Breaking News

ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ: ಸಿದ್ದರಾಮಯ್ಯ

Spread the love

ಮೈಸೂರು: 8 ವರ್ಷ ಸಿಎಂ ಆಗಿದ್ದೇನೆ, 17 ಬಜೆಟ್ ಮಂಡಿಸಿದ್ದೇನೆ, ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮೈಸೂರಿನ  ಕೆ.ಆರ್ ನಗರದಲ್ಲಿ  ನಡೆದ ಬಸವ ಜಯಂತಿ ಕಾರ್ಯಕ್ರಮದ ಮಾತನಾಡಿದ ಅವರು, ಸಿದ್ದರಾಮಯ್ಯ 8 ವರ್ಷ ಸಿಎಂ ಆಗಿದ್ದೇನೆ. 17 ಬಜೆಟ್ ಮಂಡಿಸಿದ್ದೇನೆ. ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ. ನಾನು 5 ವರ್ಷ ಸಿಎಂ ಆಗಿ ಇದಿದ್ರೆ, ಬೀದರ್‌ನಲ್ಲಿ ಅನುಭವ ಮಂಟಪ ಕೆಲಸ ಮುಗಿಸುತ್ತಿದೆ. ನಿರ್ಮಾಣ ಶುರು ಮಾಡಿದ್ದೇನೆ. ಐದು ವರ್ಷ ಅಧಿಕಾರದಲ್ಲಿ ಇದ್ದಿದ್ದರೆ ಈ ಕಾಮಗಾರಿ ಮುಗಿಸುತ್ತಿದೆ, ಇವತ್ತಿನ ಸಿಎಂ ಕೂಡ ಈ ಕಾಮಗಾರಿ ಮುಗಿಸಬಹುದು ಎಂದುಕೊಂಡಿದ್ದೇನೆ. ಕೆ.ಆರ್ ನಗರದಲ್ಲೂ ಬಸವ ಭವನ ನಿರ್ಮಾಣ ಆಗಬೇಕಿದೆ. ನಾನು ಈಗ ಬರೀ ಶಾಸಕ. ಆದರೂ ನನ್ನ ಮಾತನ್ನು ಈಶ್ವರ್ ಖಂಡ್ರೆ ಅಂತವರು ಕೇಳುತ್ತಾರೆ ಅಂದುಕೊಂಡಿದ್ದೇನೆ ಎಂದಿದ್ದಾರೆ.

ಇವತ್ತಿಗೂ ಜಾತಿ ವ್ಯವಸ್ಥೆ ಇದೆ. ಧರ್ಮಗಳ ನಡುವೆ ದ್ವೇಷವಿದೆ, ವೈಮನಸ್ಸಿದೆ. ಜಾತಿಯ ವೈಮನಸ್ಸು ಹೆಚ್ಚು ಮಾಡುವ ಪಟ್ಟಭದ್ರ ಹಿತಾಸಕ್ತಿಗಳು ಹೆಚ್ಚಿವೆ. ಎಲ್ಲರಿಗೂ ಸಂವಿಧಾನ ಪೀಠಿಕೆ ಓದಿಸಲು ನಾನು ಶುರು ಮಾಡಿಸಿದೆ. ಬುದ್ದ, ಬಸವ, ಅಂಬೇಡ್ಕರ್ ಕಂಡ ಕನಸಿನ ಭಾರತ ಇನ್ನೂ ನಿರ್ಮಾಣ ಆಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ವೇದಿಕೆಯಲ್ಲಿ ಸಿದ್ದರಾಮಯ್ಯ ಎದುರೇ ತಂದೆ ಯಡಿಯೂರಪ್ಪ ಬಗ್ಗೆ ವಿಜಯೇಂದ್ರ ಹಾಡಿ ಹೊಗಳಿದ್ದಾರೆ. ಎಲ್ಲಾ ಸಮುದಾಯಗಳಿಗೆ ನ್ಯಾಯ ಕೊಟ್ಟಿದ್ದು ಯಡಿಯೂರಪ್ಪ. ವೀರಶೈವ-ಲಿಂಗಾಯತರನ್ನು ಒಗ್ಗೂಡಿಸುವ ಕೆಲಸವನ್ನು ನಾವು ಮಾಡಬೇಕು. ಅವಕಾಶವಾದಿ ರಾಜಕಾರಣ ಹೆಚ್ಚಾಗಿದೆ. ಮೆಟ್ಟಿಲು ಏರಿದ ಮೇಲೆ ಮೆಟ್ಟಿಲು ಮರೆಯುವ ರೀತಿ ರಾಜಕಾರಣ ಆಗಿದೆ. ಚಿತ್ರ ನಟರಿಗಿಂತ ಹೆಚ್ಚಾದ ನಟನೆಯನ್ನು ರಾಜಕೀಯದವರು ಮಾಡುತ್ತಿದ್ದಾರೆ ಅಂತ ವಿರೋಧಿಗಳಿಗೆ ವೇದಿಕೆಯಲ್ಲೇ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ.

ಸ್ಟಿಂಗ್ ಆಪರೇಷನ್ ಪಾಲಿಟಿಕ್ಸ್ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಇಬ್ಬರು ಅಕ್ಕಪಕ್ಕದಲ್ಲೇ ಕುಳಿತಿದ್ರು. ವೇದಿಕೆಯಿಂದ ನಿರ್ಗಮಿಸುವಾಗ ಸಿದ್ದರಾಮಯ್ಯನವರಿಗೆ ವಿಜಯೇಂದ್ರ ಕೈಮುಗಿದು ನಮಸ್ಕರಿಸಿದ್ದು, ಬಿವೈವಿಗೆ ಬೆನ್ನುತಟ್ಟಿ ಶುಭ ಹಾರೈಸಿದ್ದಾರೆ.


Spread the love

About Laxminews 24x7

Check Also

ವಿಷಗಾಳಿ ಸೇವಿಸಿ ಮೂವರು ಮೀನುಗಾರರ ಸಾವು – ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

Spread the loveಕಾರವಾರ: ಗೋಕರ್ಣ  ತದಡಿ ಮೀನುಗಾರಿಕಾ ಬಂದರಿನಲ್ಲಿ ಮೀನಿನ ತ್ಯಾಜ್ಯ ತೆರವುಗೊಳಿಸುವ ವೇಳೆ ವಿಷಗಾಳಿ ಸೇವಿಸಿ ಮೂವರು ಮೀನುಗಾರರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ