ಚಿಕ್ಕೋಡಿ: ಚಿಕ್ಕೋಡಿ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತ ಬಿ. ವೀರಪ್ಪ ಅವರು ಪುರಸಭೆ ಅಧಿಕಾರಿಗಳ ವೇತನ ಹಾಗೂ ಹಣಕಾಸಿನ ವಹಿವಾಟಿನ ಕುರಿತು ಫೋನ್ ಪೇ ಪರಿಶೀಲನೆ ನಡೆಸಿದಾಗ ಅಧಿಕಾರಿಗಳು ತಬ್ಬಿಬ್ಬಾದರು.
ಈ ವೇಳೆ ಅಧಿಕಾರಿಗಳ ಫೋನ್ಪೇ ವಹಿವಾಟನ್ನೂ ಪರಿಶೀಲಿಸಿದ ಉಪಲೋಕಾಯುಕ್ತರು, ಖಾತೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮೊತ್ತದ ಹಣ ಜಮೆಯಾಗಿರುವುದರ ಕುರಿತು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು.ಒಬ್ಬ ಅಧಿಕಾರಿ, ನನ್ನ ಮಗಳು ಹಣ ಹಾಕಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಮತ್ತೊಬ್ಬ ಅಧಿಕಾರಿಯ ಖಾತೆಯಲ್ಲಿಯೂ ಒಂದು ಲಕ್ಷಕ್ಕೂ ಅಧಿಕ ಮೊತ್ತದ ಹಣ ಒಳಬಂದಿರುವುದು ಪರಿಶೀಲನೆ ವೇಳೆ ಗಮನಕ್ಕೆ ಬಂದಿದ್ದು, ಈ ಕುರಿತು ಉಪಲೋಕಾಯುಕ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳ ಆದಾಯ ಮತ್ತು ಹಣಕಾಸಿನ ವಹಿವಾಟಿನ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿದ ಅವರು, ಕಳೆದ ಎರಡು ವರ್ಷಗಳ ಎಲ್ಲ ಪುರಸಭೆ ಅಧಿಕಾರಿಗಳ ವೇತನದ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
Laxmi News 24×7