Breaking News

ನನ್ನ ಖಾಸಾ ಸ್ನೇಹಿತರೊಬ್ಬರನ್ನು ಕಳೆದುಕೊಂಡ ನೋವು ನನಗಾಗಿದೆ :ರಮೇಶ ಜಾರಕಿಹೊಳಿ

Spread the love

ಗೋಕಾಕ:  ಗೋಕಾಕ್ ನಗರದ ಸಚ್ಛಾರಿತ್ರ್ಯದ ರಾಜಕಾರಣಿಯಾಗಿದ್ದ  ಗಿರೀಶ್ ಖೋತ್ ಅವರ ಅಕಾಲಿಕ ಮರಣದಿಂದ ನನ್ನ ಖಾಸಾ ಸ್ನೇಹಿತರೊಬ್ಬರನ್ನು ಕಳೆದುಕೊಂಡ ನೋವು ನನಗಾಗಿದೆ  ಎಂದು  ಸಚಿವ ರಮೇಶ ಜಾರಕಿಹೊಳಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

3 ನೆಯ ಬಾರಿಗೆ ಗೋಕಾಕ್ ನಗರಸಭೆಗೆ ಆಯ್ಕೆಯಾಗಿದ್ದ ಖೋತ್ ಮಾದರಿ ಜನಪ್ರತಿನಿಧಿಯಾಗಿದ್ದರು. ಜನಾನುರಾಗಿ ಮತ್ತು  ಸರಳ, ಸ್ನೇಹಜೀವಿಯಾಗಿದ್ದ ಇವರು ನನ್ನ ರಾಜಕಾರಣದ ಪ್ರತಿ ಹೆಜ್ಜೆಯಲ್ಲೂ ನನ್ನ ಜೊತೆಗಿದ್ದರು. ಇವರ ಹಠಾತ್ ಅಗಲಿಕೆ ನನ್ನ ಮನಸ್ಸಿಗೆ ತೀವ್ರ ನೋವನ್ನು ತಂದಿದೆ ಎಂದು ಸಚಿವರು ಸಂತಾಪ ಸೂಚಿಸಿದ್ದಾರೆ.

ಖೋತ್ ಅವರ ಆತ್ಮಕ್ಕೆ ಚಿರಶಾಂತಿ‌ ಸಿಗಲಿ ಮತ್ತು ಅಪಾರ ಕಾರ್ಯಕರ್ತರಿಗೆ ಇವರ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ