Breaking News

ರಾಜಕೀಯ

ಬಾದಾಮಿ ಕ್ಷೇತ್ರಕ್ಕೆ ಮೂರು ಆಂಬುಲೆನ್ಸ್ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ : ಬಾದಾಮಿ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಕೊರೊನಾ ಸೋಂಕಿತರ ಅನುಕೂಲಕ್ಕಾಗಿ ಮೂರು ಆಂಬುಲೆನ್ಸ್ ಗಳನ್ನು ನೀಡಿದ್ದಾರೆ. ಇಂದು ಮೂರು ವಾಹನಗಳನ್ನು ತಾಲೂಕು ಆಡಳಿತಕ್ಕೆ ಆಧಿಕಾರಿಗಳ ಮೂಲಕ ಹಸ್ತಾಂತರಿಸಲಾಯಿತು. ಈ ಆಂಬ್ಯುಲೆನ್ಸ್ ಗಳು ಬಾದಾಮಿ ಕ್ಷೇತ್ರದಲ್ಲಿ ಸಂಚರಿಸಲಿದ್ದು, ಕೋವಿಡ್ ಸೋಂಕಿತರಿಗೆ ನೆರವಾಗಲಿವೆ. ಇದೇ ವೇಳೆ ವೈದ್ಯರಿಗೆ N95 ಮಾಸ್ಕ್ ಗಳು, ಪಿಪಿಇ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಇನ್ನು ಕೊರೊನಾ ಸೋಂಕಿತರ ಅನುಕೂಲಕ್ಕಾಗಿ ಪಕ್ಷದ …

Read More »

ಖಾಕಿ ಪಡೆಯಿಂದ ಹಸಿದವರಿಗೆ ಊಟ, ಗದಗದಲ್ಲಿ ಅಲೆಮಾರಿಗಳ ಪಾಲಿಗೆ ಇವರೇ ಅನ್ನದಾತರು !

ಗದಗ: ಅವರೆಲ್ಲಾ ಕೊರೊನಾ ವಾರಿಯರ್ಸಗಳು. ಸರಕಾರ ಜಾರಿ ಮಾಡಿರೋ ಲಾಕ್ಡೌನ್ ಯಶಸ್ಸು ಕಾಣ್ತಾಯಿದ್ರೆ ಇವರೇ ಕೇಂದ್ರ ಬಿಂದು. ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಇತ್ತ ತಮ್ಮ ಹಸಿವನ್ನೂ ಲೆಕ್ಕಿಸದೇ ಜನರಿಗೆ ರಕ್ಷಕರಾದವರು. ಆದ್ರೆ ಅದೇ ಆರಕ್ಷಕರೀಗ ಇಲ್ಲಿ ಅನ್ನದಾತರೂ ಆಗಿದ್ದಾರೆ. ಲಾಠಿ ಹಿಡಿದ ಕೈಗಳು ಅನ್ನದ ಕೈಯನ್ನೂ ಹಿಡಿದಿವೆ. ಕೊರೊನಾ ಎಲ್ಲರ ಬದುಕನ್ನು ನುಂಗಿ ನೀರು ಕುಡಿತಿದೆ. ಅದರಲ್ಲೂ ಬಡ ಹಾಗೂ ನಿರ್ಗತಿಕರ ಪಾಡಂತೂ ಹೇಳತೀರದಾಗಿದೆ. ಅಲೆಮಾರಿ ಕುಟುಂಬಗಳ ಬದುಕು‌ ದುಸ್ಥರವಾಗಿದೆ. …

Read More »

1,418 ಪೊಲೀಸ ಸಿಬ್ಬಂದಿಗಳಿಗೆ ವಕ್ಕರಿಸಿದ ವೈರಸ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸಕ್ಕೆ ಖಾಕಿ ಪಡೆ ನಲುಗುತ್ತಿದೆ. ಬರೋಬ್ಬರಿ 1418 ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ಮಾಹಾಮಾರಿ ಪೊಲೀಸ್ ಇಲಾಖೆಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, 13 ಪೊಲೀಸರು ಸೋಂಕಿಗೆ ಬಲಿಯಾಗಿದ್ದಾರೆ. 725 ಪೊಲೀಸರು ಹೋಂ ಐಸೋಲೇಟ್ ಆಗಿದ್ದಾರೆ. ಸಿಲಿಕಾನ್ ಸಿಟಿಯ 655 ಪೊಲೀಸರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೊರೊನಾ ವಾರಿಯರ್ಸ್ ಆಗಿರುವ ಪೊಲೀಸರೇ ಇದೀಗ ವೈರಸ್ ಗೆ ತುತ್ತಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Read More »

ಸರ್ಕಾರದ ವಿನಾಶಕಾರಿ ನೀತಿಯಿಂದ ಕೊರೊನಾ 3ನೇ ಅಲೆ : ರಾಹುಲ್ ಗಾಂಧಿ

ನವದೆಹಲಿ : ಕೊರೊನಾ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ರಾಷ್ಟ್ರೀಯ ಲಸಿಕಾ ವಿತರಣಾ ಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಸರ್ಕಾರದ ವಿನಾಶಕಾರಿ ನೀತಿ, ಸಂತ್ರಸ್ತರ ಶವ ನದಿಯಲ್ಲಿ ತೇಲುತ್ತಿರುವುದರ ಕುರಿತಾಗಿ ಗಂಗಾ ಮಾತೆ ದುಃಖಿಸುವಂತೆ ಮಾಡಿದ್ದಾರೆ. ಭಾರತ ಸರ್ಕಾರದ ಲಸಿಕೆ ವಿತರಣಾ ಯೋಜನೆ ವಿನಾಶಕಾರಿ ಮೂರನೇ ಅಲೆಯನ್ನು ಖಚಿತಪಡಿಸುತ್ತದೆ. ಇದನ್ನು ಮತ್ತೆ ಸರಿದೂಗಿಸಲು …

Read More »

ವಾಹನಗಳ ಮಾಲೀಕರಿಗೆ ಗುಡ್ ನ್ಯೂಸ್: ಲಾಕ್ಡೌನ್ ಕಾರಣ ಉಚಿತ ಸರ್ವಿಸ್, ವಾರಂಟಿ ಅವಧಿ ವಿಸ್ತರಣೆ

ನವದೆಹಲಿ: ಕೊರೋನಾ ಸೋಂಕು ತಡೆಗೆ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಸೇರಿದಂತೆ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿರುವ ಕಾರಣ ವಾಹನಗಳ ವಾರಂಟಿ ಮತ್ತು ಉಚಿತ ಸೇವಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಪ್ರಮುಖ ವಾಹನ ತಯಾರಿಕಾ ಕಂಪನಿಗಳ ಉಚಿತ ಸೇವೆ ಮತ್ತು ವಾರಂಟಿ ಅವಧಿ ವಿಸ್ತರಣೆ ಮಾಡಲಾಗಿದ್ದು, ಮಾರುತಿ ಸುಜುಕಿ ಇಂಡಿಯಾ ಉಚಿತ ಸೇವೆ ಮತ್ತು ವಾರಂಟಿ ಅವಧಿಯನ್ನು ಜೂನ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ. 2021 ರ ಮಾರ್ಚ್ 15 ರಿಂದ …

Read More »

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಘೋಷಣೆ: 50 ಸಾವಿರ ರೂ. ವೈಯಕ್ತಿಕ ನೆರವು; ಸಚಿವ ಬಿ.ಸಿ. ಪಾಟೀಲ್

ಬೆಂಗಳೂರು: ಹಿರೇಕರೂರು ಮತಕ್ಷೇತ್ರದ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಕೋವಿಡ್ ಎರಡನೇ ಅಲೆ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 50 ಸಾವಿರ ರೂ. ಪರಿಹಾರ ಧನ ನೀಡುವುದಾಗಿ ಕೃಷಿ ಸಚಿವರಾದ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ಘೋಷಿಸಿದ್ದಾರೆ. ಹಿರೇಕೆರೂರು ಮತ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಸುಮಾರು 18 ಮಂದಿ‌ ಸೋಂಕಿನಿಂದ ಮೃತಪಟ್ಟಿದ್ದು, ಮೃತಪಟ್ಟವರ ಕುಟುಂಬದ ಸದಸ್ಯರನ್ನು ನಾಳೆ ಬಿ.ಸಿ. ಪಾಟೀಲ್ ಭೇಟಿಯಾಗಿ ಪರಿಹಾರ ಧನ ವಿತರಿಸಲಿದ್ದಾರೆ. ಇನ್ನು ಕೆಲವು …

Read More »

ಕೊರೋನಾ ತಡೆಗೆ ಮತ್ತೊಂದು ಕ್ರಮ: 17 ಜಿಲ್ಲೆಗಳ ಡಿಸಿಗಳೊಂದಿಗೆ ಪ್ರಧಾನಿ ಮೋದಿ, ಸಿಎಂ BSY ಸಂವಾದ

ಕೋವಿಡ್-19 ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೇ 18 ರಂದು ಬೆಳಗ್ಗೆ 11 ಕ್ಕೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಉತ್ತರ ಕನ್ನಡ, ಹಾಸನ, ಬಳ್ಳಾರಿ, ಮೈಸೂರು, ತುಮಕೂರು, ಕೋಲಾರ, ಕೊಡಗು, ಬೆಂಗಳೂರು ನಗರ, ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ, ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ …

Read More »

ಮೂರು ಚಿತ್ರಗಳಿಗೆ ಸಂಬರಗಿ ಸಹಿ; ಬಿಗ್ ಬಾಸ್ ಮನೆಯಿಂದ ಬರುತ್ತಿದ್ದಂತೆ ಸಿನಿಮಾ ಅವಕಾಶ

ಬೆಂಗಳೂರು: ‘ಬಿಗ್ ಬಾಸ್ – ಸೀಸನ್ 8’ ರಿಯಾಲಿಟಿ ಶೋ ರದ್ದಾಗಿದೆ. ಎಲ್ಲ ಸ್ಪರ್ಧಿಗಳು ಅವರವರ ಮನೆ ತಲುಪಿದ್ದಾರೆ. ಒಂದಷ್ಟು ಮಂದಿ ಮನೆಯಿಂದ ಹೊರಬಂದು ಕೈಲಾದ ಸಹಾಯಕ್ಕೆ ಧುಮುಕಿದ್ದಾರೆ. ಇನ್ನು ಕೆಲವರು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಪ್ರಶಾಂತ್ ಸಂಬರಗಿ ‘ಬಿಗ್ ಬಾಸ್’ನಿಂದ ಹೊರಬರುತ್ತಿದ್ದಂತೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರಂತೆ! ಈ ಪೈಕಿ ಮೊದಲನೆಯದು ಹಂಸಲೇಖ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಇದಲ್ಲದೆ, ರವಿ ಶ್ರೀವತ್ಸ ನಿರ್ದೇಶನದ ಮತ್ತೊಂದು ಚಿತ್ರ ಮತ್ತು ಎನ್ …

Read More »

ಬಿಜೆಪಿ ಮುಖಂಡ, ಡಿವೈಎಸ್‍ಪಿ ನಡುವೆ ಮಾತಿನ ಚಕಮಕಿ

ತಿಪಟೂರು: ನಿರ್ಗತಿಕರಿಗೆ, ಕೋವಿಡ್‌ ವಾರಿಯರ್ಸ್‌ಗಳಿಗೆ ಊಟ ವಿತರಣೆ ಮಾಡುವಾಗ ಮಾರ್ಗಸೂಚಿ ಉಲ್ಲಂಘನೆ ವಿಚಾರವಾಗಿ ಬಿಜೆಪಿ ಮುಖಂಡ ಲೋಕೇಶ್ವರ್‌ ಹಾಗೂ ಡಿವೈಎಸ್‍ಪಿ ನಡುವೆ ಮಾತಿನ ಚಕಮಕಿ ನಡೆದಿದೆ. ಲಾಕ್‌ಡೌನ್‌ ಆರಂಭವಾದಾಗಿನಿಂದ ಲೋಕೇಶ್ವರ್‌ ನೇತೃತ್ವದಲ್ಲಿ ಆಹಾರ ವಿತರಿಸುತ್ತಿದ್ದಾರೆ. ಅದರಂತೆ ಶನಿವಾರವೂ ಆಹಾರ ವಿತರಣೆ ತೆರಳಿದ್ದಾಗ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ ಸಂಬಂಧ ಪೊಲೀಸರು ಯುವಕರ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ಕೆಲ ಗಂಟೆಗಳ ನಂತರ ಡಿವೈಎಸ್‍ಪಿ ಚಂದನ್ ಕುಮಾರ್ ಎನ್., ಕಲ್ಲೇಶ್ವರ ದೇವಾಲಯದ …

Read More »

ತಾಯಿ ಅಂತ್ಯಕ್ರಿಯೆ ಮುಗಿಸಿದ ಕೆಲವೇ ಕ್ಷಣದಲ್ಲಿ ಮಗನೂ ಸಾವು!

ಕೊಳ್ಳೇಗಾಲ: ಕೋವಿಡ್‌ನಿಂದ ಮೃತ್ತಪಟ್ಟ ತಾಯಿಯ ಶವಸಂಸ್ಕಾರ ಮಾಡಲು ಹೋದ ಮಗ ಹೃದಯಾಘಾತದಿಂದ ತಾನೂ ಮೃತಪಟ್ಟಿರುವ ಘಟನೆ ಶನಿವಾರ ಪಟ್ಟಣದಲ್ಲಿ ಜರುಗಿದೆ. ಪಟ್ಟಣದ ನಿವಾಸಿ ಹಾಗೂ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರ ಆತ್ತೆ ಸರೋಜಮ್ಮ (82) ಹಾಗೂ ಆಕೆಯ ಮಗ ಸುರೇಶ್ (60) ಮೃತ್ತ ಮೃತಪಟ್ಟವರು. ಶುಕ್ರವಾರ ಸರೋಜಮ್ಮ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದಾಗ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಹೋಂ ಐಸೋಲೇಶನ್‌ನಲ್ಲಿದ್ದರು. ಈ ಸಂದರ್ಭದಲ್ಲೇ ಅವರು ಮೃತಪಟ್ಟಿದ್ದಾರೆ. ಚಾ.ನಗರ ತಾಲ್ಲೂಕು …

Read More »