Breaking News

ಅಂಜನಾದ್ರಿ ಬೆಟ್ಟದಲ್ಲಿ ವಿದ್ಯಾದಾಸ್ ಬಾಬಾ, ಕೊಪ್ಪಳ ಜಿಲ್ಲಾಡಳಿತದ ಮಧ್ಯೆ ಮುಂದುವರಿದ ಜಟಾಪಟಿ

Spread the love

ಕೊಪ್ಪಳ: ಹನುಮ ಜನ್ಮ ಸ್ಥಳ ಗಂಗಾವತಿಯ  ಅಂಜನಾದ್ರಿ ದೇವಸ್ಥಾನ  ವಿಚಾರವಾಗಿ ಅರ್ಚಕ ವಿದ್ಯಾದಾಸ್ ಬಾಬಾ  ಹಾಗೂ ಕೊಪ್ಪಳ ಜಿಲ್ಲಾಡಳಿತದ ನಡುವೆ ಜಟಾಪಟಿ ಮುಂದುವರಿದಿದೆ.

ಅಂಜನಾದ್ರಿ ದೇವಸ್ಥಾನ ಮತ್ತೆ ಜಿಲ್ಲಾಡಳಿತದ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ವಿದ್ಯಾದಾಸ್ ಬಾಬಾ ಹಾಕಿದ್ದ ಬೀಗ ಒಡೆದು ಜಿಲ್ಲಾಡಳಿತದ ಅಧಿಕಾರಿಗಳು ಪ್ರವೇಶ ಮಾಡಿದ್ದಾರೆ. ದೇವಸ್ಥಾನದ 8 ಕಚೇರಿಗಳಿಗೆ ಬಾಬಾ ಹಾಕಿದ್ದ ಬೀಗಗಳನ್ನು ಎಸಿ, ತಹಸೀಲ್ದಾರ್, ಡಿವೈಎಸ್ಪಿ ನೇತೃತ್ವದಲ್ಲಿ ಅಧಿಕಾರಿಗಳು ಒಡೆದಿದ್ದಾರೆ. 

ಬೆಟ್ಟದಲ್ಲಿ ಬಾಬಾ ಅಳವಡಿಸಿದ ಟ್ರಸ್ಟ್‌ನ ಬ್ಯಾನರ್‌ಗಳನ್ನೂ ತೆರವು ಮಾಡಿದ್ದಾರೆ. ಅಲ್ಲದೆ, ಬಾಬಾ ನೇಮಕ ಮಾಡಿಕೊಂಡ ಸಿಬ್ಬಂದಿಯನ್ನೂ ಹೊರ ಕಳಿಸಿ, ಜಿಲ್ಲಾಡಳಿತ ಸಿಬ್ಬಂದಿ ಕಾರ್ಯನಿರ್ವಹಣೆಗೆ ಎಸಿ ಸೂಚಿಸಿದ್ದಾರೆ. ಜಿಲ್ಲಾಡಳಿತದ ಕ್ರಮಕ್ಕೆ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್ ಆದೇಶದಂತೆ ದೇವಸ್ಥಾನ ಸುಪರ್ದಿಗೆ ಪಡೆದುಕೊಂಡಿದ್ದೇನೆ. ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಮೊದಲು ನಿಮ್ಮ ಕೋರ್ಟ್ ಆದೇಶ ತೋರಿಸಿ, ಆಮೇಲೆ ಕ್ರಮ ಕೈಗೊಳ್ಳಿ ಎಂದು ಕಿಡಿಕಾರಿದ್ದಾರೆ. ಈ ವೇಳೆ, ಬಾಬಾ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸೋದಾಗಿ ಬಾಬಾ ಹೇಳಿದ್ದಾರೆ.


Spread the love

About Laxminews 24x7

Check Also

ವಿಷಗಾಳಿ ಸೇವಿಸಿ ಮೂವರು ಮೀನುಗಾರರ ಸಾವು – ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

Spread the loveಕಾರವಾರ: ಗೋಕರ್ಣ  ತದಡಿ ಮೀನುಗಾರಿಕಾ ಬಂದರಿನಲ್ಲಿ ಮೀನಿನ ತ್ಯಾಜ್ಯ ತೆರವುಗೊಳಿಸುವ ವೇಳೆ ವಿಷಗಾಳಿ ಸೇವಿಸಿ ಮೂವರು ಮೀನುಗಾರರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ