ಬೆಂಗಳೂರು : ರಾಜ್ಯ ಸರ್ಕಾರಿ ಪ್ರಥಮ ದರ್ಜೆ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳು ಮತ್ತು ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದಲ್ಲಿ(ಯುವಿಸಿಇ) ಖಾಲಿ ಇರುವ ಒಟ್ಟು 2000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಪ್ರಥಮ ದರ್ಜೆ ಕಾಲೇಜುಗಳಲ್ಲಿನ 825 ಸಹಾಯಕ ಪ್ರಾಧ್ಯಾಪಕ ಹುದ್ದೆ, ಪಾಲಿಟೆಕ್ನಿಕ್‌ಗಳಲ್ಲಿನ 941 ಉಪನ್ಯಾಸಕರ ಹುದ್ದೆ, ಎಂಜಿನಿಯರಿಂಗ್ ಕಾಲೇಜುಗಳಿಗೆ 186 ಸಹಾಯಕ ಪ್ರಾಧ್ಯಾಪಕ ಹುದ್ದೆ ಮತ್ತು ಯುವಿಸಿಇಯ 47 ಬೋಧಕ ಹುದ್ದೆಗಳು ಸೇರಿ ಪ್ರಸಕ್ತ ಸಾಲನ ಬಜೆಟ್‌ನಲ್ಲಿ ಘೋಷಿಸಿರುವಂತೆ …
Read More »ಸಮುದಾಯದ ಹಿತಕ್ಕಾಗಿ ಲಿಂಗಾಯತ ಕಾಂಗ್ರೆಸ್ ಪಕ್ಷದ ಶಾಸಕರ ಸಭೆ: ಎಂ.ಬಿ.ಪಾಟೀಲ್
ಬೆಂಗಳೂರು: ಸಮುದಾಯದ ಹಿತಾಸಕ್ತಿ ರಕ್ಷಣೆಗಾಗಿ ಸೋಮವಾರ ರಾತ್ರಿ ಕಾಂಗ್ರೆಸ್ ಪಕ್ಷದ ಲಿಂಗಾಯತ ಶಾಸಕರ ಸಭೆ ನಡೆದಿರುವುದು ನಿಜ. ಇದರಲ್ಲಿ ನಾಯಕತ್ವದ ವಿಚಾರವಾಗಲಿ, ವೈಯಕ್ತಿಕ ಅಜೆಂಡಾಗಳಾಗಲಿ ಇರಲಿಲ್ಲ. ಎಲ್ಲಾ ಸಮುದಾಯಗಳ ಶಾಸಕರೂ ಹೀಗೆ ಆಗಿಂದಾಗ್ಗೆ ಸಭೆ ಸೇರುವುದು ಸರ್ವೇ ಸಾಮಾನ್ಯ ಎಂದು ಲಿಂಗಾಯತ ಸಮುದಾಯದ ಮುಖಂಡರೂ ಆಗಿರುವ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಬುಧವಾರ ವಿಧಾನಸೌಧದ ಆವರಣದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ. …
Read More »ಕೋಲಾರದಲ್ಲಿ 20 ಸಾವಿರ ಹೆಲ್ಮೆಟ್ ಉಚಿತ ವಿತರಣೆ; ಮುಗಿಬಿದ್ದ ಬೈಕ್ ಸವಾರರು
ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಮೈದಾನ ಜಾತ್ರೆಯಂತಾಗಿತ್ತು. ಡಿಸೆಂಬರ್ 1 ರಿಂದ ಜಿಲ್ಲೆಯಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ರೂಲ್ಸ್ ಜಾರಿಮಾಡಲಾಗಿದೆ. ಹೀಗಾಗಿ ಮುಳಬಾಗಿಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಆದಿನಾರಾಯಣ ನೇತೃತ್ವದಲ್ಲಿ ಬುಧವಾರ 25 ಸಾವಿರ ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೀವಸಂಜೀವಿನಿ ಕಾರ್ಯಕ್ರಮಕ್ಕೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಚಾಲನೆ ನೀಡಿದರು. ಬೈಕ್ಗಳಲ್ಲಿ ಬಂದಿದ್ದ ಸವಾರರಿಗೆ ಹೆಲ್ಮೆಟ್ ವಿತರಿಸಲು 16 ಕೌಂಟರ್ ಓಪನ್ …
Read More »ಫೆ.9ರಿಂದ ಮೆಟ್ರೋ ದರ ಏರಿಕೆಗೆ ಸರ್ಕಾರ ಒಪ್ಪಿಗೆ?
ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಮತ್ತೊಮ್ಮೆ ಶಾಕ್ ಎದುರಾಗಿದೆ. ಫೆಬ್ರವರಿ 9ರಿಂದ ಮತ್ತೆ ಮೆಟ್ರೋ ದರ ಏರಿಕೆಯಾಗುವ ಸಾಧ್ಯತೆ ಇದೆ. ಮೆಟ್ರೋ ದರ ಏರಿಕೆಗೆ ಸರ್ಕಾರ ಅನುಮೋದನೆ ನೀಡಿದೆ ಎನ್ನಲಾಗಿದೆ. ಬಿಎಂಆರ್‌ಸಿಎಲ್ ಬೋರ್ಡ್ ಮೀಟಿಂಗ್‌ನಲ್ಲಿ ಶೇ.5 ರಷ್ಟು ದರ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ದರ ಏರಿಕೆ ಸಮಿತಿಯ ಶಿಫಾರಸ್ಸಿನಂತೆ ಪ್ರತಿ ವರ್ಷ ಫೆಬ್ರವರಿಯಲ್ಲಿ ದರ ಏರಿಕೆ ಮಾಡಬೇಕು. ಕಳೆದ ವರ್ಷ ಫೆಬ್ರವರಿ 9ರಂದು 100%ರಷ್ಟು ಟಿಕೆಟ್ ದರ ಏರಿಕೆ ಆಗಿತ್ತು. ಪ್ರಯಾಣಿಕರ …
Read More »ಕರೆಂಟ್, ಮೂಲಭೂತ ಸೌಕರ್ಯ ಇಲ್ಲ – ದುಬಾರೆ ಸಾಕಾನೆ ಶಿಬಿರದ ಮಾವುತ, ಕಾವಾಡಿಗಳ ಸಮಸ್ಯೆ
ಮಡಿಕೇರಿ: ದೂರದಿಂದ ಬಂದು ದೋಣಿಯಲ್ಲಿ ವಿಹರಿಸಿ, ಆನೆ ಸಫಾರಿ ಮಾಡಿ ಒಂದಷ್ಟು ಹೊತ್ತು ನಿಸರ್ಗದ ಮಡಿಲಲ್ಲಿ ಮೈಮರೆತು ನೀರಾಟವಾಡಿ ತಮ್ಮ ಊರುಗಳಿಗೆ ಹಿಂದಿರುಗುವ ಪ್ರವಾಸಿಗರಿಗೆ ದುಬಾರೆ ಒಂದು ಅದ್ಭುತ ತಾಣ. ಇಷ್ಟೊಂದು ಖ್ಯಾತಿ ಪಡೆದ ಪ್ರವಾಸಿ ತಾಣ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿರುವ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳಿವೆ. ಇಷ್ಟೊಂದು ಖ್ಯಾತಿ ಪಡೆದ ಪ್ರವಾಸಿ ತಾಣ ಮಾತ್ರ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ ಎಂಬುದು ಇಲ್ಲಿಗೆ ಭೇಟಿ …
Read More »ನಾನು ಜೀವನದ ಕೊನೆಗಾಲದಲ್ಲಿದ್ದೇನೆ, ಈ ವೃದ್ಧನ ಮನವಿಗೆ ಸ್ಪಂದಿಸಿ ಕರ್ನಾಟಕ ರಕ್ಷಿಸಿ: ಹೆಚ್‌ಡಿಡಿ
ನವದೆಹಲಿ: ರಾಜ್ಯ ಎದುರಿಸುತ್ತಿರುವ ನೀರಾವರಿ ಬಿಕ್ಕಟ್ಟಿನ ಬಗ್ಗೆ ರಾಜ್ಯಸಭೆಯಲ್ಲಿ ಗದ್ಗದಿತರಾಗಿ ಮಾತಾನಾಡಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು, ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ದಯಮಾಡಿ ಪರಿಹರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ರಾಜ್ಯಸಭೆಯಲ್ಲಿ ಬುಧವಾರ ನಡೆದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ಮಾಜಿ ಪ್ರಧಾನಿಗಳು ಮಾತನಾಡಿದರು. ರಾಜ್ಯದ ಅನೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಆ ಎಲ್ಲಾ ಯೋಜನೆಗಳಿಗೆ …
Read More »ವಿಬಿ ಜಿ ರಾಮ್ ಜಿ ವಿರುದ್ಧದ ನಿರ್ಣಯ ಸದನದಲ್ಲಿ ಅಂಗೀಕಾರ
ಬೆಂಗಳೂರು: ವಿಧಾನಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗದ ನಡುವೆ ವಿಬಿ-ಜಿ ರಾಮ್ ಜಿ ಬಿಲ್ ವಿರೋಧಿಸಿ ನಿರ್ಣಯವನ್ನು ಸರ್ಕಾರ ಪಾಸ್ ಮಾಡಿಕೊಂಡಿದೆ. ರಾಮನ ಹೆಸರು ಇರೋದಕ್ಕೆ ಕಾಂಗ್ರೆಸ್ ವಿರೋಧಿಸ್ತಿದೆ ಎಂದ ಯತ್ನಾಳ್, ಮನ್ರೇಗಾದಲ್ಲಿ ನ್ಯೂನತೆಗಳಿವೆ. ವಿಬಿ-ಜಿ ರಾಮ್‌ಜಿ ) ವಾಪಸ್ ಪಡೆಯಬಾರದು ಅಂತ ಆಗ್ರಹಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಮಾತಾಡಿ, ಅಡ್ವಾಣಿಯವರೇ ನರೇಗಾ ಯೋಜನೆಯನ್ನ ಹೊಗಳಿದ್ದರು. ಕಾರ್ಮಿಕರ ಬದುಕಿನ ಬಗ್ಗೆ ವರುಣ್ ಗಾಂಧಿ ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದಾಗ, ನರೇಗಾ ಪಾರದರ್ಶಕವಾಗಿದೆ ಅಂತ ಕೇಂದ್ರ …
Read More »ಗಂದಿಗವಾಡ ಗ್ರಾ.ಪಂ ನವೀಕರಣ ಹಾಗೂ ಪಿಡಿಒ ಉಸ್ಮಾನ್ ನದಾಫ್ ಅವರಿಗೆ ‘ಗಡಿನಾಡು ಸಿರಿ’ ಪ್ರಶಸ್ತಿ ಪ್ರದಾನ
ಗಂದಿಗವಾಡ ಗ್ರಾ.ಪಂ ನವೀಕರಣ ಹಾಗೂ ಪಿಡಿಒ ಉಸ್ಮಾನ್ ನದಾಫ್ ಅವರಿಗೆ ‘ಗಡಿನಾಡು ಸಿರಿ’ ಪ್ರಶಸ್ತಿ ಪ್ರದಾನ • ಗಂದಿಗವಾಡ ಪಂಚಾಯತಿ ನವೀಕರಣದ ಸಂಭ್ರಮ • ಪಿಡಿಒ ನದಾಫ್‌ಗೆ ಗಡಿನಾಡು ಸಿರಿ ಪ್ರಶಸ್ತಿ • ಗ್ರಾಮ ಪಂಚಾಯತಿ ಸದಸ್ಯರಿಗೆ ಆತ್ಮೀಯ ಬೀಳ್ಕೊಡುಗೆ • ಗಂಧಿಗವಾಡ ಗ್ರಾಮದ ಪ್ರಗತಿಗೆ ಅಧಿಕಾರಿಗಳ ಬದ್ಧತೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಂಧಿಗವಾಡ ಗ್ರಾಮ ಪಂಚಾಯತಿಯಲ್ಲಿ ಇಂದು ಸಂಭ್ರಮದ ವಾತಾವರಣ ಮನೆಮಾಡಿತ್ತು. ನವೀಕರಣಗೊಂಡ ಪಂಚಾಯತಿ ಕಾರ್ಯಾಲಯದ ಉದ್ಘಾಟನೆ, …
Read More »ಕರ್ನಾಟಕ ರಾಜ್ಯ 14 ವರ್ಷದೊಳಗಿನ ಕ್ರಿಕೆಟ್ ತಂಡಕ್ಕೆ ಬೆಳಗಾವಿಯ ಅಜಯ್ ಲಮಾಣಿ ರಾಜ್ಯ ತಂಡಕ್ಕೆ ಆಯ್ಕೆ
ಕರ್ನಾಟಕ ರಾಜ್ಯ 14 ವರ್ಷದೊಳಗಿನ ಕ್ರಿಕೆಟ್ ತಂಡಕ್ಕೆ ಬೆಳಗಾವಿಯ ಅಜಯ್ ಲಮಾಣಿ ರಾಜ್ಯ ತಂಡಕ್ಕೆ ಆಯ್ಕೆ • ಕರ್ನಾಟಕ ರಾಜ್ಯ ಕ್ರಿಕೆಟ್ ತಂಡ ಘೋಷಣೆ • ರಾಜ್ಯ ತಂಡಕ್ಕೆ ಬೆಳಗಾವಿಯ ಅಜಯ್ ಆಯ್ಕೆ • ವಿಕೆಟ್ ಕೀಪರ್ ಆಗಿ ಮಿಂಚಲಿರುವ ಅಜಯ್ • ಜ.27 ರಿಂದ ವಿಜಯನಗರದಲ್ಲಿ ಟೂರ್ನಿ ಆರಂಭ ಬೆಳಗಾವಿಯ ಕ್ರಿಕೆಟ್ ಪ್ರತಿಭೆಗಳಿಗೆ ಮತ್ತೊಂದು ಗರಿ ಲಭಿಸಿದೆ. ಆಂಧ್ರಪ್ರದೇಶದಲ್ಲಿ ನಡೆಯಲಿರುವ ದಕ್ಷಿಣ ವಲಯದ 14 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಗೆ …
Read More »ಬೆಳಗಾವಿಯಲ್ಲಿ ಜಲಸಂಪನ್ಮೂಲ ನಿರ್ವಹಣೆ ಕುರಿತು ರಾಷ್ಟ್ರಮಟ್ಟದ ಮಂಥನ: ಫೆ.6 ರಿಂದ ಎರಡು ದಿನ ಕಾರ್ಯಾಗಾರ
ಬೆಳಗಾವಿಯಲ್ಲಿ ಜಲಸಂಪನ್ಮೂಲ ನಿರ್ವಹಣೆ ಕುರಿತು ರಾಷ್ಟ್ರಮಟ್ಟದ ಮಂಥನ: ಫೆ.6 ರಿಂದ ಎರಡು ದಿನ ಕಾರ್ಯಾಗಾರ • ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಜಲ ಕಾರ್ಯಾಗಾರ • ಹವಾಮಾನ ವೈಪರಿತ್ಯದ ಸವಾಲುಗಳ ಬಗ್ಗೆ ಚರ್ಚೆ • ನೀರಾವರಿ ಯೋಜನೆಗಳ ಸುಸ್ಥಿರತೆಗೆ ಒತ್ತು • ಫೆ.6, 7ರಂದು ತಜ್ಞರಿಂದ ಮಂಥನ ಬೆಳಗಾವಿಯ ಶಿವಬಸವ ನಗರದ ದಿ ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್(ಇಂಡಿಯಾ) ಬೆಳಗಾವಿ ಲೋಕಲ್ ಸೆಂಟರ್ ನಲ್ಲಿ ಫೆ.6, 7ರಂದು ಜಲಸಂಪನ್ಮೂಲ ಯೋಜನೆಗಳು: ಅವುಗಳ ನಿರ್ವಹಣೆ, …
Read More »
Laxmi News 24×7