Breaking News

ರಾಜಕೀಯ

100 ರೂ.ನಲ್ಲಿ ಬಸ್ ಪೂಜೆ ಮಾಡುವುದು ಹೇಗೆ ಸಾರಿಗೆ ಇಲಾಖೆ: ಸಿಬ್ಬಂದಿ ಆಕ್ರೋಶ

ಬೆಂಗಳೂರು, ಅಕ್ಟೋಬರ್ 14: ನಾಡಿನೆಲ್ಲಡೆ ಸಂಭ್ರಮದ ದಸರಾ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಕೊರೊನಾ ಸೋಂಕು ಪ್ರಕರಣಗಳು ತಗ್ಗಿದ್ದರಿಂದ ದಸರಾ ಆಚರಣೆ ತುಸು ಮೆರುಗನ್ನು ಪಡೆದುಕೊಂಡಿದೆ. ಇಂದು ರಾಜ್ಯಾದ್ಯಂತ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ. ಕಚೇರಿಗಳಲ್ಲಿ, ಮನೆಗಳಲ್ಲಿ, ವಾಹನಗಳಿಗೆ ಆಯುಧ ಪೂಜಾ ಹಬ್ಬವನ್ನು ಬಂಧು ಬಳಗದ ಜೊತೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಆದರೆ ಸದಾ ಸುದ್ದಿಯಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ …

Read More »

ಕರೋನಾ ಸೇನಾನಿಗಳಿಗೆ ಹಾಗೂ ಕೋವಿಡ್ 19 ಲಸಿಕಾ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ

ಕರೋನಾ ಸೇನಾನಿಗಳಿಗೆ ಹಾಗೂ ಕೋವಿಡ್ 19 ಲಸಿಕಾ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ನಗರದ ಶ್ರೀ ಎಸ್ ಜಿ ಬಾಳೆಕುಂದ್ರಿ ಇಂಜಿನಿಯರಿಂಗ ಕಾಲೇಜು ಸಭಾಗೃಹ ಬೆಳಗಾವಿಯಲ್ಲಿ ಜರುಗಿತು. ಮಾನ್ಯ ಪ್ರಧಾನಿ ಶ್ರೀ ಮೋದಿಜಿ ಹಾಗೂ ಆರೋಗ್ಯ ಇಲಾಖೆಯ ಸತತ ಪ್ರಯತ್ನದಿಂದ ಭಾರತ ದೇಶಾದ್ಯಂತ 100 ಕೋಟಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 30,18,570 ಜನರಿಗೆ ಕೋವಿಡ್ 19 ಲಸಿಕೆ ನೀಡಿದ ಪ್ರಯುಕ್ತ ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೆಳಗಾವಿ ಜಿಲ್ಲಾ ಆರೋಗ್ಯ …

Read More »

ಇಂದು ರಿಲೀಸ್ ಆಗಲೇ ಇಲ್ಲ ಕೋಟಿಗೊಬ್ಬ : ಸುದೀಪ್ ಸರ್ ಗೆ ಸತ್ಯ ಗೊತ್ತಿದೆ ಎಂದ ಸೂರಪ್ಪ ಬಾಬು

ಬೆಂಗಳೂರು: ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗದ ಕಾರಣ ಅಭಿಮಾನಿಗಳಲ್ಲಿ ನಟ ಕಿಚ್ಚಾ ಸುದೀಪ್ ಕ್ಷಮೆ ಕೇಳಿದ್ದಾರೆ. ಟ್ವಿಟ್ಟರ್ ನಲ್ಲಿ ಕ್ಷಮೆಯಾಚಿಸಿರುವ ಸುದೀಪ್, ಈಗಾಗಲೇ ಥಿಯೇಟರ್​ಗಳ ಬಳಿ ಆಗಮಿಸಿರುವ ಎಲ್ಲ ಅಭಿಮಾನಿಗಳಿಗೂ ಶೋ ತಡವಾದ ಬಗ್ಗೆ ತಿಳಿಸುವುದು ನನ್ನ ಕರ್ತವ್ಯವಾಗಿದೆ. ಥಿಯೇಟರ್ ನಲ್ಲಿ ಸಿನಿಮಾ ಇದೆ.. ಆದರೆ ತಾಂತ್ರಿಕ ಸಮಸ್ಯೆಯಿಂದ ಸಿನಿಮಾ ತೋರಿಸಲು ಆಗುತ್ತಿಲ್ಲ ಎಂದಿದ್ದಾರೆ.       ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ ಸುದೀಪ್ ಸದ್ಯ …

Read More »

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು: ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಸ್ವಸ್ಥರಾಗಿದ್ದು, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಾ.ಮನಮೋಹನ್ ಸಿಂಗ್ ಅವರ ಆರೋಗ್ಯ ಬುಧವಾರ ಹದಗೆಟ್ಟಿದೆ. ಡಾ.ನಿತೀಶ್ ನಾಯಕ್ ಅವರ ನೇತೃತ್ವದ ವೈದ್ಯರ ತಂಡದ ಮೇಲ್ವಿಚಾರಣೆಯಲ್ಲಿ ಸಿಂಗ್ ಆರೋಗ್ಯ ತಪಾಸಣೆ ನಡೆಸಲಾಗಿದೆ. ಅವರು ಉಸಿರಾಟದ ತೊಂದರೆಗೊಳಲಾಗಿದ್ದಾರೆ. ಮತ್ತು ಎದೆನೋವು ಕಾಣಿಸಿಕೊಂಡಿದೆ. ಡಾ.ಮನಮೋಹನ್ ಸಿಂಗ್ ಅವರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ನೇತೃತ್ವದ ವೈದ್ಯಕೀಯ ತಂಡ ಕಾರ್ಯೋನ್ಮುಖವಾಗಿದೆ. ಹೆಚ್ಚಿನ ವಿವರಗಳನ್ನು …

Read More »

ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಗೆ ಹೆಚ್ಚಿನ ಮಹತ್ವ

ಹಿಂದೂಗಳ ಹಬ್ಬಗಳಲ್ಲಿ ನವರಾತ್ರಿಯೂ ಒಂದು. ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಪ್ರತಿ ದಿನವೂ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಅವುಗಳಲ್ಲಿ ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಗೆ ಹೆಚ್ಚಿನ ಮಹತ್ವವಿದೆ. ಆಯುಧ ಪೂಜೆಯಂದು ಮನೆಯಲ್ಲಿ ಉಪಯೋಗಿಸುವ ಚೂರಿಯಿಂದ ಹಿಡಿದು ಎಲ್ಲಾ ವಿಧದ ಆಯುಧಗಳನ್ನು ಪೂಜಿಸಲಾಗುತ್ತಿದೆ. ಈ ದಿನ ಮನೆಯನ್ನು ಹೂಗಳಿಂದ ಅಲಂಕಾರ ಮಾಡಲಾಗುತ್ತಿದೆ. ಅಲ್ಲದೇ ಮನೆಯಲ್ಲಿರುವ ವಾಹನಗಳನ್ನು ತೊಳೆದು, ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಗುತ್ತಿದೆ. ಆಯುಧ ಪೂಜೆಯ …

Read More »

ವಿದ್ಯುತ್ ರಿಪೇರಿ ವೇಳೆ ಶಾಕ್ ತಗುಲಿ ಲೈನ್​ಮ್ಯಾನ್​ ಸಾವು;

ಬಾಗಲಕೋಟೆ: ವಿದ್ಯುತ್​​ ಶಾಕ್​​ ತಗುಲಿ ವಿದ್ಯುತ್​ ಕಂಬದಲ್ಲೇ ಹೆಸ್ಕಾಂ ಗುತ್ತಿಗೆದಾರನ ಅಡಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಾವನ್ನಪ್ಪಿದ ಘಟನೆ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಬಳಿ ನಡೆದಿದೆ. ಬದಾಮಿ ತಾಲೂಕಿನ ಬಿ.ಎನ್ ಜಾಲಿಹಾಳ ಗ್ರಾಮದ ನಿವಾಸಿ ಹನುಮಂತ ಮುಕಾಶಿ (33) ಮೃತ ಕಾರ್ಮಿಕ. ಹೆಸ್ಕಾಂ ಗುತ್ತಿಗೆದಾರನ ಅಡಿ ಈತ ಕೆಲಸ ಮಾಡುತ್ತಿದ್ದ. ಇಂದು ಟ್ರಾನ್ಸ್​​​ಫರ್ಮ್​​ ಕೂರಿಸಲು ಮುಂದಾಗಿದ್ದ ವೇಳೆ ಅವಘಡ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಸಂದರ್ಭದಲ್ಲಿ …

Read More »

ಅನಿಲ ಸೋರಿಕೆಯಿಂದ ಸುಟ್ಟು ಕರಕಲಾದ ಭತ್ತದ ಗದ್ದೆ

ಶಿರಸಿ: ಕೆಮಿಕಲ್ ಗ್ಯಾಸ್​​ ತುಂಬಿದ್ದ ಟ್ಯಾಂಕರ್​ ಪಲ್ಟಿಯಾಗಿ ಅಕ್ಕ ಪಕ್ಕದಲ್ಲಿ ಗದ್ದೆ, ತೋಟ ಧಗಧಗಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಕ್ರಾಸ್‌ನ ಬಳಿ ನಡೆದಿದೆ.     ಇಂದು ಬೆಳಗ್ಗೆ ಸುಮಾರು 5.30ರಿಂದ 5.45ರ ನಡುವೆ ಅಂಕೋಲ ಭಾಗದ ಕಡೆ ತೆರಳುತ್ತಿದ್ದ ಟ್ಯಾಂಕರ್ ಚಾಲಕನ ನಿರ್ಲಕ್ಷದಿಂದ ಘಾಟಿಯಲ್ಲಿ ಪಲ್ಟಿಯಾಗಿ ಸ್ಫೋಟಗೊಂಡಿದೆ. ಈ ವೇಳೆ ಚಾಲಕನಿಗೆ ಅಲ್ಪ ಗಾಯವಾಗಿದ್ದು ತಕ್ಷಣದಲ್ಲಿ ಆತನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.. ಅಷ್ಟೊತ್ತಿಗಾಗಲೇ …

Read More »

ಅನುಮಾನಸ್ಪದ ಸೂಟ್ಕೇಸ್​: ಒಂದರಲ್ಲಿ ‘ಮೋದಿ ಜಾಕೆಟ್’, ಮತ್ತೊಂದರಲ್ಲಿ ಸೀರೆ ಪತ್ತೆ

ಬೆಂಗಳೂರು: ನಗರದ ಬಿವಿಕೆ ಅಯ್ಯಂಗರ್ ರಸ್ತೆಯಲ್ಲಿ ಅನುಮಾಸ್ಪದವಾಗಿ ಸಿಕ್ಕಿದ್ದ ಸೂಟ್ಕೇಸ್​ ಪತ್ತೆ ಪ್ರಕರಣದಲ್ಲಿ ಆತಂಕ ದೂರವಾಗಿದ್ದು, ಸೂಟ್ಕೇಸ್​​ನಲ್ಲಿ ಬಟ್ಟೆಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಯ್ಯಂಗರ್ ರಸ್ತೆಯಲ್ಲಿ ಬೈಕ್​ ಒಂದರ ಮೇಲೆ ಸೂಟ್ ಕೇಸ್ ಪತ್ತೆಯಾಗುತ್ತಿದ್ದ ಕಾರಣ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳೀಯರು ಕರೆ ಮಾಡಿ ಪಶ್ಚಿಮ‌ ವಿಭಾಗದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಸ್ಥಳಕ್ಕೆ ಆಗಮಿಸಿದ್ದ ಬಾಂಬ್​ ನಿಷ್ಕ್ರಿಯ ದಳದ ಸಿಬ್ಬಂದಿ ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಿಂದ …

Read More »

ಅರಮನೆ ಆವರಣದಲ್ಲಿ ಗಜಪಡೆ, ಅಶ್ವಪಡೆ, ಪೊಲೀಸ್ ತುಕಡಿಗಳಿಂದ ತಾಲೀಮು

ಮೈಸೂರು: ಶುಕ್ರವಾರ ನಡೆಯಲಿರುವ ದಸರಾ ಜಂಬೂಸವಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಇಂದು ಮೈಸೂರು ಅರಮನೆ ಆವರಣದಲ್ಲಿ ಜಂಬೂಸವಾರಿಯ ತಾಲೀಮು ನಡೆಸಲಾಯಿತು. ದಸರಾ ಗಜಪಡೆ, ಅಶ್ವಪಡೆ ಹಾಗೂ ಪೊಲೀಸ್ ತುಕಡಿಗಳಿಂದ ತಾಲೀಮಿನಲ್ಲಿ ಭಾಗಿಯಾಗಿದ್ದವು. ತಾಲೀಮು ನಡೆಸುವ ವೇಳೆ ಪೊಲೀಸ್ ಬ್ಯಾಂಡ್ ವಾದನಕ್ಕೆ ಗಜಪಡೆ ಹಾಗೂ ಅಶ್ವಪಡೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದವು. ಗಜಪಡೆ ಕ್ಯಾಪ್ಟನ್ ಅಭಿಮನ್ಯು ಅಕ್ಕಪಕ್ಕದಲ್ಲಿ ಕಾವೇರಿ ಹಾಗೂ ಚೈತ್ರ ಆನೆಗಳು ಮೆರವಣಿಗೆಯ ತಾಲೀಮು ನಡೆಸಿದವು. ದಸರಾ ಜಂಬೂಸವಾರಿ ಮೆರವಣಿಗೆಯ …

Read More »

ಕಾಂಗ್ರೆಸ್​ ಪಕ್ಷದಿಂದ 6 ವರ್ಷಗಳ ಕಾಲ ಸಲೀಂ ಉಚ್ಚಾಟನೆ; ಶಿಸ್ತು ಸಮಿತಿಯಿಂದ ಕ್ರಮ

ಬೆಂಗಳೂರು: ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾತನಾಡಿದ್ದ ಸಲೀಂ ಅವರನ್ನು ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಬಗ್ಗೆ ಮಾತಾಡಿದ್ದ ಸಲೀಂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ಉಗ್ರಪ್ಪ ಜೊತೆ ಮಾತಾಡಿದ್ದ ಸಲೀಂ ವಿರುದ್ಧ ಕಾಂಗ್ರೆಸ್​ ಪಕ್ಷದ ಶಿಸ್ತು ಸಮಿತಿಯಿಂದ ಕ್ರಮ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಶಿಸ್ತು ಸಮಿತಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ. ಕೆಪಿಸಿಸಿ …

Read More »