Breaking News

ರಾಜಕೀಯ

ಸಿ.ಪಿ.ಯೋಗೇಶ್ವರ್ ಅವರನ್ನು ವಜಾ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಶಕ್ತಿ ಯಡಿಯೂರಪ್ಪನವರಿಗಿಲ್ಲ:ಯತ್ನಾಳ್

ವಿಜಯಪುರ: ರಾಜ್ಯದಲ್ಲಿರುವುದು ಸಿಎಂ ಬಿ.ಎಸ್.ಯಡಿಯೂರಪ್ಪನವರ ಸರ್ಕಾರವಲ್ಲ, ಬಿ.ವೈ.ವಿಜಯೇಂದ್ರ ಸರ್ಕಾರ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಕೆಂಡಕಾರಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಸಿಎಂ ಯಡಿಯೂರಪ್ಪನವರು ದೆಹಲಿಗೆ ಹೋಗಬೇಕಿತ್ತು. ಆದರೆ ಅವರ ಪುತ್ರ ಬಿ.ವೈ.ವಿಜಯೇಂದ್ರ ದೆಹಲಿಗೆ ಹೋಗಿ ವರಿಷ್ಠರ ಭೇಟಿಗೆ ಮುಂದಾಗಿದ್ದಾರೆ. ರಾಜ್ಯದಲ್ಲಿರುವುದು ಬಿಎಸ್ ವೈ ಸರ್ಕಾರವಲ್ಲ, ವಿಜಯೇಂದ್ರ ಸರ್ಕಾರ ಎಂಬುದು ಇದರಿಂದಲೇ ಸಾಬೀತಾಗುತ್ತದೆ ಎಂದರು. ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ವಜಾ …

Read More »

ಸೊಂಕಿತರೊಂದಿಗೆ ವೈದ್ಯೆ ಡ್ಯಾನ್ಸ್ – ಜನರಿಂದ ಮೆಚ್ಚುಗೆ

ಚಿತ್ರದುರ್ಗ: ಆತ್ಮಸ್ಥೈರ್ಯ ತುಂಬಲು ಜಿಲ್ಲೆಯ ವೈದ್ಯರು ಸೋಂಕಿತರ ಜೊತೆ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಕೋವಿಡ್ ಕೇರ್ ಕೇಂದ್ರದಲ್ಲಿ ಕಳೆದ ಹತ್ತು ದಿನಗಳಿಂದ ಕೊರೊನಾ ಸೋಂಕಿತರಿಗೆ ವೈದ್ಯೆ ಶೃತಿ ನೃತ್ಯ ವ್ಯಾಯಾಮ ಮಾಡಿಸುತ್ತಿದ್ದಾರೆ. ಪ್ರತಿ ದಿನ ಹಿಂದಿ ಹಾಡೋಂದಕ್ಕೆ ನೃತ್ಯ ಮಾಡಿಸುವ ವೈದ್ಯೆ ಶೃತಿ, ನಾಗಿನಿ ನಾಗಿನಿ ಹಾಡಿಗೆ ಕೊರೊನಾ ಸೋಂಕಿತರೊಟ್ಟಿಗೆ ಹೆಜ್ಜೆ ಹಾಕಿಸುವ ಮೂಲಕ ಗಮನ ಸೆಳೆದಿದ್ದಾರೆ. …

Read More »

ದೇಶದಲ್ಲೇ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಚಿತ್ರದುರ್ಗದಲ್ಲಿ ಪತ್ತೆ

ಚಿತ್ರದುರ್ಗ, ಜೂನ್ 1: ಕೊರೊನಾ ಸೋಂಕಿನ ನಂತರ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್​, ಯೆಲ್ಲೋ ಫಂಗಸ್‌ನಂತಹ ನಾನಾ ಸೋಂಕಿನ ಸುಳಿಗೆ ಜನ ಸಿಲುಕುತ್ತಿದ್ದು, ಈಗ ಚರ್ಮ ಫಂಗಸ್‌ನ್ನು ಎದುರಿಸುವಂತಾಗಿದೆ. ಕೋಟೆನಾಡು ಚಿತ್ರದುರ್ಗದಲ್ಲಿ ದೇಶದ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಚಿತ್ರದುರ್ಗದ 54 ವರ್ಷದ ರೋಗಿಯಲ್ಲಿ ಸ್ಕಿನ್ ಮ್ಯೂಕರ್ ಮೈಕೋಸಿಸ್ ಪತ್ತೆಯಾಗಿದೆ ಎಂದು ಇಎನ್‌ಟಿ ತಜ್ಞ ಡಾ.ಪ್ರಹ್ಲಾದ್ ತಿಳಿಸಿದ್ದಾರೆ. 54 ವರ್ಷದ ಪಂಚಾಕ್ಷರಪ್ಪ ಒಂದು‌ ತಿಂಗಳ ಹಿಂದೆ …

Read More »

ತಿಂಗಳ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆ: ಜೂನ್‌ 26ರವರೆಗೆ ಅವಕಾಶ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ (ಜಿಎಸ್‌ಟಿ) ಅಡಿಯಲ್ಲಿ, ಮೇ ತಿಂಗಳ ಮಾರಾಟಕ್ಕೆ ಸಂಬಂಧಿಸಿದ ವಿವರಗಳಿರುವ ಜಿಎಸ್‌ಟಿಆರ್‌-1 ಸಲ್ಲಿಸಲು ಗಡುವನ್ನು ಜೂನ್‌ 26ರವರೆಗೆ ವಿಸ್ತರಣೆ ಮಾಡಲಾಗಿದೆ. ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಜಿಎಸ್‌ಟಿ ಮಂಡಳಿಯು ನೀಡಿರುವ ವಿವಿಧ ವಿನಾಯಿತಿಗಳ ಕುರಿತು ಸರಣಿ ಟ್ವೀಟ್‌ ಮಾಡಿದೆ. ವಹಿವಾಟು ನಡೆಸುವವರು ನಿರ್ದಿಷ್ಟ ತಿಂಗಳಿನಲ್ಲಿ ಪೂರೈಕೆ ಮಾಡಿರುವುದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಮುಂದಿನ ತಿಂಗಳಿನ 11ನೇ ತಾರೀಕಿನ ಒಳಗಾಗಿ ಜಿಎಸ್‌ಟಿಆರ್‌-1ರಲ್ಲಿ …

Read More »

ಬೆಂಗಳೂರಲ್ಲಿ ಜೂನ್ 7ರಿಂದ ಬಿಎಂಟಿಸಿ ಬಸ್ ಸಂಚಾರ

ಬೆಂಗಳೂರು, ಮೇ 31; ಬೆಂಗಳೂರು ಜನರ ಜೀವನಾಡಿ ಬಿಎಂಟಿಸಿ ಬಸ್ ಸಂಚಾರ ಆರಂಭಿಸಲಿದೆ. ಸದ್ಯ ಜಾರಿಯಲ್ಲಿರುವ ಲಾಕ್‌ಡೌನ್ ಜೂನ್ 7ರ ಸೋಮವಾರ ಬೆಳಗ್ಗೆ 6ಕ್ಕೆ ಮುಕ್ತಾಯಗೊಳ್ಳಲಿದ್ದು, ಮುಂದುವರೆಸುವ ಕುರಿತು ಸರ್ಕಾರ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಜೂನ್ 7ರ ಬಳಿಕ ಲಾಕ್‌ಡೌನ್ ವಿಸ್ತರಣೆಯಾದರೂ ಹಲವು ವಿನಾಯಿತಿ ಸಿಗುವ ಸಾಧ್ಯತೆ ಇದೆ. ಆದ್ದರಿಂದ ಜನದಟ್ಟಣೆ ಹೆಚ್ಚಿರುವ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲು ಬಿಎಂಟಿಸಿ ಮುಂದಾಗಿದೆ. ಈ ಕುರಿತು ನೌಕರರಿಗೂ ನಿರ್ದೇಶನ ನೀಡಲಾಗಿದೆ. …

Read More »

5 ಜಿ ನೆಟ್ವರ್ಕ್ ಸ್ಥಾಪನೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ನಟಿ ಜುಹಿ ಚಾವ್ಲಾ

ನವದೆಹಲಿ : ಈಗಾಗಲೇ ದೇಶದ ಎಲ್ಲೆಡೆ 4 ಜಿ ವೈರ್ಲೆಸ್ ನೆಟ್ವರ್ಕ್ ಪ್ರಚಲಿತದಲ್ಲಿದೆ. ಆದರೆ ಇದನ್ನು ಇನ್ನೂ ಉತ್ತಮಗೊಳಿಸುವ ಹಿನ್ನೆಲೆಯಲ್ಲಿ 5ಜಿ ನೆಟ್ವರ್ಕ್ ಗಳನ್ನು ತರುವ ಸಂಶೋಧನೆಗಳು ಹಾಗೂ ಪ್ರಯೋಗಗಳು ನಡೆಯುತ್ತವೆ. 5 ಜಿ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಸ್ಥಾಪನೆ ಮಾಡುವುದರ ವಿರುದ್ಧ ಅನೇಕ ಪರಿಸರವಾದಿಗಳು ಧ್ವನಿ ಎತ್ತಿದ್ದರು ಮತ್ತು ಇದನ್ನು ವಿರೋಧಿಸಿದ್ದರು. ಇದೀಗ ಇದರ ವಿರುದ್ಧ ಬಾಲಿವುಡ್ ಖ್ಯಾತ ನಟಿ ಪರಿಸರವಾದಿ ಜುಹಿ ಚಾವ್ಲಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 5 …

Read More »

ಪತಿಯನ್ನು ಹೋಮಕುಂಡದಲ್ಲಿ ಹಾಕಿ ಕೊಲೆ ಮಾಡಿದ್ದ ಪತ್ನಿ; ಬೆಚ್ಚಿಬೀಳಿಸಿದ್ದ ಹತ್ಯೆ ಪ್ರಕರಣದ ತೀರ್ಪು ಮುಂದೂಡಿಕೆ

ಉಡುಪಿ: ಪುತ್ರ ಹಾಗೂ ಪ್ರಿಯಕರನ ಜೊತೆಗೂಡಿ ಪತಿಯನ್ನು ಹೋಮಕುಂಡದಲ್ಲಿ ಹಾಕಿ ಸುಟ್ಟು ಕೊಲೆ ಮಾಡಿದ್ದ ಪ್ರಕರಣ ಇದೀಗ ಮತ್ತೆ ಸದ್ದು ಮಾಡಲಾರಂಭಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪನ್ನು ನ್ಯಾಯಾಲಯ ಮುಂದೂಡಿದ್ದು, ಸದ್ಯದಲ್ಲೇ ತೀರ್ಪು ಹೊರಬೀಳುವ ಸಾಧ್ಯತೆ ಇರುವುದರಿಂದ ಕುತೂಹಲ ಮೂಡಿಸಿದೆ. ಅನಿವಾಸಿ ಉದ್ಯಮಿ ಭಾಸ್ಕರ ಶೆಟ್ಟಿಯನ್ನು ಕೊಲೆ ಮಾಡಿದ್ದ ಪತ್ನಿ ರಾಜೇಶ್ವರಿ ಶೆಟ್ಟಿ, ಪ್ರಿಯಕರ ನಿರಂಜನ್​ ಭಟ್​, ಪುತ್ರ ನವನೀತ್ ಶೆಟ್ಟಿ ಪ್ರಮುಖ ಆರೋಪಿಗಳು. 2016ರ ಜುಲೈ ತಿಂಗಳಲ್ಲಿ ಈ …

Read More »

ಸಚಿವ ಪ್ರಭು ಚವ್ಹಾಣ್ ವಿತರಿಸುತ್ತಿರುವ ಆಹಾರ ತಿನ್ನಲಿಕ್ಕೆ ಬಾರದಂತಿದೆ: ಅಲೆಮಾರಿ ಜನಾಂಗದ ಮಹಿಳೆಯರ ಆರೋಪ

ಬೀದರ್, ಮೇ 31: ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ವಿತರಿಸುತ್ತಿರುವ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಅಲೆಮಾರಿ ಜನಾಂಗದ ಮಹಿಳೆಯರು ಆರೋಪಿಸಿದ್ದಾರೆ. ಔರಾದ ಪಟ್ಟಣದ ಹೊರವಲಯದಲ್ಲಿರುವ ಅಲೆಮಾರಿ ಜನಾಂಗದವರು ವಾಸಿಸುವ ಗುಡಿಸಲುಗಳಿಗೆ ಕೆಲವು ಸಂಘಟನೆಯ ಪದಾಧಿಕಾರಿಗಳು ಹೋಗಿ ತಮ್ಮ ವತಿಯಿಂದ ಉಚಿತವಾಗಿ ಆಹಾರಗಳನ್ನು ಹಂಚುವ ಸಂದರ್ಭದಲ್ಲಿ ಅಲೆಮಾರಿ ಜನಾಂಗದ ಮಹಿಳೆಯರು, ನಿಮ್ಮ ಆಹಾರ ಚೆನ್ನಾಗಿದೆ, …

Read More »

ಲಾಕ್ ಡೌನ್ ಇದ್ದಷ್ಟು ದಿನ ಮಾತ್ರ ಯಡಿಯೂರಪ್ಪ ಮುಖ್ಯಮಂತ್ರಿ!

ವಿಜಯಪುರ, ಮೇ 31: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ವಿರುದ್ದ ಕಿಡಿಕಾರುವಲ್ಲಿ ವಿರೋಧ ಪಕ್ಷದವರೂ ನಾಚಿಸುವಂತೆ ಮಂಚೂಣಿಯಲ್ಲಿ ಬರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಎಂ ವಿರುದ್ದ ಗುಡುಗಿದ್ದಾರೆ.   ಈಗಿರುವ ಲಾಕ್ ಡೌನ್ ಎಲ್ಲಾ ವೇಸ್ಟ್, ಜೂನ್ ಏಳರ ನಂತರ ಲಾಕ್ ಡೌನ್ ವಿಸ್ತರಿಸಬಾರದು ಎಂದು ಅಭಿಪ್ರಾಯ ಪಟ್ಟಿರುವ ಯತ್ನಾಳ್, ಲಾಕ್ ಡೌನ್ ಇದ್ದರೆ ಮಾತ್ರ ಯಡಿಯೂರಪ್ಪನವರ ಸಿಎಂ ಕುರ್ಚಿ ಭದ್ರ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. …

Read More »

ಸಚಿವ ಪ್ರಭು ಚವ್ಹಾಣ್ ವಿರುದ್ಧ ಕಳಪೆ ಗುಣಮಟ್ಟದ ಆಹಾರ ವಿತರಣೆ ಆರೋಪ

ಬೀದರ್, ಮೇ 31: ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ವಿತರಿಸುತ್ತಿರುವ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿದೆ. ಆಹಾರವನ್ನು ಮಕ್ಕಳು ಮುಟ್ಟುತ್ತಿಲ್ಲ, ನಾವು ಸಹ ತಿನ್ನುತ್ತಿಲ್ಲ. ಅದು ತಿನ್ನುವುದಕ್ಕೆ ಬಾರದಂತಿದೆ ಎಂಬ ಔರಾದ್ ಪಟ್ಟಣದ ಅಲೆಮಾರಿ ಜನಾಂಗದ ಮಹಿಳೆಯರು ಆರೋಪಿಸಿದ್ದಾರೆ. ಔರಾದ ಪಟ್ಟಣದ ಹೊರವಲಯದಲ್ಲಿರುವ ಅಲೆಮಾರಿ ಜನಾಂಗದವರು ವಾಸಿಸುವ ಗುಡಿಸಲುಗಳಿಗೆ ಕೆಲವು ಸಂಘಟನೆಯ ಪದಾಧಿಕಾರಿಗಳು ಹೋಗಿ ತಮ್ಮ ವತಿಯಿಂದ ಉಚಿತವಾಗಿ ಆಹಾರಗಳನ್ನು ಹಂಚುವ‌ ಸಂದರ್ಭದಲ್ಲಿ …

Read More »