ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿಯ ಪುತ್ರಿ ಬೃಷ್ಟಿ ಮುಖರ್ಜಿ ಅವರು ಬೀರ್‌ಭೂಮ್ ಜಿಲ್ಲೆಯ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ಸೋದರಸಂಬಂಧಿ ನಿಹಾರ್ ಮುಖರ್ಜಿ ಅವರ ಪುತ್ರಿಯಾದ 28 ವರ್ಷದ ಬೃಷ್ಟಿ ಮುಖರ್ಜಿ, ತಮ್ಮ ಮನೆಯ ಎರಡನೇ ಮಹಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಿಹಾರ್ ಮುಖರ್ಜಿ ಅವರು ಮಮತಾ ಬ್ಯಾನರ್ಜಿ …
Read More »ದರ್ಶನ್‌ಗೆ ಮತ್ತೆ ಢವ ಢವ – ಇಂದು ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಾಗುತ್ತಾ?
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್‌ಗೆ ಮತ್ತೆ ಢವ ಢವ ಶುರುವಾಗಿದೆ. ಇಂದು ಪ್ರದೋಷ್‌ನಿಂದ ಮಾಫಿ ಸಾಕ್ಷಿ ಹೇಳಿಕೆ ದಾಖಲಾಗುತ್ತಾ? ಇಲ್ವಾ? ಎಂಬುದನ್ನ ಕಾದುನೋಡಬೇಕಿದೆ. ಕೊಲೆ ಪ್ರಕರಣದಲ್ಲಿ ತನ್ನನ್ನ ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನ 59ನೇ ಸಿಸಿಹೆಚ್ ನ್ಯಾಯಾಲಯ ಅಂಗೀಕರಿಸಿತ್ತು. ಸೆ.2 ರಂದು (ಇಂದು) ಸಾಕ್ಷಿ ಹೇಳಿಕೆ ದಾಖಲಿಸಿಕೊಳ್ಳಲು ವಿಟ್ನೆಸ್ ಸಮನ್ಸ್ ಜಾರಿಗೊಳಿಸಿತ್ತು. ನ್ಯಾಯಾಲಯಕ್ಕೆ ಮುಂದೆ ಹಾಜರಾಗಿ ಸಾಕ್ಷಿ ನುಡಿಯಬೇಕು ಎಂದು ಜೈಲಾಧಿಕಾರಿಗಳ ಮೂಲಕ ಸಮನ್ಸ್ …
Read More »ಕಲ್ಲಿಹಾಳ್ ಉಪ ತಹಶೀಲ್ದಾರ್ ಪುಷ್ಪಲತಾಗೆ 4 ವರ್ಷ ಜೈಲು
ಶಿವಮೊಗ್ಗ: ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಕಲ್ಲಿಹಾಳ್ ನಾಡಕಚೇರಿ ಉಪ ತಹಶೀಲ್ದಾರ್ ಪುಷ್ಪಲತಾಗೆ ಶಿವಮೊಗ್ಗ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯ 40,000 ರೂ. ದಂಡ ಹಾಗೂ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹುಟ್ಟು ಮೂಕನಾಗಿರುವ ತಂದೆಗೆ ಅಂಗವಿಕಲರ ಪಿಂಚಣಿ ಕೊಡಿಸಲು ಮುಂದಾಗಿದ್ದ ಡಿ.ಬಿ. ಹಳ್ಳಿಯ ನಿವಾಸಿ ಗಿರೀಶ್ ಅವರ ಬಳಿ ಅಪರಾಧಿ ಪುಷ್ಪಲತಾ 10,000 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಳು. ಅದರಂತೆ ಮುಂಗಡವಾಗಿ 2017ರ ಸೆಪ್ಟೆಂಬರ್ 21 ರಂದು 5,000 ರೂ. …
Read More »ಪರಪ್ಪನ ಅಗ್ರಹಾರ ಜೈಲಿಗೆ ವಿಜಯಲಕ್ಷ್ಮಿ ಭೇಟಿ – ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಟ ಝೈದ್ ಖಾನ್ ಸಾಥ್
ಆನೇಕಲ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ದರ್ಶನ್ ಆಪ್ತ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ನಟ ಝೈದ್ ಖಾನ್ ಕೂಡ ವಿಜಯಲಕ್ಷಿö್ಮ ಜೊತೆಗೆ ಜೈಲಿಗೆ ಆಗಮಿಸಿದ್ದು, ಹಣ್ಣು-ಹಂಪಲು ತೆಗೆದುಕೊಂಡು ಬಂದು ದರ್ಶನ್ ಆರೋಗ್ಯ ವಿಚಾರಿಸಿದ್ದಾರೆ. ಭೇಟಿ ವೇಳೆ ದರ್ಶನ್ ನಟ ಝೈದ್ ಖಾನ್‌ಗೆ ಮುಂದಿನ ಚಿತ್ರ ಬಗ್ಗೆ ಕೇಳಿದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ ದಚ್ಚುಗೆ …
Read More »ಸೆ.3, 4 ರಂದು ಚಿಕನ್ ಶಾಪ್ ಬಂದ್
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಸ ನಿರ್ವಹಣೆ ಮಾಡೋ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಇಲಾಖೆ ಸದ್ದಿಲ್ಲದೇ ಕೋಳಿ ಮಾಂಸ ಮಾರಾಟಗಾರರಿಗೆ ಹೊರೆಯೊಂದನ್ನ ಹಾಕಿದೆ. ಕಳೆದ 15 ದಿನಗಳಿಂದ ಹೊಸ ನೋಟಿಸ್‌ವೊಂದನ್ನು ಬಿಎಸ್‌ಡಬ್ಯೂಎಂಎಲ್ ನೀಡಿದ್ದು, ಪ್ರತಿ ಕೆಜಿ ಕೋಳಿ ಮಾಂಸದ ತ್ಯಾಜ್ಯಕ್ಕೆ 5 ರೂ. ನೀಡಬೇಕು ಎಂದು ಆದೇಶಿಸಿದೆ. ಈ ಆದೇಶವನ್ನ ವಿರೋಧಿಸಿ ಬೆಂಗಳೂರಿನ ಕೋಳಿ ಅಂಗಡಿ (Chicken Shops) ವ್ಯಾಪಾರಿಗಳು ಇದೇ ಗುರುವಾರ ಮತ್ತು ಶುಕ್ರವಾರ (ಸೆ.3-4) ತಮ್ಮ ಅಂಗಡಿಗಳಿಗೆ …
Read More »ಡಿಸಿಪಿ ಮೇಲೆಯೇ ಯೂತ್ ಕಾಂಗ್ರೆಸ್ ಅಧ್ಯಕ್ಷನಿಂದ ಹಲ್ಲೆ- ಎಫ್‌ಐಆರ್ ದಾಖಲಿಸಲು ಪೊಲೀಸರ ಹಿಂದೇಟು
ಬೆಂಗಳೂರು: ಪ್ರತಿಭಟನೆ ವೇಳೆ ಕರ್ತವ್ಯದಲ್ಲಿದ್ದ ಡಿಸಿಪಿ ಮೇಲೆಯೇ ಯುವ ಕಾಂಗ್ರೆಸ್ ಮುಖಂಡ ಗೂಂಡಾವರ್ತನೆ ತೋರಿ ಹಲ್ಲೆ ನಡೆಸಿದ್ದರೂ, ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸದೆ ಇರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾನುವಾರ ಸಂಜೆ ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಯತ್ನ ನಡೆಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿ ಚಾರ್ಜ್ ನಡೆಸಿದ್ದರು. ಲಾಠಿ ಚಾರ್ಜ್ ಸಂದರ್ಭದಲ್ಲಿ …
Read More »ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವ ಶಕ್ತಿ ಬಿಜೆಪಿ ಪಾದಯಾತ್ರೆಗಿದೆ: ವಿಜಯೇಂದ್ರ
ರಾಯಚೂರು: ಕರ್ನಾಟಕದ ರಾಜಕೀಯ ದಿಕ್ಕನ್ನೇ ಬದಲಿಸುವ ಶಕ್ತಿ ಬಿಜೆಪಿಯ ಐತಿಹಾಸಿಕ ಪಾದಯಾತ್ರೆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಲಿಂಗಸೂರಿನಿಂದ ಆರಂಭಗೊಂಡಿರುವ ಬಿಜೆಪಿ ಪಾದಯಾತ್ರೆ ಕೇವಲ ರಾಜಕೀಯ ಕಾರ್ಯಕ್ರಮವಲ್ಲ. ಇದು ದಲಿತ ವಿರೋಧಿ, ರೈತ ವಿರೋಧಿ, ಬಡವರ ವಿರೋಧಿ, ಯುವಜನ ವಿರೋಧಿ, ಮಹಿಳಾ ವಿರೋಧಿ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧದ ಜನಾಂದೋಲನ ಎಂದು ಅವರು ಹೇಳಿದರು. ಬಿಜೆಪಿ ಯಾಕೆ ಪಾದಯಾತ್ರೆ ಮಾಡುತ್ತಿದೆ ಎಂದು ಡಿಕೆಶಿ ಕೇಳುತ್ತಾರೆ. …
Read More »ವಿಶ್ವ ಟೇಕ್ವಾಂಡೋ ಸ್ಪರ್ಧೆಯಲ್ಲಿ 3 ಚಿನ್ನದ ಪದಕ ಗೆದ್ದ ಹೆಬ್ಬಾಳದ ಎನ್‍ಎಫ್‍ಸಿ ಟೀಮ್
ಬೆಂಗಳೂರು: ಮಂಗೋಲಿಯಾದಲ್ಲಿ ನಡೆದ ವಿಶ್ವ ಟೇಕ್ವಾಂಡೋ ಸ್ಪರ್ಧೆಯಲ್ಲಿ ಬೆಂಗಳೂರಿನ ಹೆಬ್ಬಾಳದ ಎನ್‍ಎಫ್‍ಸಿ ಟೀಂ ಚಿನ್ನದ ಬೇಟೆಯಾಡಿದೆ. ಭಾರತವನ್ನ ಪ್ರತಿನಿಧಿಸಿದ್ದ ಎನ್‍ಎಫ್‍ಸಿಯ ಇಶ್ವಾಕ್ 2 ಚಿನ್ನ ಹಾಗೂ ಮಹಿಮಾ ಪಿ.ಜಿ 1 ಚಿನ್ನದ ಪದಕವನ್ನು ಗಳಿಸಿದ್ದಾರೆ. ಧೃತಿ ದೀಪಕ್ ಶಾಸ್ತ್ರಿ, ಸ್ಮಯಾನ್ ಚೇತನ್, ಪ್ರಕೃತಿ, ಪ್ರಣಮ್ಯ ಬೆಳ್ಳಿ ಪದಕವನ್ನು ಗಳಿಸಿದ್ದಾರೆ. ಇನ್ನುಳಿದಂತೆ ಡಿ.ಸಿ. ಸಿದ್ದೇಶ್ ಹಾಗೂ ದೀಪಕ್ ಮೋಹನ್ ಕಂಚಿನ ಪದಕವನ್ನು ಗಳಿಸಿದ್ದಾರೆ. ಒಟ್ಟಾರೆ ಎನ್‍ಎಫ್‍ಸಿ ಟೀಂ 3 ಚಿನ್ನ, 5 ಬೆಳ್ಳಿ, …
Read More »ಗದಗ ಜಿಲ್ಲೆಯಲ್ಲಿ ಬರ ವೀಕ್ಷಿಸಿದ ಸಿಎಂ ಡಿಕೆಶಿ – ಬರಪೀಡಿತವೆಂದು ಘೋಷಿಸುವುದಾಗಿ ಭರವಸೆ
ಗದಗ: ಜಿಲ್ಲೆಯ ಕದಂಪೂರದಲ್ಲಿ ಅನ್ನದಾತರ ಜಮೀನುಗಳಿಗೆ ತೆರಳಿ ಸಿಎಂ ಡಿಕೆ ಶಿವಕುಮಾರ್ ಅವರಿಂದು ಬರ ಪರಿಸ್ಥಿತಿಯ ಕುರಿತು ಪರಿಶೀಲಿನೆ ನಡೆಸಿದ್ದಾರೆ. ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಗದಗ ನಗರಕ್ಕೆ ಆಗಮನಿಸಿದ ಸಿಎಂ ಮುಂಡರಗಿ ತಾಲೂಕಿನ ಕದಂಪೂರ, ಗದಗ ತಾಲೂಕಿನ ಕುರ್ತಕೋಟಿ, ಹುಲಕೋಟಿಗೆ ಭೇಟಿ ನೀಡಿ, ಬರ ವೀಕ್ಷಣೆ ಮಾಡಿದರು. ಬಸವರಾಜ ರಾಯರೆಡ್ಡಿ, ಮಾಜಿ ಸಚಿವರು, ಶಾಸಕ ಹೆಚ್.ಕೆ. ಪಾಟೀಲ್ ಸೇರಿದಂತೆ ಹಲವು ನಾಯಕರು ಮತ್ತು ಹಿರಿಯ ಅಧಿಕಾರಿಗಳು ಸಿಎಂಗೆ ಸಾಥ್ ನೀಡಿದರು. …
Read More »ಬರಪೀಡಿತ ಪಟ್ಟಿಗೆ ಜಗಳೂರು ಸೇರಿಸದಿದ್ರೆ ರಾಜೀನಾಮೆ ನೀಡುತ್ತೇನೆ: ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ
ದಾವಣಗೆರೆ: ಜಗಳೂರು ತಾಲೂಕನ್ನು ಸರ್ಕಾರ ಬರ ಪೀಡಿತ ತಾಲೂಕುಗಳ ಅಧಿಕೃತ ಪಟ್ಟಿಗೆ ಸೇರ್ಪಡೆ ಮಾಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ಬಿ. ದೇವೇಂದ್ರಪ್ಪ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜಗಳೂರಿನಲ್ಲಿ ಮಾತನಾಡಿದ ಅವರು, ನನ್ನ ತಾಲೂಕಿನ ಜನರಿಗೆ ನ್ಯಾಯ ಸಿಗದಿದ್ದರೆ ನಾನು ಶಾಸಕನಾಗಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಈ ನಿಟ್ಟಿನಲ್ಲಿ ನಾನು ಕಠಿಣ ಹಾಗೂ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸಿದ್ಧನಾಗಿದ್ದೇನೆ ಎಂದರು. ಈ ಮೂಲಕ ತಾಲೂಕಿನ ಬರ …
Read More »
Laxmi News 24×7