Breaking News

ರಾಜಕೀಯ

ವಿದ್ಯಾರ್ಥಿಗಳಿಂದ ಕಾರು ಸ್ವಚ್ಛಗೊಳಿಸಿದ ಶಾಲಾ ಮುಖ್ಯ ಶಿಕ್ಷಕ

ವಿಜಯಪುರ, ಫೆ.18: ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ಶಿಕ್ಷಕರ ಸ್ವಂತ ಕೆಲಸಕ್ಕೆ ಬಳಸುವ ಪ್ರಕರಣಗಳು ನಡೆಯುತ್ತಿವೆ. ಇದೀಗವಿಜಯಪುರ (Vijayapura)ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ವಿರೇಶ್ವರ ವೃತ್ತದ ಬಳಿಯ ಶಾಸಕರ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ತನ್ನ ಕಾರನ್ನು ವಿದ್ಯಾರ್ಥಿಗಳಿಂದ ಸ್ವಚ್ಛಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮುಖ್ಯ ಶಿಕ್ಷಕ ಬಸವರಾಜ ರಕ್ಕಸಗಿ ಅವರು ಶಾಲಾ ಆವರಣದಲ್ಲಿಯೇ ತಮ್ಮ ಕಾರನ್ನು ವಿದ್ಯಾರ್ಥಿಗಳಿಂದ ಸ್ವಚ್ಚ ಮಾಡಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಕಾರ್ ಸ್ವಚ್ಛ ಮಾಡುತ್ತಿರುವ …

Read More »

ರಾಮಮಂದಿರವನ್ನು ಸುಪ್ರೀಂ ಕೋರ್ಟ್ ಸೂಚಿಸಿದಂತ ಜಾಗದಲ್ಲಿ ಕಟ್ಟಿಲ್ಲ. :ಸಂತೋಷ್ ಲಾಡ್

ಹುಬ್ಬಳ್ಳಿ : ಅಯೋಧ್ಯೆಯಲ್ಲಿ ರಾಮಮಂದಿರವನ್ನು ಸುಪ್ರೀಂ ಕೋರ್ಟ್ ಸೂಚಿಸಿದಂತ ಜಾಗದಲ್ಲಿ ಕಟ್ಟಿಲ್ಲ. ರಾಮ ಮಂದಿರ ನಿರ್ಮಾಣ ಮಾಡಿದ್ದರಿಂದ ಬಡತನ ಏನು ನಿರ್ಮೂಲನೆ ಆಗಲ್ಲ ಎಂಬುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೇವಲ ರಾಜಕೀಯ ಇಚ್ಛಾಶಕ್ತಿಯ ಕಾರಣಕ್ಕಾಗಿ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ.   ಅದರ ಹೊರತಾಗಿ ಬೇರೆ ಏನೂ ಇಲ್ಲ. ರಾಮ ಮಂದಿರ ನಿರ್ಮಾಣ ಮಾಡಿದ್ದರಿಂದ ಬಡತನ ಏನು ನಿರ್ಮೂಲನೆಯಾಗುವುದಿಲ್ಲ ಎಂಬುದಾಗಿ …

Read More »

ಹಾವೇರಿಯಲ್ಲಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯುವಕ ಬಲಿ

ಹಾವೇರಿ, : ನಗರದ ಮಣಿಗಾರ ಓಣಿಯಲ್ಲಿಹೆಸ್ಕಾಂ(Hescom) ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯುವಕನೋರ್ವ ಬಲಿಯಾದ ಘಟನೆ ನಡೆದಿದೆ. ಸುರೇಶ್ (38) ಮೃತ ದುರ್ದೈವಿ. ಮತ್ತೋರ್ವನಿಗೆ ಲೈನ್​ಮನ್ ನಿಂಗಪ್ಪನಿಗೆ ಗಂಭಿರ ಗಾಯವಾಗಿದ್ದು, ಹಾವೇರಿ(Haveri) ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯುತ್ ಖಡಿತಗೊಳಿಸಿ ಇಬ್ಬರು ಯುವಕರು ಹೊಸ ಲೈನ್ ಎಳೆಯುವ ಕಾಮಗಾರಿ ಮಾಡುತ್ತಿದ್ದರು. ಈ ವೇಳೆ ಸಿಬ್ಬಂದಿ ಏಕಾಏಕಿ ವಿದ್ಯುತ್ ಕನೆಕ್ಟ್ ಮಾಡಿದ್ದಾನೆ. ಇನ್ನು ಲೈನ್ ಮನ್ ಶವ ಕಂಬದಲ್ಲಿಯೇ ನೇತಾಡುತ್ತಿದೆ. ಕುಟುಂಬಕ್ಕೆ 5 ಲಕ್ಷ …

Read More »

ಕೃಷಿ ಪರಿಕರಗಳನ್ನ ಕಾಳಸಂತೆಯಲ್ಲಿ ಮಾರಾಟ ಪ್ರಕರಣ; ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅಮಾನತು

ಕಲಬುರಗಿ, ಫೆ.18: ಕೃಷಿ ಪರಿಕರಗಳನ್ನು ಕಾಳಸಂತೆಯಲ್ಲಿ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡ್ರಾಮಿ ತಾಲೂಕು ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನುಅಮಾನತುಮಾಡಿ ಕಲಬುರಗಿ(Kalaburagi) ಜಂಟಿ ಕೃಷಿ ನಿರ್ದೇಶಕರು ಆದೇಶಿಸಿದ್ದಾರೆ. ಇದೇ ಫೆಬ್ರವರಿ 5 ರಂದು ಟ್ಯ್ಯಾಕ್ಟರ್‌ನಲ್ಲಿ 100 ಎರೆಹುಳು ಗೊಬ್ಬರದ ಚೀಲಗಳು, 30 ಪಿವಿಸಿ ಪೈಪ್‌ಗಳನ್ನ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಗ್ರಾಮದ ಜನರೆಲ್ಲ ಸೇರಿ ಟ್ಯ್ಯಾಕ್ಟರ್​ನ್ನು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದರು. ಇದೀಗ ಅಕ್ರಮವೆಸಗಿದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಮೈಸೂರಿನಲ್ಲಿ ಅನಧಿಕೃತ ಕಟ್ಟಡಗಳ ತೆರವು …

Read More »

ಬರಡಾದ ಕೃಷ್ಣ; ಹನಿ ನೀರಿಗಾಗಿ ರಾಯಚೂರು ಗ್ರಾಮಗಳಲ್ಲಿ ಕಣ್ಣೀರು

ಬರಡಾದ ಕೃಷ್ಣ; ಹನಿ ನೀರಿಗಾಗಿ ರಾಯಚೂರು ಗ್ರಾಮಗಳಲ್ಲಿ ಕಣ್ಣೀರು ರಾಯಚೂರು, : ರಾಯಚೂರು (Raichur) ಜಿಲ್ಲೆಯ ಎಡ ಮತ್ತು ಬಲಭಾಗದಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ಹರಿಯುತ್ತಿದ್ದರೂ, ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ (Drinking Water Crisis). ನೀರಿಲ್ಲದೇ ಆ ಗ್ರಾಮದಲ್ಲಿ ಕಳೆದೊಂದು ವಾರದಿಂದ‌ ಶೇಕಡಾ 60% ರಷ್ಟು ಜನ ಸ್ನಾನವನ್ನೇ ಮಾಡಿಲ್ಲ. ಹೇಗಾದರೂ ಮಾಡಿ ಕುಡಿಯುವುದಕ್ಕಾದರೂ ನೀರಿನ ವ್ಯವಸ್ಥೆ ಮಾಡಿಸಿ ಎಂದು ಗ್ರಾಮಸ್ಥರು ಟಿವಿ9 ಮುಂದೆ ಅಳಲು ತೋಡಿಕೊಂಡಿದ್ದಾರೆ. …

Read More »

ಮುಸ್ಲಿಮರಿಗೆ ಹೆಚ್ಚು ಅನುದಾನ ಕೊಟ್ರೆ ತಪ್ಪೇನು ಎಂದ ಪರಮೇಶ್ವರ: ಯತ್ನಾಳ ಆಕ್ರೋಶ

ವಿಜಯಪುರ: ಮುಸ್ಲಿಮರಿಗೆ ಸ್ವಲ್ಪ ಹೆಚ್ಚು ಅನುದಾನ ಕೊಟ್ಟರೆ ತಪ್ಪೇನು ಎಂದು ಗೃಹ ಸಚಿವ ಡಾ. ಪರಮೇಶ್ವರ ನೀಡಿರುವ ಹೇಳಿಕೆಯನ್ನು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಯತ್ನಾಳ, ಡಾ.ಪರಮೇಶ್ವರ್ ಅವರೇ, ಸರ್ವ ಧರ್ಮ ಸಹಿಷ್ಣುತೆ, ಸರ್ವ ಜನಾಂಗದ ಶಾಂತಿಯ ತೋಟ ಎಂಬ ಘೋಷಣೆಗಳು ನಿಮ್ಮ ಭಾಷಣಕ್ಕೆ ಸೀಮಿತವಾಯಿತೇ? ತೆರಿಗೆ ದಾರರ ಹಣವನ್ನು equitable ಆಗಿ ಹಂಚಬೇಕಾಗಿದ್ದು ಸರ್ಕಾರದ ಹೊಣೆ. ಮುಸಲ್ಮಾನರಿಗೆ ಹೆಚ್ಚು, …

Read More »

ನೀರಿನ ಸಮಸ್ಯೆ ಉಲ್ಬಣ ಆತಂಕ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚತೊಡಗಿದೆ. ಮುಂದಿನ ದಿನಗಳಲ್ಲಿ ಇದು ತಾರರಕ್ಕೆ ಹೋಗುವ ಸಾಧ್ಯತೆ ಇದೆ. ಇದರ ನಿವಾರಣೆ ಮತ್ತು ತುರ್ತು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರವು ಜಿಲ್ಲೆಯ ಬರಪೀಡಿತ ಪ್ರತಿ ತಾಲ್ಲೂಕಿಗೆ ₹25 ಲಕ್ಷದಂತೆ 8 ತಾಲ್ಲೂಕುಗಳಿಗೆ ತಾತ್ಕಾಲಿಕವಾಗಿ ₹2 ಕೋಟಿ ಅನುದಾನ ಬಿಡುಗಡೆ ಮಾಡಿದೆ.   ಧಾರವಾಡ, ಅಳ್ನಾವರ, ಹುಬ್ಬಳ್ಳಿ ಗ್ರಾಮೀಣ, ಹುಬ್ಬಳ್ಳಿ ಶಹರ, ಕುಂದಗೋಳ, ನವಲಗುಂದ, ಅಣ್ಣಿಗೇರಿ ಮತ್ತು ಕಲಘಟಗಿ ತಾಲ್ಲೂಕುಗಳಲ್ಲಿ ಕುಡಿಯುವ …

Read More »

ಕಲಘಟಗಿ: ಉಳವಿ ಪಾದಯಾತ್ರಿಗಳಿಗೆ ದಾಸೋಹ

ಕಲಘಟಗಿ: ಉಳವಿಯ ಚನ್ನಬಸವೇಶ್ವರರ ಜಾತ್ರಾ ಮಹೋತ್ಸವಕ್ಕೆ ಪಾದಯಾತ್ರೆಯಲ್ಲಿ ತೆರಳುವವರಿಗೆ ಪಟ್ಟಣದ ಹೊರವಲಯದ ತಡಸ ಕ್ರಾಸ್ ಹತ್ತಿರ ತಿಪ್ಪಣ್ಣ ಹಾಗೂ ಮಂಜುಳಾ ಕುರಗುಂದ ದಂಪತಿ ಪ್ರತಿ ವರ್ಷದಂತೆ ಈ ವರ್ಚವೂ ವಿಶ್ರಾಂತಿ ಮಂಟಪದಲ್ಲಿ ಅನ್ನ ದಾಸೋಹ ಹಮ್ಮಿಕೊಂಡಿದ್ದಾರೆ. ಭಕ್ತರ ಸಹಕಾರದಿಂದ ಈ ದಂಪತಿ 14 ವರ್ಷಗಳಿಂದ ಉಳವಿಗೆ ಪಾದಯಾತ್ರೆ ತೆರಳುವ ಭಕ್ತರಿಗೆ ಬೆಳಗಿನ ಉಪಾಹಾರ, ಚಹಾ, ಮಧ್ಯಾಹ್ನದ ಊಟ, ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಡುತ್ತಿದ್ದಾರೆ. ದಾಸೋಹದ ಜೊತೆಗೆ ಶರಣರ …

Read More »

ಜೈಲಿನಿಂದಲೇ ನಗ್ನ ವಿಡಿಯೋ ಕಳುಹಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್; ಮೂವರು ಆರೋಪಿಗಳು ಅರೆಸ್ಟ್

ಬೆಂಗಳೂರು: ಜೈಲಿನಿಂದಲೇ ರೌಡಿಶೀಟರ್ ನಗ್ನ ವಿಡಿಯೋ ಕಳುಹಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಸೇರಿದಂತೆ ಮೂವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಮನೋಜ್ ಅಲಿಯಾಸ್ ಕೆಂಚ, ಸುಭಾಷ್ ಹಾಗೂ ಯೋಗೇಶ್ ಬಂಧಿತ ಆರೋಪಿಗಳು. ರೌಡಿಶೀಟರ್ ಮನೋಜ್ ಜೈಲಿನಲ್ಲಿ ಕುಳಿತು ಮಾರ್ಫ್ ಮಾಡಿದ ಮಹಿಳೆಯ ಬೆತ್ತಲೆ ಫೋಟೋ, ವಿಡಿಯೋಗಳನ್ನು ಕಳುಹಿಸಿ ಮಹಿಳೆಯ ತಾಯಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ನಿನ್ನ ಅಳಿಯನಿಗೆ ಫೋಟೋ, ವಿಡಿಯೋ ಕಳುಹಿಸಿ …

Read More »

ನಾಲತವಾಡ: ಡಿಜಿಟಲ್ ಪೇ ಮೂಲಕ ಬಸ್‌ ಪ್ರಯಾಣ

ನಾಲತವಾಡ: ಬೆಳಗಾವಿಯಿಂದ ನಾಲತವಾಡಕ್ಕೆ ಹಲವು ವಿಶೇಷತೆ ಒಳಗೊಂಡ ಬೆಳಗಾವಿ ಡಿಪೊದ ನೂತನ ಬಸ್ ಓಡಿಸಲಾಗುತ್ತಿದೆ. ಈ ಬಸ್‌ನಲ್ಲಿ ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಬಸ್‍ನಲ್ಲಿ ಹೋಗೋಕೆ ಜೇಬ್‍ನಲ್ಲಿ ದುಡ್ಡು ಇರಲೇ ಬೇಕು ಎನ್ನುವಂತಿಲ್ಲ. ಬಸ್‍ಗಳಲ್ಲಿ ಟಿಕೆಟ್ ಪಡೆಯಲು ಬೆಳಗಾವಿಯ ಈ ಬಸ್ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ. ಇನ್ಮುಂದೆ ನಿಮ್ಮ ಮೊಬೈಲ್‌ನಲ್ಲಿ ಯುಪಿಐ ಪೇಮೆಂಟ್ ಅವಕಾಶ ಇದ್ರೆ ಸಾಕು ಬಸ್‌ನಲ್ಲಿ …

Read More »