Breaking News

ಬೆಳಗಾವಿ ದಕ್ಷಿಣ ಮತದಾರರಿಗೆ ಅಲರ್ಟ್: ಆ.17ರೊಳಗೆ ಫಾರ್ಮ್ ನೀಡದಿದ್ದರೆ ಪಟ್ಟಿಯಿಂದ ಹೆಸರು ಗಾಯಬ್

Spread the love

ಬೆಳಗಾವಿ ದಕ್ಷಿಣ ಮತದಾರರಿಗೆ ಅಲರ್ಟ್: ಆ.17ರೊಳಗೆ ಫಾರ್ಮ್ ನೀಡದಿದ್ದರೆ ಪಟ್ಟಿಯಿಂದ ಹೆಸರು ಗಾಯಬ್
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮತದಾರರಿಗೆ ಇಲ್ಲೊಂದು ಅತ್ಯಂತ ಮಹತ್ವದ ಸುದ್ದಿಯಿದೆ. ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ನಿಯಮ ಪಾಲಿಸದಿದ್ದರೆ ನಿಮ್ಮ ಮತದಾನದ ಹಕ್ಕು ಇಲ್ಲದಂತಾಗಬಹುದು. ಸಹಾಯಕ ಚುನಾವಣಾಧಿಕಾರಿಗಳು ನೀಡಿರುವ ಆ ಎಚ್ಚರಿಕೆ ಸಂದೇಶ ಇಲ್ಲಿದೆ ನೋಡಿ…”
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಇದೇ ಆಗಸ್ಟ್ 17, 2026 ರಂದು ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ಇದುವರೆಗೆ ಮತದಾರರ ಗಣತಿ ನಮೂನೆಯನ್ನು (Enumeration Form) ಪಡೆದುಕೊಂಡು ಮರಳಿ ನೀಡದಿರುವ ಮತದಾರರು ತಕ್ಷಣವೇ ತಮ್ಮ ವ್ಯಾಪ್ತಿಯ ಬಿ.ಎಲ್.ಒ (BLO) ಗಳಿಗೆ ಸರಿಯಾದ ಮಾಹಿತಿಯೊಂದಿಗೆ ಸಲ್ಲಿಸಬೇಕಾಗಿದೆ. ನಿಗದಿತ ಸಮಯದೊಳಗೆ ಈ ನಮೂನೆಗಳನ್ನು ಹಿಂತಿರುಗಿಸದಿದ್ದಲ್ಲಿ ಅಂತಹ ಮತದಾರರ ಹೆಸರುಗಳು ಮುಂಬರುವ ಹೊಸ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದಿಲ್ಲ. ಆದ್ದರಿಂದ ಸಾರ್ವಜನಿಕರು ತಡಮಾಡದೇ ತಮ್ಮ ನಮೂನೆಗಳನ್ನು ಸಲ್ಲಿಸಿ ಮತದಾನದ ಹಕ್ಕನ್ನು ಕಾಯ್ದುಕೊಳ್ಳಬೇಕಾಗಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಾದ ಡಾ!! ಸಿದ್ದು ಹುಲ್ಲೋಳಿ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Spread the love

About Laxminews 24x7

Check Also

ಸವದತ್ತಿಯಲ್ಲಿ ಕೂಲಿ ಕಾರ್ಮಿಕರಿಗೆ ಸಿಕ್ತು ಚಿನ್ನದ ನಿಧಿ!

Spread the loveಬೆಳಗಾವಿ: ಸವದತ್ತಿ  ತಾಲೂಕಿನ ಇಂಚಲ ಗ್ರಾಮದಲ್ಲಿ ವಿಬಿ–ಜಿ ರಾಮ್ ಜಿ ಕೂಲಿ ಕಾರ್ಮಿಕರಿಗೆ ಗಂಗರ ಕಾಲದ ಚಿನ್ನದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ