Breaking News

ರಾಜಕೀಯ

‘ಮೈ ಬೆಳಗಾವಿ’ ಆಯಪ್‌ನಲ್ಲಿ ಹಲವು ಸೇವೆ

ಬೆಳಗಾವಿ: ‘ಮೈ ಬೆಳಗಾವಿ’ ಮೊಬೈಲ್‌ ಆಯಪ್ ಮೂಲಕ ಸಾರ್ವಜನಿಕರಿಗೆ ಹಲವು ಸೇವೆಗಳನ್ನು ಒದಗಿಸಲಾಗುತ್ತಿದೆ’ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಬಾಗೇವಾಡಿ ತಿಳಿಸಿದರು. ಇಲ್ಲಿನ ವಿಶ್ವೇಶ್ವರಯ್ಯ ನಗರದ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್‌ನಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.   ‘ಆಯಪ್ ಬಳಕೆ ಮೂಲಕ ಆಂಬುಲೆನ್ಸ್ ಸೇವೆ, ಪ್ರವಾಸಿ ತಾಣಗಳು ಮತ್ತು ಬಸ್ ಸಂಚಾರದ ಸಮಗ್ರ ಮಾಹಿತಿ ಪಡೆಯಬಹುದು. ನಗರ ಸಾರಿಗೆ ಬಸ್‌ಗಳ ಸ್ಥಳ ಪತ್ತೆ ಹಚ್ಚಬಹುದು. ಸರ್ಕಾರಿ ಜಿಲ್ಲಾ ಕಚೇರಿಗಳ …

Read More »

ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಸತ್ತಿಗೇರಿಯ ಸಹನಾ ಕನ್ನಡದಲ್ಲಿ ಟಾಪರ್

ಬೆಳಗಾವಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಪ್ರಕಟವಾಗಿದ್ದು, ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಸಹನಾ ಮಹಾಂತೇಶ ರಾಯರ, ಕನ್ನಡ ವಿಭಾಗದಲ್ಲಿ ಪೂರ್ಣ ಅಂಕ ಗಳಿಸಿ ರಾಜ್ಯಕ್ಕೆ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ.   ಸಂತಸ ಹಂಚಿಕೊಂಡ ಅವರು, ‘ಕೋವಿಡ್‌-19 ಸಂಕಷ್ಟದಿಂದ ತರಗತಿ ಸಮರ್ಪಕವಾಗಿ ನಡೆಯಲಿಲ್ಲ. ಆನ್‌ಲೈನ್‌ ತರಗತಿಗೆ ಹಾಜರಾಗಲು ನೆಟ್‌ವರ್ಕ್‌ ಸಮಸ್ಯೆಯೂ ಕಾಡುತ್ತಲಿತ್ತು. ಆದರೂ, ಸಮಸ್ಯೆಗೆ ಎದೆಗುಂದದೆ ಆತ್ಮವಿಶ್ವಾಸದಿಂದ ಓದು ಮುಂದುವರಿಸಿದೆ. ಶಿಕ್ಷಕರು ಮತ್ತು ಹೆತ್ತವರು ಪ್ರೋತ್ಸಾಹಿಸಿದರು. …

Read More »

ಬೆಳಗಾವಿ ಜಿಲ್ಲೆಯ 10 ಮಂದಿ ಟಾಪರ್ಸ್‌

ಬೆಳಗಾವಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿದ 145 ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪೈಕಿ ಜಿಲ್ಲೆಯ 10 ಮಂದಿ ಇದ್ದಾರೆ. ಈ ಪೈಕಿ 6 ವಿದ್ಯಾರ್ಥಿಗಳು ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ ಸೇರಿದವರಾಗಿದ್ದು, ನಾಲ್ವರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯವರಾಗಿದ್ದಾರೆ.   ಇವರಲ್ಲಿ ಕನ್ನಡ ಮಾಧ್ಯಮದವರು ಮೂವರು ಹಾಗೂ ಉಳಿದವರು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರಾಗಿದ್ದಾರೆ. ಎರಡೂ ಶೈಕ್ಷಣಿಕ ಜಿಲ್ಲೆಗಳು ‘ಎ’ ಗ್ರೇಡ್ ಪಡೆದಿವೆ. ಕನ್ನಡ ಮಾಧ್ಯಮದಲ್ಲಿ ಜಿಲ್ಲೆಯ ಯರಗಟ್ಟಿ ತಾಲ್ಲೂಕು ಸತ್ತಿಗೇರಿ …

Read More »

ವಿಧಾನಪರಿಷತ್ ಚುನಾವಣೆ: ಅಧಿಸೂಚನೆ ಪ್ರಕಟ

ಬೆಳಗಾವಿ: ಕರ್ನಾಟಕ ವಾಯವ್ಯ ಪಧವೀಧರು ಮತ್ತು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನಪರಿಷತ್ತಿಗೆ ತಲಾ ಒಬ್ಬ ಸದಸ್ಯರನ್ನು ಚುನಾಯಿಸಲು ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿಯಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ.   ನಾಮಪತ್ರಗಳನ್ನು ಉಮೇದುವಾರರು ಅಥವಾ ಅವರ ಸೂಚಕರು ಚುನಾವಣಾಧಿಕಾರಿ ಕಚೇರಿ ಅಥವಾ ಸಹಾಯಕ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಮೇ 26ರೊಳಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) ಸಲ್ಲಿಸಬಹುದು ಎಂದು ತಿಳಿಸಲಾಗಿದೆ. …

Read More »

ಗುತ್ತಿಗೆದಾರರ 40% ಕಮಿಷನ್ ಕೂಗಿಗೆ ಧ್ವನಿಯಾಗಿದ್ದ ಕಾಂಗ್ರೆಸ್ ಈಗ ಉಲ್ಟಾ?

ರಾಜ್ಯ ಬಿಜೆಪಿ ಸರಕಾರ ನಲವತ್ತು ಪರ್ಸೆಂಟ್ ಅವ್ಯವಹಾರ ನಡೆಸುತ್ತಿದೆ ಎನ್ನುವ ಆರೋಪ ಮನೆಮಾತಾಗಲು ಪ್ರಮುಖ ಕಾರಣವಾಗಿದ್ದ ಗುತ್ತಿಗೆದಾರರ ಸಂಘ ಮತ್ತು ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರು ಕಾಂಗ್ರೆಸ್ ಏಜೆಂಟ್ ನಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ರಾಜ್ಯ ಸರಕಾರದ ಇಲಾಖೆಗಳಲ್ಲಿ ಅದರಲ್ಲೂ ಪ್ರಮುಖವಾಗಿ ಜಲಸಂಪನ್ಮೂಲ, ಆರೋಗ್ಯ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ ಎಂದು ಕೆಂಪಣ್ಣ ಅವರು ನೇರವಾಗಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದರು. ಪ್ರಧಾನಿಗೆ ಬರೆದ ಪತ್ರ ಸಾರ್ವಜನಿಕವಾಗುತ್ತಿದ್ದಂತೆಯೇ ವಿರೋಧ …

Read More »

SSLC ಫಲಿತಾಂಶ: 1.22 ಲಕ್ಷ ವಿದ್ಯಾರ್ಥಿಗಳು ಫೇಲ್- ಜೂ. 26ರಿಂದ ಪೂರಕ ಪರೀಕ್ಷೆ

ಬೆಂಗಳೂರು, ಮೇ. 19: ಕರ್ನಾಟಕದಲ್ಲಿ 2022 ನೇ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಅನುತ್ತಿರ್ಣರಾದ ವಿದ್ಯಾರ್ಥಿಗಳ ಮರು ಮೌಲ್ಯಮಾಪನ ಹಾಗೂ ಪೂರಕ ಪರೀಕ್ಷೆಯ ದಿನಾಂಕವನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರಕಟಿಸಿದ್ದಾರೆ. 2022 ಜೂನ್ 26 ರಿಂದ 2022 ಜುಲೈ 04 ರಿಂದ ಎಸ್‌ಎಸ್‌ಎಲ್ ಸಿ ಪೂರಕ ಪರೀಕ್ಷೆ ನಡೆಯಲಿದೆ. ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿಗಳು ಮೇ. 20 ರಿಂದ ಮೇ. 30 ರೊಳಗೆ ಆನ್‌ಲೈನ್ ನಲ್ಲಿ …

Read More »

ಮಂಗಳೂರಿನಲ್ಲಿ ಉಪೇಂದ್ರ ಆ್ಯಂಡ್ ಟೀಮ್

ಹಲವಾರು ವಿಚಾರಗಳಿಂದ ಸುದ್ದಿ ಮಾಡ್ತಿರೋ ಸ್ಯಾಂಡಲ್‌ವುಡ್ ನಿರೀಕ್ಷಿತ `ಕಬ್ಜ’ ಸಿನಿಮಾ. ಕೊನೆಯ ಹಂತದ ಶೂಟಿಂಗ್‌ಗಾಗಿ ಮಂಗಳೂರಿನಲ್ಲಿ ಬೀಡು ಬಿಟ್ಟಿದೆ. ಆರ್.ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್‌ನಲ್ಲಿ ಕಬ್ಜ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಸದ್ಯ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ `ಕಬ್ಜ’ ಚಿತ್ರ ರಿಲೀಸ್‌ಗೂ ಮುಂಚೆನೇ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. 70-80ರ ದಶಕದ ಅಂಡರ್‌ವರ್ಲ್ಡ್ ಕಥೆಯನ್ನ ಹೇಳೋಕೆ …

Read More »

ಚಿಕ್ಕಬಳ್ಳಾಪುರದ ಒಂದೇ ಶಾಲೆಯ ಮೂವರು ರಾಜ್ಯಕ್ಕೆ ಪ್ರಥಮ 625 ಅಂಕಗಳನ್ನು ಪಡೆದಿದ್ದಾರೆ.

ಚಿಕ್ಕಬಳ್ಳಾಫುರ: ಜಿಲ್ಲೆಯ ಒಂದೇ ಶಾಲೆಯ ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ಬಿಜಿಎಸ್ ಶಾಲೆಯ ಜಯಂತಿ ಬಿ ಗೌಡ, ಲೀಸಾ ಎಚ್.ಸಿ, ಪ್ರೀತಿ ಎಸ್ 625 ಅಂಕಗಳನ್ನು ಪಡೆದಿದ್ದಾರೆ. ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ. ಶಿಡ್ಲಘಟ್ಟದ ಬಿಜಿಎಸ್ ಶಾಲೆಯ ಜಿ ಹರ್ಷಿತಾ ಹಾಗೂ ಗೌರಿಬಿದನೂರಿನ ಬಿಜಿಎಸ್ ಶಾಲೆಯ ತೃಪ್ತಿ ಕೆಸಿ 625 ಅಂಕಗಳನ್ನು ಪಡೆದಿದ್ದಾರೆ. ಈ ಬಾರಿ ರಾಜ್ಯದಲ್ಲಿ ಶೇ.85.63 …

Read More »

‘ದ್ವಿತೀಯ PUC ಪರೀಕ್ಷೆ’ ಬರೆದ ವಿದ್ಯಾರ್ಥಿಗಳೇ ಗಮನಿಸಿ : ‘ಪ್ರಶ್ನೆಪತ್ರಿಕೆ’ಗಳ ‘ಮಾದರಿ ಉತ್ತರ’ ಪ್ರಕಟ |

ಬೆಂಗಳೂರು: ಏಪ್ರಿಲ್ 22 ರಿಂದ ಮೇ.18ರವರೆಗೆ ನಡೆದಂತ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ( Karnataka Second PU Exam ) ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರವನ್ನು ಪಿಯು ಬೋರ್ಡ್ ( PU Board ) ಪ್ರಕಟಿಸಿದೆ. ಈ ಮಾದರಿ ಉತ್ತರಗಳಿಗೆ ಮೇ.20ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.   ಈ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, 2022ರ ಏಪ್ರಿಲ್, ಮೇ ತಿಂಗಳಿನಲ್ಲಿ …

Read More »

ಕೆಟ್ಟ ಚಾಲಕರನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೈಸೂರು, ಬೆಂಗಳೂರಿಗೆ ಅಗ್ರಸ್ಥಾನ

ನವದೆಹಲಿ:ದೇಶದ ಪ್ರಮುಖ ಸ್ವಯಂ-ಡ್ರೈವ್ ಬಾಡಿಗೆ ಕಾರು ಕಂಪನಿಗಳಲ್ಲಿ ಒಂದಾದ ಜೂಮ್‌ಕಾರ್‌ನ ಸಮೀಕ್ಷೆಯ ಪ್ರಕಾರ, ಕೆಟ್ಟ ಚಾಲಕರನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ, ಭಾರತದ ಸಿಲಿಕಾನ್ ವ್ಯಾಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇಂದೋರ್, ಡ್ರೈವಿಂಗ್ ಎಥಿಕ್ಸ್‌ನಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದೆ. ಜೂಮ್‌ಕಾರ್ ತನ್ನ ಸ್ವಾಮ್ಯದ ಡ್ರೈವ್ ಸ್ಕೋರಿಂಗ್ ಸಿಸ್ಟಮ್‌ನ ಸಹಾಯದಿಂದ ದೇಶದ 22 ನಗರಗಳಲ್ಲಿ ಸಮೀಕ್ಷೆಯನ್ನು ನಡೆಸಿತು. ನವೆಂಬರ್ 2020 ಮತ್ತು ನವೆಂಬರ್ 2021 ರ ನಡುವೆ ಸಂಗ್ರಹಿಸಿದ ಡೇಟಾವು ಮಧ್ಯಪ್ರದೇಶದ ರಾಜಧಾನಿ …

Read More »