ಬೆಳಗಾವಿ: ‘ಭಾರತೀಯ ಹಬ್ಬಗಳು ಪರಿಸರವನ್ನು ಪೂಜಿಸಿ, ಅದರ ಪ್ರಾಮುಖ್ಯತೆಯನ್ನು ಜನಸಾಮಾನ್ಯರಿಗೆ ತಿಳಿಸುತ್ತ ಬಂದಿವೆ. ಮಣ್ಣು, ನೀರು, ಗಾಳಿಯಲ್ಲಿ ದೈವ ಕಾಣುವ ಕಾಣುವ ಭಾರತೀಯ ಹಬ್ಬಗಳ ಮೂಲ ಆಶಯವೇ ಪರಿಸರ ಸಂರಕ್ಷಣೆ’ ಎಂದು ಪ್ರಾಧ್ಯಾಪಕ ಮಂಜುನಾಥ ಶರಣಪ್ಪನವರ ಹೇಳಿದರು. ಇಲ್ಲಿನ ಶಿವಬಸವ ನಗರದ ಸಿದ್ಧರಾಮೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಅಟಲ್ ಟಿಂಕರಿಂಗ್ ಲ್ಯಾಬ್ನಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಡಾ. ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ …
Read More »Daily Archives: ಸೆಪ್ಟೆಂಬರ್ 4, 2024
8 ಮತಕ್ಷೇತ್ರದಲ್ಲಿ ಅಭಿವೃದ್ಧಿ: ಪ್ರಿಯಾಂಕ ಜಾರಕಿಹೊಳಿ
ಯಮಕನಮರಡಿ: ‘ಮತಕ್ಷೇತ್ರದಲ್ಲಿ ಕಳೆದ 15ವರ್ಷದಲ್ಲಿ ನನ್ನ ತಂದೆ ಸತೀಶ ಜಾರಕಿಹೊಳಿ ಬಹಳಷ್ಟು ಅಭಿವೃದ್ದಿ ಕಾರ್ಯ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ 8 ಮತಕ್ಷೇತ್ರದಲ್ಲಿ ಅಭಿವೃದ್ದಿ ಮಾಡುವೆ’ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ಸಮೀಪದ ಉಳ್ಳಾಗಡ್ಡಿ ಖಾನಾಪೂರದ ರಾಷ್ಟ್ರೀಯ ಹೆದ್ದಾರಿ 4ರಿಂದ ಉ.ಖಾನಾಪೂರ ಗ್ರಾಮದ ಪ್ರಮುಖ ರಸ್ತೆ ಸುಧಾರಣೆಗೆ ಲೋಕೋಪಯೋಗಿ ಇಲಾಖೆಯಿಂದ ₹1ಕೋಟಿ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಉ.ಖಾನಾಪೂರ ಗ್ರಾಮದ ರೈತನಿಗೆ ಅಪ್ಪಣ್ಣಾ …
Read More »ಪಂಪ್ಸೆಟ್ಗಳಿಗೆ ಆಧಾರ್ ಜೋಡಣೆ ಕೈಬಿಡಲು ಆಗ್ರಹ
ಬೆಳಗಾವಿ: ನೀರಾವರಿ ಪಂಪ್ಸೆಟ್ಗಳ ವಿದ್ಯುತ್ ಮೀಟರ್ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಣೆ ಆದೇಶ ಕೈಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಇಲ್ಲಿನ ಹೆಸ್ಕಾಂ ಅಧೀಕ್ಷಕರ ಕಚೇರಿ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ರೈತರು ಕಚೇರಿಗೆ ನುಗ್ಗದಂತೆ ಪೊಲೀಸರು ತಡೆದರು. ಆಗ ಕಚೇರಿ ಆವರಣದಲ್ಲೇ ಕುಳಿತ ಪ್ರತಿಭಟನಕಾರರು, ವಿದ್ಯುತ್ ವಲಯದ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ …
Read More »ಬರದ ಹಿನ್ನೆಲೆಯಲ್ಲಿ ಕಳೆದ ಬಾರಿ ಮಂಕಾಗಿದ್ದ ಗಣೇಶೋತ್ಸವ, ಈ ಬಾರಿ ಕಳೆಗಟ್ಟಿದೆ
ಬೆಳಗಾವಿ: ಬರದ ಹಿನ್ನೆಲೆಯಲ್ಲಿ ಕಳೆದ ಬಾರಿ ಮಂಕಾಗಿದ್ದ ಗಣೇಶೋತ್ಸವ, ಈ ಬಾರಿ ಕಳೆಗಟ್ಟಿದೆ. ವಿವಿಧ ರಂಗಗಳಲ್ಲಿ ಆರ್ಥಿಕ ವಹಿವಾಟು ಚೇತರಿಕೆ ಕಂಡಿದ್ದು, ‘ಚೌತಿ’ ಸಂಭ್ರಮ ಇಮ್ಮಡಿಗೊಂಡಿದೆ. ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು 10ರಿಂದ 25 ಅಡಿವರೆಗಿನ ಎತ್ತರದ ಮೂರ್ತಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಇಲ್ಲಿನ ಬಿ.ಎಸ್.ಯಡಿಯೂರಪ್ಪ ಮಾರ್ಗದ ಗೋದಾಮಿನಲ್ಲಿ ಕಲಾವಿದ ಮನೋಹರ ಪಾಟೀಲ, ಅವರ ಪುತ್ರರಾದ ವಿನಾಯಕ ಹಾಗೂ ಪ್ರಸಾದ ಹಲವು ದಶಕಗಳಿಂದ ಗಣೇಶನ ಮೂರ್ತಿ ತಯಾರಿಕೆ ಕಾಯಕದಲ್ಲಿ ತೊಡಗಿದ್ದಾರೆ. ಅವರ ಬಳಿ …
Read More »ಸೆ.22 ರಂದು ನಿಗದಿಯಾದ ‘PSI’ ಪರೀಕ್ಷೆ ದಿನಾಂಕ ಮುಂದೂಡಿಕೆ ಇಲ್ಲ : ಸ್ಪಷ್ಟನೆ ನೀಡಿದ ‘KEA’
ಬೆಂಗಳೂರು : ಇದೇ ಸೆಪ್ಟೆಂಬರ್ 22ರಂದು ನಡೆಯಲಿರುವ ಪಿಎಸ್ಐ ನೇಮಕಾತಿ ಪರೀಕ್ಷೆ ದಿನಾಂಕವನ್ನು ಯಾವುದೇ ಕಾರಣಕ್ಕೂ ಮುಂದೂಡಿಕೆ ಮಾಡುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪಷ್ಟಪಡಿಸಿದೆ. ಈ ಕುರಿತು KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾಹಿತಿ ತಿಳಿಸಿದ್ದು, ಗೃಹ ಸಚಿವರು ಹಾಗೂ ಡಿಜಿಪಿಗೂ ಪತ್ರ ಬರೆಯಲಾಗಿದೆ. ಸೂಕ್ಷ್ಮ ಕೇಂದ್ರಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸುವ ಬಗ್ಗೆಯೂ ಚರ್ಚೆ ಆಗಿದೆ ಎಂದು ಅವರು ವಿವರಿಸಿದ್ದಾರೆ. ದಾವಣಗೆರೆ, ಧಾರವಾಡ, ಕಲಬುರಗಿ, ಶಿವಮೊಗ್ಗ ಮತ್ತು …
Read More »ಮಂಡ್ಯದಲ್ಲಿ 10 ಸಾವಿರ ಲಂಚ ಪಡೆಯುತ್ತಿದ್ದಾಗ ತಹಶೀಲ್ದಾರ್ ಕಚೇರಿ FDA ಲೋಕಾಯುಕ್ತ ಬಲೆಗೆ
ಮಂಡ್ಯ: ಜಿಲ್ಲೆಯಲ್ಲಿ ರೈತರೊಬ್ಬರಿಂದ 10,000 ಲಂಚವನ್ನು ಪಡೆಯುತ್ತಿದ್ದಾಗ ತಹಶೀಲ್ದಾರ್ ಕಚೇರಿಯ ಎಫ್ ಡಿಎ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಂಡ್ಯ ತಹಶೀಲ್ದಾರ್ ಕಚೇರಿಯ ಲಂಚಾವತಾರ ಬಯಲಾಗಿದೆ. ಮರಕಾಡುದೊಡ್ಡಿ ಗ್ರಾಮದ ರೈತ ಮೋಹನ್ ಎಂಬುವರು ಭೂಮಿ ಶಾಖೆಯ ಎಫ್ ಡಿಎ ತಿಪ್ಪೇಸ್ವಾಮಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಮಂಡ್ಯ ತಹಶೀಲ್ದಾರ್ ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಭೂಮಿ ಶಾಖೆಯ …
Read More »ಪಾತ್ರ ಬೇಕಾ ಪಲ್ಲಂಗಕ್ಕೆ ಬನ್ನಿ ,ಲೈಂಗಿಕ ಹಗರಣದ ಸುಳಿಯಲ್ಲಿ ಸ್ಟಾರ್ ನಟರು & ನಿರ್ದೇಶಕರು?
Sex scandal: ಮೀಟೂ ಅಭಿಯಾನದಿಂದ ಕನ್ನಡ ಚಿತ್ರರಂಗದ ಕೆಲವು ಸ್ಟಾರ್ ನಟರು, ನಿರ್ದೇಶಕರಲ್ಲಿ ನಡುಕವುಂಟಾಗಿದೆ. ಕೇರಳ ಚಿತ್ರರಂಗದಲ್ಲಿ ಈಗಾಗಲೇ ಘಾಟಾನುಘಟಿ ಸ್ಟಾರ್ ನಟರ ಹೆಸರು ಕೇಳಿ ಬಂದಿದೆ. ಸೂಪರ್ ಸ್ಟಾರ್ ನಟರಾದ ನವಿನ್ ಪೌಲಿ ಹಾಗೂ ಜಯಸೂರ್ಯ ಸೇರಿದಂತೆ ಹಲವರ ಮೇಲೆ ಕೇರಳದ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲಿ ಹೇಮಾ ಕಮಿಟಿ ವರದಿ ಮಂಡನೆಯ ನಂತರ ಮೀಟೂ ಅಭಿಯಾನಕ್ಕೆ ಅಲ್ಲಿ ಬೆಲೆ ಬಂದಿದ್ದು, ಸ್ಟಾರ್ ನಟರನ್ನು ನಡುಗಿಸಿದೆ. ಇದೀಗ ಕನ್ನಡ …
Read More »ಮೊಬೈಲ್ ಕೊಡಲು ನಿರಾಕರಿಸಿದ್ದಕ್ಕೆ ತಲ್ವಾರ್ನಿಂದ ಹಲ್ಲೆ..ಮುಂದೇನಾಯ್ತು?
ಮುಂಬೈ: ಮೊಬೈಲ್ ಕೊಡಲು ನಿರಾಕರಿಸಿದ ವ್ಯಕ್ತಿಯೋರ್ವನ ಮೇಲೆ ತಲ್ವಾರ್ನಿಂದ ಹಲ್ಲೆ ನಡೆಸಿರುವ ಭೀಕರ ಘಟನೆ ಮುಂಬೈನ ಧಾರಾವಿಯಲ್ಲಿ ಬುಧವಾರ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆಯಲ್ಲಿ ಯುವಕರ ಗುಂಪು ಜನನಿಬಿಡ ಪ್ರದೇಶದಲ್ಲಿ ತಲ್ವಾರ್ನಿಂದ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಮಂಗಳವಾರ ಘಟನೆ ನಡೆದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ದಾರಿಯಲ್ಲಿ ಸಾಗುತ್ತಿದ್ದ ಯುವಕನನ್ನು ತಡೆದ ಮತ್ತೊಬ್ಬ ಯುವಕ ಮೊಬೈಲ್ ಕೊಡುವಂತೆ ಒತ್ತಾಯಿಸಿದ್ದಾನೆ. ಆಗ …
Read More »ಕಿಕ್ಕೇರಿ: ದೇಗುಲ ಶುಚಿಗೊಳಿಸಿದ ವಿದ್ಯಾರ್ಥಿಗಳು
ಕಿಕ್ಕೇರಿ: ದೇಗುಲ ಶುಚಿಗೊಳಿಸಿದ ವಿದ್ಯಾರ್ಥಿಗಳು ಕಿಕ್ಕೇರಿ: ಹೊಯ್ಸಳರ ಕಾಲದ ಬ್ರಹ್ಮೇಶ್ವರ ದೇಗುಲದ ಹೊರಾಂಗಣ, ಗೋಪುರದಲ್ಲಿ ಬೇರು ಬಿಟ್ಟಿದ್ದ ಗಿಡಗಂಟಿಗಳನ್ನು ಬುಧವಾರ ತೆರವು ಮಾಡುವ ಮೂಲಕ ಕಿಕ್ಕೇರಿಯ ಸರ್ಕಾರಿ ಪಿಯು ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಮಾದರಿಯಾದರು. ಮುಳ್ಳುಗಿಡ, ಕುರುಚಲು ಗಿಡ, ಆಲದಮರ ಟಿಸಿಲೊಡೆದು ದೇಗುಲಕ್ಕೆ ಅಪಾಯವೊಡ್ಡುವಂತಿತ್ತು. ದೇಗುಲದ ಸ್ಥಿತಿ ಕುರಿತು ಅರ್ಚಕ ಆದಿತ್ಯ ಅವರ ಮನವಿಗೆ ಸ್ಪಂದಿಸಿ 40 ಕ್ಕೂ ಹೆಚ್ಚು ಉಪನ್ಯಾಸಕರು , ವಿದ್ಯಾರ್ಥಿಗಳು ಶುಚಿತ್ವಕ್ಕೆ ಕೈಜೋಡಿಸಿದರು. ಕುಡುಗೋಲು, ಹಾರೆ, ಪಿಕಾಸಿ, …
Read More »ಮಳೆ: ಹಳ್ಳದಲ್ಲಿ ಕೊಚ್ಚಿ ಹೋದ ಯುವಕ
ರಾಯಚೂರು: ಜಿಲ್ಲೆಯ ವಿವಿಧೆಡೆ ಮಂಗಳವಾರ ದಿನವಿಡೀ ಸುರಿದ ಜಿಟಿಜಿಟಿ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಠಿಯಾಯಿತು. ತಾಲ್ಲೂಕಿನ ಪತ್ತೆಪುರ ಗ್ರಾಮದ ಹಳ್ಳ ದಾಟುತ್ತಿದ್ದ ಜಾಗೀರ ವೆಂಕಟಾಪುರ ಗ್ರಾಮದ ಯುವಕ ಬಸವರಾಜ (33) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮಂಗಳವಾರ ರಾತ್ರಿ ಮಳೆ ಸುರಿದಿದೆ. ಹಳ್ಳದಲ್ಲಿ ರಭಸವಾಗಿ ನೀರು ಹರಿಯುತ್ತಿತ್ತು. ಬಸವರಾಜ ಸೇರಿ ಸುಮಾರು 8 ಜನ ಪರಸ್ಪರ ಕೈ ಹಿಡಿದುಕೊಂಡು ಹಳ್ಳ ದಾಟುತ್ತಿದ್ದರು. ಬಸವರಾಜ ಅವರು ಕೈಯಲ್ಲಿ …
Read More »