Breaking News
Home / ಅಂತರಾಷ್ಟ್ರೀಯ / ಜನರಿಂದ ಜನರಿಗಾಗಿ ಭಾನುವಾರ ಜನತಾ ಕರ್ಫ್ಯೂ – ಮೋದಿ

ಜನರಿಂದ ಜನರಿಗಾಗಿ ಭಾನುವಾರ ಜನತಾ ಕರ್ಫ್ಯೂ – ಮೋದಿ

Spread the love

ಜನರೇ ಸ್ವಯಂ ಕರ್ಫ್ಯೂ ವಿಧಿಸಿಕೊಳ್ಳಬೇಕು
ಅದಷ್ಟು ಜನ ಮನೆಯಲ್ಲಿರಿ, ಹೊರಗಡೆ ಬರಬೇಡಿ
ವೈದ್ಯರು, ನರ್ಸ್‍ಗಳು, ಮಾಧ್ಯಮಗಳಿಗೆ ಧನ್ಯವಾದ

 

ನವದೆಹಲಿ: ಜನರಿಂದ, ಜನರಿಗಾಗಿ, ಜನರಿಗೋಸ್ಕರ ಜನರೇ ಈ ಭಾನುವಾರ ಸ್ವಯಂ ಕರ್ಫ್ಯೂ ವಿಧಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ದೇಶದ ಪ್ರಜೆಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೊರೊನಾ ವೈರಸ್ ದೇಶವ್ಯಾಪಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ 8 ಗಂಟೆಗೆ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇಂದು ಪರಿಸ್ಥಿತಿ ಎರಡನೇ ಮಹಾಯುದ್ಧದ ಸನ್ನಿವೇಶಕ್ಕಿಂತ ಗಂಭೀರವಾಗಿದೆ. ಮುಂದಿನ ಕೆಲವು ವಾರ ಮನೆಯಿಂದ ಹೊರಗೆ ಬರಬೇಡಿ. ಈ ವೇಳೆ ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದೇಶದ ಜನತೆ ಮನೆಯಲ್ಲಿ ಇರಬೇಕು. ಈ ಅವಧಿಯಲ್ಲಿ ಯಾರು ಹೊರಗಡೆ ಓಡಾಡಬೇಡಿ ಎಂದು ಮನವಿ ಮಾಡಿಕೊಂಡರು

ಜನರೇ ವಿಧಿಸುವ ಕರ್ಫ್ಯೂ ಯಶಸ್ವಿಯಾಗಲು ಎನ್‍ಸಿಸಿ, ಎನ್‍ಎಸ್‍ಎಸ್ ಸೇರಿದಂತೆ ಸ್ವಯಂ ಸೇವಾ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು ಕನಿಷ್ಟ 10 ಜನರಿಗೆ ತಿಳಿಸಬೇಕು. ಇದು ಭಾರತದ ಮಟ್ಟಿಗೆ ದೊಡ್ಡ ಪರೀಕ್ಷೆ ಎಂದರು.

ಕೊರೊನಾಗೆ ಔಷಧಿ ಇಲ್ಲ. ಹೀಗಾಗಿ ನಾವು ಜಾಗ್ರತೆಯಿಂದ ಇರಲು ಸಂಕಲ್ಪ ಮತ್ತು ಸಂಯಮ ಬಹಳ ಮುಖ್ಯ. ಸ್ವಯಂ ಸಂಕಲ್ಪದಿಂದ ನಾವು ಮಹಾಮಾರಿಯನ್ನು ಹೊಡೆದೋಡಿಸಬಹುದು. ದೇಶದಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ವೈರಸ್ ಸೋಕದೇ ಇರಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದರು.

ಮುಂದಿನ ಕೆಲವು ವಾರ ತುರ್ತು ಸಂದರ್ಭ, ಅಗತ್ಯ ಸಂದರ್ಭ ಹೊರತುಪಡಿಸಿ ಮನೆಯಿಂದ ಹೊರಗೆ ಬರಬೇಡಿ. ನಿಮಗೆ ನೀವು ಸ್ವಯಂ ಗೃಹ ನಿರ್ಬಂಧ ವಿಧಿಸಿಕೊಳ್ಳಿ. ಆದರಲ್ಲೂ 65 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಗೆ ಬರಲೇಬೇಡಿ ಎಂದು ನಿರ್ದೇಶನ ನೀಡಿದರು.

ವೈದ್ಯರು, ನರ್ಸ್, ಮಾಧ್ಯಮ ಸೇರಿದಂತೆ ಕೊರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಭಾನುವಾರ ಸಂಜೆ 5 ಗಂಟೆಗೆ ಮನೆಯಲ್ಲೇ ನಿಂತು ವಂದನೆ ಸಲ್ಲಿಸಬೇಕು. ಕೊರೊನಾ ಬಂದಿದ್ದಕ್ಕೆ ನಾವು ಎದೆಗುಂದಬೇಕಿಲ್ಲ .ಆತಂಕ ಪಡಬೇಕಿಲ್ಲ. ಆದರೆ ಕೊರೊನಾ ವಿರುದ್ಧದ ಕದನವನ್ನು ಇನ್ನೂ ಕೆಲವು ವಾರ ಮಾಡಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಸಹಕಾರ, ಸಮಯ ಬೇಕಿದೆ. ಮುಂಬರುವ ಕೆಲ ದಿನಗಳನ್ನು ನಮಗೆ ನೀಡಿ. ಕೆಲವೊಂದು ತ್ಯಾಗಗಳಿಗೆ ಜನತೆ ಸಿದ್ದರಾಬೇಕಿದೆ ಎಂದು ಕರೆ ನೀಡಿದರು.


Spread the love

About Laxminews 24x7

Check Also

ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣ: ಬಜರಂಗದಳ ದಾಳಿಗೆ ಹೆದರಿ ನಾಪತ್ತೆಯಾಗಿರುವ ಅನುಮಾನ

Spread the loveಮಂಗಳೂರು, ಫೆಬ್ರವರಿ 26: ಪಿಹೆಚ್​ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ (Missing Case) ಇದೀಗ ಹಲವು ಅನುಮಾನಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ