Breaking News

ರಾಜಕೀಯ

ಬೇಸಿಗೆಯಲ್ಲೂ ಬರಡು ಭೂಮಿಯಲ್ಲಿ ಕೇವಲ 790 ಅಡಿಗೆ ನೀರು

ಬೆಂಗಳೂರು: ಈಗಾಗಲೇ ಬೇಸಿಗೆ ಆರಂಭವಾಗಿ ಕುಡಿಯುವ ನೀರಿಗೆ ಅನೇಕ ಕಡೆ ಸಮಸ್ಯೆ ಶುರುವಾಗಿದೆ. ಸುಮಾರು 1000 ದಿಂದ 1500 ಅಡಿಗಳಷ್ಟು ಬೋರ್‌ವೆಲ್‌ ಕೊರೆದರೂ ನೀರು ಸಿಗುವುದು ತುಂಬಾ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನೆಲಮಂಗಲ ತಾಲೂಕಿನ ಅವೇರಹಳ್ಳಿ ರೈತನೊಬ್ಬ ಬೋರ್‌ವೆಲ್‌ ಕೊರೆಸಿದ್ದು, ಗಗನದೆತ್ತರಕ್ಕೆ ನೀರು ಚಿಮ್ಮಿದೆ. ಅವೇರಹಳ್ಳಿ ಪ್ರಕಾಶ್ ಕೊಳವೆ ಬಾವಿ ಕೊರೆಸಿ ಸಂತಸಪಟ್ಟಿದ್ದಾರೆ. ಸುಮಾರು 1500 ಅಡಿ ಕೊರೆದರೂ ನೀರು ಸಿಗದ ಬರಡು ಭೂಮಿಯಲ್ಲಿ ಕೇವಲ 790 ಅಡಿಗೆ ನೀರು …

Read More »

ಜನರಿಂದ ಜನರಿಗಾಗಿ ಭಾನುವಾರ ಜನತಾ ಕರ್ಫ್ಯೂ – ಮೋದಿ

ಜನರೇ ಸ್ವಯಂ ಕರ್ಫ್ಯೂ ವಿಧಿಸಿಕೊಳ್ಳಬೇಕು ಅದಷ್ಟು ಜನ ಮನೆಯಲ್ಲಿರಿ, ಹೊರಗಡೆ ಬರಬೇಡಿ ವೈದ್ಯರು, ನರ್ಸ್‍ಗಳು, ಮಾಧ್ಯಮಗಳಿಗೆ ಧನ್ಯವಾದ   ನವದೆಹಲಿ: ಜನರಿಂದ, ಜನರಿಗಾಗಿ, ಜನರಿಗೋಸ್ಕರ ಜನರೇ ಈ ಭಾನುವಾರ ಸ್ವಯಂ ಕರ್ಫ್ಯೂ ವಿಧಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ದೇಶದ ಪ್ರಜೆಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ವೈರಸ್ ದೇಶವ್ಯಾಪಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ 8 ಗಂಟೆಗೆ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇಂದು ಪರಿಸ್ಥಿತಿ ಎರಡನೇ ಮಹಾಯುದ್ಧದ ಸನ್ನಿವೇಶಕ್ಕಿಂತ ಗಂಭೀರವಾಗಿದೆ. ಮುಂದಿನ ಕೆಲವು …

Read More »

ಕೊರೊನಾ ಭೀತಿ, ರಾತ್ರಿ ವೇಳೆಯಲ್ಲಿ ಔಷಧ ಸಿಂಪಡಿಸುತ್ತಿಲ್ಲ- ಧಾರವಾಡ ಡಿ.ಸಿ ಸ್ಪಷ್ಟನೆ

ಸಾಮಾಜಿಕ ಜಾಲತಾಣಗಳಲ್ಲಿನ ಸುಳ್ಳು ಸುದ್ದಿಗೆ ಸ್ಪಷ್ಟನೆ ಹುಬ್ಬಳ್ಳಿ: ಕೊರೊನಾ ವೈರಸ್ ಹರಡದಂತೆ ಅರೋಗ್ಯ ಇಲಾಖೆಯಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಗಾಳಿಯಲ್ಲಿ ಔಷಧ ಸಿಂಪಡಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಇಂದು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆ ವರೆಗೆ ಗಾಳಿಯಲ್ಲಿ ಔಷಧ ಸಿಂಪಡಿಸಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಹೊರಗಡೆ ಬರಬಾರದು ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂತಹ ಊಹಾಪೋಹದ …

Read More »

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಗೆ ಸನ್ಮಾನ

ಗೋಕಾಕ: ಕೆಪಿಸಿಸಿಗೆ ಕಾರ್ಯಾಧ್ಯಕ್ಷರಾಗಿ ನೇಮಕರಾದ ಶಾಸಕ ಸತೀಶ ಜಾರಕಿಹೊಳಿ ಅವರನ್ನು ಗೋಕಾಕ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಅಭಿನಂದಿಸಿದರು. ಇಲ್ಲಿನ ಶಾಸಕರ ಕಚೇರಿಯಲ್ಲಿ ನಗರಸಭೆ ಮತ್ತು ಎಪಿಎಂಸಿ ಸದಸ್ಯರು ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೂತನ ಕಾರ್ಯಾಧ್ಯಕ್ಷರನ್ನು ಸನ್ಮಾನಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಭಗವಂತ ಹುಳ್ಳಿ, ಕುತುಬುದ್ದೀನ್ ಗೋಕಾಕ, ಬಸವರಾಜ ದೇಶನೂರ, ವಿವೇಕ ಜತ್ತಿ, ಬಸವರಾಜ ದೇಶನೂರ, ಅನಿಲ ಮುರಾರಿ, ಸಂತೋಷ ಮಂತ್ರಣ್ಣವರ ಸೇರಿ ಹಲವು ನಗರ …

Read More »

ನಾಲ್ವರನ್ನು ಬಲಿ ಪಡೆದಿದ್ದ ನರಭಕ್ಷಕ ಚಿರತೆಗಾಗಿ ಕೂಂಬಿಂಗ್ – ಕಾರ್ಯಾಚರಣೆ ವೇಳೆ ಮತ್ತೊಂದು ಚಿರತೆ ಸೆರೆ

ತುಮಕೂರು: ನಾಲ್ವರನ್ನ ಬಲಿ ತೆಗೆದುಕೊಂಡಿದ್ದ ನರಭಕ್ಷಕ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಾಕಷ್ಟು ಕೂಂಬಿಂಗ್ ನಡೆಸ್ತಾನೆ ಇದೆ. ಆದರೆ ಆ ನರಭಕ್ಷಕ ಚಿರತೆ ಮಾತ್ರ ಸೆರೆ ಸಿಕ್ಕಿಲ್ಲ. ಈ ನಡುವೆ ತಾಲೂಕಿನ ಹಾಲನೂರು ಗ್ರಾಮದ ಸೇತುವೆ ಬಳಿ ಕಾಣಿಸಿಕೊಂಡ ಚಿರತೆಯನ್ನ ಅರಣ್ಯ ಇಲಾಖೆ ಯಶಸ್ವಿಗಾಗಿ ಸೆರೆ ಹಿಡಿದಿದೆ. ನರಭಕ್ಷರ ಚಿರತೆ ಸೆರೆಗಾಗಿ ನಾಲ್ಕು ಆನೆ, ನೂರಾರು ಅರಣ್ಯ ಸಿಬ್ಬಂದಿ, ಗ್ರಾಮಸ್ಥರು ಹಗಲು ರಾತ್ರಿ ನಿಂತರವಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಆದರೂ ಚಾಲಾಕಿ …

Read More »

ಹುಬ್ಬಳ್ಳಿಯ ಕಿಮ್ಸ್ ಗೆ ಪಾಪು ನಾಮಕರಣ ಮಾಡಲು ಯತ್ನ- ಬಿ.ಸಿ.ಪಾಟೀಲ್ ಭರವಸೆ

ಹಾವೇರಿ: ನಾಡೋಜ ಪಾಟೀಲ ಪುಟ್ಟಪ್ಪನವರ ಹೆಸರನ್ನು ಉಳಿಸುವ ಸಲುವಾಗಿ ಅವರ ಹೆಸರನ್ನು ಹುಬ್ಬಳ್ಳಿ ಕಿಮ್ಸ್ ಗೆ ನಾಮಕರಣ ಮಾಡಲು ಸಿಎಂ ಜೊತೆ ಹಾಗೂ ಸಚಿವ ಸಂಪುಟ ಸಭೆಯದಲ್ಲಿ ಚರ್ಚೆ ಮಾಡುವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದರು. ಪಾಟೀಲ ಪುಟ್ಟಪ್ಪ ವಿಧಿವಶರಾದರ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಸರ್ಕಾರದ ಪರವಾಗಿ ಭಾಗಿಯಾಗಿ ಮಾತನಾಡಿದ ಅವರು, ಪಾಟೀಲ ಪುಟ್ಟಪ್ಪ ಕನ್ನಡದ ಗಟ್ಟಿಧ್ವನಿಯಾಗಿದ್ದರು. ಇಂದು ಆ ಗಟ್ಟಿ ಧ್ವನಿ ಸ್ಥಬ್ದವಾಗಿದೆ. ನಾನು ಸಚಿವನಾಗಬೇಕು ಎನ್ನುವ …

Read More »

ನಾನ್​ವೆಜ್ ಪ್ರಿಯರಿಗೆ ಶಾಕ್​; ಯುಗಾದಿ ಹಬ್ಬದ ಹೊಸತೊಡುಕು ದಿನ ಮಾಂಸ‌ ಮಾರಾಟ ನಿಷೇಧ..!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾಗೂ ಹಕ್ಕಿಜ್ವರದ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಮಾಂಸ ಪ್ರಿಯರಿಗೆ ಬಿಗ್​ ಶಾಕ್​ ನೀಡಿದೆ.ಯುಗಾದಿ ಹಬ್ಬದ ಹೊಸತಡುಕು ದಿನ ಮಾಂಸ‌ ಮಾರಾಟ ನಿಷೇಧ ಮಾಡಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಸಾರ್ವಜನಿಕವಾಗಿ ಪ್ರಾಣಿ ಬಲಿ‌ ಕೊಡುವಂತಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ ಅಂತಾ ಆದೇಶ ಹೊರಡಿಸಿದ್ದಾರೆ.ಕೊರೊನಾ ವೈರಸ್​ ಹರಡಿದಾಗಿನಿಂದ ಈಗಾಗಲೇ ಕುಕ್ಕುಟೋದ್ಯಮ ನೆಲ ಕಚ್ಚಿದ. ನಮ್ಮ ರಾಜ್ಯದಲ್ಲೇ ಲಕ್ಷಾಂತರ ಕೋಳಿಗಳನ್ನು …

Read More »

ಬೆಂಗಳೂರಿನಲ್ಲಿ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳ ಸಭೆ : ಬಾಲಚಂದ್ರ ಜಾರಕಿಹೊಳಿ

ಕೆಎಮ್‍ಎಫ್ ಬಲವರ್ಧನೆಗೆ ವಿನೂತನ ಯೋಜನೆ ಬೆಂಗಳೂರಿನಲ್ಲಿ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ ಬೆಂಗಳೂರು: ಮುಂದಿನ ದಿನಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯ ಮಾರುಕಟ್ಟೆಯನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳು ಶಕ್ತಿ ಮೀರಿ ದುಡಿದು ಕೆಎಮ್‍ಎಫ್ ಬಲವರ್ಧನೆಗೆ ಶ್ರಮಿಸುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಬುಧವಾರದಂದು ಬೆಂಗಳೂರಿನಲ್ಲಿ 14 ಜಿಲ್ಲಾ ಹಾಲು …

Read More »

ಕೊರೊನಾ ಭೀತಿ ನಡುವೆಯೇ ಅದ್ದೂರಿ ಮದ್ವೆಯಲ್ಲಿ ಎಚ್‍ಡಿಡಿ ಭಾಗಿ:ಸಿಎಂ ಆದೇಶಕ್ಕೆ ಕ್ಯಾರೇ ಎನ್ನದ ಜೆಡಿಎಸ್ ಜಿಲ್ಲಾಧ್ಯಕ್ಷ

ಚಿತ್ರದುರ್ಗ: ಸ್ವತಃ ತಾವೇ ಆದೇಶ ಹೊರಡಿಸಿ ಇಂದು ಬೆಳಗಾವಿಯಲ್ಲಿ ನಡೆದ ಅದ್ದೂರಿ ಮದುವೆಯಲ್ಲಿ ಸಿಎಂ ಯಡಿಯೂರಪ್ಪ ಪಾಲ್ಗೊಂಡರೆ, ಇತ್ತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಕೂಡ ತಮ್ಮ ಪಕ್ಷದ ಜಿಲ್ಲಾಧ್ಯಕ್ಷನ ಮಗನ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ರಾಜ್ಯಾದ್ಯಂತ ಹಬ್ಬ ಹರಿದಿನಗಳು ಹಾಗೂ ಮದುವೆ, ಸಮಾರಂಭಗಳು ಸೇರಿದಂತೆ ಜಾತ್ರೆಯನ್ನು ಸಹ ನಡೆಸದಂತೆ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಆದರೆ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಅದ್ದೂರಿಯಾಗಿ ಸಾವಿರಾರು ಜನರನ್ನು …

Read More »

ಗದಗದಲ್ಲಿ ಮೂರುವರೆ ವರ್ಷದ ಕಂದಮ್ಮನಿಗೆ ಕೊರೊನಾ ಸೋಂಕಿರುವ ಶಂಕೆ…….,

ಗದಗ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕಿತ ಪ್ರಕರಣ ವರಿದಿಯಾಗಿದ್ದು, ಲಂಡನ್‍ನಿಂದ ಗದಗಕ್ಕೆ ಬಂದ ಮೂರುವರೆ ವರ್ಷದ ಮಗುವಿಗೆ ಸೋಂಕು ತಟ್ಟಿರುವ ಶಂಕೆ ವ್ಯಕ್ತವಾಗಿದೆ. ಲಂಡನ್‍ನಿಂದ ಜಿಲ್ಲೆಗೆ ಬಂದಿದ್ದ ಕುಟುಂಬಕ್ಕೆ ಕೊರೊನಾ ಸೋಂಕಿರುವ ಶಂಕೆ ವ್ಯಕ್ತವಾಗಿದೆ. ಸೋಂಕು ಶಂಕಿತ ವ್ಯಕ್ತಿಗಳನ್ನ ಗದಗ ಜಿಮ್ಸ್ ಆಸ್ಪತ್ರೆಯ ಐಸೊಲೇಷನ್ ವಾರ್ಡಿಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಗದಗ ಮೂಲದ ಕುಟುಂಬ ಲಂಡನ್‍ನಲ್ಲಿ ನೆಲೆಸಿತ್ತು. ಆದರೆ ತಂದೆ, ತಾಯಿ ಮಗುವಿನೊಂದಿಗೆ ಮಾರ್ಚ್ 9ರಂದು …

Read More »