Breaking News

ಚುನಾವಣಾ ಆಯೋಗ ನಾವು ಕೊಟ್ಟ ದೂರಿನ ಅನ್ವಯ FIR ಹಾಕಬೇಕು: ಪರಮೇಶ್ವರ್‌

Spread the love

ಬೆಂಗಳೂರು: ಚುನಾವಣಾ ಆಯೋಗಕ್ಕೆ ಎನ್‌ಡಿಎ ನಾಯಕರು ದೂರು ಕೊಡಲಿ. ಅದರ ಜೊತೆಗೆ ನಾವು ಕೊಟ್ಟ ದೂರಿನ ಮೇಲೆ ಚುನಾವಣೆ ಆಯೋಗ FIR ದಾಖಲು ಮಾಡಬೇಕು ಅಂತ ಡಿಸಿಎಂ ಪರಮೇಶ್ವರ್  ಆಗ್ರಹಿಸಿದ್ದಾರೆ.

ಫಾರಂ-7 ದುರುಪಯೋಗದ ಕುರಿತು ಎನ್‌ಡಿಎ ಯಿಂದ ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಯೋಗದವರು  ತಮ್ಮ ಕೆಲಸ ಮಾಡುತ್ತಾರೆ, ನಾವು ನಮ್ಮ ಕೆಲಸ ಮಾಡುತ್ತೇವೆ. ನಾವು ಸಾಕ್ಷಿ ಸಹಿತ ದೂರು ನೀಡಿದ್ದೇವೆ. ಫಾರಂ ನಂಬರ್ 7 ಅನ್ನು ದುರುಪಯೋಗ ಮಾಡಿಕೊಳ್ಳುತ್ತಾ ಇದ್ದದ್ದನ್ನ ರೆಡ್ ಹ್ಯಾಂಡಾಗಿ ನಾವು ಹಿಡ್ಕೊಂಡು ಅದನ್ನ ಕೊಟ್ಟಿದ್ದೇವೆ. ಒಬ್ಬ ವ್ಯಕ್ತಿ ಎಷ್ಟು ಫಾರಂ ನಂಬರ್-7 ಸಲ್ಲಿಸಬಹುದು? ಅದಕ್ಕೆ ಇತಿಮಿತಿ ಇಲ್ಲವೇ? ಒಬ್ಬರೇ 100, 200, 400 ಅರ್ಜಿಗಳನ್ನ ಸಲ್ಲಿಸಿದರೆ ಅದು ಯಾವ ರೀತಿ ಸಾಧ್ಯ? ಎಂದು ಪ್ರಶ್ನಿಸಿದರು.

ಒಂದೇ ಒಂದು ಸಮುದಾಯದವರನ್ನ ಗುರುತಿಸಿಕೊಂಡು, ಫಾರಂಗಳನ್ನ ಎಲ್ಲಿಯೋ ಮುದ್ರಿಸಿ ತರಲಾಗುತ್ತಿದೆ. ಅವರ ಡೇಟಾವನ್ನ ಅವರಿಗೆ ಯಾರು ಕೊಟ್ಟರು? ಆ ಡೇಟಾ ಎಲ್ಲಿಂದ ಸಿಕ್ಕಿತು? ಮುದ್ರಿತ ಫಾರಂಗಳ ಮೇಲೆ ಅವರ ಹೆಸರು ಮತ್ತು ಮತದಾರರ ಗುರುತಿನ ಚೀಟಿ ವಿವರಗಳನ್ನು ಬರೆದು ಸಲ್ಲಿಸಲಾಗುತ್ತಿದೆ. ಇದು ಕಾನೂನಿಗೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ.

ಈ ಎಲ್ಲವನ್ನೂ ನಾವು ಸಾಕ್ಷ್ಯ ಸಹಿತ ಚುನಾವಣಾ ಆಯೋಗಕ್ಕೆ ನೀಡಿದ್ದೇವೆ. ಚುನಾವಣಾ ಆಯೋಗವು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ 7 ದಿನಗಳ ಸಮಯ ಕೊಟ್ಟು, ನಂತರ ಎಫ್‌ಐಆರ್ ದಾಖಲಿಸುವುದಾಗಿ ಹೇಳಿದೆ. ಅದನ್ನು ಅವರು ಮಾಡಬೇಕು. ನಾವು ಗುರುತಿಸಿ ನೀಡಿರುವ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.


Spread the love

About Laxminews 24x7

Check Also

ಡಿಸಿಗಳು ಚುನಾವಣಾ ಆಯೋಗಕ್ಕೆ ದೂರು ಕೊಟ್ಟರೆ SIT ರಚನೆ: ಪ್ರಿಯಾಂಕ್ ಖರ್ಗೆ

Spread the loveಬೆಂಗಳೂರು: ಡಿಸಿಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಫಾರ್ಮ್-7 ದುರ್ಬಳಕೆ ಬಗ್ಗೆ ವಿಶೇಷ ತನಿಖಾ ತಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ