ಸವದತ್ತಿ ಮತಕ್ಷೇತ್ರದ ಪ್ರತಿಯೊಂದು ಕುಟುಂಬದ ಸಂಭ್ರಮ ನಮ್ಮ ಮನೆಯ ಸಂಭ್ರಮವಿದ್ದಂತೆ. ಕ್ಷೇತ್ರದ 5 ಬಡ ಕುಟುಂಬಗಳ ಸಹೋದರಿಯರ ವಿವಾಹ ಮಹೋತ್ಸವದ ಅಂಗವಾಗಿ “ಅಣ್ಣನ ಉಡುಗೊರೆ”ಯನ್ನು ನನ್ನ ಪರವಾಗಿ ನನ್ನ ಸುಪುತ್ರಿ ಕು. ವೇದಿಕಾ ವಿಶ್ವಾಸ್ ವೈದ್ಯ ಅವರು ವಿತರಿಸಿದರು.
ಹೊಸ ಜೀವನಕ್ಕೆ ಕಾಲಿಡುತ್ತಿರುವ ಸೋದರಿಯರಿಗೆ ಅಡುಗೆ ಮನೆಯ ಸುಸಜ್ಜಿತ ಸಾಮಗ್ರಿಗಳು ಸೇರಿದಂತೆ ಟ್ರೇಸುರಿ, ಕಾಟ್, ಗೃಹೋಪಯೋಗಿ ವಸ್ತುಗಳನ್ನು ನೀಡಿ, ಸುಖಕರ ದಾಂಪತ್ಯಕ್ಕಾಗಿ ಶುಭ ಹಾರೈಸಲಾಯಿತು. ನಮ್ಮ ಕುಟುಂಬದ ಮುಂದಿನ ಪೀಳಿಗೆಯೂ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ನನಗೆ ಹೆಮ್ಮೆಯ ವಿಷಯ.
ಕ್ಷೇತ್ರದ ಜನರ ಕಷ್ಟ-ಸುಖಗಳಲ್ಲಿ ಸದಾ ಒಂದು ಕುಟುಂಬವಾಗಿ ನಾವು ನಿಮ್ಮ ಜೊತೆಗಿರುತ್ತೇವೆ.
Laxmi News 24×7