Breaking News

ಹುಬ್ಬಳ್ಳಿಯ ಕಿಮ್ಸ್ ಗೆ ಪಾಪು ನಾಮಕರಣ ಮಾಡಲು ಯತ್ನ- ಬಿ.ಸಿ.ಪಾಟೀಲ್ ಭರವಸೆ

Spread the love

ಹಾವೇರಿ: ನಾಡೋಜ ಪಾಟೀಲ ಪುಟ್ಟಪ್ಪನವರ ಹೆಸರನ್ನು ಉಳಿಸುವ ಸಲುವಾಗಿ ಅವರ ಹೆಸರನ್ನು ಹುಬ್ಬಳ್ಳಿ ಕಿಮ್ಸ್ ಗೆ ನಾಮಕರಣ ಮಾಡಲು ಸಿಎಂ ಜೊತೆ ಹಾಗೂ ಸಚಿವ ಸಂಪುಟ ಸಭೆಯದಲ್ಲಿ ಚರ್ಚೆ ಮಾಡುವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದರು.

ಪಾಟೀಲ ಪುಟ್ಟಪ್ಪ ವಿಧಿವಶರಾದರ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಸರ್ಕಾರದ ಪರವಾಗಿ ಭಾಗಿಯಾಗಿ ಮಾತನಾಡಿದ ಅವರು, ಪಾಟೀಲ ಪುಟ್ಟಪ್ಪ ಕನ್ನಡದ ಗಟ್ಟಿಧ್ವನಿಯಾಗಿದ್ದರು. ಇಂದು ಆ ಗಟ್ಟಿ ಧ್ವನಿ ಸ್ಥಬ್ದವಾಗಿದೆ. ನಾನು ಸಚಿವನಾಗಬೇಕು ಎನ್ನುವ ಆಸೆ ಅವರಿಗೆ ತುಂಬಾ ಇತ್ತು. ಸಚಿವನಾದ ನಂತರ ಅವರನ್ನು ಮಾತನಾಡಿಸಲು ಹೋದಾಗ ಮಾತನಾಡುವ ಸ್ಥಿತಿಯಲ್ಲಿ ಅವರು ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು

ಪಾಪು ಅವರು ಹುಟ್ಟು ಹೋರಾಟಗಾರರಾಗಿದ್ದರು. ಹೀಗಾಗಿ ಅವರ ಹೆಸರು ಅಮರವಾಗಿರಲು ಕಿಮ್ಸ್ ಆಸ್ಪತ್ರೆಗೆ ಅವರ ಹೆಸರು ನಾಮಕರಣ ಮಾಡುವ ಬಗ್ಗೆ ಸಿಎಂ ಜೊತೆ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುವೆ ಎಂದರು.


Spread the love

About Laxminews 24x7

Check Also

ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶ

Spread the loveಬೆಳಗಾವಿ: ಮಹಾನಗರ ಪಾಲಿಕೆಯ ತಿನಿಸು ಕಟ್ಟೆ ಮಳಿಗೆಗಳನ್ನು ತಮ್ಮ ಪತ್ನಿಯರ ಹೆಸರಿನಲ್ಲಿ ಪಡೆದ ಪ್ರಕರಣದಡಿ ಪಾಲಿಕೆಯ ಇಬ್ಬರು ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ