Breaking News

ಈರುಳ್ಳಿ ಪ್ರಿಯರಿಗೆ ಗುಡ್‌ನ್ಯೂಸ್ – ಹಾಫ್‌ರೇಟ್‌ನಲ್ಲಿ ಮಾರಾಟ

Spread the love

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಇದರ ನಡುವೆ ಬೆಂಗಳೂರಿನಲ್ಲಿ  ಈರುಳ್ಳಿ  ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ.

ಎಲ್ಲೆಡೆ ಈರುಳ್ಳಿ ಬೆಲೆ 65-75 ರೂ.ಗೆ ಏರಿದೆ. ಇದರ ನಡುವೆ ಕೇಂದ್ರ ಸರ್ಕಾರ  ಗುಡ್‌ನ್ಯೂಸ್ ನೀಡಿದೆ. ನಾಫೆಡ್‌ನಿಂದ ಬೆಂಗಳೂರಿಗೆ ಈರುಳ್ಳಿ ಬಂದಿದ್ದು, ಅಗ್ಗದ ದರದಲ್ಲಿ ಮಾರಾಟವಾಗುತ್ತಿದೆ.

ಕೆ.ಜಿಗೆ 35 ರೂ.ಯಂತೆ ಮಾರಾಟವಾಗುತ್ತಿದ್ದು, ಈರುಳ್ಳಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಬೆಂಗಳೂರಿನ ನಾನಾ ಭಾಗದಲ್ಲಿ ನಾಫೆಡ್ ವಾಹನದ ಮೂಲಕ ಜನರಿಗೆ ಅಗ್ಗದ ದರದಲ್ಲಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ.

ಏನಿದು ನಾಫೆಡ್?
ನಾಫೆಡ್  ಎಂದರೆ ಭಾರತದಲ್ಲಿ ರೈತರ ಒಳಿತಿಗಾಗಿ ಕೆಲಸ ಮಾಡುವ ರೈತರ ಸಹಕಾರಿ ಸಂಸ್ಥೆ. ಇದು ದೇಶದ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗುವಂತೆ ನೋಡಿಕೊಳ್ಳಲು ಮತ್ತು ಗ್ರಾಹಕರಿಗೆ ನ್ಯಾಯಯುತ ಬೆಲೆಯಲ್ಲಿ ಆಹಾರ ಪದಾರ್ಥಗಳು ಸಿಗುವಂತೆ ಮಾಡಲು ಸರ್ಕಾರಿ ಸ್ವಾಮ್ಯದಡಿಯಲ್ಲಿ ಕೆಲಸ ಮಾಡುವ ಒಂದು ದೊಡ್ಡ ವ್ಯವಸ್ಥೆಯಾಗಿದೆ.

ಇದರ ಪ್ರಮುಖ ಕೆಲಸಗಳು:
ಬೆಂಬಲ ಬೆಲೆ ಖರೀದಿ:
ಮಾರುಕಟ್ಟೆಯಲ್ಲಿ ಈರುಳ್ಳಿ, ಆಲೂಗಡ್ಡೆ, ಧಾನ್ಯಗಳು ಅಥವಾ ಎಣ್ಣೆಕಾಳುಗಳ ಬೆಲೆ ತೀರಾ ಕುಸಿದು ರೈತರಿಗೆ ನಷ್ಟವಾದಾಗ, ಸರ್ಕಾರಿ ಬೆಲೆಯಲ್ಲಿ ಅವುಗಳನ್ನು ನೇರವಾಗಿ ರೈತರಿಂದ ನಾಫೆಡ್ ಖರೀದಿಸುತ್ತದೆ.

ಬಫರ್ ಸ್ಟಾಕ್ ನಿರ್ವಹಣೆ:
ಈರುಳ್ಳಿಯಂತಹ ಅಗತ್ಯ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ವಿಪರೀತ ಹೆಚ್ಚಾದಾಗ, ತಮ್ಮಲ್ಲಿ ಸಂಗ್ರಹಿಸಿಟ್ಟಿರುವ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಬೆಲೆ ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ.


Spread the love

About Laxminews 24x7

Check Also

ಕಣಕುಂಬಿಯಲ್ಲಿ ಶ್ರೀ ಮಧ್ಯವರ್ತಿ ಸಾರ್ವಜನಿಕ ಗಣೇಶೋತ್ಸವದ 35ನೇ ವರ್ಷದ ‘ಭವ್ಯ ಆಗಮನ’ ಸಂಭ್ರಮ ; ಚನ್ನರಾಜ ಹಟ್ಟಿಹೊಳಿ ಭಾಗಿ

Spread the loveಖಾನಾಪುರ: ತಾಲೂಕಿನ ಕಣಕುಂಬಿ ಗ್ರಾಮದಲ್ಲಿ ಶ್ರೀ ಮಧ್ಯವರ್ತಿ ಸಾರ್ವಜನಿಕ ಗಣೇಶೋತ್ಸವ ಮಂಡಳ ವತಿಯಿಂದ ಆಯೋಜಿಸಲಾಗಿರುವ 35ನೇ ವರ್ಷದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ