“ಬೆಳಗಾವಿಯಲ್ಲಿ ನಾಳೆಯಿಂದ ಕರೋನಾ ವೈರಸ್ ತಪಾಸಣಾ ಪ್ರಯೋಗಾಲಯ ಪ್ರಾರಂಭ”
ಮಹಾಮಾರಿ ಕೊರೋನಾ ವೈರಸ್ ಪರೀಕ್ಷೆ ಬೆಳಗಾವಿಯ ಪಾರಂಪರಿಕ ಚಿಕಿತ್ಸಾ ವಿದ್ಯಾಲಯದಲ್ಲಿ ನಾಳೆಯಿಂದ ನಡೆಯಲಿದ್ದು, 3- 4 ದಿನಗಳ ಕಾಲ ವರದಿಗಾಗಿ ಕಾಯುವ ಸಂದಿಗ್ಧತೆ ತಪ್ಪಲಿದೆ.
ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಕೊರೋನಾ ಪರೀಕ್ಷೆಗೆ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಈವರೆಗೆ ಬೆಂಗಳೂರು ಮತ್ತು ಶಿವಮೊಗ್ಗಕ್ಕೆ ರಕ್ತ, ಗಂಟಲು ದ್ರವವನ್ನು ಕಳಿಸಿ ಪರೀಕ್ಷೆ ವರದಿ ಪಡೆಯಲಾಗುತ್ತಿತ್ತು, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಅವರು ಪ್ರಯೋಗಾಲಕ್ಕೆ ಅನುಮತಿ ನೀಡಲು ಮನವಿ ಮಾಡಿದ್ದರು, ಈ ನಿಟ್ಟಿನಲ್ಲಿ ನಾನು ಕೂಡ ಸಣ್ಣ ಪ್ರಯತ್ನ ಮಾಡಿದ್ದರ ಫಲವಾಗಿ, ಸದ್ಯ ಪ್ರಯೋಗಾಲಯ ಬೆಳಗಾವಿಯಲ್ಲಿ ಆರಂಭ ಆಗಿರುವುದು ಸಂತಸ ತಂದಿದೆ.
ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕು ಜೊತೆಗೆ ಮನೆಯಿಂದ ಆಗಾಗ ಹೊರೆಗೆ ಬರದೆ ಮನೆಯಲ್ಲಿಯೇ ಇರುವ ಮೂಲಕ ಸರಕಾರದ ನಿಯಮಗಳನ್ನು ಪಾಲಿಸಬೇಕು.