Breaking News
Home / ಜಿಲ್ಲೆ / ನಾನ್​ವೆಜ್ ಪ್ರಿಯರಿಗೆ ಶಾಕ್​; ಯುಗಾದಿ ಹಬ್ಬದ ಹೊಸತೊಡುಕು ದಿನ ಮಾಂಸ‌ ಮಾರಾಟ ನಿಷೇಧ..!

ನಾನ್​ವೆಜ್ ಪ್ರಿಯರಿಗೆ ಶಾಕ್​; ಯುಗಾದಿ ಹಬ್ಬದ ಹೊಸತೊಡುಕು ದಿನ ಮಾಂಸ‌ ಮಾರಾಟ ನಿಷೇಧ..!

Spread the love

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾಗೂ ಹಕ್ಕಿಜ್ವರದ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಮಾಂಸ ಪ್ರಿಯರಿಗೆ ಬಿಗ್​ ಶಾಕ್​ ನೀಡಿದೆ.ಯುಗಾದಿ ಹಬ್ಬದ ಹೊಸತಡುಕು ದಿನ ಮಾಂಸ‌ ಮಾರಾಟ ನಿಷೇಧ ಮಾಡಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಸಾರ್ವಜನಿಕವಾಗಿ ಪ್ರಾಣಿ ಬಲಿ‌ ಕೊಡುವಂತಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ ಅಂತಾ ಆದೇಶ ಹೊರಡಿಸಿದ್ದಾರೆ.ಕೊರೊನಾ ವೈರಸ್​ ಹರಡಿದಾಗಿನಿಂದ ಈಗಾಗಲೇ ಕುಕ್ಕುಟೋದ್ಯಮ ನೆಲ ಕಚ್ಚಿದ. ನಮ್ಮ ರಾಜ್ಯದಲ್ಲೇ ಲಕ್ಷಾಂತರ ಕೋಳಿಗಳನ್ನು ಜೀವಂತವಾಗಿ ಹೂತು, ನಾಶ ಮಾಡಲಾಗಿದೆ. ಮತ್ತೊಂದೆಡೆ ಮಟನ್​ ರೇಟ್ ಗಗನಕ್ಕೇರಿದೆ. ಇಷ್ಟೆಲ್ಲ ಅವಘಡದ ನಡುವೆ ಚಿಕನ್​ ಪ್ರಿಯರಂತೂ ವಿರಹ ವೇದನೆಯಿಂದ ಬಳಲುವಂತೆ ಆಗ್ತಿದೆ. ಈ ನಡುವೆ ಬಿಬಿಎಂಪಿಯ ಈ ನಿರ್ಧಾರವಂತೂ ದೊಡ್ಡ ಶಾಕ್ ನೀಡಿದಂತಾಗಿದೆ.


Spread the love

About Laxminews 24x7

Check Also

‘ಅಯ್ಯೋ ತಗಡೇ’ ಎಂದ ‘ನಟ ದರ್ಶನ್’ ವಿರುದ್ಧ ‘ಮತ್ತೆರಡು ದೂರು’ ದಾಖಲು

Spread the love ಬೆಂಗಳೂರು: ಅಯ್ಯೋ ತಗಡೇ ಎಂಬುದಾಗಿ ಹೇಳಿಕೆ ನೀಡಿ, ಗುಮ್ಮಿಸಿಕೊಳ್ಳೋದಕ್ಕೆ ಎಂಬುದಾಗಿ ಮಹಿಳೆಯರಿಗೆ ಅವಮಾನ ಮಾಡಿದಂತ ನಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ