Breaking News

ಕೊರೊನಾ ಭೀತಿ ನಡುವೆಯೇ ಅದ್ದೂರಿ ಮದ್ವೆಯಲ್ಲಿ ಎಚ್‍ಡಿಡಿ ಭಾಗಿ:ಸಿಎಂ ಆದೇಶಕ್ಕೆ ಕ್ಯಾರೇ ಎನ್ನದ ಜೆಡಿಎಸ್ ಜಿಲ್ಲಾಧ್ಯಕ್ಷ

Spread the love

ಚಿತ್ರದುರ್ಗ: ಸ್ವತಃ ತಾವೇ ಆದೇಶ ಹೊರಡಿಸಿ ಇಂದು ಬೆಳಗಾವಿಯಲ್ಲಿ ನಡೆದ ಅದ್ದೂರಿ ಮದುವೆಯಲ್ಲಿ ಸಿಎಂ ಯಡಿಯೂರಪ್ಪ ಪಾಲ್ಗೊಂಡರೆ, ಇತ್ತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಕೂಡ ತಮ್ಮ ಪಕ್ಷದ ಜಿಲ್ಲಾಧ್ಯಕ್ಷನ ಮಗನ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ರಾಜ್ಯಾದ್ಯಂತ ಹಬ್ಬ ಹರಿದಿನಗಳು ಹಾಗೂ ಮದುವೆ, ಸಮಾರಂಭಗಳು ಸೇರಿದಂತೆ ಜಾತ್ರೆಯನ್ನು ಸಹ ನಡೆಸದಂತೆ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಆದರೆ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಅದ್ದೂರಿಯಾಗಿ ಸಾವಿರಾರು ಜನರನ್ನು ಸೇರಿಸುವ ಮೂಲಕ ತಮ್ಮ ಮಗನ ವಿವಾಹವನ್ನು ಚಿತ್ರದುರ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಯಶೋಧರ ಹಿರಿಯೂರಿನ ಖಾಸಗಿ ಕಲ್ಯಾಣ ಮಂಟಪವೊಂದರಲ್ಲಿ ನೆರವೇರಿಸಿದ್ದಾರೆ.

ಹಿರಿಯೂರಿನ ತಾಹ ಪ್ಯಾಲೇಸ್ ನಲ್ಲಿ ಯಶೋಧರ ಪುತ್ರ ವೈ.ಆರ್ ಗೌಡ ಜೊತೆ ಮೇಘನಾ ವಿವಾಹ ನಡೆಸಲಾಯಿತು. ಈ ಅದ್ದೂರಿ ಮದುವೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸಹ ಆಗಮಿಸಿದ್ದರು. ಆಗ ಈ ಬಗ್ಗೆ ಪ್ರಶ್ನಿಸಲು ಮುಂದಾದ್ರೆ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಯಾವುದೇ ಚಕಾರ ಎತ್ತದೇ ಬೆಂಗಳೂರಿಗೆ ತೆರಳಿದರು.


Spread the love

About Laxminews 24x7

Check Also

ಕಸಾಯಿ ಗಲ್ಲಿಯ ರಸ್ತೆಯಲ್ಲಿ ನಿರ್ಮಾಣಗೊಂಡ ಬೃಹತ್ ಗುಂಡಿ…

Spread the love ಕಸಾಯಿ ಗಲ್ಲಿಯ ರಸ್ತೆಯಲ್ಲಿ ನಿರ್ಮಾಣಗೊಂಡ ಬೃಹತ್ ಗುಂಡಿ… ಸಂಚರಿಸಲು ಪರದಾಡುತ್ತಿರುವ ವಾಹನ ಸವಾರರು…ಸಮಸ್ಯೆ ಬಗೆಹರಿಸಿದ್ದರೇ ಪ್ರತಿಭಟನೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ