Breaking News

ಮಧ್ಯಾಹ್ನ ಭೋಜನಕೂಟ, ಸಂಜೆ ಆಗ್ತಿದಂಗೆ ಜಂತರ್ ಮಂತರ್‌ನತ್ತ ಹೊರಟ ಸಂಸದರು

Spread the love

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌  ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಒಕ್ಕೂಟ  ಪ್ರತಿಭಟನೆ ಮುಂದುವರಿಸಿದೆ.

ಮಧ್ಯಾಹ್ನ ಭೋಜನಕೂಟ ಮುಗಿಸಿ, ಸಂಜೆ ಆಗುತ್ತಿದ್ದಂತೆ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಒಕ್ಕೂಟ ಸಂಸದರು ಜಂತರ್‌ ಮಂತರ್‌ನತ್ತ ಹೊರಟಿದ್ದಾರೆ.

ನಿನ್ನೆ ಮುಖ್ಯ ಚುನಾವಣಾ ಆಯುಕ್ತರನ್ನ ಭೇಟಿ ಮಾಡಲು ಅವಕಾಶ ಸಿಕ್ಕಿಲ್ಲ. ಜ್ಞಾನೇಶ್ ಕುಮಾರ್ ಲೋಕತಂತ್ರದ ದಾರಿ ತಪ್ಪಿಸಿದ್ದಾರೆ. ಜ್ಞಾನೇಶ್ ರಾಜೀನಾಮೆ ಕೊಡಲೇಬೇಕು. ಲೋಕತಂತ್ರ ಮುಗಿಸಿದವರು ಉಳಿಯುವುದಿಲ್ಲ ಎಂದು ರಾಹುಲ್‌ ಗಾಂಧಿ ಗುಡುಗಿದ್ದಾರೆ.

ಎಫ್ಐಆರ್ ದಾಖಲಿಸಿದ್ರೆ ರಾಹುಲ್ ಗಾಂಧಿ ಭಯ ಪಡುವುದಿಲ್ಲ. ಈಗಾಗಲೇ ನನ್ನ ಮೇಲೆ 45 ಎಫ್ಐಆರ್‌ಗಳಿವೆ. ಈ ತರಹದ 100 ಎಫ್ಐಆರ್ ಆದ್ರೂ ನಾನು ಹೆದರುವುದಿಲ್ಲ. ಮಧ್ಯಾಹ್ನದ ಭೋಜನ ಬಳಿಕ ಇಂಡಿಯಾ ಬ್ಲಾಕ್ ಪ್ರತಿಭಟನೆ ಮುಂದುವರಿಸಿದೆ. ಇಂದು 300 ಜನ ಸಂಸದರು ಪ್ರತಿಭಟನೆಯಲ್ಲಿ ಭಾಗಿಯಾಗ್ತಿದ್ದೇವೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

SIR ವಿವಾದ | ವಿಜಯ್‌ಗೆ ಹೆದರುತ್ತಿದ್ದೀರಾ?- ರಾಹುಲ್ ಮೌನಕ್ಕೆ ಡಿಎಂಕೆ ಆಕ್ರೋಶ

Spread the loveಚೆನ್ನೈ: ತಮಿಳುನಾಡಿನಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ  ಪ್ರಕ್ರಿಯೆಯಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂಬ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ