Breaking News

ಪ್ರಿಯಕರನೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕಿ

Spread the love

ಪೀಣ್ಯದಲ್ಲಿ ಶಿಕ್ಷಕಿಯ ಅಕ್ರಮ ಸಂಬಂಧ ಆರೋಪ..! ಹಿನ್ನೆಲೆಯಲ್ಲಿ
ತನಗಿಂತ ಚಿಕ್ಕ ವಯಸ್ಸಿನ ಯುವಕನೊಂದಿಗೆ ಶಿಕ್ಷಕಿಯ ಅಕ್ರಮ ಸಂಬಂಧ ಬೆಳಕಿಗೆ ಬಂದಿರುವಂತದ್ದು.!
ಪತಿಯ ಕೈಯಲ್ಲೇ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೋಡಿ..!?
ಬೆಂಗಳೂರಿನ ಪೀಣ್ಯದಲ್ಲಿ ಅಕ್ರಮ ಸಂಬಂಧದ ಆರೋಪವೊಂದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಧಾ ಶರ್ಮಾ (31) ಎಂಬ ಮಹಿಳೆ, ತನಗಿಂತ ಚಿಕ್ಕ ವಯಸ್ಸಿನ ದರ್ಶನ್ ನಾಯಕ್ (24) ಎಂಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪತಿ ವಿಕ್ರಮ್ ಅವರೇ ಇಬ್ಬರನ್ನು ಒಟ್ಟಿಗೆ ಕಂಡು ಪ್ರಶ್ನಿಸಿದ ಬಳಿಕ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದೆ ಎನ್ನಲಾಗಿದೆ.
ಸುಮಾರು 8 ವರ್ಷಗಳ ಹಿಂದೆ ಪ್ರೀತಿಸಿ ರಾಧಾ ಅವರನ್ನು ಮದುವೆ ಆಗಿದ್ದ ವಿಕ್ರಮ್,
ಅದ್ರೆ ಪತಿ ವಿಕ್ರಮ್ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ದರ್ಶನ್ ಮನೆಗೆ ಬರುತ್ತಿದ್ದ ಎಂದು ಆರೋಪಿಸಿದ್ದಾರೆ.
ಈ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಗಲಾಟೆ ನಡೆದಿದ್ದು,
ಬಳಿಕ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಇದರ ನಡುವೆ ಪತ್ನಿ ವಿರುದ್ಧ ಪತಿ ಪ್ರಶ್ನೆ ಮಾಡಿದಾಗ, ತಾನು ಅಮ್ಮನ ಮನೆಗೆ ಹೋಗಿದ್ದಾಗಿ ಹೇಳುತ್ತಿದ್ದರೆಂದು ವಿಕ್ರಮ್ ಆರೋಪಿಸಿರುವಂತದ್ದು.
ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಡೌರಿ ಹಾಗೂ ಮಾನಸಿಕ ಕಿರುಕುಳದ ಆರೋಪದಡಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.
ಮತ್ತೊಂದೆಡೆ,ಈ ಡೆವಲಪ್ಮೆಂಟ್ ನಲ್ಲಿ ತಾಯಿ ಜೋತೆ ಇದ್ದ ಮಗುವಿನ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಮಗುವನ್ನು ತನ್ನ ವಶಕ್ಕೆ ನೀಡುವಂತೆ ಪತಿ ಮನವಿ ಮಾಡಿದ್ದರೂ, ಮಗು ತನ್ನ ಬಳಿ ಇರಿಸಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂದು ವಿಕ್ರಮ್ ಆರೋಪಿಸಿದ್ದಾರೆ.
ಕೋರ್ಟ್ ಲ್ಲಿ ನ್ಯಾಯ ಕೇಳಿದ್ದ ಪತಿ ವಿಕ್ರಮ್ ಆಗಾಗಿ ಸಹಜವಾಗಿಯೇ ಕೋರ್ಟ್ ಅಕ್ರಮ ಸಂಬಂಧ ಬಗ್ಗೆ ಸಾಕ್ಷಿ ಕೇಳಿತ್ತು ಆಗಾಗಿ ಈಗ ಸ್ವಲ್ಪ ಹೊತ್ತಿನ ಬಳಿಕ ಪತಿ ವಿಕ್ರಮ್
ಪೊಲೀಸರು ಹಾಗೂ ಸಂಘಟನೆಯ ಜಂಟಿ ಕಾರ್ಯಾಚರಣೆ ನಡೆಸುವ ಮುಖಾಂತರ ಪತ್ನಿ ರಾಧ ಹಾಗೂ ಪ್ರಿಯಕರ ಎನ್ನಲಾಗುತ್ತಿರುವ ದರ್ಶನ ಅವರ
ಅಕ್ರಮ ಸಂಬಂಧದ ಆರೋಪ ಬೆಳಕಿಗೆ ಬಂದಿರುವಂತದ್ದು
ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ, ಈ ಆರೋಪಗಳ ಕುರಿತು ಪೊಲೀಸರು ನಡೆಸುತ್ತಿರುವ ತನಿಖೆಯ ಬಳಿಕವೇ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ.


Spread the love

About Laxminews 24x7

Check Also

ಬೈಕ್ ಟ್ಯಾಕ್ಸಿ ಹತ್ತಿ 29 ಕಿ.ಮೀ. ಸವಾರಿ – ಡ್ರಾಪ್ ಆದ್ಮೇಲೆ ದುಡ್ಡಿಲ್ಲ ಅಂತ ಯುವತಿ ಕಿರಿಕ್, ವಿಡಿಯೋ ವೈರಲ್

Spread the loveಬೆಂಗಳೂರು: ಬೈಕ್ ಟ್ಯಾಕ್ಸಿ  ಹತ್ತಿ 29 ಕಿ.ಮೀ. ಸವಾರಿ ಮಾಡಿ, ಬಳಿಕ ಡ್ರಾಪ್ ಮಾಡಿದಾಗ ಯುವತಿಯೊಬ್ಬರು ನನ್ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ