Breaking News

ಜಿಲ್ಲೆ

‘ಮಹಾತ್ಮ ಗಾಂಧೀಜಿ ಅವರ ಚಿಂತನೆ, ವಿಚಾರವೇ ಕಾಂಗ್ರೆಸ್ ತತ್ವ

ಬೆಳಗಾವಿ : ‘ಮಹಾತ್ಮ ಗಾಂಧೀಜಿ ಅವರ ಚಿಂತನೆ, ವಿಚಾರವೇ ಕಾಂಗ್ರೆಸ್ ತತ್ವ. ಅವರ ಮಾರ್ಗದರ್ಶನವನ್ನು ನಾವು ಬಳಸಿಕೊಂಡು ಇಂದು ಈ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿಯನ್ನು ಕಾಪಾಡಬೇಕಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಇಲ್ಲಿನ ಸೇವಾದಳ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಮಹಾತ್ಮ ಗಾಂಧೀಜಿ ಅವರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿ.ಕೆ ಶಿವಕುಮಾರ್ ಅವರು ಗಾಂಧಿಜಿ ಅವರ ಕೊಡುಗೆಯನ್ನು ಸ್ಮರಿಸುತ್ತಾ ದೇಶದ ರಕ್ಷಣೆಗಾಗಿ ಪಕ್ಷದ ಕಾರ್ಯಕರ್ತರು …

Read More »

ಈ ಸರ್ಕಾರಗಳು ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಗೊತ್ತಿಲ್ಲ ಎಂದು ಆರಣ್ಯ ಸಚಿವ ಆನಂದ್ ಸಿಂಗ್ ಅಚ್ಚರಿ

ಬಳ್ಳಾರಿ: ಈ ಸರ್ಕಾರಗಳು ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಗೊತ್ತಿಲ್ಲ ಎಂದು ಆರಣ್ಯ ಸಚಿವ ಆನಂದ್ ಸಿಂಗ್ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ. ಬಳ್ಳಾರಿಯ ಹೊಸಪೇಟೆ ತಾಲೂಕಿನ ಕಮಾಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂನಲ್ಲಿ 66ನೇ ವನ್ಯ ಜೀವಿ ಸಂರಕ್ಷಣಾ ಸಪ್ತಾಹದ ಅಂಗವಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಪ್ತಾಹದಲ್ಲಿ ಪಾಲ್ಗೊಂಡಿರುವ ಎಲ್ಲಾ ಅಧಿಕಾರಿಗಳಿಗೆ ಹಾಗೇ ಅರಣ್ಯ ರಕ್ಷಣೆ ಮಾಡುವಂತಹ ಎಲ್ಲಾ ಯುವಕರಾಗಿರಲಿ, ನಾವೆಲ್ಲರೂ ಇವತ್ತಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೀವಿ. ಇವತ್ತು …

Read More »

ಕೆಪಿಟಿಸಿಎಲ್ ಪವರ್ ಪ್ಲಾಂಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದುರ್ಘಟನೆಯಲ್ಲಿ 15ಕ್ಕೂ ಹೆಚ್ಚು ಸಿಬ್ಬಂದಿ ಗಂಭೀರ

ಬೆಂಗಳೂರು: ಯಲಹಂಕದ ಅನಂತಪುರ ಗೇಟ್ ಬಳಿ ಇರುವ ಕೆಪಿಟಿಸಿಎಲ್ ಪವರ್ ಪ್ಲಾಂಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದುರ್ಘಟನೆಯಲ್ಲಿ 15ಕ್ಕೂ ಹೆಚ್ಚು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 11 ಕೆಪಿಟಿಸಿಎಲ್, 2 ಬಿಎಚ್​​ಇಎಲ್​​ ಹಾಗೂ ಇತರೆ ಇಬ್ಬರು ಇಂಜಿಯರ್‌ಗಳು ಗಾಯಗೊಂಡಿದ್ದು, ಎಲ್ಲರನ್ನೂ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅನಂತ್‌ಪುರ ಗೇಟ್‌ ಬಳಿ ನಸುಕಿನ ಜಾವ 3.30ಕ್ಕೆ ಅವಘಡ ಸಂಭವಿಸಿರೋದಾಗಿ ಅಧಿಕಾರಿಯೊಬ್ಬರು ತಿಳಿಸಿದರು. ಆಸ್ಪತ್ರೆಗೆ ಅಲೆದಾಟ ಗಾಯಾಳುಗಳನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. …

Read More »

‘ಅಂಗಡಿ ಕುಂಟುಂಬದವರಿಗೆ ಅನ್ಯಾಯ : ಡಿ ಕೆ ಸಿ ಗೆ ರಮೇಶ ಜಾರಕಿಹೊಳಿ ತಿರುಗೇಟು

ಬೆಳಗಾವಿ: ‘ಅಂಗಡಿ ಕುಂಟುಂಬದವರಿಗೆ ನ್ಯಾಯ ಒದಗಿಸದ ಬಿಜೆಪಿ ಸರ್ಕಾರ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿರುಗೇಟು ನೀಡಿದರು. ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸುರೇಶ ಅಂಗಡಿ ನಿಧನದ ವಿಷಯದಲ್ಲಿ ಅವರೇ ರಾಜಕೀಯ ಮಾಡುತ್ತಿದ್ದಾರೆ. ಕೋವಿಡ್-19 ಮಾರ್ಗಸೂಚಿ ಪ್ರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದಂತೆ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲಾಗಲಿಲ್ಲ. ಎಷ್ಟೇ ದೊಡ್ಡವರಿದ್ದರೂ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎನ್ನುವುದು …

Read More »

ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ

ಗದಗ: ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಕಬಲಾಯತಕಟ್ಟಿ ತಾಂಡದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಲಕ್ಷ್ಮಣ ಪಾಂಡಪ್ಪ ಲಮಾಣಿ (39) ಮೃತ ದುರ್ದೈವಿ. ಈತನ ಪತ್ನಿ ಲಲಿತಾ ಮತ್ತು ಈಕೆಯ ಪ್ರಿಯಕರ ಸೋಮಪ್ಪ ಚೆನ್ನಪ್ಪ ಲಮಾಣಿ ಕೊಲೆ ಆರೋಪಿಗಳು. ರಾತ್ರಿ ಮನೆಯಲ್ಲಿ ಮಲಗಿದ್ದ ಲಕ್ಷ್ಮಣ ಪಾಂಡಪ್ಪ ಅವರನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಲಲಿತಾ ಮತ್ತು ಸೋಮಪ್ಪ ನಾಲ್ಕು ವರ್ಷಗಳಿಂದ ಅಕ್ರಮ ಸಂಬಂಧ …

Read More »

ಅನುಶ್ರೀ ಮೊಬೈಲ್ ತಪಾಸಣೆ ನಡೆಸಿದಾಗ ಅನುಶ್ರೀ ಕಾಲ್ ಲಿಸ್ಟ್ ನಲ್ಲಿದ್ದ ಹೆಸರು ಕಂಡು ಸ್ವತಃ ಸಿಸಿಬಿ ಅಧಿಕರಿಗಳೇ ದಂಗಾಗಿದ್ದಾರೆ.

ಮಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ನಿರೂಪಕಿ ಅನುಶ್ರೀ ಅವರ ಮೊಬೈಲ್ ಪರಿಶೀಲಿಸಿದ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಪ್ರಕರಣದಲ್ಲಿ ತಮ್ಮ ಹೆಸರು ಹೊರ ಬರುತ್ತಿದ್ದಂತೆಯೇ ಅನುಶ್ರೀ ಪ್ರಭಾವಿ ನಾಯಕರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಅನುಶ್ರೀಗೆ ನೋಟಿಸ್ ನೀಡುತ್ತಿದ್ದಂತೆಯೇ ಅನುಶ್ರೀ ಮೂವರು ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿದ್ದಾರೆ. ವಿಚಾರಣೆ ವೇಳೆ ಅನುಶ್ರೀ ಮೊಬೈಲ್ ತಪಾಸಣೆ ನಡೆಸಿದಾಗ ಅನುಶ್ರೀ ಕಾಲ್ ಲಿಸ್ಟ್ ನಲ್ಲಿದ್ದ ಹೆಸರು …

Read More »

ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ಗೆ ಪೈಪೋಟಿ : ಮುನ್ನೀರತ್ನ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ಗೆ ಪೈಪೋಟಿ ಏರ್ಪಟ್ಟಿದೆ. ಮಾಜಿ ಶಾಸಕ ಮುನಿರತ್ನ ಹಾಗೂ ತುಳಸಿ ಮುನಿರಾಜು ಗೌಡ ಅವರ ಹೆಸರುಗಳನ್ನು ಪರಿಗಣಿಸಿದ ಕೋರ್ ಕಮಿಟಿ ಸಭೆ ಕೇಂದ್ರ ಚುನಾವಣಾ ಸಮಿತಿಗೆ ರವಾನಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಸರ್ಕಾರ ರಚನೆಯಲ್ಲಿ ಸಹಕಾರ ನೀಡಿದ ಮುನಿರತ್ನ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಹೇಳಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ತುಳಸಿ ಮುನಿರಾಜು …

Read More »

ಸಾಮೂಹಿಕ ಅತ್ಯಾಚಾರ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ

ಬೆಳಗಾವಿ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟ ಯುವ ಘಟಕದ ಮುಖಂಡರು ಮತ್ತು ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಅವರು, ಆ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡಲೆ ತಪ್ಪಿತಸ್ಥರನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು. …

Read More »

ರಾಹುಲ್ ಗಾಂಧಿ ಅವರನ್ನು ತಡೆದು, ಬಂಧಿಸಿದ ಉತ್ತರ ಪ್ರದೇಶದ ಪೊಲೀಸರ ಕ್ರಮ ಸರಿಯಲ್ಲ: ದೇವೇಗೌಡ

ಬೆಂಗಳೂರು : ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು ಉತ್ತರ ಪ್ರದೇಶದ ಹತ್ರಾಸ್‍ಗೆ ತೆರಳುತ್ತಿದ್ದ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರನ್ನು ತಡೆದು, ಬಂಧಿಸಿದ ಉತ್ತರ ಪ್ರದೇಶದ ಪೊಲೀಸರ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿರುವ ಜೆಡಿಎಸ್ ವರಿಷ್ಟ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಗುರುವಾರ ಟ್ವೀಟ್ ಮಾಡಿರುವ ದೇವೇಗೌಡರು, ಎಐಸಿಸಿ ಮುಖಂಡ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು …

Read More »

ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು (ಆರ್‌ಸಿಯು) ಕೋವಿಡ್-19 ಕಾರಣದಿಂದ ಅನುಸರಿಸುತ್ತಿರುವ ‘ಮಿತವ್ಯಯ ಉದ್ದೇಶ’ದ ಕ್ರಮವು ‘ಯುಜಿಸಿಯೇತರ ಉಪನ್ಯಾಸಕ’ರಿಗೆ ಸಿಗುತ್ತಿದ್ದ ಭತ್ಯೆಗೆ ಕತ್ತರಿ ಹಾಕಿದೆ.

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು (ಆರ್‌ಸಿಯು) ಕೋವಿಡ್-19 ಕಾರಣದಿಂದ ಅನುಸರಿಸುತ್ತಿರುವ ‘ಮಿತವ್ಯಯ ಉದ್ದೇಶ’ದ ಕ್ರಮವು ‘ಯುಜಿಸಿಯೇತರ ಉಪನ್ಯಾಸಕ’ರಿಗೆ ಸಿಗುತ್ತಿದ್ದ ಭತ್ಯೆಗೆ ಕತ್ತರಿ ಹಾಕಿದೆ. ಈಚೆಗೆ ನಡೆದ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ವಿವಿಧ ವಿಷಯಗಳ ಅಂತಿಮ ವರ್ಷದ ಪದವಿ ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಅರಂಭವಾಗಿದೆ. ಈ ಕರ್ತವ್ಯಕ್ಕೆ ಯುಜಿಸಿ ಉಪನ್ಯಾಸಕರಿಗೆ ಮಾತ್ರವೇ ಅನುಮತಿಸಿರುವುದು ಯುಜಿಸಿಯೇತರ ಉಪನ್ಯಾಸಕರ ಆಕ್ಷೇಪಕ್ಕೆ ಕಾರಣವಾಗಿದೆ. ಇಲ್ಲಿನ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ …

Read More »