Breaking News

ಜಿಲ್ಲೆ

ರಾಜ್ಯದ ಆರೋಗ್ಯ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹೊರಗುತ್ತಿಗೆ ನೌಕರರಿಂದ ನಾಡಿನ ಜನತೆಗೆ ಕ್ಷಮೆಯಾಚನೆ

  ಬೆಂಗಳೂರು :ಈ ಮೂಲಕ ತಮ್ಮೆಲ್ಲರಲ್ಲಿ ಹಂಚಿಕೊಂಡಿರುವುದು ಏನೆಂದರೆ ಈ ವಿಶ್ವದಲ್ಲಿ ಮಹಾಮಾರಿಯಾಗಿ ಜನಜೀವನಕ್ಕೆ ಹಾಗೂ ಜೀವಕ್ಕೆ ಕಂಟಕ ತಂದಿರುವ ಕೋರೋಣ ವೈರಸ್ ಸಮಯದಲ್ಲಿ ರಾಜ್ಯದ ಆರೋಗ್ಯ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹೊರಗುತ್ತಿಗೆ ನೌಕರರು ಮುಷ್ಕರದಲ್ಲಿರುವುದು ತಮ್ಮೆಲ್ಲರಿಗೂ ತಿಳಿದಿರುವ ವಿಷಯ ಅಥವಾ ತಿಳಿಯಪಡಿಸುತ್ತೇನೆ. ನಮ್ಮ ಮುಷ್ಕರದಿಂದ ರಾಜ್ಯದ ಜನತೆಗೆ ಸಿಗಬೇಕಾದಂತಹ ಆರೋಗ್ಯ ಸೌಲಭ್ಯಗಳು ಸಿಗದಿರುವುದರಿಂದ ಈ ರಾಜ್ಯದ ಎಲ್ಲಾ ಜನಸಾಮಾನ್ಯರಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಗುತ್ತಿಗೆ ಹೊರಗುತ್ತಿಗೆ …

Read More »

ಬೊಲೆರೊ ಮತ್ತು ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದರು

ಸವದತ್ತಿ: ಇಲ್ಲಿನ ಧಾರವಾಡ ರಸ್ತೆಯಲ್ಲಿರುವ ಪುರಸಭೆ ಕಸ ವಿಲೇವಾರಿ ಸಂಕೀರ್ಣದ ಸಮೀಪ ಶುಕ್ರವಾರ ರಾತ್ರಿ ಬೊಲೆರೊ ಮತ್ತು ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದರು. ತಾಲ್ಲೂಕಿನ ಚುಂಚನೂರ ಹಾಗೂ ಜಕಬಾಳ ಗ್ರಾಮಗಳ ಕೂಲಿ ಕಾರ್ಮಿಕರು ಧಾರವಾಡ ಜಿಲ್ಲೆಯ ಮೊರಬ್ ಗ್ರಾಮದ ಜಮೀನಿನಲ್ಲಿ ಕೂಲಿ ಕೆಲಸ ಮುಗಿಸಿ ವಾಪಸಾಗುವಾಗ ಘಟನೆ ನಡೆದಿದೆ. ‘ಡಿಕ್ಕಿಯ ರಭಸಕ್ಕೆ ವಾಹನಗಳು ನುಜ್ಜು ಗುಜ್ಜಾಗಿವೆ. ಮೃತರಲ್ಲಿ ಮೂವರ ಗುರುತಷ್ಟೆ ಪತ್ತೆಯಾಗಿದೆ. ಅವರು …

Read More »

ಸುರೇಶ ಅಂಗಡಿ ಅವರ ಕುಟುಂಬದವರಿಗೆ ಶುಕ್ರವಾರ ರಾತ್ರಿ ಸಾಂತ್ವನ ಹೇಳಿದರು.

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮುಖಂಡರು ಇಲ್ಲಿನ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ದಿ.ಸುರೇಶ ಅಂಗಡಿ ಅವರ ಕುಟುಂಬದವರಿಗೆ ಶುಕ್ರವಾರ ರಾತ್ರಿ ಸಾಂತ್ವನ ಹೇಳಿದರು. ಶಾಸಕರಾದ ಸತೀಶ ಜಾರಕಿಹೊಳಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳ್ಕರ್ ಮತ್ತು ಮಹಾಂತೇಶ ಕೌಜಗಲಿ ಧೈರ್ಯ ಹೇಳಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವಕುಮಾರ್, ‘ಸುರೇಶ ಅಂಗಡಿ ಬಹಳ ಸೌಮ್ಯ ಸ್ವಭಾವದವರಾಗಿದ್ದರು. ನನ್ನೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಭೇಟಿಯೂ ಆಗಿದ್ದೆ. ಸಚಿವರಾದ ನಂತರವೂ …

Read More »

ಮೂವರು ಆರೋಪಿಗಳನ್ನು ಬಂಧಿಸಿ, ₹ 4 ಲಕ್ಷ ಮೌಲ್ಯದ 20 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ: ಜಿಲ್ಲಾ ಸಿಇಎನ್‌ (ಅಪರಾಧ) ಠಾಣೆಯ ಪೊಲೀಸರು ಶುಕ್ರವಾರ ಕಾರ್ಯಾಚರಣೆ ನಡೆಸಿ ಮಹಾರಾಷ್ಟ್ರದ ಮೂವರು ಆರೋಪಿಗಳನ್ನು ಬಂಧಿಸಿ, ₹ 4 ಲಕ್ಷ ಮೌಲ್ಯದ 20 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಜತ್ತ ತಾಲ್ಲೂಕು ಬಿಳ್ಳೂರದ ರಾವಸಾಹೇಬ ಅಣ್ಣಪ್ಪ ನಂದಿವಾಲೆ, ಮೊಹೊಳ ತಾಲ್ಲೂಕು ಶೇಟಪಾಳದ ಸಂಗೀತಾ ದತ್ತಾತ್ರೇಯ ವಾಗಜ ಮತ್ತು ಫಂಡರಪುರ ತಾಲ್ಲೂಕು ಅಡಿವದ ವಿಲಾಸ ಪಾಂಡುರಂಗ ಘಾಡಗೆ ಬಂಧಿತರು. ‘ರಾವಸಾಹೇಬ, ಫಂಡರಪುರದ ಕಡೆಯಿಂದ ಅಥಣಿ ಕಡೆ ಗಾಂಜಾ ಮಾರಲು …

Read More »

ಶಾಲೆ ಬೇಡವೇ ಬೇಡ… 2020-21 ಅನ್ನು ಶೂನ್ಯ ಶೈಕ್ಷಣಿಕ ವರ್ಷವೆಂದು ಘೋಷಣೆ ಮಾಡಿಬಿಡಿ…

ಬೆಂಗಳೂರು: ಈ ವರ್ಷ ಪ್ರಾಥಮಿಕ ಶಾಲೆ ಬೇಡವೇ ಬೇಡ… 2020-21 ಅನ್ನು ಶೂನ್ಯ ಶೈಕ್ಷಣಿಕ ವರ್ಷವೆಂದು ಘೋಷಣೆ ಮಾಡಿಬಿಡಿ… ಇದು ರಾಜ್ಯದ ಬಹುತೇಕ ಮಕ್ಕಳ ಹೆತ್ತವರು, ಶಿಕ್ಷಕರು, ವಿದ್ಯಾರ್ಥಿಗಳು, ಜನತೆಯ ಅಭಿಪ್ರಾಯ. “ಉದಯವಾಣಿ’ ನಡೆಸಿದ ಮೆಗಾ ಸರ್ವೇಯಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಅಭಿಪ್ರಾಯ ತಿಳಿಸಿದ್ದು, ಕೊರೊನಾ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇಂಥ ಸಂದರ್ಭದಲ್ಲಿ ಪುಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ. ಆದರೆ ಎಸೆಸೆಲ್ಸಿ ಮತ್ತು ಪಿಯುಸಿ …

Read More »

ಏಕಾಏಕಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ರೆ ಅನುಮಾನ ಬರೋದು ಸಹಜ ಅಂತಾ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರು: ಏಕಾಏಕಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ರೆ ಅನುಮಾನ ಬರೋದು ಸಹಜ ಅಂತಾ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ನ್ಯೂಸ್​​ಫಸ್ಟ್ ಜೊತೆ ಜಿಲ್ಲಾಧಿಕಾರಿ ಶರತ್ ವರ್ಗಾವಣೆ ಮಾಡಿ ರೋಹಿಣಿ ಸಿಂಧೂರಿ ಅವರನ್ನ ನೇಮಿಸಿರುವ ವಿಚಾರವಾಗಿ ಮಾತನಾಡಿದ ಡಾ.ಯತೀಂದ್ರ.. ಯಾವ ಅಧಿಕಾರಿಯನ್ನೂ ದಿಢೀರ್ ಎಂದು ವರ್ಗಾವಣೆ ಮಾಡಬಾರದು. ಒಂದು ವೇಳೆ ಹಾಗೆ ಮಾಡಿದ್ರೆ ಅನುಮಾನಗಳು ವ್ಯಕ್ತವಾಗುತ್ತವೆ. ಹಣ ಪಡೆದು ವರ್ಗಾವಣೆ ಮಾಡಿದ್ರಾ? ಅಥವಾ ಯಾರದೋ ಪ್ರಭಾವದಿಂದ ವರ್ಗಾವಣೆ ಮಾಡಿದ್ರಾ? ಅನ್ನೋ ಪ್ರಶ್ನೆ ಹುಟ್ಟುತ್ತದೆ ಎಂದರು. …

Read More »

ಪಂಚಾಂಗ : ಶನಿವಾರ, 03.10.2020

ನಿತ್ಯನೀತಿ : ದೈವವೆಂಬುದು ದೂರದಾಕಾಶದಲ್ಲಿ ಎಲ್ಲೋ ಇರುವ ವ್ಯಕ್ತಿ ಅಥವಾ ವಸ್ತುವಲ್ಲ. ಆ ಶಕ್ತಿ ನನ್ನೊಳಗೇ ಅವಿರ್ಭೂತವಾಗಿದೆ. ಅಜ್ಞಾನದಲ್ಲಿ ಹುಡುಕಿದರೆ ಆ ದಿವ್ಯತೆ ವ್ಯಕ್ತವಾಗುವುದಿಲ್ಲ. – ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ # ಪಂಚಾಂಗ : ಶನಿವಾರ, 03.10.2020 ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.08 ಚಂದ್ರ ಉದಯ ರಾ.07.17 / ಚಂದ್ರ ಅಸ್ತ ಬೆ.07.08 ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ …

Read More »

ಬೈಕ್ ಮುಖಾಮುಖಿ: ಮೂವರ ಸಾವು, ಎಲ್ಲಿ?

ವಿಜಯಪುರ: ಎರಡು ಬೈಕ್​ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಬಸವನಬಾಗೇವಾಡಿ ತಾಲೂಕಿನ ದಿಂಡವಾರ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ರೆ. ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕಲಬುರಗಿ ಜಿಲ್ಲೆ ಅಫಜಲಪುರ ಮೂಲದ ಬೈಕ್ ಸವಾರರು ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಹೋಗುವಾಗ ದುರ್ಘಟನೆ ಸಂಭವಿಸಿದೆ. ಅಪಘಾತದ ಬಳಿಕ ಎರಡೂ ಬೈಕ್​ಗಳು ಹೊತ್ತಿ ಉರಿದಿವೆ. ಮೃತರಿಗೆ ತಲೆಗೆ ಮಾತ್ರ ಗಾಯವಾಗಿದ್ದು, ಬೈಕ್ ಗಳು ಭಸ್ಮವಾಗಿವೆ. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …

Read More »

ರಾಜ್ಯದಲ್ಲಿ ಇಂದು 8793 ಜನರಿಗೆ ಕೊರೋನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು 8793 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 6,20,630 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 7094 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 4,99,506 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು 1,11,986 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 125 ಮಂದಿ ಮೃತಪಟ್ಟಿದ್ದು ಇದುವರೆಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 9119 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇವತ್ತು …

Read More »

ಬೆಳಗಾವಿ ನಗರವನ್ನೇ ಬೆಚ್ಚಿ ಬೀಳಿಸಿದ ಜೋಡಿ ಕೊಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ಬೆಳಗಾವಿ: ಬೆಳಗಾವಿ ನಗರವನ್ನೇ ಬೆಚ್ಚಿ ಬೀಳಿಸಿದ ಜೋಡಿ ಕೊಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಎರಡು ಕೊಲೆಯ ಹಿಂದಿದೆ ಡಬಲ್​ ಪ್ರೇಮ್ ಕಹಾನಿ. ಹಣಕೊಟ್ಟು ಹೆಣ ಕೆಡವಲು ಯೋಜನೆ ರೂಪಿಸಿದ್ದ ಪಾಪಿ ಹೆಣ್ಣು ಹಾಗೂ ಸಹೋದರ ಮತ್ತು ಆತನ ಸ್ನೇಹಿತರು ಈಗ ಬಂಧಿತರಾಗಿದ್ದಾರೆ. ಈ ಪ್ರಕರಣವನ್ನು ಐದೇ ದಿನದಲ್ಲಿ ಬೆಳಗಾವಿ ಪೊಲೀಸರು ಭೇದಿಸಿದ್ದು, ಮಚ್ಚೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ಸೆಪ್ಟೆಂಬರ್.26 ರಂದು …

Read More »