Home / ಜಿಲ್ಲೆ / ಬೆಳಗಾವಿ / ಬೆಳಗಾವಿಯಲ್ಲಿ ಪೆಟ್ರೊಲ್ ಕಳ್ಳರ ಹಾವಳಿ ….. ಸಿಸಿ ಕ್ಯಾಮರಾದಲ್ಲಿ ಸೆರೆ

ಬೆಳಗಾವಿಯಲ್ಲಿ ಪೆಟ್ರೊಲ್ ಕಳ್ಳರ ಹಾವಳಿ ….. ಸಿಸಿ ಕ್ಯಾಮರಾದಲ್ಲಿ ಸೆರೆ

Spread the love

ಪೆಟ್ರೋಲ್ ಬೆಲೆ ಏರಿಕೆ ಈಗ ಹೊಸ ಸಮಸ್ಯೆ ತಂದೊಡ್ಡಿದೆ. ಇಷ್ಟು ದಿನ ಮನೆ ಬೀಗ ಮುರಿದು ಒಳ ನುಗ್ಗಿ ಆಭರಣ ಕದಿಯುತ್ತಿದ್ದ ಕಳ್ಳರೀಗ, ಮನೆಯಂಗಳದಲ್ಲಿ ನಿಲ್ಲಿಸಿರುವ ವಾಹನಗಳಿಂದ ಪೆಟ್ರೋಲ್ ಎಗರಿಸಿ ಪರಾರಿಯಾಗುತ್ತಿದ್ದಾರೆ. ಹೀಗಾಗಿ ಕುಂದಾನಗರಿ ಖ್ಯಾತಿಯ ಬೆಳಗಾವಿ ಜನ, ಅಪಾರ್ಟ್​ಮೆಂಟ್​ನ ಪಾರ್ಕಿಂಗ್​ನಲ್ಲಿ ಹಾಗೂ ತಮ್ಮದೇ ಮನೆಯ ಅಂಗಳದಲ್ಲಿ ವಾಹನ ನಿಲ್ಲಿಸಲೂ ಹಿಂಜರಿಯುವಂತಾಗಿದೆ. ಪೆಟ್ರೋಲ್ ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ದಿನೇದಿನೆ ಇಂಧನ ದರ ಗಗನಕ್ಕೆ | ಕಳ್ಳತನಕ್ಕೆ ಸುಲಭ ಮಾರ್ಗ ಕಂಡುಕೊಂಡ ಖದೀಮರು | ಬೈಕ್​ನ ಪೈಪ್ ಕಿತ್ತು ಪೆಟ್ರೋಲ್ ಕಳ್ಳತನ | ಸಿಸಿ ಕ್ಯಾಮರಾಗಳಲ್ಲಿ ಸೆರೆಯಾದ ದೃಶ್ಯಾವಳಿ | ವಾಹನ ಹೊಂದಿದವರಿಗೆ ಶುರುವಾಯ್ತು ಹೊಸ ಕಿರಿಕಿರಿ

 

ದಿನೇದಿನೆ ಪೆಟ್ರೋಲ್ ದರ ಗಗನಕ್ಕೇರಿರುತ್ತಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ನಷ್ಟ ಅನುಭವಿಸುತ್ತಿದ್ದರೆ, ಇತ್ತ ವಾಹನಗಳಿಗೆ ಭರಿಸಿದ ಪೆಟ್ರೋಲ್​ಅನ್ನು ಕಳ್ಳರು ಕದ್ದೊಯ್ಯುತ್ತಿರುವುದು ಮತ್ತಷ್ಟು ಆತಂಕ ತಂದೊಡ್ಡಿದೆ. ‘ದುಬಾರಿ ದುನಿಯಾ’ದಿಂದ ತತ್ತರಿಸುತ್ತಿರುವ ಜನಸಾಮಾನ್ಯರು, ಚಿನ್ನಾಭರಣ ಜೋಪಾನವಾಗಿಡುವಂತೆಯೇ ಬೈಕ್​ಗೆ ಹಾಕಿಸಿದ ಪೆಟ್ರೋಲ್ ರಕ್ಷಣೆಗೂ ಕಾವಲು ನಿಲ್ಲುವ ಸ್ಥಿತಿ ಬಂದಿದೆ.

ಇಂಧನ ಬೆಲೆಯೇರಿಕೆ ಜನರಿಗೆ ಹೊರೆಯಾಗುತ್ತಿದ್ದರೆ, ಕಳ್ಳರಿಗೆ ಅದು ಆಸರೆಯಾಗತೊಡಗಿದೆ. ಬೈಕ್ ಹಾಗೂ ಇನ್ನಿತರ ವಾಹನ ಕದಿಯುತ್ತಿದ್ದ ಕಳ್ಳರೀಗ, ವಾಹನಗಳ ಟ್ಯಾಂಕ್​ಗಳಲ್ಲಿರುವ ಪೆಟ್ರೋಲ್ ಕದಿಯತೊಡಗಿದ್ದಾರೆ. ಪ್ರತಿದಿನವೂ ನೂರಾರು ಲೀಟರ್ ಪೆಟ್ರೋಲ್ ಕದ್ದು ಸಂಗ್ರಹಿಸಿ ಅದನ್ನು ಲೀಟರ್ ದರಕ್ಕಿಂತ ನಾಲ್ಕೈದು ರೂಪಾಯಿ ಕಡಿಮೆ ದರಕ್ಕೆ ಮಾರಾಟ ಮಾಡಿ ದಿನವೂ ಸಾವಿರಾರು ರೂಪಾಯಿ ಆದಾಯ ಮಾಡಿಕೊಳ್ಳತೊಡಗಿದ್ದಾರೆ.

ಕಳ್ಳತನ ಹೇಗೆ?: ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ಪೆಟ್ರೋಲ್ ಕಳ್ಳತನ ಪ್ರಕರಣ ಹೆಚ್ಚುತ್ತಿವೆ. ಇಬ್ಬರು ಅಥವಾ ಮೂವರು ಕಳ್ಳರಿರುವ ತಂಡ ರಾತ್ರೋರಾತ್ರಿ ಆಗಮಿಸಿ, ಗೇಟ್​ಗೆ ಬೀಗ ಹಾಕಿದ್ದರೂ ಅದನ್ನು ಹಾರಿ ಒಳ ಬರುತ್ತಾರೆ. ಅಂಗಳದಲ್ಲಿ ನಿಲ್ಲಿಸಿರುವ ಬೈಕ್​ನಿಂದ ಸುಲಭವಾಗಿ ಪೆಟ್ರೋಲ್ ಕದಿಯತೊಡಗಿದ್ದಾರೆ. ಬೈಕ್​ನ ಇಂಜಿನ್​ಗೆ ಪೆಟ್ರೊಲ್ ಪೂರೈಸುವ ಪೈಪ್ ತೆಗೆದು ಬಾಟಲ್​ಗಳಲ್ಲಿ ಪೆಟ್ರೋಲ್ ಸಂಗ್ರಹಿಸಿ ಕದ್ದೊಯ್ಯುತ್ತಿದ್ದಾರೆ. ನಗರದ ಕಪಿಲೇಶ್ವರ ಕಾಲನಿಯಲ್ಲಿ ಶನಿವಾರ ರಾತ್ರಿ ಒಟ್ಟು 10 ಬೈಕ್​ಗಳ ಪೆಟ್ರೋಲ್ ಕದ್ದಿದ್ದಾರೆ. ಈ ದೃಶ್ಯ ಮನೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

 


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ