ಧಾರವಾಡ: ಲಾಕ್‌ಡೌನ್ ಅವಧಿಯಲ್ಲಿ ನಿರೀಕ್ಷಿತ ಬೆಲೆ ಸಿಗದೇ, ಮಾರಾಟವಾಗದೇ ತಿಪ್ಪೆಯ ಪಾಲಾಗುತ್ತಿದ್ದ ತರಕಾರಿ ಹಾಗೂ ಸೊಪ್ಪಿಗೆ ಇದೀಗ ಅನ್‌ಲಾಕ್ ನಂತರ ಬಂಪರ್ ಬೆಲೆ ಬಂದಿದೆ. ಕೋವಿಡ್ ನಿಯಂತ್ರಣಕ್ಕೆ ಜಾರಿ ಮಾಡಿದ ಲಾಕ್ ಡೌನ್ ಹಾಗೂ ವ್ಯಾಪಾರಕ್ಕೆ ನೀಡಿದ ಸೀಮಿತ ಅವಧಿಯ ಪರಿಣಾಮ ನಗರದ ಹೊಸ ಎಪಿಎಂಸಿ ಆವರಣದಲ್ಲಿ ಪ್ರತಿದಿನ ನಡೆಯುವ ಹೋಲ್‌ಸೇಲ್ ತರಕಾರಿ ಮಾರುಕಟ್ಟೆ ಆವರಣದಲ್ಲಿ ಬೆಲೆ ಕುಸಿತ ಹಾಗೂ ಮಾರಾಟವಾಗದ ಕಾರಣ ತರಕಾರಿ ಹಾಗೂ ಸೊಪ್ಪು ತಿಪ್ಪೆಯ ಪಾಲಾಗುತ್ತಿತ್ತು. …
Read More »ನೀರವ್, ಮಲ್ಯ, ಚೋಕ್ಸಿಯಿಂದ ವಶಕ್ಕೆ ಪಡೆದ ಆಸ್ತಿಯಲ್ಲಿ 9,371 ಕೋಟಿ ರೂ.ಗಳನ್ನು ಬ್ಯಾಂಕ್ಗಳಿಗೆ ವರ್ಗಾಯಿಸಿದ ಇಡಿ
ನವದೆಹಲಿ: ಬ್ಯಾಂಕ್ಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸಂಬಂಧಿಸಿದ 18 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದ್ದು, ಇದು ಬ್ಯಾಂಕುಗಳು ಅನುಭವಿಸಿದ ಒಟ್ಟು ನಷ್ಟದ 80% ಆಗಿದೆ. ಬುಧವಾರ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಇಡಿ ಕೇವಲ ಆಸ್ತಿಯನ್ನು ವಶಕ್ಕೆ ಪಡೆದಿರುವುದಲ್ಲದೆ, 9,371.17 ಕೋಟಿ ರೂಪಾಯಿಯನ್ನು ಸಾರ್ವಜನಿಕ ಬ್ಯಾಂಕ್ ಮತ್ತು ಕೇಂದ್ರ …
Read More »ಸಿಡಿ ಬಹಿರಂಗ ಕೇಸ್; ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದೇನು?
ಧಾರವಾಡ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ ಗೆ ಸಂಬಂಧಿಸಿದಂತೆ ಈಗಾಗಲೇ ಸಂತ್ರಸ್ತ ಯುವತಿಯೊಂದಿಗೆ ಮಾತನಾಡಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀಡಿ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯೊಂದಿಗೆ ಮಾತನಾಡಿದ್ದೇನೆ. ಏನಾದರೂ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರುವಂತೆ ಹೇಳಿದ್ದೇನೆ. ಮಹಿಳಾ ಆಯೋಗದಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ ಎಂದರು. ಸದ್ಯ ಸಿಡಿ ಬಹಿರಂಗ ಕೇಸ್ …
Read More »ಸಿಡಿ ಬಹಿರಂಗ ಕೇಸ್ ಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯ ಯುವತಿಗೆ ಬಂಧನ ಭೀತಿ ಶುರು
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ ಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಸಿಡಿ ಯುವತಿಗೆ ಬಂಧನ ಭೀತಿ ಶುರುವಾಗಿದೆ. ರಮೇಶ್ ಜಾರಕಿಹೊಳಿ ದೂರು ಆಧರಿಸಿ ಎಸ್ ಐಟಿ ಅಧಿಕಾರಿಗಳು ಯುವತಿಯನ್ನು ಬಂಧಿಸುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಯುವತಿ ಪರ ವಕೀಲ ಸಂಕೇತ್ ಏಣಗಿ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ದೂರು ದಾಖಲಿಸಿದ್ದರೂ ಕೂಡ ಈವರೆಗೂ ಮಾಜಿ ಸಚಿವರ …
Read More »1.99 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್! ಇ-ಆಡಳಿತ ಇಲಾಖೆಯಿಂದ ಪತ್ತೆ
ಸಿಂಧನೂರು: ನಿರ್ಗತಿಕ ರಿಗೆ ಅಂತ್ಯೋದಯ, ಕಡು ಬಡವರಿಗೆ ಬಿಪಿಎಲ್ ಕಾರ್ಡ್ ನೀಡಿ ಆಹಾರ ಧಾನ್ಯ ನೀಡುತ್ತಿರುವ ಇಲಾಖೆಯೇ ಆಂತರಿಕ ತಪಾಸಣೆ ವೇಳೆ ಬೆಚ್ಚಿಬಿದ್ದಿದೆ. 7.5 ಎಕರೆಗೂ ಮೇಲ್ಪಟ್ಟು ಜಮೀನು ಹೊಂದಿದವರೂ ಅನ್ನಭಾಗ್ಯಕ್ಕಾಗಿ ಕಡು ಬಡವರ ಪಟ್ಟಿಗೆ ಸೇರಿಕೊಂಡಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲ 18,848 ಅನರ್ಹ ಅಂತ್ಯೋದಯ, 1,99,277 ಅನರ್ಹ ಬಿಪಿಎಲ್ ಕಾರ್ಡ್‌ಗಳು ಕೂಡ ಪತ್ತೆಯಾಗಿವೆ. ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಭೂಮಿ ದಾಖಲೆಗಳನ್ನು ಪರಿಶೀಲಿಸಿದಾಗ ಆಹಾರ ಇಲಾಖೆಗೆ ಈ ಆಘಾತಕಾರಿ ಸಂಗತಿ ಗೊತ್ತಾಗಿದೆ. …
Read More »25 ಲಕ್ಷ ಮನೆಗಳಿಗೆ ನಲ್ಲಿಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಬೆಂಗಳೂರು: ಈ ವರ್ಷ ‘ಜಲಜೀವನ್ ಮಿಷನ್’ ಯೋಜನೆಯಡಿ ಗ್ರಾಮೀಣ ಪ್ರದೇಶದ 25 ಲಕ್ಷ ಮನೆಗಳಿಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಒದಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ‘ಜಲಜೀವನ್ ಮಿಷನ್’ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ರಾಜ್ಯದಲ್ಲಿ 91.91 ಲಕ್ಷ ಗ್ರಾಮೀಣ ಕುಟುಂಬಗಳಿದ್ದು, ಈಗಾಗಲೇ 28 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದೆ. 2021-22 ನೇ ಸಾಲಿನಲ್ಲಿ …
Read More »ಅಪ್ರಾಪ್ತ ಮಗಳು ಸೇರಿದಂತೆ ಪ್ರೇಮಿಗಳನ್ನು ಕಲ್ಲಿನಿಂದ ಜಜ್ಜಿ ಕೊಂದ ತಂದೆ!
ಅನ್ಯ ಕೋಮಿನ ಯುವಕನ ಜೊತೆಗಿದ್ದ ಮಗಳನ್ನು ನೋಡಿದ ತಂದೆ ಇಬ್ಬರು ಪ್ರೇಮಿಗಳನ್ನು ಬರ್ಬರವಾಗಿ ಕೊಂದ ಭೀಕರ ಘಟನೆ ಬಸವನಾಡು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ನಡೆದಿದೆ. ಯುವಕ ಹಾಗೂ ಅಪ್ರಾಪ್ತೆಯಾಗಿದ್ದ ಪ್ರೇಮಿಗಳಾದ ಬಸವರಾಜ ಬಡಿಗೇರಿ (19) ಹಾಗೂ ಖಾನಾಪುರ ಗ್ರಾಮದ 16 ವರ್ಷದ ಅಪ್ರಾಪ್ತ ಬಾಲಕಿ ದವಲಬಿ ತಂಬದ ಕೊಲೆಯಾದ ದುರ್ದೈವಿಗಳು. ಅನ್ಯ ಕೋಮಿನವನನ್ನು ಪ್ರೀತಿಗೆ ಅಪ್ರಾಪ್ತೆ ಮನೆಯಲ್ಲಿ ವಿರೋಧವಿತ್ತು. ಇಂದು ಮದ್ಯಾಹ್ನ ಇಬ್ಬರೂ ಒಟ್ಟಿಗೆ ಇದ್ದ …
Read More »ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಉಚಿತ ಟ್ಯಾಬ್ ವಿತರಣೆಗೆ ನಾಳೆ ಸಿಎಂ ಚಾಲನೆ
ಬೆಂಗಳೂರು: ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಣೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಿಸಲಾಗುತ್ತದೆ. 1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ನೀಡಲಾಗುವುದು. ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಯಲ್ಲಿ ತಾರತಮ್ಯ ನಿವಾರಣೆಗಾಗಿ ಉಚಿತವಾಗಿ ಟ್ಯಾಬ್ ನೀಡಲಾಗುವುದು. ವಿಧಾನಸೌಧದಲ್ಲಿ ಬೆಳಗ್ಗೆ 11 ಗಂಟೆಗೆ ಟ್ಯಾಬ್ ವಿತರಣೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗಿದೆ.
Read More »ಕೋವಿಡ್ ನಿರ್ವಹಣೆ ಕುಳಿತು ಡಿಸಿಎಂ ಗೋವಿ ಕಾರಜೋಳ ಚರ್ಚೆ
ಚುನಾವಣೆಗೆ ಇನ್ನೂ ಒಂದು ಮುಕ್ಕಾಲುವರ್ಷವಿದೆ. ಈಗಲೇ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಜಂಗಿಕುಸ್ತಿ ಆರಂಭವಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜಗಳದ ಮಧ್ಯೆ ಡಾ.ಜಿ ಪರಮೇಶ್ವರ್ ಇಣುಕಿ ನೋಡುತ್ತಿದ್ದಾರೆ. ಅವರು ಕಷ್ಟದ ದಿನಗಳಲ್ಲಿ ಅಧ್ಯಕ್ಷರಾಗಿದ್ದರು. ಇನ್ನೇನು ಸಿಎಂ ಆಗಬೇಕು ಎನ್ನುವಷ್ಟರಲ್ಲಿ ಅವರನ್ನು ಸೋಲಿಸಿದ್ದರು. ಈಗ ಪರಮೇಶ್ವರ್ ಕೂಡ ಮುಖ್ಯಮಂತ್ರಿಯಾಗಬೇಕು ಎಂಬ ಚಿಂತನೆಯಲ್ಲಿದ್ದಾರೆ ಹಾಗಾಗಿ ಇಬ್ಬರ ಜಗಳದ ನಡುವೆ ಇವರು ಇಣುಕು ನೋಡುತ್ತಿದ್ದಾರೆ …
Read More »ಟಿಆರ್‌ಪಿ ಹಗರಣ: ಅರ್ನಬ್ ಆರೋಪಿ
ಮುಂಬೈ: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯಕ್ಕೆ ಮುಂಬೈ ಪೊಲೀಸರು ಮಂಗಳವಾರ ಎರಡನೇ ಚಾರ್ಜ್‌ಶೀಟ್ ಸಲ್ಲಿಸಿದ್ದು, ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆ. ಹಗರಣ ಕುರಿತು ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್‌ನ ಕ್ರೈಂ ಇಂಟೆಲಿಜೆನ್ಸ್ ಯುನಿಟ್ (ಸಿಐಯು) ಈ ಚಾರ್ಜ್‌ಶೀಟನ್ನು ಸಲ್ಲಿಸಿದೆ. ‘ಚಾರ್ಜ್‌ಶೀಟ್‌ನಲ್ಲಿ ಹಲವು ಆರೋಪಿಗಳ ಹೆಸರುಗಳಿದ್ದು, ಅರ್ನಬ್ ಗೋಸ್ವಾಮಿ ಹಾಗೂ ಎಆರ್‌ಜಿ ಔಟ್‌ಲಿಯರ್ ಸಂಸ್ಥೆಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ’ ಎಂದು ಗೋಸ್ವಾಮಿ ಪರ …
Read More »
Laxmi News 24×7