Breaking News
Home / ಜಿಲ್ಲೆ / ಬೆಳಗಾವಿ / ಬೆಳಗಾವಿ ನಗರವನ್ನೇ ಬೆಚ್ಚಿ ಬೀಳಿಸಿದ ಜೋಡಿ ಕೊಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ಬೆಳಗಾವಿ ನಗರವನ್ನೇ ಬೆಚ್ಚಿ ಬೀಳಿಸಿದ ಜೋಡಿ ಕೊಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

Spread the love

ಬೆಳಗಾವಿ: ಬೆಳಗಾವಿ ನಗರವನ್ನೇ ಬೆಚ್ಚಿ ಬೀಳಿಸಿದ ಜೋಡಿ ಕೊಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಎರಡು ಕೊಲೆಯ ಹಿಂದಿದೆ ಡಬಲ್​ ಪ್ರೇಮ್ ಕಹಾನಿ. ಹಣಕೊಟ್ಟು ಹೆಣ ಕೆಡವಲು ಯೋಜನೆ ರೂಪಿಸಿದ್ದ ಪಾಪಿ ಹೆಣ್ಣು ಹಾಗೂ ಸಹೋದರ ಮತ್ತು ಆತನ ಸ್ನೇಹಿತರು ಈಗ ಬಂಧಿತರಾಗಿದ್ದಾರೆ. ಈ ಪ್ರಕರಣವನ್ನು ಐದೇ ದಿನದಲ್ಲಿ ಬೆಳಗಾವಿ ಪೊಲೀಸರು ಭೇದಿಸಿದ್ದು, ಮಚ್ಚೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ಸೆಪ್ಟೆಂಬರ್.26 ರಂದು ಸಂಜೆ ನಾಲ್ಕು ಘಂಟೆಗೆ ರೋಹಿಣಿ(21) ಮತ್ತು ರಾಜಶ್ರೀ (21) ಎಂಬ ಗೃಹಿಣಿಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಂದು ಕೊಲೆಯಾದ ರೋಹಿಣಿ 6 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಮಚ್ಚೆ ಗ್ರಾಮದ ಹೊರವಲಯದಲ್ಲಿ ವಾಕಿಂಗ್ ಮಾಡುತ್ತಿದ್ದಾಗ ದುಷ್ಕರ್ಮಿಗಳು ಕಣ್ಣಿಗೆ ಕಾರದ ಪುಡಿ ಎರಚಿ ಕೊಲೆ ಮಾಡಿದ್ದರು‌.ಅಂದಿನಿಂದ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಇದೀಗ ಆರೋಪಿ ಕಲ್ಪನಾ ಸೇರಿ 5 ಜನ ಹಂತಕರನ್ನು ಬಂಧಿಸಲಾಗಿದೆ. ಬಂಧಿತರನ್ನು ಕಲ್ಪನಾ(35), ಮಹೇಶ್ (20), ರಾಹುಲ್(19), ರೋಹಿತ(21) ಮತ್ತು ಶಾನೂರ(18) ಎಂದು ಗುರುತಿಸಲಾಗಿದೆ.ಇನ್ನು ಕೊಲೆಯಾದ ರೋಹಿಣಿಯ ಗಂಡ ಗಂಗಪ್ಪ ಹುಲಮನಿಗೆ ಸುಮಾರು ವರ್ಷಗಳಿಂದ ಆರೋಪಿ ಕಲ್ಪನಾ ಪರಿಚಯವಿದ್ದಳು. ಇಬ್ಬರೂ ಬೆಳಗಾವಿ ತಾಲೂಕಿನ ಕಾಳ್ಯಾನಟ್ಟಿ ಗ್ರಾಮದವರು. ಒಂದೇ ಗ್ರಾಮದವರಾಗಿದ್ದರಿಂದ ಇಬ್ಬರು ಸ್ನೇಹಿತರಾಗಿದ್ದರು. ಇವರ ಸ್ನೇಹ ಸಲುಗೆಯಿಂದ ಇದ್ದು ಹಣಕಾಸಿನ ನೆರವು ಕೂಡ ನಡೆದಿತ್ತು. ಆರೊಪಿ ಕಲ್ಪನಾ ಕಡೆಯಿಂದ ಗಂಗಪ್ಪ ಸುಮಾರು 3 ಲಕ್ಷದವರೆಗೆ ಹಣದ ಸಹಾಯ ಪಡೆದುಕೊಂಡಿದ್ದ. ನಂತರ ಗಂಗಪ್ಪ ರೋಹಿಣಿಯನ್ನು ಮದುವೆಯಾಗುತ್ತಾನೆ. ಮದುವೆಯಾದಾಗಿನಿಂದ ಆರೋಪಿ ಕಲ್ಪನಾಳನ್ನು ಗಂಗಪ್ಪ ದೂರ ಮಾಡಿದ್ದ.

ಇತ್ತ ಮೊದಲಿನಿಂದ ಇದ್ದ ಸ್ನೇಹ, ಪ್ರೀತಿ ಕಡಿಮೆಯಾಗಿದ್ದರಿಂದ ಕೋಪಗೊಂಡ ಆರೋಪಿ ಕಲ್ಪನಾ ಹಣ ನೀಡುವಂತೆ ಪೀಡಿಸಿದಳು. ನಂತರ ಗಂಗಪ್ಪ ಹುಲಮನಿ ತನ್ನಿಂದ ದೂರ ಆಗುತ್ತಾನೆಂಬ ಭಯದಿಂದ ತನಗೆ ಅಡ್ದಿಯಾಗಿದ್ದ ಗಂಗಪ್ಪನ ಹೆಂಡತಿ ರೋಹಿಣಿಯನ್ನ ಕೊಲೆಗೆ ಸಂಚು ರೂಪಿಸುತ್ತಾಳೆ ಕಲ್ಪನಾ. ಕಲ್ಪನಾ ಸಹೋದರ ಮಹೇಶ್ ನಾಯಕ ಸೇರಿ 5 ಜನರು ಕೊಲೆ ಸಂಚು ರೂಪಿಸಿದರು.

ಮಹೇಶ್​ ಸ್ನೇಹಿತರಾದ ರಾಹುಲ್ ಮತ್ತು ರೋಹಿತ್ ಹಾಗೂ ಶಾನೂರ್ 5 ಜನರು ಸೇರಿ ರೋಹಿಣಿಯನ್ನು ಕೊಲೆಗೆ ಸಂಚು ಮಾಡಿ, ಕಳೆದ ಸೆಪ್ಟೆಂಬರ್ 26ರಂದು ಮಚ್ಚೆ ಗ್ರಾಮದ ಭ್ರಹ್ಮನಗರ ರಸ್ತೆಯಲ್ಲಿ ವಾಕಿಂಗ್ ಮಾಡುವಾಗ ಬೈಕ್ ಮೇಲೆ ಬಂದು ರೋಹಿಣಿ ಕಣ್ಣಿಗೆ ಕಾರದ ಪುಡಿ ಎರಚಿ ಕೊಲೆ ಮಾಡಿದ್ದರು.ಕಲ್ಪನಾ‌ ಸೂಚನೆ ಮೇರಿಗೆ ಮಿಸೆ ಚಿಗುರಿದ ಯುವಕರು ರೋಹಿಣಿ ಹತ್ಯೆ ಮಾಡಿದ್ದಲ್ಲದೆ, ಹತ್ಯೆ ವೇಳೆ ಆಕೆಯ ಜತೆಗಿದ್ದ ರಾಜಶ್ರೀ ಎಂಬಾಕೆಯನ್ನು ಸಾಕ್ಷಿಯ ಭಯದಿಂದ ಅವಳನ್ನೂ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಗ್ರಾಮೀಣ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಮೂರು ತಂಡ ರಚಿಸಿದ್ದರು. ಎಲ್ಲಾ ಆಯಾಮದಿಂದ ತನಿಖೆ ಮಾಡಿದ ಪೊಲಿಸರು ಆರೋಪಿಗಳ ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಡಿದ್ದಾರೆ.


Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ