ಬೆಂಗಳೂರು: ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬಸ್ ಟಿಕೆಟ್ ದರ ಏರಿಕೆ ವಿಚಾರ ಚರ್ಚೆಗೆ ಬರೋ ಸಾಧ್ಯತೆಯಿದೆ.
ಬಸ್ ಟಿಕೆಟ್ ದರ ಏರಿಕೆ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೀಡಿದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ವರದಿ ಬಗ್ಗೆ ಗುರುವಾರ (ಅ.29) ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಯಲಿದ್ದು, ನವೆಂಬರ್ ತಿಂಗಳಿಂದಲೇ ದರ ಏರಿಕೆಯಾಗೋ ಸಾಧ್ಯತೆಯಿದೆ.
ಈ ವರದಿಯಲ್ಲಿ ಬಸ್ಗಳಿಗೆ ಬೇಕಾಗೋ ಇಂಧನ, ನಿರ್ವಹಣೆ, ಕಾರ್ಯಾಚರಣೆಯ ವೆಚ್ಚಕ್ಕೂ, ಟಿಕೆಟ್ ನಿಂದ ಬರೋ ಆದಾಯದ ಅಂತರದ ಬಗ್ಗೆ ಉಲ್ಲೇಖಿಸಲಾಗಿದೆ. ಸರ್ಕಾರ ಬಾಕಿ ಉಳಿಸಿಕೊಂಡಿರೋ 6,600 ಕೋಟಿ ಶಕ್ತಿ ಯೋಜನೆ ಬಾಕಿ ಹಣ ನೀಡಿದ್ರೂ, ಸಾರಿಗೆ ನಿಗಮಗಳು ಸುಮಾರು 1500-1600 ಕೋಟಿ ಲಾಸ್ ನಲ್ಲಿವೆ ಅಂತಾ ಹೇಳಲಾಗಿದೆ ಎನ್ನಲಾಗ್ತಿದೆ.
ಜೊತೆಗೆ KSRTC, NWKRTC, NEKRTC ಮೂರು ನಿಗಮಗಳಿಗೆ 25-26% ಏರಿಕೆ ಮಾಡಬೇಕೆಂದು ಅತುಲ್ ತಿವಾರಿ ಸಮಿತಿ ವರದಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಹಾಗೆಯೇ ಬಿಎಂಟಿಸಿ ಟಿಕೆಟ್ ದರದಲ್ಲಿ ಶೇಕಡಾ 42% ಮೇಲೆ ಹೆಚ್ಚಳ ಮಾಡಬೇಕೆಂದು ಕಮಿಟಿ ಶಿಫಾರಸ್ಸು ಮಾಡಿದೆ. ಆದ್ರೆ ಪ್ರಯಾಣಿಕರ ಹಿತದೃಷ್ಟಿಯಿಂದ ಮೂರು ನಿಗಮಗಳ ಬಸ್ ದರ ಶೇ.13-15% ಏರಿಕೆ ಮಾಡೋ ಸಾಧ್ಯತೆಯಿದೆ. ಹಾಗೆಯೇ ಬಿಎಂಟಿಸಿ ನಿಗಮ ಭಾರೀ ನಷ್ಟದಲ್ಲಿರೋ ಕಾರಣ, ಬಿಎಂಟಿಸಿ ಬಸ್ ಟಿಕೆಟ್ ದರ ಶೇ.15-17% ರಷ್ಟು ಏರಿಕೆ ಸಾಧ್ಯತೆಯಿದೆ. ಕಳೆದ ಬಾರಿ ಜನವರಿ 2025 ರಲ್ಲಿ ಶೇ.15% ರಷ್ಟು ಟಿಕೆಟ್ ದರವನ್ನ ಸರ್ಕಾರ ಏರಿಕೆ ಮಾಡಿತ್ತು.
Laxmi News 24×7