Breaking News

ಅತ್ತೆ-ಮಾವನ ಮನಸ್ಥಿತಿ ಎಂದಿಗೂ ಬದಲಾಗಲ್ಲʼ; ವಿಡಿಯೋ ರೆಕಾರ್ಡ್‌ ಮಾಡಿ ನೇಣಿಗೆ ಶರಣಾದ ಶಿಕ್ಷಕಿ

Spread the love

ನವದೆಹಲಿ: ಮದುವೆಯಾದ 8 ತಿಂಗಳ ಬಳಿಕ ಸರ್ಕಾರಿ ಶಿಕ್ಷಕಿಯೊಬ್ಬರು ವಿಡಿಯೋ ರೆಕಾರ್ಡ್‌ ಮಾಡಿ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಾಖಂಡದ (ಡೆಹ್ರಾಡೂನ್‌ನಲ್ಲಿ ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೂ ಮುನ್ನ ರೆಕಾರ್ಡ್‌ ಮಾಡಿದ್ದ 90 ಸೆಕೆಂಡ್‌ಗಳ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸೃಷ್ಟಿ ಕಂಧಾರಿ ಮೃತ ಶಿಕ್ಷಕಿ. ಕಳೆದ ವರ್ಷ ನವೆಂಬರ್‌ನಲ್ಲಿ ಅವರು ಸರ್ಕಾರಿ ಉದ್ಯೋಗಿಯಾಗಿರುವ ಸೌರಭ್ ರಾತುರಿಯನ್ನು ಮದುವೆಯಾಗಿದ್ದರು. ಬಳಿಕ, ಡೆಹ್ರಾಡೂನ್ ಸಮೀಪದ ದೋಯಿವಾಲಾ ಪ್ರದೇಶದಲ್ಲಿ ದಂಪತಿ ವಾಸಿಸುತ್ತಿದ್ದರು.

ವರದಕ್ಷಿಣೆ ವಿಚಾರವಾಗಿ ಸೃಷ್ಟಿಗೆ ಪತಿ ಹಾಗೂ ಅತ್ತೆ-ಮಾವ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಅವರನ್ನು ʼಕೆಲಸಕ್ಕೆ ಬಾರದವಳುʼ, ʼನತದೃಷ್ಟೆʼ ಎಂದು ಅವಮಾನಿಸುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ರೆಕಾರ್ಡ್‌ ಮಾಡಿದ ವಿಡಿಯೋದಲ್ಲಿ ಸೃಷ್ಟಿ ಕಣ್ಣೀರಿಡುತ್ತಾ, ʼಕ್ಷಮಿಸಿ ಅಮ್ಮ… ನಾನು ಹೀಗೆ ಹೋಗುತ್ತಿದ್ದೇನೆ. ಕಳೆದ ಆರು ತಿಂಗಳಿಂದ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಆದರೆ, ಇನ್ನು ಮುಂದೆ ಆಗಲ್ಲ. ಅವರು ನನ್ನನ್ನು ಯಾವಾಗಲೂ ‘ನತದೃಷ್ಟೆ’ ಎಂದು ಹೀಯಾಳಿಸುತ್ತಾರೆ. ಅವರ ಮನಸ್ಥಿತಿ ಯಾವತ್ತೂ ಬದಲಾಗಲ್ಲʼ ಎಂದು ಹೇಳಿಕೊಂಡಿದ್ದಾರೆ.

ಬುಧವಾರ ಸೃಷ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಳಿಕ ಮೃತಳ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪತಿ ಸೌರಭ್ ರಾತುರಿ, ಅತ್ತೆ ಪರ್ವಿನಾ ಹಾಗೂ ಅತ್ತಿಗೆ ಚಾರು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವರದಕ್ಷಿಣೆ ಕಿರುಕುಳ ಮತ್ತು ಸಾವಿಗೆ ಸಂಬಂಧಿಸಿದ ಕಾನೂನುಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಧಾರಾಕಾರ ಮಳೆಗೆ ಕುಸಿದು ಬಿದ್ದ ರಾಷ್ಟ್ರೀಯ ಹೆದ್ದಾರಿ ತಡೆಗೋಡೆ – ಕಳಪೆ ಕಾಮಗಾರಿ ಆರೋಪ

Spread the loveಚಿಕ್ಕೋಡಿ: ಧಾರಾಕಾರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯ  ತಡೆಗೋಡೆ ಕುಸಿದು ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ