Breaking News

ಬಿಜೆಪಿಯಲ್ಲೂ ಸ್ಟಿಂಗ್‌ ಆಪರೇಷನ್‌ ಆಗಿವೆ, ಸಿಡಿ ಯಾವಾಗ ಬರುತ್ತೆ ನೋಡಬೇಕು: ಯತ್ನಾಳ್‌ ಬಾಂಬ್‌

Spread the love

ನವದೆಹಲಿ: ಬಿಜೆಪಿಯಲ್ಲೊಂದು ಸಿಡಿ ಫ್ಯಾಕ್ಟರಿ ಇದೆ. ಅದ್ರಲ್ಲೂ ಕೆಲವು ಸ್ಟಿಂಗ್ ಆಪರೇಷನ್ ಆಗಿವೆ, ಅಲ್ಲಿ ಯಾವಾಗ ಸಿಡಿ ಗಳು ಆಚೆ ಬರುತ್ತೆ ಅನ್ನೋದನ್ನ ನೋಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌  ಹೊಸ ಬಾಂಬ್‌ ಸಿಡಿಸಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್‌ ಆಪರೇಷನ್‌  ವಿಚಾರ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಾನು ಕರ್ನಾಟಕದಲ್ಲಿ ಬಹಳ ದಿನಗಳ ಹಿಂದೆ ಹೇಳಿದ್ದೆ, ಕರ್ನಾಟಕದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳು ಇವೆ ಅಂತಾ. ಒಂದು ಸಿಡಿ ಫ್ಯಾಕ್ಟರಿ ಯಾವುದು ಅಂತ ಎಲ್ರುಗೂ ಗೊತ್ತಾಗಿದೆ. ಇನ್ನೊಂದು ಸಿಡಿ ಫ್ಯಾಕ್ಟರಿ ಬಿಜೆಪಿ ಪಕ್ಷದಲ್ಲಿದೆ. ಅದ್ರಲ್ಲೂ ಕೆಲವು ಸ್ಟಿಂಗ್ ಆಪರೇಷನ್ ಆಗಿವೆ. ಯಾವಾಗ ಸಿಡಿ ಗಳು ಬರುತ್ತೆ ಅನ್ನೋದು ನೋಡ್ಬೇಕಿದೆ. ತಮ್ಮ ಪಕ್ಷದವರನ್ನೇ ಬ್ಲ್ಯಾಕ್‌ ಮಾಡೋದಕ್ಕೆ ಇಟ್ಕೊಂಡಿದ್ದಾರೆ. ಭವಿಷ್ಯದಲ್ಲಿ ತಮಗೆ ಯಾರು ಅಡ್ಡಿ ಆಗ್ತಾರೆ, ಅಂತವರನ್ನ ಬ್ಲಾಕ್ ಮೇಲ್ ಮಾಡೋದಕ್ಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ರು.

ಎರಡೂ ಪಕ್ಷಗಳಲ್ಲಿ ಸ್ಟಿಂಗ್‌ ಆಪರೇಷನ್‌ ನಡೆದಿವೆ. ಅದರಲ್ಲೇನು ಮುಚ್ಚು ಮರೆ ಇಲ್ಲಾ. ದುರ್ದೈವ ಅಂದ್ರೆ ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿಕೊಂಡಿವೆ. ನೋಡಿ ಈಗ ಸ್ಟಿಂಗ್ ಬಗ್ಗೆ ರಾಜ್ಯದ ಬಿಜೆಪಿ ಅಧ್ಯಕ್ಷರು ಮಾತನಾಡ್ತಿಲ್ಲ. ಕುಮಾರಸ್ವಾಮಿ ಸಾಕಷ್ಟು ಅಟ್ಯಾಕ್ ಮಾಡ್ತಿದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು, ಈಗಿನ ಮುಖ್ಯಮಂತ್ರಿ ಇದ್ದಾರೆ ಅಂತ ಹೇಳ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬಹಳ ನೇರವಾಗಿ ಹೇಳ್ತಾರೆ. ಮುಖ್ಯಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡ್ತಿಲ್ಲ. ದೇಶದಲ್ಲೇ ಇದೊಂದು ಕೆಟ್ಟ ರಾಜಕೀಯ ಆಗಿದೆ. ತಮ್ಮ ಎದುರಾಳಿಗಳನ್ನ, ಪ್ರತಿ ಸ್ಪರ್ದಿಗಳನ್ನ ಬ್ಲಾಕ್ ಮೇಲ್ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರನ್ನ ಯಾವ ರೀತಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ? ಸ್ವಪಕ್ಷದವರೇ ಮಾಡಿರೋದಲ್ಲ, ಪಾಪ ನಮ್ಮ ವಿಜಯೇಂದ್ರ, ಆರ್ ಅಶೋಕ್ ಮಾಡಿಲ್ಲ, ಮತ್ತೊಂದ್ ಯಾವ್ದೋ ಪಕ್ಷದವ್ರು ಮಾಡಿಲ್ಲ, ಕುಮಾರಸ್ವಾಮಿ ಮಾಡಿಲ್ಲ. ಅಂದ್ರೆ ಒಟ್ಟಾರೆ ಈ ಒಂದು ಕೆಟ್ಟ ಚಾಳಿ 10 ವರ್ಷದಿಂದ ಉದಯೋನ್ಮುಖ ರಾಜಕಾರಣಿಗಳಿಬ್ರು ಇದೆ ಚಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಇದೆ ಒಂದು ಬಿಸಿನೆಸ್ ಆಗಿದೆ. ರಾಜಕಾರಣದಲ್ಲಿ ಏನೋ ಒಂದು ನೆಪ ಮಾಡ್ಕೊಂಡು ಬರ್ತಾರೆ, ಅಲ್ಲಿ ವಿಡಿಯೋ ಮಾಡ್ಕೊಳ್ತಾರೆ. ದುಡ್ಡಿಗಾಗಿ ಎಷ್ಟೋ ಶಾಸಕರಿಗೆ ಬ್ಲಾಕ್ ಮೇಲ್ ಮಾಡಿ ಹಣ ಕೇಳ್ತಾರೆ, ಬೆಂಗಳೂರಿನಲ್ಲಿ ಈ ರೀತಿಯ ಟೀಮ್ ಗಳು ತುಂಬಾ ಇವೆ. ಪಾಪಾ ನಮ್ಮ ರಮೇಶ್ ಜಾರಕಿಹೊಳಿ ಅವರ್ದು ಮಾಡ್ಲಿಲ್ವಾ? ಅಷ್ಟಕ್ಕೇ ನಿಂತಿತು.. ವ್ಯವಹಾರ ಕೂಡ್ತು ಅಂದ್ರೆ ಸ್ಟಾಪ್ ಆಗುತ್ತೆ. ಕರ್ನಾಟಕದಲ್ಲಿ ಇಮೇಜ್ ಹಾಳು ಮಾಡೋ ಕೆಟ್ಟ ಕೆಲಸ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.


Spread the love

About Laxminews 24x7

Check Also

ಉಡುಪಿ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ

Spread the loveಉಡುಪಿ: ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಲಾಶ್ರೀ ಅವರಿಂದು (ಅ.24) ಕುಟುಂಬ ಸಮೇತರಾಗಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ