ಚಿಕ್ಕಮಗಳೂರು: ಒಂದು ತಿಂಗಳ ಹಿಂದಷ್ಟೇ ಮದುವೆ ನಿಶ್ಚಯವಾಗಿ, ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ನಡೆದಿದೆ. ಅಭಿಷೇಕ್ (25) ಆತ್ಮಹತ್ಯೆಗೆ ಶರಣಾದ ಯುವಕ. ಈತನಿಗೆ ಕಳೆದ ತಿಂಗಳಷ್ಟೆ ಮದುವೆ ನಿಶ್ಚಯವಾಗಿತ್ತು. ಮುಂದಿನ ತಿಂಗಳು 25ಕ್ಕೆ ಮದುವೆ ದಿನಾಂಕ ಕೂಡ ನಿಗದಿಯಾಗಿತ್ತು. ಎರಡೂ ಮನೆಯವರು ಮದುವೆ ಸಂಭ್ರಮದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ 4 ದಿನದ ಹಿಂದೆ ಮನೆಯಲ್ಲೇ ಯುವಕ ಮನೆಯಲ್ಲೇ …
Read More »ನಾಳೆ ಕೊಳ್ಳೇಗಾಲಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ
ಚಾಮರಾಜನಗರ: ನಾಳೆ ಕೊಳ್ಳೇಗಾಲಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಲಿದ್ದಾರೆ. 1,500 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಸಿಎಂ ನೆರವೇರಿಸಲಿದ್ದಾರೆ. ಕೊಳ್ಳೇಗಾಲದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಸಮಾರಂಭ ಜರುಗಲಿದೆ. ಡಿಸಿಎಂ ಜಿ.ಪರಮೇಶ್ವರ್ ಸೇರಿದಂತೆ ಹಲವು ಸಚಿವರು ಭಾಗಿಯಾಗಲಿದ್ದಾರೆ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ. ಕೊಳ್ಳೇಗಾಲದಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆ ಮೊದಲ ಹಂತದ ಕಾಮಗಾರಿ, …
Read More »ಕಂಬಳ ಲೋಕದ ದಿಗ್ಗಜ ‘ನಂದಳಿಕೆ ಪಾಂಡು’ ಇನ್ನಿಲ್ಲ – ಪದಕಗಳ ಸರದಾರನಿಗೆ ಕಣ್ಣೀರ ವಿದಾಯ
ಉಡುಪಿ: ಕಂಬಳದ ಕರೆಯಲ್ಲಿ ಮಿಂಚಿನ ವೇಗದೊಂದಿಗೆ ರೋಷಾವೇಶದ ಓಟ ಪ್ರದರ್ಶಿಸಿ ಇತಿಹಾಸ ಬರೆದಿದ್ದ ತುಳುನಾಡಿನ ಹೆಮ್ಮೆಯ ಪ್ರಸಿದ್ಧ ಕೋಣ ‘ನಂದಳಿಕೆ ಪಾಂಡು’ ತನ್ನ 26ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದೆ. ದೇಶ-ವಿದೇಶಗಳಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿದ್ದ ಈ ಅಪ್ರತಿಮ ಸಾಧಕ ಕೋಣದ ಅಗಲಿಕೆಯಿಂದಾಗಿ ಕಂಬಳ ಪ್ರಿಯರು ಹಾಗೂ ಕರಾವಳಿಯ ಜಾನಪದ ಕ್ರೀಡಾಲೋಕ ತೀವ್ರ ಶೋಕದಲ್ಲಿ ಮುಳುಗಿದೆ. ನಂದಳಿಕೆ ಶ್ರೀಕಾಂತ ಭಟ್ ಅವರ ಪ್ರೀತಿಯ ಕೋಣವಾಗಿದ್ದ ಪಾಂಡು ಕಂಬಳದ ಅಂಗಳದಲ್ಲಿ ಕೇವಲ ಕೋಣವಾಗಿರದೆ …
Read More »ಸಿಎಂ ಕ್ಷೇತ್ರದಿಂದಲೇ ಜೆಡಿಎಸ್ ರೈತ ಸ್ವಾಭಿಮಾನ ಯಾತ್ರೆ ಆರಂಭ: ನಿಖಿಲ್ ಕುಮಾರಸ್ವಾಮಿ
ರಾಮನಗರ: ಸಿಎಂ ಅವರ ಸ್ವಕ್ಷೇತ್ರದಲ್ಲೇ ತೀವ್ರ ಬರ ಪರಿಸ್ಥಿತಿ ಇದ್ದು, ಇದುವರೆಗೂ ಬಂದು ರೈತರ ಸಮಸ್ಯೆ ಆಲಿಸಿಲ್ಲ. ಹಾಗಾಗಿ ಸಿಎಂ ಕ್ಷೇತ್ರದಿಂದಲೇ ರೈತ ಸ್ವಾಭಿಮಾನ ಯಾತ್ರೆಯನ್ನು ಆರಂಭಿಸಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಕನಕಪುರ ಪಟ್ಟಣದ ರೈಸ್ ಮಿಲ್ ಶಿವಾನಂದ ಸರ್ಕಲ್ ನಿಂದ ಆರಂಭವಾದ ಜೆಡಿಎಸ್ ರೈತ ಸ್ವಾಭಿಮಾನ ಪಾದಯಾತ್ರೆ ಚೆನ್ನಬಸಪ್ಪ ವೃತ್ತದಲ್ಲಿ ಅಂತ್ಯಗೊಂಡಿತ್ತು. ಬಳಿಕ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ …
Read More »ಬೆಂಗಳೂರಿನ ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಜಮೀನು, ಅನುಮತಿಗೆ ಸಿಎಂ ಡಿಕೆಶಿ ಮನವಿ
ನವದೆಹಲಿ: ಬೆಂಗಳೂರಿನ ವಿವಿಧ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಜಮೀನು ಹಸ್ತಾಂತರಿಸುವುದು ಹಾಗೂ ಅಗತ್ಯ ಅನುಮತಿಗಳನ್ನು ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಸಿಎಂ, ಬೆಂಗಳೂರಿಗೆ ಸಂಬಂಧಿಸಿದ ಏಳು ಪ್ರಮುಖ ಪ್ರಸ್ತಾವನೆಗಳನ್ನು ಮುಂದಿಟ್ಟಿದ್ದಾರೆ. 730 ಎಕರೆ ಜಮೀನಿನಲ್ಲಿ ಪಬ್ಲಿಕ್ ಪಾರ್ಕ್ ಇಬ್ಬಲೂರು ಫೈರಿಂಗ್ ರೇಂಜ್ ಬಳಿ ರಕ್ಷಣಾ ಇಲಾಖೆಗೆ …
Read More »ಮುಂದಿನ ಬಾರಿ ಪ್ರದೀಪ್ ಈಶ್ವರ್‌ಗೆ ಟಿಕೆಟ್ ಕೊಡ್ಬೇಡಿ – ಸ್ವಪಕ್ಷೀಯರಿಂದಲೇ ಕೆಪಿಸಿಸಿ ಅಧ್ಯಕ್ಷರಿಗೆ ದೂರು
ಚಿಕ್ಕಬಳ್ಳಾಪುರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್‌ಗೆ ಟಿಕೆಟ್ ನೀಡಬಾರದು ಎಂದು ಕಾಂಗ್ರೆಸ್‌ನ ಕೆಲ ಮುಖಂಡರು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ದೂರು ನೀಡಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಮಾಜಿ ಶಾಸಕರನ್ನೊಳಗೊಂಡ ನಿಯೋಗ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿದೆ. ಈ ವೇಳೆ ಶಾಸಕ ಪ್ರದೀಪ್ ಈಶ್ವರ್ ಅವರ ಕಾರ್ಯವೈಖರಿ, ಪಕ್ಷ …
Read More »ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದ ಮಧ್ಯಸ್ಥಿಕೆ ವಹಿಸಿ: ಡಿಕೆಶಿ ಮನವಿ
ನವದೆಹಲಿ: ಕರ್ನಾಟಕದ ಕುಡಿಯುವ ನೀರು, ನೀರಾವರಿ ಹಾಗೂ ಬರ ಪರಿಹಾರದ ಅಗತ್ಯಗಳನ್ನು ಈಡೇರಿಸಲು ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಬಾಕಿ ಇರುವ ಅನುಮತಿಗಳನ್ನು ಶೀಘ್ರ ನೀಡುವಂತೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಸೋಮವಾರ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿಯಾದ ಡಿ.ಕೆ. ಶಿವಕುಮಾರ್, ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರದ ಮಧ್ಯಸ್ಥಿಕೆ ಹಾಗೂ ಅಗತ್ಯ ಅನುಮತಿಗಳನ್ನು …
Read More »ಧಾರವಾಡದಲ್ಲಿ ವ್ಯಕ್ತಿ ಕೊಲೆ; ತಿಂಗಳ ಬಳಿಕ ಇಬ್ಬರು ಅರೆಸ್ಟ್
ಧಾರವಾಡ: ಧಾರವಾಡದ ಐನಾಕ್ಸ್ ಬಳಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹನುಮಂತ ಅಣ್ಣಿಗೇರಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿ, ಐನಾಕ್ಸ್ ಸಮೀಪದ ಖಾಲಿ ಜಾಗದಲ್ಲಿ ಮೃತದೇಹವನ್ನು ಎಸೆದು ಆರೋಪಿಗಳು ಪರಾರಿಯಾಗಿದ್ದರು. ಮೊಬೈಲ್ ವಿಚಾರಕ್ಕೆ ಸಂಬಂಧಿಸಿದಂತೆ ಹನುಮಂತ ಹಾಗೂ ಯಲ್ಲಪ್ಪ ಬಂಡಿವಡ್ಡರ ನಡುವೆ ಜಗಳ ನಡೆದಿತ್ತು. ಈ ವೇಳೆ ಯಲ್ಲಪ್ಪ ಹನುಮಂತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು …
Read More »ಸೆ.30ರಿಂದ ರಾಜ್ಯದಲ್ಲಿ ಭಾರತ್ ಜೋಡೋ-2 ಯಾತ್ರೆ – 84 ಕ್ಷೇತ್ರಗಳಲ್ಲಿ ಪಾದಯಾತ್ರೆ
ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ 2022ರಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶಿಸಿದ ದಿನದ ಹಿನ್ನೆಲೆಯಲ್ಲಿ ‘ಭಾರತ್ ಜೋಡೋ-2’ ಪಾದಯಾತ್ರೆ ನಡೆಸಲು ಕೆಪಿಸಿಸಿ ನಿರ್ಧರಿಸಿದೆ. ಸೆಪ್ಟೆಂಬರ್ 30ರಿಂದ ಈ ಯಾತ್ರೆ ಆರಂಭವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ 2022ರ ಸೆಪ್ಟೆಂಬರ್ 30ರಂದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಚಾಮರಾಜನಗರದ ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಿತ್ತು. ಈ ಸಂದರ್ಭದಲ್ಲಿ ರಾಜ್ಯದ 11 …
Read More »ರೈತರ ಬಗ್ಗೆ ಹಗುರವಾಗಿ ಮಾತನಾಡಿದ ಸಿಎಂ ಕ್ಷಮೆಯಾಚಿಸಲಿ: ಎ.ಎಸ್.ಪಾಟೀಲ್ ನಡಹಳ್ಳಿ
ಬೆಂಗಳೂರು: ವಿಶೇಷ ಅಧಿವೇಶನದಲ್ಲಿ ರೈತರ ಕುರಿತು ಹಗುರವಾಗಿ ಮಾತನಾಡಿರುವ ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಮಾಜಿ ಶಾಸಕ ಹಾಗೂ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಅವರು ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಬರದ ಕುರಿತು ಚರ್ಚೆಗೆ ನಡೆಸಿದ ವಿಶೇಷ ಅಧಿವೇಶನ ಕೇವಲ ನಾಮಕಾವಸ್ತೆಗೆ ನಡೆಯಿತು. ಯಾವುದೇ ಗಂಭೀರತೆ ಮುಖ್ಯಮಂತ್ರಿ ಸೇರಿ ಶಾಸಕರಲ್ಲಿ ಇರಲಿಲ್ಲ. ರಾಜ್ಯದಲ್ಲಿ ಭೀಕರ …
Read More »
Laxmi News 24×7