Breaking News

ಚಿರತೆ ದಾಳಿಗೆ ಬಾಲಕ ಬಲಿ – ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ: ಕುಟುಂಬಸ್ಥರ ಆರೋಪ

Spread the love

ಬೆಂಗಳೂರು: ನಾಗಮಲೆಯಲ್ಲಿ  ಚಿರತೆ ದಾಳಿಗೆ  ಬಾಲಕ ಸಾವನ್ನಪ್ಪಿದಕ್ಕೆ ಅರಣ್ಯ ಇಲಾಖೆ  ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ನಗರದ  ಕಾಮಾಕ್ಷಿಪಾಳ್ಯದ ವೃಷಭಾವತಿ ನಗರದ ಹರ್ಷಿತ್ ಗೌಡ ನಾಗಮಲೆಯಲ್ಲಿ ಚಿರತೆ ದಾಳಿಗೆ ಬಲಿಯಾಗಿದ್ದ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಕನ ಅಜ್ಜಿ, ನನ್ನ ಸೊಸೆ ಪವಿತ್ರ ತನ್ನ ಇಬ್ಬರು ಮಕ್ಕಳು ಹಾಗೂ ಸ್ನೇಹಿತರ ಜೊತೆ ದೇವರ ದರ್ಶನಕ್ಕೆ ಹೋಗಿದ್ದರು. ಪಾದಯಾತ್ರೆ ಮೂಲಕ ಕಾಡಿನಲ್ಲಿ ಹೋಗುವಾಗ ಮೊಮ್ಮಗನ ಮೇಲೆ ಚಿರತೆ ದಾಳಿ ಮಾಡಿದೆ ಎಂದು ಮಾಹಿತಿ ನೀಡಿದರು.

ಕಾಡಿನೊಳಗೆ ಹೋಗುವಾಗ 200 ರೂ. ಹೆಚ್ಚಿನ ಹಣ ತೆಗೆದುಕೊಂಡು ಒಳಗಡೆ ಬಿಟ್ಟಿದ್ದಾರೆ. ಮಗು ಮೇಲೆ ದಾಳಿಯಾಗಿ ಅರ್ಧ ಗಂಟೆಯಾದರೂ ಯಾವ ಅರಣ್ಯಾಧಿಕಾರಿಯೂ ಬಂದಿರಲಿಲ್ಲ. ನಂತರ ಜನ ಜಗಳ ಮಾಡಿದಾಗ ಮೃತದೇಹ ಹುಡುಕಿದ್ದಾರೆ. ನಮ್ಮ ಮಗುವಿಗೆ ಆದ ಹಾಗೆ ಯಾರಿಗೂ ಆಗಬಾರದು. ಈ ಸಾವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಮೇ 11 ರ ಬೆಳಗ್ಗೆ 9 ಗಂಟೆಗೆ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಬಾಲಕನ ಅಂತ್ಯಕ್ರಿಯೆ ನಡೆಯಲಿದೆ.


Spread the love

About Laxminews 24x7

Check Also

ಯಡಿಯೂರಪ್ಪ ರಸ್ತೆಯಲ್ಲಿನ ಅಪಾಯಕಾರಿ ಗುಂಡಿಗಳನ್ನು ತಕ್ಷಣ ಮುಚ್ಚಿ: ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Spread the love ಯಡಿಯೂರಪ್ಪ ರಸ್ತೆಯಲ್ಲಿನ ಅಪಾಯಕಾರಿ ಗುಂಡಿಗಳನ್ನು ತಕ್ಷಣ ಮುಚ್ಚಿ: ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಅಲಾರವಾಡ ಅಂಡರ್‌ಬ್ರಿಡ್ಜ್ ಸರ್ಕಲ್‌ನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ