Breaking News

ಬೆಳಗಾವಿ: ಲವರ್ ಜೊತೆ ಸೇರಿ ಪತಿ ಮನೆಯಲ್ಲಿ ಕಳ್ಳತನ ಮಾಡಿದ ಪತ್ನಿ ಅರೆಸ್ಟ್

Spread the love

ಬೆಳಗಾವಿ: ಪ್ರಿಯಕರನ ಜೊತೆಗೆ ಓಡಿ ಹೋಗಲು ಪತಿ ಮನೆಗೆ ಕನ್ನ ಹಾಕಿದ ಪತ್ನಿ ಹಾಗೂ ಪ್ರಿಯಕರ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಮಹಿಳೆ ತನ್ನ ಪ್ರಿಯಕರನ ಜೊತೆಗೆ ಸೇರಿ ಮನೆಯಲ್ಲಿಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿನಡೆದಿದೆ. ಹಣಮಂತ ಮಾರಾಪೂರ, ಹಸೀನಾ ನದಾಫ್‌
ಬಂಧಿತ ಪ್ರೇಮಿಗಳು.

ಹಸೀನಾ ತನ್ನ ಲವ‌ರ್ ಜೊತೆ ಸೇರಿ ಪತಿಯ ಮನೆಯಲ್ಲಿದ್ದ 21 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ. 11 ಸಾವಿರ ಮೌಲ್ಯದ 45ಗ್ರಾಂ ಬೆಳ್ಳಿಯ ಆಭರಣ ಕಳ್ಳತನ ಮಾಡಿದ್ಲು.

ಕೂಡಲೆ ಕಳ್ಳತನದ ಬಗ್ಗೆ ದಿಲಶಾದ್ ನದಾಫ್ ಎಂಬುವವರಿಂದ ಕಟಕೋಳ ಠಾಣೆಗೆ ದೂರು ನೀಡಿದ್ದಾರೆ. ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕೃತ್ಯ ನಡೆದ 48 ಗಂಟೆಯಲ್ಲಿ ಕಳ್ಳತನ ಮಾಡಿದ್ದ ಪ್ರೇಮಿಗಳನ್ನು ಬಂಧಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ಹೊಸಕೋಟಿ ಗ್ರಾಮದ ಶರೀಫ್ ಜೊತೆಗೆ ಹಸೀನಾ ಮದುವೆ ಆಗಿತ್ತು. ಮದುವೆಯಾದ ಬಳಿಕವೂ ಪ್ರಿಯಕರನ ಜೊತೆ ಹಸೀನಾ ಸಂಪರ್ಕದಲ್ಲಿ ಹೊಂದಿದ್ದಳು.


Spread the love

About Laxminews 24x7

Check Also

ಪಾಲಿಕೆಯಲ್ಲಿ ಕರ್ನಾಟಕ ಪರ ಗೋತ್ತುವಳಿ ಮಂಡನೆಗೆ ಆಗ್ರಹಿಸಿ 101 ಈಡುಗಾಯಿ ಒಡೆದು ಪ್ರತಿಭಟನೆ

Spread the loveಬೆಳಗಾವಿ: ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಆಗ್ರಹಿಸಿ ಕಳೆದ ನೂರು ದಿನಗಳಿಂದ ನಡೆದ ಕನ್ನಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ