Breaking News

ಅಶ್ಲೀಲ ಕಮೆಂಟ್ ಮಾಡೋ ಶೂರರಿಗೆ ಶಾಕ್ – 6 ತಿಂಗಳಿಂದ 1 ವರ್ಷ ಜಾಮೀನು ರಹಿತ ಜೈಲು ಶಿಕ್ಷೆ

Spread the love

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ  ಅಶ್ಲೀಲವಾಗಿ ಕಮೆಂಟ್ ಮಾಡುವವರ ಹಾವಳಿ ತಡೆಯುವ ಉದ್ದೇಶದಿಂದ ಇದೀಗ ಕಠಿಣ ಕಾಯ್ದೆಯೊಂದನ್ನು ಜಾರಿಗೆ ತರಲಾಗಿದ್ದು, ಕಮೆಂಟ್ ಶೂರರಿಗೆ ಶಾಕ್ ನೀಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್  ಮಾಡಿ ಸಿಕ್ಕಿಬಿದ್ರೆ ಅಂತವರಿಗೆ 6 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ನೀಡಲಾಗುವುದು. ಜೊತೆಗೆ 1 ವರ್ಷದವರೆಗೆ ಜಾಮೀನು ರಹಿತ ಕಠಿಣ ಕಾಯ್ದೆಯನ್ನು 2024ರ ಜುಲೈ 1ರಿಂದ ಜಾರಿಗೆ ಬಂದಿರುವ ಐಟಿ ಕಾಯ್ದೆಗಳನ್ವಯ ಜಾರಿಗೆ ತರಲಾಗಿದೆ.

ಈ ಶಿಕ್ಷೆಯಾದ ಮೇಲೆ ಸೆಷನ್ಸ್, ಕೋರ್ಟ್, ಹೈಕೋರ್ಟ್ ತನಕ ಹೋದರೂ ಜಾಮೀನು ಸಿಗುವುದಿಲ್ಲ. ಕನಿಷ್ಠ 3 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ಇರುವ ಎರಡು ಸೆಕ್ಷನ್ ಜಾರಿ ಮಾಡಲಾಗಿದೆ. ಒಂದು ವೇಳೆ 1 ಲಕ್ಷ ರೂ. ದಂಡ ಕಟ್ಟದಿದ್ರೆ ದಂಡ ಕಟ್ಟುವ ತನಕ ಜೈಲುಶಿಕ್ಷೆ ಕಡ್ಡಾಯಗೊಳಿಸಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ