಂತೆ ಹಲವು ರೋಗಗಳಿಂದ ಬೆಳೆಗಳು …

Read More »